ಶ್ರೀಜಾ ತೇಜಾ ಅವಳಿ ಸಹೋದರಿಯರು. ಮಳೆಗಾಲದ ಒಂದು ದಿನ ಬೆಳಿಗ್ಗೆ ಇಬ್ಬರೂ ತಮ್ಮ ಪಾಟೀಚೀಲ ಬೆನ್ನಿಗೆ ಹಾಕಿಕೊಂಡು ಛತ್ರಿ ಹಿಡಿದು ಶಾಲೆಗೆ ತೆರಳಿದ್ದರು.ಅವರ ಶಾಲೆ ಮನೆಯಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿದ್ದು ಇಬ್ಬರೂ ನಡೆದೇ ಶಾಲೆಗೆ ಹೋಗುತ್ತಿದ್ದರು.ಸಣ್ಣ ಮಳೆ ಯಲ್ಲಿ ಅವರು ಸಾಗುತ್ತಿದ್ದಾಗ ರಸ್ತೆಯ ಬದಿ ಯಲ್ಲಿ ನಡುಗುತ್ತ ಮಲಗಿರುವ ಎರಡು ಬೆಕ್ಕಿನಮರಿಗಳನ್ನು ಕಂಡರು.ಸುರಿಯುತ್ತಿದ್ದ ಮಳೆಯಿಂದ ಬೆಕ್ಕಿನ ಮರಿಗಳು ಪೂರ್ತಿ ತೋಯ್ದು ಹೋಗಿ ಚಳಿಯಿಂದ ಗಡಗಡ ನಡುಗುತ್ತಿದ್ದವು.’ಇವಕ್ಕೆ ಬಹಳ ಚಳಿಯಾಗು ತ್ತಿದೆ..’ ಎಂದು ತೇಜ ಬೇಗ ಅವುಗಳನ್ನು ಎತ್ತಿಕೊಂಡು ಛತ್ರಿಯೊಳಗೆ ತೆಗೆದುಕೊಂಡ ಳು. ಶ್ರೀಜಾ ತಡಮಾಡದೆ ತಾನು ಧರಿಸಿದ್ದ ಸ್ವೇಟರ್ ತೆಗೆದು ಅದರೊಳಗೆ ಮರಿಗಳನ್ನು ಒರೆಸಿ ಬೆಚ್ಚಗಾಗಿಸಿದಳು. ಮುದ್ದಾದ ಮರಿ ಗಳನ್ನು ಈಗ ಏನೂ ಮಾಡುವುದೆಂದು ಇಬ್ಬರು ವಿಚಾರಕ್ಕೆ ಬಿದ್ದರು.
ಶ್ರೀಜಾ “ಮನೆಗೆ ಹೋಗಿ ಮರಿಗಳನ್ನು ಅಲ್ಲಿ ಬಿಟ್ಟುಬರೋಣ್ವಾ ” ಎಂದಾಗ. ತೇಜಾ.. “ಮನೆಯೊಳಗೆ ಹೇಗೆ ಹೋಗುವುದು..? ಮನೆಗೆ ಬೀಗ ಹಾಕಿ ಅಪ್ಪ ಅಮ್ಮ ಕೆಲಸಕ್ಕೆ ಹೋರಟ್ರಲ್ವಾ..” ಎಂದಳು.ಶಾಲೆಗೆ ಈ ಮರಿ ಗಳನ್ನು ಒಯ್ದರೆ ಮಿಸ್ ಬೈಯಬಹುದು.. ಉಳಿದ ಮಕ್ಕಳು ಕೀಟಲೆ ಮಾಡಬಹುದು.. ಮರಿಗಳಿಗೆ ತೊಂದರೆ ಕೊಡಬಹುದು. ಎಂದು ಚರ್ಚಿಸಿದರು.’ದಾರಿಯಲ್ಲಿ ಯಾವು ದಾದರೂ ಸುರಕ್ಷಿತ ಜಾಗದಲ್ಲಿ ಮರಿಗಳನ್ನು ಬಿಟ್ಟು,ಸಂಜೆ ಶಾಲೆ ಮುಗಿದ ಮೇಲೆ ತಮ್ಮ ಮನೆಗೆ ಕರೆದೊಯ್ಯೋಣ’ ಎಂದು ನಿರ್ಣ ಯಿಸಿ ಮುನ್ನೆಡೆದರು. ಆಗ ರಸ್ತೆಯ ಬದಿ ಯಲ್ಲಿ ಒಂದು ಗುಡಿಸಲು ಕಾಣಿಸಿತು. ಇಬ್ಬರೂ ಗುಡಿಸಲ ಬಾಗಿಲಲ್ಲಿ ಕುಳಿತ ಅಜ್ಜಿ ಯ ಹತ್ತಿರ “ಅಜ್ಜಿ ಈ.. ಬೆಕ್ಕಿನ ಮರಿಗಳನ್ನ ಸಂಜೆಯವರೆಗೂ ಇಟ್ಟುಕೊಳ್ಳುತ್ತಿರಾ?ನಾವು ಶಾಲೆಮುಗಿದ ಮೇಲೆ ನಮ್ಮಮನೆಗೆ ಒಯ್ಯುತ್ತೇವೆ” ಎಂದು ಕೇಳಿದಾಗ, ಅಜ್ಜಿ ಒಪ್ಪಿಕೊಂಡು ಆ ಬೆಕ್ಕಿನ ಮರಿಗಳನ್ನು ತನ್ನ ಸೆರಗಿನಲ್ಲಿ ಹಾಕಿಕೊಂಡಳು. ತೇಜಾ ಶ್ರೀಜಾ ಖುಷಿಯಿಂದ ಶಾಲೆಗೆ ಹೊರಟರು.
ಇಬ್ಬರಿಗೂ ಶಾಲೆಯಲ್ಲಿ ಬೆಕ್ಕಿನ ಮರಿಗಳದೇ ನೆನಪು. ಮೇಷ್ಟ್ರು ಪಾಠ ಮಾಡುತ್ತಾ ಅಂದು ‘ಮಾಂತ್ರಿಕ ಮುದುಕಿ’ ಎನ್ನುವ ಕಥೆಯೊಂದ ನ್ನು ಹೇಳಲಾರಂಭಿಸಿದರು. ದಟ್ಟಕಾಡಿಲ್ಲಿ ಒಬ್ಬಳು ಮಾಯಾವಿ ಮುದುಕಿ ಇದ್ದಳು. ಅವಳು ಅಲ್ಲಿನ ಪುಟ್ಟಪುಟ್ಟ ಪ್ರಾಣಿಗಳ ಮರಿಗಳನ್ನು ಆಹಾರವಾಗಿ ಬಳಸುತ್ತಿದ್ದಳು. ಎಳೆಯ ಪ್ರಾಣಿಗಳೆಂದರೆ ಅವಳಿಗೆ ತಿನ್ನಲು ಬಲುರುಚಿ. ಹೀಗೆ ಅವಳು ಪ್ರಾಣಿಗಳ ಮರಿ ಗಳನ್ನು ತಿಂದುತಿಂದು ಕಾಡಿನಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆಆಯಿತು.ಮುದುಕಿಗೆ ಆಹಾರ ಸಿಗದೆ ಒಂದು ಹಳ್ಳಿಗೆ ಬಂದಳು. ಊರಿನ ಲ್ಲಿರುವ ಬೀದಿನಾಯಿ ಮರಿಗಳನ್ನು, ಕೋಳಿ ಮರಿಗಳನ್ನು,ಬೆಕ್ಕಿನ ಮರಿಗಳನ್ನು ಯಾರಿ ಗೂ ಗೊತ್ತೇ ಆಗದಂತೆ ಹಿಡಿದು ತಿಂದುಬಿಡು ತ್ತಿದ್ದಳು.ಕೊನೆಗೆ ಆ ಊರಿನಲ್ಲಿ ಅವಳ ಹೊಟ್ಟೆ ತುಂಬಿಸಿಕೊಳ್ಳಲು ಪ್ರಾಣಿಗಳ ಮರಿ ಗಳು ಸಿಗದೇಹೋದಾಗ ಅವಳು ಸಣ್ಣ ಸಣ್ಣ ಮಕ್ಕಳನ್ನು ತಿನ್ನುವ ಉಪಾಯ ಮಾಡತೊ ಡಗಿದಳು. ಅಷ್ಟರೊಳಗೆ ಊರಿನ ಜನರಿಗೆ ಅವಳ ವಿಷಯ ಗೊತ್ತಾಗಿ, ಅವಳನ್ನು ಅಲ್ಲಿಂದ ಓಡಿಸಿ ತಮ್ಮ ಊರಿಗೆ ಬರದಂತೆ ನೋಡಿಕೊಂಡರು… ಎಂದು ಕಥೆ ಮುಗಿಸಿ ದರು.ತೇಜಾ ಶ್ರೀಜಾ ಇಬ್ಬರೂ ಕಥೆ ಕೇಳಿ ಭಯಬಿದ್ದರು.” ನಾವು ಬೆಕ್ಕಿನ ಮರಿಗಳನ್ನು ನೀಡಿ ಬಂದ ಮುದುಕಿ ಆ ಮಾಂತ್ರಿಕ ಮುದುಕಿಯೇ ಇರಬಹುದೇ..? ಅವಳು ನಮಗೆ ಸಿಕ್ಕ ಬೆಕ್ಕಿನಮರಿಗಳನ್ನು ತಿಂದು ಹಾಕಿರಬಹುದೇ..!?”ಎಂದು ಆತಂಕಪಟ್ಟರು ಶಾಲಾ ಘಂಟೆ ಬೇಗ ಬಾರಿಸಲಿ ಎಂದು ಇಬ್ಬರೂ ಬೇಡಿಕೊಂಡರು. ಶಾಲೆ ಮುಗಿದ ತಕ್ಷಣ ಚಾಕ್ಲೇಟು,ಐಸ್ ಕ್ರೀಂ ಕೊಳ್ಳದೇ ನೇರ ವಾಗಿ ಅಜ್ಜಿಯ ಗುಡಿಸಲು ಇದ್ದಲ್ಲಿಗೆ ಓಡಿ ಬಂದರು.
ಅಜ್ಜಿಯ ಗುಡಿಸಲಿನ ಒಳಕ್ಕೆ ಹೋಗಲು ಇಬ್ಬರಿಗೂ ಭಯ ಆಯಿತು. ಹೊರಗಿನಿಂದ ಲೇ ಅಜ್ಜಿ.. ಅಜ್ಜಿ… ಎಂದುಮೆಲುದನಿಯಲ್ಲಿ ಕರೆದರು. ಐದಾರು ನಿಮಿಷಗಳ ನಂತರ ಅಜ್ಜಿ ಒಂದು ಪುಟ್ಟರಟ್ಟಿನ ಡಬ್ಬಿಯಲ್ಲಿ ಬೆಕ್ಕಿನ ಮರಿಗಳನ್ನು ಇಟ್ಟು ಕೊಂಡು ಹೊರ ಬಂದುದನ್ನು ಕಂಡು ತೇಜ ಶ್ರೀಜಾಒಳಗೊಳ ಗೊಳಗೆ ಸಮಾಧಾನ ಪಟ್ಟುಕೊಂಡರು.ಈ ಅಜ್ಜಿ ಮಾಂತ್ರಿಕ ಅಜ್ಜಿಯಲ್ಲ ಎನ್ನುವುದು ಅವರಿಗೆ ಮನದಟ್ಟಾಯಿತು. ಅಲ್ಲದೇ ಅಜ್ಜಿ “ನೀವು ತುಂಬಾ ಒಳ್ಳೆಯ ಮಕ್ಕಳು.. ಇಗೋ ತಗೊಳಿ..” ಎಂದು ಬೊಗಸೆ ತುಂಬಾ ಹುರಿಗಡಲೆ ನೀಡಿದಳು. ತೇಜಾ ಶ್ರೀಜಾ ನೆಲಗಡಲೆ ಪಡೆದು ಒಂದೆರಡು ಬಾಯಿಗೆ, ಉಳಿದದ್ದು ಜೇಬಿಗೆ ಇಳಿಸಿಕೊಂಡು ಬೆಕ್ಕಿನ ಮರಿಗಳನ್ನು ಮುದ್ದಿಸುತ್ತಾ ಮನೆಯ ಹಾದಿ ಹಿಡಿದರು. ಅಂದಿನಿಂದ ಈ ಅವಳಿ ಮಕ್ಕಳಿಗೆ ಆಡಿಕೊಳ್ಳಲು ಎರಡುಬೆಕ್ಕಿನ ಮರಿಗಳು ಜಂಟಿಯಾಗಿದ್ದವು.
🔆🔆🔆
✍️ರೇಖಾ ಭಟ್, ಹೊನ್ನಗದ್ದೆ
ಮಕ್ಕಳ ಮನಸ್ಸು ಮುಗ್ಧ ಬೆಕ್ಕಿನ ಮರಿಗಳಂತ ಮೃದು…ಒಳಭಾವಗಳು ಚೆನ್ನಾಗಿ ಕಟ್ಟಿ ಕೊಟ್ಟಿರುವೆ ನೈಸ್
LikeLike