ಮಳೆಗಾಲದ ಖುಷಿನೇ ಮರೆಯಾಗಿದೆ ಈಗ.
ಮಳೆಗಾಲ ಅಂದ್ರೇನೇ ಸಾಕು ಬಾಲ್ಯದ ಖುಷಿನೆ ಬೇರೆ. ಒಂದು ಹನಿ ಮಳೆ ನೀರು ಭೂಮಿಯನ್ನು ಚುಂಬಿಸಿದ ಕೂಡಲೇ ಎಲ್ಲಿಲ್ಲದ ಖುಷಿ, ಪುಸ್ತಕದ ಒಂದು ಹಾಳೆ ಯನ್ನು ಹರಿದು ದೋಣಿಮಾಡಿ ಹಿಡ್ಕೊಂಡು ಓಡುವುದೇ ಹಳ್ಳ ಕೊಳ್ಳದೆಡೆಗೆ.ಕಪ್ಪೆಗಳಿಗೆ ಗುರಿ ಇಟ್ಟು ಕಲ್ಲು ಬಿಸಾಡುವುದು ಏನೋ ಸಾಧನೆ ಮಾಡಿದಂತಹ ಅನುಭವ.

ಮಳೆಗಾಲದಲ್ಲಂತೂ ಶಾಲೆಗೆ ಹೋಗುವ ಅನುಭವವೇ ಅದ್ಭುತ. ಬಣ್ಣ ಬಣ್ಣದ ಕೊಡೆಗಳೇ ಬೇಕು. ಸೂಪರ್ ಮ್ಯಾನ್, ಸ್ಪೈಡೆರ್ ಮ್ಯಾನ್,ಡೋರ,ಸಿಂಡ್ರೆಲ್ಲಾ ಚಿತ್ರ ಗಳಿರುವ ಕೊಡೆಗಳೇ ಬೇಕು.ರೈನ್ ಕೋಟು ಕಂಡರೆ ಎಲ್ಲಿಲದ ಸಿಟ್ಟು.ಇಷ್ಟೆಲ್ಲ ಸವಿಸವಿ ನೆನಪುಗಳು ಮಳೆ ಕಂಡಕ್ಷಣ ಕಣ್ಣಂಚಿನಲ್ಲಿ ಹಾದು ಹೋಗುತಿವೆ.ಆದ್ರೆ ಈಗಿನ ಪರಿಸ್ಥಿತಿಯಲ್ಲಿ ಮಳೆಗಾಲ ಅಂದ್ರೇನೇ ಸಾಕು ದೊಡ್ಡ ತಲೆ ನೋವು ಆಗಿಬಿಟ್ಟಿದೆ.ಬೆಳ್ಳಗೆ 9 ಗಂಟೆಗೆ ಆನ್ ಲೈನ್ ಕ್ಲಾಸ್ ಮೆಸೇಜ್ ಬಂದ ಕೂಡಲೇ ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯಲ್ಲಿ ಪುಸ್ತಕ ಪೆನ್, ಮೊಬೈಲ್ ಹಿಡಿದು ಕಾಡಿಗೆ ಹೋಗಿ ಕೂತುಕೊಳ್ಳುವುದೇ ಒಂದು ಸಾಹಸದ ಕೆಲಸವಾದರೆ, ಇನ್ನೊಂದೆಡೆ ನೆಟ್ ವರ್ಕ್ ಗೋಸ್ಕರ ಸುತ್ತಾಡುವುದೇ ಮತ್ತೊಂದು ಸಾಹಸದ ಕೆಲಸ.ಮಳೆಯಲ್ಲಿ ಒದ್ದೆಯಾದ್ರೆ ಜ್ವರದ ಬರುವ ಭೀತಿ.

ಹೊರಗಡೆ ತುಂತುರು ಮಳೆಹನಿಗಳ ಸದ್ದು ಕೇಳಿ ಕಿಟಕಿಯ ಬಳಿಬಂದು ಕುಳಿತೆ. ಮಳೆ ನೀರಿನ ಹನಿಗಳು ಮಲ್ಲಿಗೆಯ ಎಲೆ ಮೇಲೆ ಬಿದ್ದು ಜಾರುತ ಭೂಮಿಯನ್ನು ಸ್ಪರ್ಶಿಸುವು ದನ್ನು ನೋಡಿ ಬಾಲ್ಯದ ಮಳೆಗಾಲದ ದಿನ ಗಳ ನೆನಪುಗಳು ಮತ್ತೆ ಮರುಕಳಿಸಿತು. ಅದನೆಲ್ಲ ಒಂದು ಕಾಗದದ. ಹಾಳೆಯಲ್ಲಿ ಗೀಚುತ್ತ ಕುಳಿತೆ.
✍️ಅಕ್ಷತಾ
ಎಸ್.ಡಿ.ಎಂ.ಕಾಲೇಜು,ಉಜಿರೆ
ಬಾಲ್ಯ ಬಾಳಸಂಪುಟದ ಮಧುರ ಕಾವ್ಯ
ಕರೋನಾ ಬಾಲ್ಯದ ಸುಂದರ ಕ್ಷಣ ಕಸಿದುಕೊಂಡಿದೆ
ಪ್ರಸ್ತುತ ಭಾವನೆಗಳ ಹಂಚಿದ ಲೇಖನ.
LikeLiked by 1 person