ರಾಜ್ಯದ ದೇವಾಲಯಗಳಲ್ಲಿ ಹಲವು ರಾಜ ಮನೆತನಗಳು  ತಮ್ಮದೇ  ಆದ   ಕೊಡುಗೆ ನೀಡಿದ್ದಾರೆ.  ಅದರಲ್ಲಿ ಹಲವು ಉರಿನಲ್ಲಿ ದೇವಾಲಯಗಳ ಸಂಕೀರ್ಣವನ್ನೇ ನೋಡ ಬಹುದು. ಅವರಲ್ಲಿ  ಕಲ್ಯಾಣ  ಚಾಲುಕ್ಯರು ಕಲಾತ್ಮಕತೆಗೆ  ಹೊಸ  ರೂಪ  ನೀಡಿದರು. ಅಂತಹ  ಸುಂದರ  ದೇವಾಲಯಗಳ ಸೊಬ ಗನ್ನೇ ಮೈಯಿತ್ತಿ ನಿಂತ ಉರೊಂದು ಹರಪ ನಹಳ್ಲಿ ತಾಲ್ಲೂಕಿನ ಬಾಗಳಿಯಲ್ಲಿದೆ.  ಈ ಗ್ರಾಮ ಸಾಕಷ್ಟು ದೇವಾಲಯಗಳಿಂದ ಕೂಡಿ ದ್ದು, ಕಲ್ಯಾಣ ಚಾಲುಕ್ಯರ ವೈಭವವನ್ನ ಸಾರಿ ಹಿಡಿಯತ್ತಿದೆ.

ಇತಿಹಾಸ  ಪುಟದಲ್ಲಿ  ಬಾಗಳಿ   ಕಲ್ಯಾಣ ಚಾಲುಕ್ಯರ  ಕಾಲದಲ್ಲಿ  ಪ್ರಮುಖ  ಪಟ್ಟಣ ವಾಗಿ ಗುರುತಿಸಿಕೊಂಡಿತ್ತು. ಇಲ್ಲಿ ಸುಮಾರು 92 ಕ್ಕೂ ಅಧಿಕ ಶಾಸನ ದೊರೆತಿರುವುದೇ ಇದಕ್ಕೆ ಸಾಕ್ಷಿ. ಇಲ್ಲಿನ ಶಾಸನದಲ್ಲಿ ಕರಿಕಾಲ ಖಂಡರಾಯನ ಗೊಲ್ಲರ ಗೋಪಾಲಗೌಡ ಬಾಗಳಿ  ಗ್ರಾಮವನ್ನು  ಸ್ಥಾಪಿಸಿದ  ಎನ್ನಲಾ ಗಿದೆ. ಇನ್ನು 987 ರ ಶಾಸನದಲ್ಲಿ ಚಾಲುಕ್ಯ ಅರಸ ಅಹಮಲ್ಲನ ಕಾಲದಲ್ಲಿ ದುಗ್ಗಿಮಯ್ಯ ಸೂರ್ಯದೇವರಿಗೆ ದಾನ ನೀಡಿದ ಉಲ್ಲೇಖ ವಿದೆ. ಇನ್ನು 1062 ರ ಶಾಸನದಲ್ಲಿ ಇಲ್ಲಿನ ಅನಂತಶಯನ  ವಿಗ್ರಹದಲ್ಲಿ  ಶಿಲ್ಪಿ  ನಾಗವ ರ್ಮನ   ಹೆಸರು   ನೋಡಬಹುದು.   ಇನ್ನು 1018 ರ  ಶಾಸನದಲ್ಲಿ ಚಾಲುಕ್ಯ  ದೊರೆ ಎರಡನೇಯ   ನರಸಿಂಹನ  ಕಾಲದಲ್ಲಿ  ಕಲಿ ದೇವರಿಗೆ ದತ್ತಿ ನೀಡಿದ ಉಲ್ಲೇಖವಿದ್ದರೆ, 1020   ಹಾಗೂ  1035 ರ ಶಾಸನಗಳಲ್ಲೂ ದತ್ತಿಯ ಉಲ್ಲೇಖ ಕಾಣಬಹುದು.

         ಕಲ್ಲೇಶ್ವರ ದೇವಾಲಯ :


ಇಲ್ಲಿನ ಕಲ್ಲೇಶ್ವರದೇವಾಲಯ ಇವರಮೇರು ದೇವಾಲಯ  ಹಾಗೂ  ಕಲ್ಯಾಣಚಾಲುಕ್ಯರ  ದೇವಾಲಯಗಳಲ್ಲಿಯೇ ಅತಿಸುಂದರವಾದ ದೇವಾಲಯ. ಈ ದೇವಾಲಯ ಚಾಲುಕ್ಯರ  ಕಲಾಶಾಲೆ  ಹಾಗೂ  ಇಲ್ಲಿನ  ಮಿಥುನ  ಶಿಲ್ಪ ಗಳಿಂದ ಕರ್ನಾಟಕದ ಖುಜುರಾಹೋ ಎಂದೆ  ಪ್ರಸಿದ್ದಿ ಪಡೆದಿದೆ. ಇಲ್ಲಿನ    ಶಾಸನಗಳಿಂದ ಶಿವ, ನರಸಿಂಹ (ವಿಷ್ಣು) ಹಾಗೂ ಸೂರ್ಯ ನಿಂದ  ಕೂಡಿದ  ತ್ರೈಪುರಷ  ದೇವಾಲಯ ಎಂದು ಊಹಿಸಬಹುದು.

ಕಲ್ಲೇಶ್ವರದೇವಾಲಯ ಮೂಲತ:ತ್ರಿಕುಟಾಲ  ದೇವಾಲಯ. ಇಲ್ಲಿ  ಮೂರು   ಗರ್ಭಗುಡಿ, ಸುಖನಾಸಿ, ನವರಂಗ   ಹಾಗೂ  ಸುಂದರ ಮುಖಮಂಟಪ ಹೊಂದಿದೆ.  ಮುಖ್ಯ ಗರ್ಭ ಗುಡಿಗೆ ನಂತರ ಕಾಲದಲ್ಲಿ ಮಂಟಪ ಹಾಗೂ ಉಳಿದ ಗರ್ಭಗುಡಿಗಳು ಸೇರ್ಪಡೆಯಾಗಿರ ಬಹುದು.   ಮುಖ್ಯ     ಗರ್ಭಗುಡಿಯಲ್ಲಿ ಕಲ್ಲೇಶ್ವರ  ಎಂದು  ಕರೆಯುವ  ಸ್ವಯಂಭೂ ಲಿಂಗವಿದ್ದು ಉತ್ತರದಲ್ಲಿ ಶ್ರೀಉಗ್ರನರಸಿಂಹ ಹಾಗೂ  ದಕ್ಷಿಣದಲ್ಲಿ ಸೂರ್ಯನ ಶಿಲ್ಪವಿದೆ. ಈ ದೇವಾಲಯಕ್ಕೆ ನವರಂಗದಲ್ಲಿ ಪೂರ್ವ ಹಾಗೂ   ದಕ್ಷಿಣ ಭಾಗದಲ್ಲಿ  ಪ್ರವೇಶವಿದ್ದು ಇಲ್ಲಿನ   ದ್ವಾರಗಳ   ಬಾಗಿಲುವಾಡಗಳಲ್ಲಿ ಸುಂದರ ಕೆತ್ತೆನೆ ನೋಡಬಹುದು.  ಇಲ್ಲಿನ ದಕ್ಶಿಣದ್ವಾರ   ದೇವಾಲಯಕ್ಕೆ   ಮುಕುಟ ಪ್ರಾಯ.  


ಮೂಲಗರ್ಭಗುಡಿಯ ಬಾಗಿಲುವಾಡ ಪಂಚ ಶಾಖೆಗಳನ್ನು  ಹೊಂದಿದ್ದು  ಭವ್ಯತೆಗೆ   ಸಾಕ್ಷಿ ಯಾಗಿದೆ. ಇಲ್ಲಿ ವಜ್ರ, ಲತಾ, ನರ್ತನ,ಅಲಂ ಕಾರ  ಹಾಗೂ  ಹಾರ  ಶಾಖೆಗಳಿವೆ. ಲಲಾಟ ದಲ್ಲಿ  ಗಜಲಕ್ಷ್ಮಿ ಕೆತ್ತೆನೆ ಇದೆ. ಇದೇ ಮಾದರಿ ಯಲ್ಲಿ ಸುಖನಾಸಿಯಲ್ಲಿ ಇದ್ದು ಕ್ರಮವಾಗಿ ವಜ್ರ, ಲತಾ, ಕಿರು ಜಾಲಂದ್ರ, ನಾಗ ಹಾಗೂ ಲತಾಶಾಖೆ ಇದೆ. ಇಲ್ಲಿ ಶೈವ ದ್ವಾರಪಾಲಕರಿ ದ್ದು, ಮಕರ ತೋರಣ  ಕಲಾತ್ಮಕವಾಗಿದ್ದು ಕೊನೆಯಲ್ಲಿ ಕೀರ್ತಿಮುಖ ನೋಡಬಹುದು. ನಂತರದಲ್ಲಿ ಶಿವನ ಅದ್ಭುತ ಕೆತ್ತೆನೆ ಇದೆ. ಇಲ್ಲಿ ಅಂದಕಾಸುರನ ವಧೆ, ಗಜಸಂಹಾಸುರ ಹಾಗೂ  ನಟರಾಜನ  ಶಿಲ್ಪವಿದೆ.  ಇಲ್ಲಿನ ಲಲಾಟದಲ್ಲಿ ಗಜಲಕ್ಶ್ಮಿ ಇದ್ದರ ಮೇಲೆ ಶಿವ,ಬ್ರಹ್ಮ ಹಾಗು ವಿಷ್ಣುವಿನ ಸುಂದರ ಕೆತ್ತೆನೆ ಇದೆ. ಇನ್ನು  ನವರಂಗದಲ್ಲಿ ನಾಲ್ಕು ಕಂಭಗ ಳಿದ್ದು ಶಿವನ ಎದುರಾಗಿ ನಂದಿಯಶಿಲ್ಪವಿದೆ.

ನವರಂಗದ ಪೂರ್ವದ ಪ್ರವೇಶ ದ್ವಾರದಲ್ಲಿ ನ ಬಾಗಿಲುವಾಡ ಅತ್ಯಂತ ಕಲಾತ್ಮಕವಾಗಿ ದ್ದು, ಇಲ್ಲಿನ ಪದ್ಮ,ನಾಗಬಂಧ, ಲತಾಸುರಳಿ ನೃತ್ಯಗಾರರು,ಸಂಗೀತಗಾರರು ಹಾಗೂ ಲತಾ ಬಳ್ಳಿಯಿಂದ  ಕೂಡಿದ್ದು ನಾಗಬಂಧ ಹಾಗೂ  ನೃತ್ಯ ಶಿಲ್ಪಗಳು  ಅದ್ಭುತ. ಲಲಾಟದಲ್ಲಿ ಗಜ ಲಕ್ಷ್ಮಿ ಕೆತ್ತೆನೆ ಇದ್ದು  ಬ್ರಹ್ಮ, ವಿಷ್ಣು  ಹಾಗೂ ಮಹೇಶ್ವರ ಹಾಗೂ  ಶಿವನ  ಅವತಾರಗಳು ಹಾಗು ಹದಿಮೂರು ಗಣಧರರಿದ್ದಾರೆ. ಇನ್ನು ದಕ್ಷಿಣದ್ವಾರ   ದೇವಾಲಯಕ್ಕೆ    ಮುಕುಟ ಎನಿಸುವಂತಿದೆ. ಬಾಗಿಲುವಾಡ ಆರು ಶಾಖೆ ಯಿಂದ ಆಲಂಕೃತಗೊಂಡಿದ್ದು,  ಇಲ್ಲಿಯೂ ಪದ್ಮ,  ನಾಗಬಂಧ, ರತಿಮನ್ಮಥರು, ಲತಾ ಬಳ್ಳಿಯ ಕೆತ್ತೆನೆ ನೋಡಬಹುದು.ಇನ್ನುಲಲಾ ಟದಲ್ಲಿ ಗಜಲಕ್ಷ್ಮಿಕೆತ್ತೆನೆ ಇದ್ದು ಪಾರ್ಶ್ವದಲ್ಲಿ ಚಾಮರದಾರೆಯರು, ಮೇಲಿನ ಸಾಲಿನಲ್ಲಿ ನೃತ್ಯ  ಹಾಗೂ  ಸಂಗೀತಗಾರರು   ನಂತರ ನಟರಾಜ  ಹಾಗೂ  ಸಂಗೀತಗಾರರು  ಕಾಣ ಬರಲಿದ್ದು,  ಕೆತ್ತೆನೆಗಳು   ದೇವಾಲಯದ ಪ್ರವೇಶದಲ್ಲಿ ಬೆರಗು ಮೂಡಿಸುತ್ತದೆ.

ದೇವಾಲಯಕ್ಕೆ ಮುಕುಟ ಎನಿಸಿದ ಮುಖ ಮಂಟಪದಲ್ಲಿ ಸುಮಾರು 60 ಕಂಭಗಳಿದ್ದು ಪ್ರತೀ  ಕಂಭಗಳು  ತನ್ನದೇ ಆದ ವಿನ್ಯಾಸವ ನ್ನು ಹೊಂದಿದೆ. ಮಂಟಪದಲ್ಲಿ ನಾಲ್ಕುಭಾಗ ದಲ್ಲಿ  ಪ್ರವೇಶವಿದ್ದು ಕಕ್ಷಾಸನವಿದೆ. ಇಲ್ಲಿನ  ಮಂಟಪದ   ಕಂಬದಲ್ಲಿ   ಸುಂದರವಾದ   ಮದನಿಕೆಯರ ಚಿತ್ರವಿದ್ದುದರ್ಪಣ ಸುಂದರಿ ನಾಟ್ಯರಾಣಿ, ನಟರಾಜ, ದುರ್ಗಾ, ಕೋತಿ ಸುಂದರಿಯ  ಸೆರೆಗು  ಸೆಳೆಯುವುದು  ನಾಗ ವೀಣೆ  ಮುಂತಾದ ಕೆತ್ತೆನೆ ನೋಡಬಹುದು. ಇಲ್ಲಿನ   ಮಂಟಪದ   ನಡುವೆಯ  ನಂದಿ ಗಮನ ಸೆಳೆಯುತ್ತದೆ.

ಇಲ್ಲಿನ   ಉತ್ತರದ  ಗರ್ಭಗುಡಿಯಲ್ಲಿರುವ ಉಗ್ರನರಸಿಂಹ ಕಲ್ಯಾಣ ಚಾಲುಕ್ಯರ ಕೆತ್ತೆನೆ ಗೆ ಮೇರು ಕೃತಿ.  ಇದರ ಪ್ರವೇಶ ದ್ವಾರ ಸಹ ಸುಂದರವಾಗಿ  ಅಲಂಕೃತವಾಗಿದ್ದು,  ಗರುಡ ಪೀಠದಲ್ಲಿ ಬಲಗಾಲ ಮೇಲೆ ನಿಂತು ಎಡಗಾ ಲನ್ನು  ಪದ್ಮಾಸನ  ರೀತಿಯಲ್ಲಿದ್ದು  ಹಿರಣ್ಯ ಕಶಪುವನ್ನು ಬಗೆಯುವಂತೆ ಇದೆ.ಹದಿನಾರು ಕೈಗಳಿದ್ದು ಖಡ್ಗ, ಪರಶು, ಚಕ್ರ, ಪಾಶ, ಬಿಲ್ಲು ಧನಸ್ಸು,  ಗದಾ,  ಶಂಖ,  ಗುರಾಣಿ   ಇದ್ದು ಎರಡು  ಕೈಗಳಲ್ಲಿ  ಕಶ್ಯಪನನ್ನು   ಹಿಡಿದಿದ್ದು ಉಳಿದ ಕೈಗಳಲ್ಲಿ ಕರುಳಿನಹಾರ ಹಾಕಿದಂತಿ ದೆ. ಬೆರಳುಗಳು ಸಹ ಕಾಣುವಂತಿದ್ದುಪ್ರಭಾ ವಳಿ ಕಲಾತ್ಮಕವಾಗಿದೆ.

ಚನ್ನಬಸಪ್ಪ ದೇವಾಲಯ :


ಇನ್ನು ಇಲ್ಲಿ ಕೆರೆಯದಂಡೆಯಲ್ಲಿ ಚನ್ನಬಸಪ್ಪ ದೇವಾಲಯವಿದ್ದು ಬಹುತೇಕ ನಾಶದ ಹಂತ ದಲ್ಲಿದೆ. ದೇವಾಲಯ  ಗರ್ಭಗುಡಿ   ಹಾಗೂ ತೆರೆದ  ಸಭಾಮಂಟಪ. ಹೊಂದಿದ್ದು,  ಗರ್ಭ ಗುಡಿಯ   ಬಾಗಿಲುವಾಡದ   ಲಲಾಟದಲ್ಲ ಕುಳಿತಿರುವ  ದೇವಿಯ  ಶಿಲ್ಪವಿದ್ದು ಎರಡೂ ಬದಿಯಲ್ಲಿ  ಚಾಮರದಾರೆಯರು  ಇದ್ದಾರೆ. ಇನ್ನು  ಸಭಾಮಂಟಪದಲ್ಲಿ  ನಾಲ್ಕು ಕಂಭಗ ಳಿದ್ದು  ಇಳಿಜಾರಿನ. ಮುಂಚಾಚು ನೋಡಬ ಹುದು. ಇದು  ದೇವಿಯ  ದೇವಾಲಯವಾಗಿ ರಬೇಕು  ಎಂಬ  ಊಹೆ  ಇದೆ.  ಲಲಾಟದ ಮಾದರಿಯ   ಶಿಲ್ಪವನ್ನು  ಹಂಪೆಯ   ವಿಶ್ವ ವಿದ್ಯಾನಿಲಯದಲ್ಲಿ ಇರಿಸಲಾಗಿದ್ದು,ಬಹುಶ: ಇಲ್ಲಿನ  ಗರ್ಭಗುಡಿಯಲ್ಲಿ  ಇದ್ದ  ಶಿಲ್ಪವಿರಬ ಹುದು.

ಸಂಗಮೇಶ್ವರ ದೇವಾಲಯ :

ಚನ್ನಬಸಪ್ಪ ದೇವಾಲಯಕ್ಕೆ ಮುಂಚೆ ಕಾಣು ವ ಈ ದೇವಾಲಯ ತ್ರಿಕುಟಾಚಲ ಮಾದರಿ ಯಲ್ಲಿದೆ. ಮೂರು ಗರ್ಭಗುಡಿ, ಅಂತರಾಳ ಹಾಗು ಸಭಾಮಂಟಪ ಹೊಂದಿದ್ದು ಪಶ್ಚಿಮ ಗರ್ಭಗುಡಿಯಲ್ಲಿ ಸಂಗಮೇಶ್ವರ ಎಂದು ಕರೆಯುವ ಶಿವಲಿಂಗವಿದೆ.

ಇಲ್ಲಿನ ಬಾಗಿಲಾವಡದಲ್ಲಿ ಲತಾಬಳ್ಳಿಯ ಶಾಖೆ ಹಾಗು ಜಾಲಂದ್ರಗಳು ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದೆ. ಇನ್ನು ಉತ್ತರದ ಗರ್ಭಗುಡಿಯಲ್ಲಿ ಸ್ಥಾನಿಕ ವಿಷ್ಣುವಿನ ಮೂರ್ತಿಇದ್ದು, ಪೂರ್ವದ ಗರ್ಭಗುಡಿಯಲ್ಲಿ ಸೂರ್ಯನ ಮೂರ್ತಿ ಇದೆ. ಕೈಯಲ್ಲಿ ಕಮಲ ಹಿಡಿದು ನಿಂತಿರುವ  ಶಿಲ್ಪ  ಭಗ್ನವಾಗಿದ್ದರೂ ಸುಂದರವಾಗಿದೆ. ಇನ್ನು ಸಭಾಮಂಟಪದಲ್ಲಿ ಶಿವನ ಎದುರಿಗೆ ನಂದಿ ಇದ್ದು, ಸಪ್ತಮಾತೃಕೆ ಹಾಗೂ ಗಣಪತಿಯ ಶಿಲ್ಪವಿದೆ.

  ಶ್ರೀ ಲಕ್ಷ್ಮೀನಾರಾಯಣ ದೇವಾಲಯ :

ಊರಿನ  ಒಳ  ಭಾಗದಲ್ಲಿರುವ  ಈ  ದೇವಾ ಲಯ ಮನೆಗಳ ಮಧ್ಯೆ ಜಗತಿಯ ಮೇಲೆ ಇದೆ. ಕೇವಲ  ಗರ್ಭಗುಡಿ ಹಾಗೂ ಅಂತರಾ ಳ  ಹೊಂದಿರುವ ಈ ದೇವಾಲಯ ಅವನತಿ ಯತ್ತ ಸಾಗಿದೆ.  ಗರ್ಭಗುಡಿಯಲ್ಲಿ   ಗರುಡ ಪೀಠದ   ಮೇಲೆ   ಶ್ರೀಲಕ್ಷ್ಮೀನಾರಾಯಣ ಮೂರ್ತಿ ಇದೆ. ಆಸೀನ ಭಂಗಿಯಲ್ಲಿರುವ ಈ ಮೂರ್ತಿಯ ಕೈಗಳಲ್ಲಿ ಶಂಖ, ಚಕ್ರವಿದ್ದು ತನ್ನ ತೊಡೆಯ ಮೇಲೆ ಲಕ್ಷ್ಮೀಯನ್ನು  ಕೂಡಿ ಸಿಕೊಂಡಿರುವಂತಿದ್ದು,ಸುಂದರವಾದ ಪ್ರಭಾ ವಳಿಯನ್ನು   ಹೊಂದಿದೆ.  ಇಲ್ಲಿನ  ದೇವಾಲ ಯದ ಮುಂದೆ ಇರುವ ಶಾಸನದಲ್ಲಿ ಮಾಳ ಪ್ಪಯನ  ಸೊಸೆ  ಧರ್ಮವ್ವೆ   1160 ರಲ್ಲಿ ದೇವಾಲಯಕ್ಕೆ ಭೂದಾನ ಮಾಡಿದ ಉಲ್ಲೇ ಖವಿದೆ.

ಕನಕೇಶ್ವರ ದೇವಾಲಯ:

ನಾರಾಯಣ    ದೇವಾಲಯದ   ಮುಂದೆ ಹೋದರೆ  ಕನಕೇಶ್ವರ   ದೇವಾಲಯವಿದ್ದು ಗರ್ಭಗುಡಿ, ಅಂತರಾಳ ಹಾಗು ತೆರೆದ ಸಭಾ ಮಂಟಪ   ಹೊಂದಿದೆ.  ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಕನಕೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಮೂಲತ: ವಿಷ್ಣು ದೇವಾಲಯ ನಂತರ ಶಿವಾಲಯವಾಗಿದೆ. ಇನ್ನು ಸಭಾಮಂಟಪದಲ್ಲಿ ಸುಮಾರು 16 ಕಂಬಗಳಿದ್ದು ಇಲ್ಲಿನ ಶಾಸನದಲ್ಲಿ ಚಾಲುಕ್ಯ ಅರಸ ಜಗದೇಕಮಲ್ಲ ಇಲ್ಲಿನ ವೀರಕೇಶವ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಕವಿದೆ.  ಹಾಗಾಗಿ ಮೊದಲು ಕೇಶವನ ದೇವಾಲಯ ವಾಗಿದ್ದ  ಇದ್ದು  ನಂತರ   ಶಿವಾಲಯವಾಗಿ ಬದಲಾಗಿದೆ.

ಜೈನ ಬಸದಿ :

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ವಾದ ಈ ಬಸದಿ ಗರ್ಭಗುಡಿ ಹಾಗೂ ಅಂತ ರಾಳ   ಮಾತ್ರ  ಹೊಂದಿದ್ದು  ಗರ್ಭಗುಡಿಯ  ಲ್ಲಿನ ತೀರ್ಥಂಕರರ ಶಿಲ್ಪವನ್ನು ಮ್ಯೂಸಿಯಂ ನಲ್ಲಿ ಇರಿಸಲಾಗಿದೆ. ಗರ್ಭಗುಡಿಯಬಾಗಿಲು ವಾಡದ  ಲಲಾಟದಲ್ಲಿ  ತೀರ್ಥಂಕರ  ಕೆತ್ತೆನೆ ಇದೆ.

ಮ್ಯೂಸಿಯಂ :

ಇಲ್ಲಿ  ಭಾರತೀಯ  ಪುರಾತತ್ವ  ಇಲಾಖೆಯ ಮ್ಯೂಸಿಯಂ  ಸ್ಥಾಪಿಸಿದ್ದು, ಸಿಕ್ಕ  ಸುಂದರ ಶಿಲ್ಪಗಳನ್ನು ಇಟ್ಟಿದ್ದಾರೆ. ಇಲ್ಲಿಸುಂದರ ವೀರ ಗಲ್ಲುಗಳು,ಶಿಲ್ಪಗಳು ಶಾಸನಗಳಿದ್ದು,ಶಾಸನ ದ  ಪ್ರತಿಗಳನ್ನು  ಪಕ್ಕದಲ್ಲಿ  ಹಾಕಿರುವುದು   ವಿಶೇಷ. ಇಲ್ಲಿನ   ಅನಂತಶಯನಮೂರ್ತಿ, ಸಪ್ತಮಾತೃಕೆ, ಮಹಿಷಾಸುರ ಮರ್ಧಿನಿಶಿಲ್ಪ, ಲಕ್ಶ್ಮೀನಾರಯಣ  ಶಿಲ್ಪಗಳು   ಸುಂದರವಾ ಗಿದೆ.

ತಲುಪುವ ಬಗ್ಗೆ : ಬಾಗಳಿ ಗ್ರಾಮ ಹರಪನಹಳ್ಲಿ – ಹೂವಿನಹಡಗಲಿ ರಸ್ತೆಯಲ್ಲಿ ಸುಮಾರು 6 ಕಿ ಮೀ ದೂರದಲ್ಲಿ ಚಿಕ್ಕನಹಳ್ಳಿ ಬಳಿ ಬಲಕ್ಕೆ ತಿರುಗಿ ಹೋದರೆ ಸಿಗುತ್ತದೆ.  ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಕಾರಣ ಸಮಯಹೊಂದಿ ಸಿಕೊಂಡು ಹೋದರ ಒಳ್ಳೆಯದು.         (10 ರಿಂದ 5).

🔆🔆🔆

 ✍️ಶ್ರೀನಿವಾಸ ಮೂರ್ತಿ.ಎನ್.ಎಸ್.   ಬೆಂಗಳೂರು