ನೊಂದವರ ಅಡಗಿದ
ಧ್ವನಿಗೆ ಶಕ್ತಿ ತುಂಬಲು
ಸದಾ ಸಿದ್ಧ ಲಿಂಗಯೈಕ್ಯನಾದ
ಸುದ್ದಿಗೆ ಈಗಷ್ಟೆ ಬಾಯಿ
ಬರುತ್ತಿದ್ದವರಿಗೆ ಮತ್ತೆ ಧ್ವನಿ
ಕಟ್ಟಿ ಮೌನರಾಗದ ಅಶೃತರ್ಪಣ
ಗಳ ಗಳಿಸುತ್ತಿವೆ ॥೧॥

ಇಕ್ರಲಾ ಒದಿರ್ಲಾ
ಆ ನನ ಮಕ್ಕಳ ಚರ್ಮ
ಎಬ್ರಲಾ ಎನುತಲೆ ಆಕ್ರೋಶದ
ಕಟ್ಟೆ ಒಡಿಸಿಕೊಂಡು ಶೋಷಕರಿಂ
ಬಿಡಿಸಿ ನೋವಿಗೆ ಮಿಡಿಯುವ
ಪ್ರಾಣ ಮಿತ್ರ ಇನ್ನಿಲ್ಲ

ಯಾರಿಗೆ ಬಂತು
ಎಲ್ಲಿಗೆ ಬಂತು ಸ್ವಾತಂತ್ರ್ಯವೆಂದು
ಗಟ್ಟಿಧ್ವನಿಯಲಿ ಶ್ರೀಮಂತರ
ಪಾಲಾಗುವ ಸ್ವಾತಂತ್ರದ
ದುರುಪಯೋಗ ತಡಿಯಲು
ಓಡಾಡುವ ಕಾಲು ನಿಂತಿವಿ ॥೩॥

ಎಲ್ಲ ಊರುಗಳ
ಹೊಲೆಯರ ಕೇರಿಗಳ
ದೌರ್ಜನ್ಯದ ಇತಿಹಾಸ ಬರೆದು
ದಲಿತರ ಆತ್ಮದ ಚರಿತ್ರೆಯನ್ನೆ
ತನ್ನ ಆತ್ಮದ ಚರಿತ್ರೆ ಬರೆಯುತ
ಎಲ್ಲ ದಲಿತರ ಕೆಟ್ಟ ಹಣೆಬರಹ
ಬಿಚ್ಚಿಟ್ಟ ಆತ್ಮವೇ ಶಾಂತವಾಗು ॥೪॥

ಊರ ಕೇರಿಗಳ ಧ್ವನಿಯೇ
ಹೋಗಿ ಬನ್ನಿ ನೀವ ನಡೆದ
ದಾರಿ ಮುಚ್ಚಿಲ್ಲ ಶೋಷಕರಿಂ
ಬಿಡಿಸಿಕೊಳ್ಳ ಲು ನಾವು
ತುಳಿಯುವೆವು ನಿಮ್ಮ ಹೆಜ್ಜೆಗಳ
ಶೋಷಕರ ಮೇಲೆ ಗುಡುಗಲು
ಕಲಿಸಿದ್ದಿರಿ ಗುಡುಗಿ ಮುಕ್ತಿಯ
ಮಳೆ ಸುರಿಸಿಕೊಳ್ಳುತ್ತೇವೆ..॥೫॥

  (ಶೋಷಣೆಯ ಮುಕ್ತಿಗೆ ಯುಕ್ತ ಧ್ವನಿ ಸಿಧ್ಧಲಿಂಗಯ್ಯನವರಿಗೆ ಅಶೃತರ್ಪಣದಿಂ  ನುಡಿ ನಮನಗಳು)

                    🔆🔆🔆
     ✍🏻ಪರಸಪ್ಪ ತಳವಾರ
ಕನ್ನಡ ಸಹಾಯಕ ಪ್ರಾಧ್ಯಾಪಕರು    ಸ.ಪ್ರ.ದ.ಕಾಲೇಜು,ಲೋಕಾಪೂರ ಜಿ:ಬಾಗಲಕೋಟೆ