“William Blake”  ಖ್ಯಾತ ಇಂಗ್ಲೀಷ್ ರೋಮ್ಯಾಂಟಿಕ್ ಕವಿ ಹಾಗೂ ಕಲಾವಿದ.

Born: 28 November 1757, Soho, London, UK
Died:12 August 1827,London,UK
Poems:  The Tyger,    London,    The Lamb,
And did those feet in ancient time ಮುಂತಾದವು.

    ರೋಗಗ್ರಸ್ತ ಗುಲಾಬಿ

ಅಯ್ಯೋ ಗುಲಾಬಿಯೇ ನೀ ರೋಗಗ್ರಸ್ತ, ಇರುಳಿನಲಿ ಹಾರಾಡುತ ಅಬ್ಬರದ  ಚಂಡಮಾರುತದಿಂದ ಬಂದ
ಕಣ್ಣಿಗೆ ಕಾಣದ  ಕ್ರಿಮಿಯಾತ:

ನಿನ್ನ ಸಿಂಧೂರ  ಶಯ್ಯೆಯಲಿ
ಆಮೋದವ ಕಂಡುಕೊಂಡಿರುವ
ಅವನ ಗಾಢ ರಹಸ್ಯ ಪ್ರೇಮ
ನಾಶ ಮಾಡುವುದು ನಿನ್ನ ಜೀವನವ.

The Sick Rose
O Rose thou art sick.
The invisible worm,
That flies in the night
In the howling storm

Has found out thy bed.
Of crimson joy:
And his dark secret love.
          Does thy life destroy           

                      🔆🔆🔆
✍️ ಆಂಗ್ಲ: ವಿಲಿಯಂ ಬ್ಲೇಕ್ ಕನ್ನಡಕ್ಕೆ:ಕವಿತಾ ಹೆಗಡೆ ಅಭಯಂ. ಹುಬ್ಬಳ್ಳಿ