ಪ್ರತಿಯೊಂದು ಕಾಲಘಟ್ಟಕ್ಕೂ ತನ್ನದೇ ಆದ ಅಸ್ತಿತ್ವವಿದೆ. ಕೇವಲ ಋತುಮಾನಗಳಿಗೆ ಸೀಮಿತವಲ್ಲ. ಪ್ರಕೃತಿ ತನ್ನದೇ ಆದಂತಹ ನಿಲುವುಗಳಿಗೆ ಬದ್ದವಾಗಿರುವಂತೆ, ಪ್ರದೇಶ ದಿಂದ  ಪ್ರದೇಶಕ್ಕೆ  ವ್ಯತ್ಯಾಸವಿರುತ್ತದೆ. ಹಾಗೆಯೇ ಜೀವಿಗಳಲ್ಲೂ ಕೂಡ. ಸಾಗರದ ನೀರು ಉಪ್ಪಾದರೂ,ಅದರ ಪಕ್ಕದಲ್ಲಿಯೇ ಹರಿವ ನದಿ ನೀರು ಸಿಹಿಯಾಗಿರುವಂತೆ, ಸಜ್ಜನರೊಂದಿಗೆ  ದುರ್ಜನರು  ರಾಜಠೀವಿ ಯೊಂದಿಗೆ ದುರ್ಗುಣಗಳ ಬಿತ್ತುತ್ತಲೇ ಇರು ತ್ತಾರೆ.”ಸಜ್ಜನರ‌ ಸಂಗ ಹೆಜ್ಹೇನು ಸವಿದಂತೆ” ಎಂಬ ನಾಣ್ಣುಡಿಯಂತೆ ಬದುಕಬೇಕು.


ಒಂದು ಇರುವೆ,ಜೇನು ನೊಣಗಳು,ದುಂಬಿ ಇವು ಸಿಹಿ, ಮಕರಂದವಿರುವಲ್ಲಿ ಮಾತ್ರ ತಮ್ಮ ಠಿಕಾಣೆ ಹೂಡುತ್ತವೆ. ಅವುಗಳಿಗೂ ಗೊತ್ತು ನೊಣ,ಸೊಳ್ಳೆ, ಜಿರಲೆಗಳಂತೆ ಎಲ್ಲ ರಿಗೂ  ಬೇಡವಾಗಿ  ಬದುಕುವುದು  ಬೇಡ ವೆಂದು. ಮಕ್ಕಳಿಗೆ ಗಂಧ ತೇದಷ್ಟು ಅದರ ಸುಗಂಧ  ಹೊರಹೊಮ್ಮುವಂತೆ  ಮಕ್ಕಳಿಗೆ ಗಂಧದೊಡನೆ ಗುದ್ದಾಡುವಂತೆ ಕಲಿಸಬೇಕು. ಅದರ ನೈಜ ಅರ್ಥ ಪಾಲಕರು ಅಥೈಸಿಕೊಂ ಡಷ್ಟು  ಮಗುವಿನ  ಭವಿಷ್ಯ  ಉಜ್ವಲವಾಗು ವುದು.

ವಾಸಿಸುವ ಪ್ರತಿಯೊಂದು ಜೀವಿಗಳಜೀವನ ಶೈಲಿಯು  ವಿಭಿನ್ನವಾಗಿರುತ್ತದೆ.  ಒಂದು ಇರುವೆ ಅಚಾನಕ್ಕಾಗಿ ಹರಿವ ನದಿಗೆ ಬೀಳು ತ್ತದೆ. ಪ್ರಾಣಾಪಾಯದಿಂದ ಪಾರಾಗುವದ ಕ್ಕಾಗಿ ಹಂಬಲಿಸುವಾಗ ನದಿಪಕ್ಕದಲ್ಲಿಯ ಮರದಲ್ಲಿಯ  ಪಾರಿವಾಳ  ಸೂಕ್ಷ್ಮವಾಗಿ ಇರುವೆಯ ಗಮನಿಸಿ ಅದರ ಪ್ರಾಣ ಉಳಿ ಸಲು ಎಲೆಯೊಂದನ್ನು ಅದರತ್ತಎಸೆಯಿತು. ಇರುವೆ ಎಲೆಯಾದರಿಸಿ ದಡವ ಸೇರಿ ಪಾರಿ ವಾಳಕೆ  ಕೃತಜ್ಞತೆಯ  ಅರ್ಪಿಸಿತು. ಇದು ಮೌಲ್ಯದ ಮೊದಲ ಭಾವ.ಪಾರಿವಾಳಕೆ ಎದುರಾದ ಸಂಕಷ್ಟಕ್ಕೆ ಬೇಡನ ಕಾಲು ಕಚ್ಚಿ ಬಾಣದ ದಿಕ್ಕನ್ನು ಬದಲಿಸಿ ಪ್ರಾಣ ಉಳಿಸಿ ತನ್ನ ಬದ್ಧತೆಯನ್ನು ಈ ಪುಟ್ಟ ಇರುವೆ ಮೆರೆ ಯಿತು.ಇದು ಪುಟ್ಟ ಕಥೆಯಾದರೂ ಅದರ ಒಳಾರ್ಥ ಅರ್ಥೈಸಿದಷ್ಟು ಕಡಿಮೆ.ಮಗುವಿಗೆ ಉಪಕಾರ ಮಾಡುವ ಸಂದರ್ಭ ಯಾವಾಗ ಯಾವರೀತಿ ಒದಗುವುದೋ ಆ ಕ್ಷಣದಲ್ಲಿ ಹೇಗೆ ಎಚ್ಚರದಿಂದ  ಇರಬೇಕೆನ್ನುವುದನ್ನು ತಿಳಿಸುವುದು ಆದ್ಯ ಕರ್ತವ್ಯ.

ಮೀನು ಕೂಡ ನೀರು ಬಿಟ್ಟು ಅರೆಕ್ಷಣ ಬದು ಕಲಾರದು.ಮೀನಿನ ಆಯಸ್ಸು ನೀರಿಲ್ಲದಿಲ್ಲ. ನಮಗೆಲ್ಲ  ಉಪ್ಪು  ನೀರು ಕುಡಿದು  ಬದುಕ ಲು ಸಾಧ್ಯವಿಲ್ಲ.ಹಾಗಂತ ದೇಹಕ್ಕೆ ಬೇಕಾಗು ವಷ್ಟು  ಲವಣಾಂಶ  ಬೇಕೆ ಬೇಕು.   ವಾಸ್ತವ ಪ್ರಜ್ಞೆ  ಮೂಡಿಸುವ  ನಿಟ್ಟಿನಲ್ಲಿ  ಪಾಲಕರು ಸ್ವಯಂ  ಕಲ್ಪನಾ  ಜಗತ್ತಿನಿಂದ  ಹೊರಬರ ಬೇಕಾಗಿರುವುದು ಅನಿವಾರ್ಯ.ಹಸಿದವನಿ ಗೆ  ಗೊತ್ತು  ಹಸಿವಿನ  ಮಹತ್ವ.  ಬಡವನಿಗೆ ಅವತ್ತಿನ  ಉದರ  ಭರಿಸುವ  ಚಿಂತೆ,  ಈ ಪ್ರಪಂಚದಲ್ಲಿ.  ಬಳಲುವ  ದೇಹಕೆ  ಆಸರೆ ಯಾರು? ನೋವು  ನಿರಾಶೆಗಳು  ಹೆಗಲೇರಿ ದರೆ ಏಳಿಗೆಯಾಗುವುದು ಹೇಗೆ? ಪಾಲಕರ ಸಂಕಷ್ಟಗಳಿಗೆ ಬೆಲೆ ತೆರುವವರಾರು?

ಬುನಾದಿ   ಭದ್ರವಾಗಿದ್ದರೂ, ಪರಿಸರದ ವ್ಯಾಮೋಹಗಳು,  ಮಗುವಿನಲ್ಲಿ  ಚಿಗುರೊ ಡೆದ ‌ ಮೌಲ್ಯಗಳು  ಇನ್ನೇನು  ಬಲಿಯಬೇಕೆ ನ್ನುವ  ಹಂತದಲ್ಲಿ  ತಂದೆ  ತಾಯಿಗೆ  ಮುಳು ವಾಗಿ ಪರಿಣಮಿಸುತ್ತಿರುವುದು ಯಾವುದರ ಸಂಕೇತ? ನಿರೀಕ್ಷೆಯ ಮಹಾಪೂರ ಹೊತ್ತು ಹೊಟ್ಟೆಗೆ  ತಣ್ಣೀರು  ಪಟ್ಟಿ   ಹಾಕಿಕೊಂಡು ಕಳೆದ ಸಮಯವೆಲ್ಲ ವ್ಯರ್ಥವಾದರೆ ಹೊಣೆ ಯಾರು?


“ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ,
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ  ನೀರುಂಬಡೆ  ಬೇಲಿ ಏಕಯ್ಯ?  ಮೇವಡೆ,ನಾರಿ ತನ್ನ ಮನೆಯಲ್ಲಿ ಕಳು ವಡೆ,
ತಾಯ  ಮೊಲೆಹಾಲು  ನಂಜಾಗಿ  ಕೊಲು ವಡೆ,
ಇನ್ನಾರಿಗೆ  ದೂರುವೆ  ಕೂಡಲಸಂಗಮ ದೇವಾ”

ಕಾಯಕ ಯೋಗಿ, ಕ್ರಾಂತಿಕಾರಿ ಬಸವಣ್ಣನ ವರ ವಚನವು ನಮ್ಮೊಳಗಿನ ದ್ವಂದ್ವಗಳಿಗೆ ಬೆಳಕ ಚೆಲ್ಲಿದಂತೆ.ಮನೆಯೊಳಗಿನ ಒಲೆಯ ತಕ್ಷಣ ಆರಿಸಬಹುದು.ಆದರೆ ನಮ್ಮ ಜನ್ಮ ಭೂಮಿ   ಹೊತ್ತಿ  ಉರಿದರೆ   ನಂದಿಸಲು ಅಸಾಧ್ಯ. ಕೆರೆಯಲ್ಲಿಯ ಜಲವನ್ನು ಕೆರೆಯೇ ಕುಡಿದರೇ ನೀರ ತರುವುದಾದರೂಎಲ್ಲಿಂದ? ಕಷ್ಟಪಟ್ಟು  ಬೆಳೆದ  ಫಲವನ್ನು   ಕಾಯ್ವ ಬೇಲಿಯೇ ತಿಂದರೆ,ಕಬಳಿಸಿದರೆ ರಕ್ಷಣೆಗಾಗಿ ಬೇಲಿಯ  ಅವಲಂಬಿಸಿದ  ಫಸಲಿನ  ಗತಿ ಯೇನು? ಮನೆಯ ಗೃಹ ಲಕ್ಷ್ಮಿಯಾದ ಮನೆ ಯೊಡತಿ ತನ್ನ ಮನೆಯಲ್ಲಿ ತಾನೆ ಕಳ್ಳತನ ಮಾಡಿದರೆ  ಆ ಮನೆ ಹೇಗೆ ಉದ್ದಾರವಾದೀ ತು?  ದೈವ  ಸ್ವರೂಪ  ತಾಯಿ  ಎದೆಹಾಲು ಮಗುವಿಗೆ ವಿಷವಾಗಿ ಪರಿಣಮಿಸಿದರೆಮಗು ಬದುಕಲು ಸಾಧ್ಯವೇ? ಭೂಮಿ, ಕೆರೆ,ಬೇಲಿ,  ಗೃಹಲಕ್ಷ್ಮಿ,ಅಮ್ಮಆಗಸದಷ್ಟು ಅಚಲ‌ ನಂಬಿ ಕೆಯನ್ನು  ಒಳಗೊಂಡಿರುವಂತಹವು.


ನಂಬಿಕೆಗಳಿಂದ ದ್ರೋಹವಾದರೆ ನಂಬಿಕೆಯ ಅಸ್ತಿತ್ವವೇ  ಇಲ್ಲದಂತಾಗುತ್ತದೆ.  ನಂಬಿಕೆ ತುಂಬಾ ಮುಖ್ಯ. ಹೀಗಾಗಿ ನಂಬಿಕೆ–ವಿಶ್ವಾಸ ಕಳೆದುಕೊಳ್ಳಬಾರದು. ಜಗತ್ತು  ಸತ್ಯದ ತಳಹದಿಯ  ಮೇಲೆ  ನಿಂತಿದೆ. ಮಗುವಿಗೆ ಅಗೋಚರ ಸತ್ಯದ‌ ಅರಿವನ್ನು ಮೂಡಿಸಲು ಹಾಗೂ ಪ್ರಜ್ಞಾವಂತ ಪ್ರಜೆಯ ನಿರ್ಮಾಣದ ಕಾಯಕಕ್ಕೆ ಕೈ ಜೋಡಿಸಿದರೆ ಮಾತ್ರ ಪ್ರತಿ ಮನೆಯಲ್ಲಿ ಒಬ್ಬ ರೈತ, ಬಸವಣ್ಣ, ಸೈನಿಕ, ಗಾಂಧೀಜಿ, ಅಂಬೇಡ್ಕರ್ ರಂತವರನ್ನು ಕೊಡುಗೆಯಾಗಿ ನೀಡಲು ಪಣತೊಟ್ಟಂತೆ…ಮಹಾತ್ಮರ ಪರಿಚಯದೊಂದಿಗೆ ಆತ್ಮಬಲ ಹೆಚ್ಚಿಸಿಕೊಳ್ಳಲು ಸಹಾಯಕವಾದರೆ ತಪ್ಪಾಗ ಲಾರದು.

                       🔆🔆🔆

✍️ಶ್ರೀಮತಿ.ಶಿವಲೀಲಾ.ಹುಣಸಗಿ
  ಶಿಕ್ಷಕಿ,ಯಲ್ಲಾಪೂರ