ನನ್ನ  ತಮ್ಮನ  ಮಗಾ‌  ಐದನೇ  ವರ್ಷಕ್ಕೆ ಕಾಲಿಟ್ಟಾನ ಅಷ್ಟ. ಶಾಲೆಗೆ ಹಾಕಬೇಕಂತ ತೀರ್ಮಾನಿಸಿದ್ವಿ. ಕೊರೋನಾದಿಂದ ಅವಗ ಅಂಗನವಾಡಿ,  ಎಲ್.ಕೆ.ಜಿ. ಎಲ್ಲಾ  ಕೆಜಿ      ಕಲಿಯೋ ಭಾಗ್ಯ ಸಿಗದ,ಅವನಿಗೆ ಮನೆಯೆ ಶಾಲೆಯಾಗಿ  ಪರಿವರ್ತನೆ  ಪಾಪ  ಅವನಿಗೆ ಅವರ ವಾರಗಿಯೋರ ಜೊತೆ ಆಡೊಕ್ಕಿಂತ ದೊಡ್ಡವರ ಜೊತೆ ಕಾಲಕಳಿಯೋ ಬಾಲ್ಯ. ಈ ವಯಸ್ಸಿನಲ್ಲಿ  ಏನೆಲ್ಲ ಚಡಪಡಿಕೆಗಳು ನಾವುಗಳು ಅವನ ಮನೋ ಧೋರಣೆಗಿಂತ ನಮ್ಮ ಅನುಭವವನ್ನು ಹೇರಿ ಮಕ್ಕಳನ್ನು ಗೊಂದಲಕ್ಕೆ ಇಡುಮಾಡುವ ಸಂಭವ ಜಾಸ್ತಿ.  ಹೊರಗೆ   ಹೋಗಿ  ಆಡುವಂತಿಲ್ಲ, ಆಟಗಿಸಾಮಾನು,ಚಿಂಟು ಸಾಕಾಗಿ ಅಮ್ಮನ ಸೆರಗ  ಹಿಡಕೊಂಡು, ಕೊಟ್ಟಿದ್ದನ್ನ  ತಿನ್ನತ್ತ ಮಬ್ಬಾಗುವ ಮಕ್ಕಳಿಗೆ ಹೀಗೊಂದು ಚಟು ವಟಿಕೆಗೆ  ಹಚ್ಚಿದಾಗ  ಓನರ್  ಬೈಬಹುದು, ಆದ್ರೂ ಮಗುವಿನ ಸೃಜನಶೀಲತೆಗೆ ಅವಕಾ ಶ   ಕೊಟ್ಟಿದ್ದರಿಂದ..   ಗೋಡಗಳ   ತುಂಬ ಮನಸ್ಸಿಗೆ  ಬಂದ  ಚಿತ್ರ  ಬರಹಗಳನ್ನು  ಬರೆಯುವುದರಲ್ಲಿ ತಲ್ಲೀನನಾದ  ಅಳಿಯನ ಕಂಡಾಗ ಸಂತಸ  ಉಕ್ಕಿ ಬರುತ್ತಿತ್ತು.

ಅಜಂತಾ  ಎಲ್ಲೊರಾದ  ಗುಹೆಗಳಲ್ಲಿಯ ಕಲಾ ಕೃತಿಗಳು ನೆನಪಾಗಿದ್ದು ಸಹಜ. ನನ್ನ ಕಂಡ  ಕೂಡಲೇ  ಅತ್ತಿ  ತಾನು  ಬಿಡಿಸಿದ ಚಿತ್ರದ ಕುರಿತು ಮುಗ್ಧ ಭಾಷೆಯಲಿ ಹೇಳು ತ್ತ,  ಆಗಾಗ   ಅಭಿನಯಿಸಿ   ತೋರಿಸುತ್ತ ಹೊರಟವನ ಹಿಂದೆ ನಾ ಬರಿ ಹುಂ ಅನ್ನೊ ದೊಂದೆ ಕೆಲಸ. ಆಚಾನಕ್ಕಾಗಿ ಅತ್ತಿ ಚೇಳಿಗೆ ಎಷ್ಟ ಕಾಲು?  ಅರೇ  ಈಗ್ಯಾಕೋ.. ನಾಲ್ಕು ಅಂದೆ. ತಲಿಮ್ಯಾಲೆ ಕೈ ಇಟಗೊಂಡು ಅಷ್ಟು ಗೊತ್ತಿಲ್ಲ? ಎರಡುಕಾಲು  ಎರಡ  ಕೊಂಡಿ.. ತಲಿಮ್ಯಾಲೆ ಇರತೈತಿ ತಾನು ಚೇಳು ಬಿಡಿಸಿ ದ್ದು ತೋರಿಸಿದ. ಹೌದ ಬಿಡಪಾ ನಿ ಶ್ಯಾಣ್ಯಾ ಅದಿ ಅಂದೆ.
ಅತ್ತಿ ನಿನಗ ಫಿಶ್, ಮೊಸಳೆ  ಚಿತ್ರಬರುತ್ತಾ?  ಅಂತ  ಪ್ರಶ್ನೆ  ಮಾಡಿದಾಗ ಆಶ್ಚರ್ಯ. ಇಲ್ಲ ಅಂದ್ರ ಅಳಿಯ ಬಂದವರಿ ಗೆಲ್ಲ ನಮ್ಮ ಅತ್ತಿಗೆ ಚಿತ್ರಾ ಬಿಡಸಾಕ ಬರುದಿಲ್ಲಂತ ನೇರಾನೇರಾ ನನ್ನಂಗ ಹೇಳಿಬಿಡೋ ಅವನ ಮುಗ್ದ ಮನಸ್ಸ ಅರಿತು ಒಳಗೊಳಗಧೈರ್ಯ ತಗೊಂಡು ಬರಿ ಮೀನಾ,ಮೊಸಳೆ ಚಿತ್ರ  ಸಾಕೇನೋ  ನಂಗ ಬರುತ್ತೆ  ಅಂದೆ. ಆದ್ರ ಅವನಿಗೆ ಖಾತ್ರಿ ಆದಂಗ ಅನಿಸಿಲ್ಲ. ಅವನು  ನೋಡೊ  ನೋಟ  ನೋಡಿ ಯಾಕೋ ಬಂಗಾರಾ ನಂಗ ಬರತೈತಂತ ಗೋಣು ಅಲ್ಲಾಡಿಸಿದೆ.

ಅವ ತಡ ಮಾಡದ ಚಾಕಫೀಸ್ ಕೈಗಿಟ್ಟು ಗ್ವಾಡಿ ಮ್ಯಾಲೆ ಬಿಡಸಂದ. ತಾ  ಮಾತ್ರ  ನಾ ಎನು  ಬಿಡಸ್ತಿನಿ  ಅಂತ  ಗಂಭೀರ‌ವಾಗಿ ನೋಡತಿದ್ದ. ನನಗೂ  ಚಿತ್ರಕಲೆ  ತುಂಬಾ ಇಷ್ಟದ್ದು‌. ಮೊದಲ  ಸುಲಭವಾದ  ಮೀನು ಬಿಡಿಸಿದೆ. ಅಳಿಯನತ್ತ ನೋಡಿದೆ, ಯಾವ ಪ್ರತಿಕ್ರಿಯೇ ಕೊಡಲಿಲ್ಲ ನಂತರ ಮೊಸಳೆ ಚಿತ್ರ ಬಿಡಿಸಿ ಹ್ಯಾಂಗದ ಚಿತ್ರ ಅಂದೆ.ಆ ಪುಟ್ಟ ಪೋರ  ಮಾತ್ರ  ನನ್ನ  ಚಿತ್ರದಲ್ಲಿ  ತಪ್ಪು ಹುಡುಕುತ್ತಿದ್ದ. ಅತ್ತಿ ಮೀನು ಹಿಂಗ ಬಿಡಸ ಬೇಕು ಅಂತ ತನಗ ಗೊತ್ತಿರುವ ಮೀನಿನ್ನು ಬಿಡಿಸಿದ. ಬಾಲ ಕಣ್ಣು ಈಜುರೆಕ್ಕೆ, ಅವನು ತುಂಬ ಆಸಕ್ತಿಯಿಂದ ಚಾಕಫೀಸ್ ಬಳಸಿ ಗೆರೆಗಳನ್ನು ಎಳೆಯುವುದ ಕಂಡು ಮನದಲ್ಲಿ ಖುಷಿಪಟ್ಟೆ.

ಸರಿಯಾದ ಕ್ರಮದಲ್ಲಿ ಕೈಬೆರಳಾಡಿಸುವುದ ನ್ನು, ಏಕಾಗ್ರತೆಯಿಂದ  ಪೂರ್ಣಗೊಳಿಸುವ ಕಾರ್ಯಕ್ಷಮತೆಯನ್ನು ಮನನ ಮಾಡುವು ದಿದೆಯಲ್ಲ ಅದು ಸಹಜವಾಗಿ ನೈಜತೆಯೊಂ ದಿಗೆ  ಕೂಡಿದರೆ  ಮಾತ್ರ  ಮಗು  ಕಲಿಯಲು ಆಸಕ್ತಿ ತೋರುತ್ತದೆ. ಪಾಲಕರು ಹೇಳಿದ್ದನ್ನು ಕಣ್ಮುಚ್ಚಿ ನಂಬುವ ಮನೋಭಾವಕ್ಕೆ ಒಗ್ಗಿಸ ದೇ  ಏಕೆ?  ಹೇಗೆ?  ಅದರ  ಮೂಲಾರ್ಥದ ಅರಿಯುವಲ್ಲಿ ಪ್ರಶ್ನಿಸುವ ಗುಣವನ್ನು ಬೆಳೆಸ ಬೇಕು.  ಯಾರಿಗೆ  ಗೊತ್ತು  ಇದೇ  ಮಗು ಮುಂದೊಂದು  ದಿನ  ಏನಾಗಬಹುದೆಂದು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಷ್ಟೊ ಮಕ್ಕಳಿಗೆ  ಧಾನ್ಯಗಳು  ಹೇಗೆ  ಬೆಳೆಯತ್ತವೆ ಎಂಬುದು  ಗೊತ್ತಿಲ್ಲ. ಸಸ್ಯ  ಹೇಗೆ ಬೆಳೆಯು ತ್ತದೆ ಎಂಬುದನ್ನು ಅವಲೋಕನ ಮಾಡಲು ಮುಕ್ತಅವಕಾಶ ನೀಡಬೇಕು. ಯೂಟ್ಯೂಬ್ ನಲ್ಲಿ ಸರ್ಚ್‌ ಮಾಡಿ ನೋಡೊದನ್ನು ಕಲಿಸು ದನ್ನು   ಬಿಟ್ಟು,   ಪ್ರಾಯೋಗಿಕ  ವಿಧಾನಕ್ಕೆ ಮಹತ್ವ   ನೀಡಬೇಕು. ಪ್ರತಿ ಮಗುವಿನಲ್ಲಿ ಚಿಂತಿಸುವ  ಹಾಗೂ  ವಿಷಯ  ವಸ್ತುವಿನ ಆಳಕ್ಕಿಳಿದು  ತರ್ಕಬದ್ಧವಾಗಿ  ಆಲೋಚಿಸು ವ ಮನಸ್ಥಿತಿ ಇದ್ದೆ ಇರುತ್ತದೆ. ಗುರುತಿಸುವ ಕೆಲಸ ನಮ್ಮದಾಗಬೇಕು.


ಮಗುವಿನ ಅಂತಃಶಕ್ತಿ ಹೆಚ್ಚುವ ರೀತಿಯಲ್ಲಿ ಬೆಳೆಸುವ   ಜವಾಬ್ದಾರಿ  ನಮ್ಮ  ಮೇಲಿದೆ. ದೇಶದ  ಆಸ್ತಿಯಾಗಬೇಕಾದ  ಮಕ್ಕಳಿಗೆ ಮಾನಸಿಕ, ದೈಹಿಕ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಪಾಲ‌ಕರು ಸದೃಢರಾಗಬೇಕಾಗಿ ರುವುದು ಅನಿವಾರ್ಯವಾಗಿದೆ. ಮಗುವಿ ನಲ್ಲಿ‌ ಅಡಗಿರುವ  ಸೂಪ್ತ   ಪ್ರತಿಭೆಯನ್ನು ಅನಾವರಣಗೊಳಿಸುವತ್ತ ಸಂಕಲ್ಪ ಮಾಡೋಣ…

                       🔆🔆🔆
✍️ಶ್ರೀಮತಿ.ಶಿವಲೀಲಾ.ಹುಣಸಗಿ  ಶಿಕ್ಷಕಿ,ಯಲ್ಲಾಪೂರ