ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದ
ನುಣ್ಣನೆ ಎರಕಾವ ಹೊಯ್ದಾ
ಬಾಗಿಲು ತರೆದು ಬೆಳಕು ಹರಿದೂ
ಜಗವೆಲ್ಲಾ ತೊಯ್ದು
ಹೋಯ್ತೋ ಜಗವೆಲ್ಲಾ ತೊಯ್ದಾಬೇಂದ್ರೆ ಬೆಳಗು ಕವಿ.ಬೇಂದ್ರೆಯಷ್ಟು ಬೆಳಗಿ ನ ಬಗ್ಗೆ ದೂರದೃಷ್ಟಿವುಳ್ಳ ಕವಿ ಮತ್ತೊಬ್ಬ ಕವಿಯಿಲ್ಲ. ಪ್ರತಿಯೊಬ್ಬರು ಕಣ್ಣುಮುಚ್ಚಿ ನೋಡುವ ಬೆಳಗು ಕೇವಲ ಹೊರಗಣ್ಣಿಗೆ ಮಾತ್ರ ಸೀಮಿತವಾಗಿದೆ. ಬೇಂದ್ರೆಯವರದು ಒಳಗಣ್ಣು ಎಲ್ಲಾ ಕವಿಗಳೂ ಸೂರ್ಯೋದ ಯದ ಮೇಲೆ ಕವಿತೆಗಳನ್ನು ಬರೆದಿದ್ದಾರೆ. ಸೂರ್ಯೋದಯ ನಮ್ಮ ಪುನರುಜ್ಜೀವನದ ಪ್ರತೀಕವಾಗಿತ್ತು ಮತ್ತು ಈ ಸಂಗತಿ ನಮ್ಮ ವೈಚಾರಿಕ ಇತಿಹಾಸಕ್ಕೆ ಸೇರಿದ ಬಹಳ ಮಹತ್ವದ ವಿಷಯವಾಗಿದೆ.ಈ ಪ್ರತೀಕವನ್ನು ಉಪಯೋಗಿಸುವ ರೀತಿ ಮಾತ್ರಕವಿಯಿಂದ ಕವಿಗೆ ಭಿನ್ನವಾಗಿದೆ ಎಂಬ ಮಾತು ಅಷ್ಟೇ ನಿಜ. ಬೆಳಗು ಬೇಂದ್ರೆ ಅವರ ದೃಷ್ಟಿಯಲ್ಲಿ ವಿಶಿಷ್ಟವೂ ಎಂದು ಹೇಳಬಹುದು. ಈ ಸಂದರ್ಭದಲ್ಲಿ ಬೆಳಗು ಕವಿತೆ ನೆಟ್ಟು ನೋಡಿ ದಾಗ ಬೇಂದ್ರೆಯವರ ಕಾವ್ಯದ ಅನೇಕ ವೈಶಿಷ್ಟ್ಯಗಳು ಒಮ್ಮೆಲೆ ಗೋಚರವಾಗುತ್ತವೆ ಈ ಬೆಳಗು ಧಾರವಾಡದ ಹೊತ್ತಿಕೊಳ್ಳದ ಬೆಳಗು, ಆ ಬೆಳಗಿನ ಸೌಂದರ್ಯಕ್ಕೆ ಪ್ರತಿ ಸ್ಪಂದಿಸಿ ಹುಟ್ಟಿ ಬಂದ ಮಾತು ಕೂಡ ಧಾರವಾಡದ ಆಡುಮಾತು.ಮೇಲಿನ ಕವಿತೆ ಯ ನುಡಿಯಲ್ಲಿ ಪೂರ್ವದಿಕ್ಕಿನಲ್ಲಿ ಬೆಳಕು ಚಿಮ್ಮಿಬರುವುದನ್ನು ಬಣ್ಣಿಸುತ್ತದೆ. ಮುತ್ತಿನ ನೀರಿನ ಎರಕವನ್ನು ಹೊಯ್ದಂತೆ ಬೆಳಕು ಹರಿದುಬಂತು ಎಂದು ಹೇಳುವುದುಬೆಳಕಿನ ವಾಸ್ತವವಾದ ವರ್ಣನೆಯಾಗಿದೆ. ಆದರೆ ಈ ನುಡಿಯಲ್ಲಿ ಎರಡು ಚಿತ್ರಗಳು ಒಂದರೊಳ ಗೊಂದು ಕೂಡಿಕೊಂಡಿವೆ, ಪ್ರವಾಹದಂತೆ ನುಗ್ಗಿ ಬರುವ ಬೆಳಕು ಚಂಚಲವಾದ ತತ್ವ ವಾಗಿದ್ದರೆ ಮೂಡಲ ಮನೆ ಒಂದು ಸ್ಥಿರ ವಾದ ತತ್ವವಾಗಿದೆ. ಆದರೆ ಮೂಡಲ ಮನೆ ಸ್ಥಿರವಾಗಬೇಕಾದರೆ ಅಲ್ಲಿಂದ ಬೆಳಕು ಹರಿದುಬರುವುದು ಅಗತ್ಯ ವಾಗಿದೆ.ದಿಕ್ಕು ಎನ್ನುವುದು ಒಂದು ಸಾಪೇಕ್ಷ ವಾದ ಕಲ್ಪನೆ. ಈ ಕಲ್ಪನೆಯ ಬಲದಿಂದಲೇ ಕವಿತೆ ಮೂಡ ಲಲ್ಲಿ ಮನೆಯನ್ನು, ಬಯಲಲ್ಲಿ ಆಲಯ ವನ್ನು ಕಟ್ಟಿಕೊಂಡಿದೆ. ಮನೆಯ ಬಾಗಿಲನ್ನು ತೆರೆದಾಗ ಹೊರಗಿನಿಂದ ಬೆಳಕು ನುಗ್ಗಿ ಬರುವುದೇ ಹೊರತು ಒಳಗಿನಿಂದ ಹೊರ ಗಲ್ಲ.ಆದರೆ ಮೂಡಲ ಮನೆಯಲ್ಲಿ ಮಾತ್ರ ಈ ವ್ಯಾಪಾರ.ಬೇಕೆಂದೇ ವಿಪರೀತವಾಗಿದೆ, ಕಾರಣವೆಂದರೆ ಬೆಳಕು ಬರುವುದು ಇನ್ನೊಂದು ಲೋಕದಿಂದ ಎಂಬುದು ಬೇಂದ್ರೆಯವರ ದೃಷ್ಟಿ. ಬೇಂದ್ರೆಯವರು ಬೆಳಕಿನ ಕವಿ ಮಾತ್ರವಲ್ಲ ಶ್ರಾವಣ ಪ್ರತಿಭೆ ಎನ್ನುವು ದು ಕೂಡ ಅಷ್ಟೇ ಸತ್ಯ.

ಗಿಡಗಂಟೆಯ ಕೊರಳೊಳಗಿಂದ ಹಕ್ಕಿಗಳ ಹಾಡು ಎಂಬ ಪ್ರತಿಮೆ, ಹಕ್ಕಿಯು ಕುಳಿತ ಗಿಡದ ಪೊಟರೆಯು ಗಿಡದ ಕೊರಳಾಗುವ ಸಂಗತಿಗೂ, ಮುಗಿಲ ಮೇಲಿಂದ ಅಮೃತದ ಹನಿಗಳು ಹೂಗಳ ಮೇಲೆ ಇಳಿದು ಬರುವು ದಕ್ಕೂ, ಮತ್ತು ತಂಗಾಳಿಯ ಕೈಯಲ್ಲಿ ಹೂ ವಿನ ಗೊಂಚಲು ಅಲೆದಾಡಿ ದುಂಬಿಗಳನ್ನು ಆಕರ್ಷಿಸುವುದಕ್ಕೂಬಹಳಷ್ಟುಸಾಮ್ಯವಿದೆ. ಈ ಎಲ್ಲ ವಿದ್ಯಮಾನಗಳ ಹಿಂದೆ ಇರುವ ಸಂಬಂಧ ಪ್ರೀತಿಯ ಹಾಗೂ ಸಾಮರಸ್ಯದ ಸೂತ್ರವನ್ನು ವಿವರಿಸುತ್ತದೆ. ಬೇಂದ್ರೆಯವ ರಿಗೆ ಬೆಳಗು ಎಂಬುದು ಕಣ್ಣಿಗೆ ಕಾಣದು, ಬಣ್ಣ ಎಂಬಂತೆ ಅದು ನೋಡುಗರ ನೋಟ ವನ್ನು ಸೂಚಿಸುತ್ತದೆ.’ಬೆಳದಿಂಗಳ ನೋಡ’ ಎಂಬ ಮತ್ತೊಂದು ಕವಿತೆಯಲ್ಲಿ ಬೇಂದ್ರೆಯ ವರು ವಾಚ್ಯಾರ್ಥ ದೃಷ್ಟಿಯಿಂದ ನಿರಾಧಾರ ವಾದ,ಧ್ವನ್ಯಾರ್ಥದೃಷ್ಟಿಯಿಂದ ನೋಡಿದಾಗ ಮಂತ್ರದಂತೆ ನಿರರ್ಥಕವಾದ ಮಾಂತ್ರಿಕತೆ ಯ ಪ್ರವೃತ್ತಿಯಿಂದ ಹೆಚ್ಚಾಗುತ್ತಲೇ ಹೋಗು ವ ಸಾಲುಗಳನ್ನು ಕಟ್ಟಿಕೊಡುತ್ತಾರೆ. ಬೇಂದ್ರೆ ಯವರ ಕಾವ್ಯದಲ್ಲಿ ಬೆಳದಿಂಗಳಿಗೆ ಈ ಮಾಂತ್ರಿಕ ಶಕ್ತಿಯಿದೆ.ನಿಮ್ಮ ಚಂದ್ರ ಜ್ಯೋತಿ ಯಾ? ಬೆಳಕು ನಮಗದೇ ಸಾಕು, ಸುಡು ಸೂರ್ಯ ಯಾಕ ಬೇಕು? ಎಂದು ಹೇಳುವ ಕವಿ ಸೂರ್ಯನ ಬೆಳಕನ್ನು ಹೀರಿಕೊಂಡು ತಂಪಾಗಿಸಿ ಜಗತ್ತನ್ನು ತಣ್ಣಗಿರಿಸುವ ಬೆಳ ದಿಂಗಳು ಬೇಂದ್ರೆಯವರಿಗೆ ಕವಿ ಪ್ರತಿಭೆಯ ಸಂಕೇತವಾಗಿ ಕಂಡಿದೆ.ಅಲ್ಲದೆ ಈ ಬೆಳದಿಂಗ ಳಿನ ಮೂಲಕವಾಗಿಯೇ ಅತಿಮಾನುಷ ಶಕ್ತಿಗಳಾದ ಮಾಯಕಾರರನ್ನು ಈ ಕವಿತೆ ಪ್ರತಿಧ್ವನಿಸುತ್ತದೆ.ಬೇಂದ್ರೆಯವರಕಾವ್ಯದಲ್ಲಿ ಬೆಳಕು ಎಂಬುದೊಂದು ಸ್ಥಾಯೀ ಕಲ್ಪನೆ. ಬೆಳಕಿನ ಕಾಲ್ಪನಿಕ, ಬೌದ್ಧಿಕ ಮತ್ತು ಆದರ್ಶ ಸೌಂದರ್ಯದಿಂದ ಪುಲಕಿತಗೊಳ್ಳುವುದು ಅವರ ಸ್ವಭಾವ. ಪ್ರಾತಕಾಲದ ಸವಿಗನಸು ಮಿಶ್ರಿತ ಸುಖನಿದ್ರೆಯ ಬಗೆಯನ್ನು ವರ್ಣಿಸಿ ಅದರ ಕೊನೆಗೆ ಬೇಂದ್ರೆಯವರು”ಈ ತುಂಬಿ ಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು” ಎಂಬ ಮಹತ್ವದ ಮಾರ್ಗ ದರ್ಶನವನ್ನು ಮಾಡಿದ್ದಾರೆ. ಮಾನವನ ಜೀವನದ ಸಾರ್ಥಕತೆ ಸೃಷ್ಟಿಯ ಸೌಂದರ್ಯ ಆನಂದವನ್ನು ಕಂಠಪೂರ್ತಿಯಾಗಿ ಕುಡಿ ಯುವ, ಇವಲ್ಲದೆ ತುಂಬಿ ಎಂಬ ಪದ ಶ್ಲೇಷ ಸಾಮರ್ಥ್ಯದಿಂದ ಬೇಂದ್ರೆ ಅಭಿವ್ಯಕ್ತಿಸುತ್ತಾ ರೆ. ಮಾನವ ಜೀವನದ ಅಶಾಶ್ವತತೆ ಮತ್ತು ನಿಸರ್ಗದೊಳಗಿನ “ಚಿರನೂತನತೆಯನ್ನು ವರ್ಣಿಸಿ ಯೌವ್ವನ ಮತ್ತು ಮುಪ್ಪು ಈ ವ್ಯವಸ್ಥೆಗಳ ಮಹತಿ ಮುಳುಗಿರಲಿ, ಮುಪ್ಪು ಚಿಂತನದಿ ತಾನುಹರೆಯಕ್ಕೆ ಬೇರೆ ಹೊತ್ತೆ?” ಎಂಬ ಪ್ರಶ್ನೆಯನ್ನು ಸಮರ್ಥಿಸುವಂತೆ ಯೌವ್ವನವು ಮಾನವನ ಜೀವನದ ಬೆಳಗು ಜಾವ. ನಿರಂತರವಾದ ಕ್ರಿಯೆಗಳಲ್ಲಿ ಯೌವ್ವ ನವನ್ನು ದುಡಿಸಿ, ದಣಿಸಿ ಸಫಲತೆಯನ್ನು ಪಡೆಯಬೇಕು ಎಂಬುದು. ಬೇಂದ್ರೆಯವರು ಜೀವನದ ಉದ್ದೇಶ ಮತ್ತು ಆದರ್ಶವನ್ನು ಬೆಳಗು ಜಾವ ಕವಿತೆಗಳ ಸಾಲುಗಳು ನಮ್ಮೊಳಗೆ ಹೊಸ ಚೈತನ್ಯವನ್ನು ಉಂಟು ಮಾಡುತ್ತವೆ.

ಪೂರ್ಣಿಮೆಯ ಷೋಡಶೀ ಲೇಖಿ ನಿತ್ಯಉದಯದ ಚಿರಂತನ ಉಷೆ ಇದುಬರಿ ಬೆಳಗಲ್ಲೋ ಅಣ್ಣಾ
ಕವಿತೆಯ ಸಾಲುಗಳಲ್ಲಿ ಕನ್ನಡವೂ ಭಾರತ ವೂ ಜಗವೆಲ್ಲವು ಒಂದೇ ಎಂಬುದರ ವಿಶ್ವ ಮಾನವತ್ವ ಕಲ್ಪನೆಯೊಂದಿಗೆ ನಿತ್ಯಉದಯ ದ ಪ್ರತಿನಿತ್ಯ ಕಾಣುವ ಬೆಳಕುಬರೀ ಬೆಳಕಲ್ಲ ಇದು ಬೌದ್ಧಿಕ ಚಿರಂತನ ಉಷಾಕಾಲವಾಗ ಬೇಕು,ಶಾಂತಿರಸವೇ ಪ್ರೀತಿಯಿಂದಮೈದೋ ರಿತಣ್ಣಾ ಇದು, ಬರಿ ಬೆಳಗಲ್ಲೋ ಅಣ್ಣ ಎಂಬುದು ಬೇಂದ್ರೆಯವರ ಸಮಗ್ರ ಜೀವನ ದ ಸಾರ. ಬೆಳಗು ಎಂಬುದು ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ ಬೇಂದ್ರೆಯವರ ನಿತ್ಯ ಪ್ರಾರ್ಥನೆ ಮತ್ತು ನಿತ್ಯಾನುಭವ.

ಪ್ರತಿನಿತ್ಯ ಸೂರ್ಯೋದಯದ ದೃಶ್ಯವನ್ನು ಕಣ್ತುಂಬಿಕೊಳ್ಳುವ ನಾವಾದರೂ ಬೆಳಕಿಗೆ ಮೈಯೊಡ್ಡಿ ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇವೆ. ಆದರೆ ಕವಿ ತಾನು ಮಾಡುವ ಕೆಲಸದ ಜೊತೆಯಲ್ಲಿ ಬೆಳಗನ್ನು ದಿವ್ಯದೃಷ್ಟಿಯಲ್ಲಿ ನೋಡಿ ಬೆಡಗು ಕವಿಯೆ ನಿಸುತ್ತಾರೆ…ಬೇಂದ್ರೆ ನಿತ್ಯನೂತನ ಚಿರಂತನ ಬೆಳಗು ಕವಿ ಎಂದು ಹೇಳಬಹುದು.
🔆🔆🔆
✍️ಪ್ರಕಾಶ.ಬಿ.ಉಪ್ಪಿನಹಳ್ಳಿ ಸಹಾಯಕ ಪ್ರಾಧ್ಯಾಪಕರು ಸ.ಪ್ರ.ದ.ಕಾಲೇಜು,ಶಿರಸಿ