ಜೂನ್ ೫ ಎಂದಾಕ್ಷಣ ಹಲವರಿಗೆ ಸ್ನೇಹಿತರ ಹುಟ್ಟಿದ ಹಬ್ಬದ ದಿನ ನಾನೇ ಮೊದಲು ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ಶುಭಾಶಯ ತಿಳಿಸಬೇಕು ಎಂದಿರುತ್ತದೆ. ಇನ್ನು ಕೆಲವರಿಗೆ ಬೇರೆಯದೇ ಆದ ನೆನಪುಗಳುಇರಬಹುದು.ಆದರೆ ನನಗೆ ನನ್ನ ಬಾಲ್ಯದ ಪ್ರಾಥಮಿಕ ಹಾಗೂ ಹೈಸ್ಕೂಲು ದಿನಗಳಲ್ಲಿ ಮಳೆಗಾಲದ ಆರಂಭದ ಸಮಯದಲ್ಲಿ, ಶಾಲೆಯ ಹೆಡ್ ಮಾಸ್ತರರ ಮುಂದಾಳತ್ವದಲ್ಲಿ, ಗೆಳೆಯರ ಬಳಗದೊಂದಿಗೆ, ಹನಿಹನಿ ಮಳೆಯ ಜೊತೆ ಯಲಿ, ಶಾಲೆಯ ಆವರಣದಲ್ಲಿ ಗಿಡ ನೆಟ್ಟ ನೆನಪು. ಆ ಗಿಡಕ್ಕೆ ಏನು ಆಗದಿರಲೆಂದು ಗೆಳೆಯರೆಲ್ಲ ಸೇರಿ ಸಣ್ಣ ಬೇಲಿ ಹಾಕಿದ ನೆನಪು.  ಆ ಗಿಡ  ಮುಂದೊಂದು  ದಿನ ಚಿಗುರೊಡೆದು ಸಸಿಯಾದಾಗ ಏನೋ ದೊಡ್ಡ ಸಾಧನೆ ಮಾಡಿದ ಹರುಷ. ಅದು ಜೂನ್ 5 ಪರಿಸರ ದಿನಾಚರಣೆಯ ನೆನಪು.ಈಗ ನಾನು ನೆನಪು ಎಂಬ ಪದ ಬಳಸುತ್ತಿ ದ್ದೇನೆ ಎಂದರೆ ಲೆಕ್ಕಹಾಕಿ, ನಾವು   ಪರಿಸರ ವನ್ನು ಅದೆಷ್ಟು ಅರ್ಥೈಸಿಕೊಂಡಿದ್ದೇವೆ! ಅದೆಷ್ಟು  ಪರಿಸರದ  ಬಗ್ಗೆ  ಕಾಳಜಿ ಹೊಂದಿ ದ್ದೇವೆ ಎಂದು. ಪರಿಸರದ ಪ್ರಾಮುಖ್ಯತೆ ಗಿಡ ಮರ ಕಾಡುಗಳ ಮಹತ್ವದ ಬಗ್ಗೆ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವ ರೆಗೆ ಓದಿದ್ದೇ ಓದಿದ್ದು.ಆದರೆ ಕಾರ್ಯರೂಪ ಮಾತ್ರ ಶೂನ್ಯ. ಪರಿಸರದ ಪ್ರಾಮುಖ್ಯತೆ ನಮಗೆ  ಎಲ್ಲರಿಗೂ ತಿಳಿದಿದೆ.  ಮರಗಿಡಗಳ ನ್ನು ಉಳಿಸಬೇಕು ಬೆಳೆಸಬೇಕು. ಆದರೆ ಇಂದು ಮರಗಳಿಗಿಂತ ಹೆಚ್ಚು ನಾವು ಕಟ್ಟಡ ಗಳನ್ನು ಕಾಣುತ್ತೇವೆ. ಈಗಿನ ಯುವಜನತೆಗೆ ಎಲ್ಲಿ   ನೋಡಿದರು  ಫೋಟೋಶೂಟ್ ಮಾಡುವ ಗೀಳು. ಎಲ್ಲರೂ ತಮ್ಮನ್ನು ಇಷ್ಟ ಪಡಬೇಕು, ನಮ್ಮನ್ನು ಸುಂದರವಾಗಿದ್ದೀರ ಎಂದು ಹೇಳಬೇಕು ಇದೆಲ್ಲಾ ಅಲ್ಪಾವಧಿಯ ಆಸೆ ಅಷ್ಟೆ.ನಮ್ಮಂತ ಯುವಜನರುಪರಿಸರ ವನ್ನು ಬೆಳೆಸುವಲ್ಲಿ ಮುಂದೆ ಬರಬೇಕು.ಇಡೀ ಪ್ರಪಂಚದಲ್ಲಿ ಜೂನ್ 5ರಂದು ಮನೆ ಯ ಎಲ್ಲಾ ಸದಸ್ಯರಂತೆ ಇಡೀ ಭಾರತದಲ್ಲಿ ಗಿಡ ನೆಟ್ಟರೆ ೧೨೧ ಕೋಟಿ ಗಿಡಗಳನ್ನು ನೆಟ್ಟ ಹಾಗಾಗುತ್ತದೆ.ಅದೇ ರೀತಿ ಇಡೀ ಪ್ರಪಂಚ ವೇ  ನೆಟ್ಟರೆ  ಇಡೀ  ಜಗತ್ತಿಗೆ  ಅದೆಷ್ಟೋ ಗಿಡಗಳ ಕೊಡುಗೆಯಾಗುತ್ತದೆ ಅಲ್ಲವೇ? ನಾವು  ಸ್ವಲ್ಪ  ಮಾಡರ್ನ್  ಹುಡುಗರು ಹೆಚ್ಚಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿ ಸುತ್ತೀವಿ. ಇಂದು ಕೂಡ ಒಂದು ಗಿಡ ನೆಟ್ಟು ಅದಕ್ಕೆ  ನೀರು  ಹಾಕಿ  ಫೋಟೋ  ಕ್ಲಿಕ್ಕಿಸಿ ಸಾಮಾಜಿಕ ಜಾತಾಣಗಳಲ್ಲಿ ಹಾಕಿ ಎಷ್ಟು ಮೆಚ್ಚುಗೆಗಳು ಬರುತ್ತದೆಯೋ ಗೊತ್ತಿಲ್ಲ. ಆದರೆ ನೀವು ನೆಟ್ಟ ಆ ಗಿಡದಿಂದ ಖಂಡಿತ ಸಾವಿರಾರು  ಮೆಚ್ಚುಗೆ  ಬರುತ್ತದೆ.  ಹಾಂ! ಇನ್ನೊಂದು  ಏನೆಂದರೆ  ನೀವು  ಹಾಕಿದ ಫೋಟೋ  ನೋಡಿ  ಒಂದಿಬ್ಬರಾದರೂ ಅನುಸರಿಸುತ್ತಾರಲ್ಲವೆ?  ನಮಗೂ ಅದೇ ತಾನೆ ಬೇಕಿರುವುದು?  ಗಿಡ ನೆಟ್ಟು ಜಗತ್ತನ್ನು ಉಳಿಸೋಣ, ಸಂರಕ್ಷಿಸೋಣ.

                  ‌‌  🔆🔆🔆

✍️ಮಂಜುಳ ಜೈನ್
ಎಸ್.ಡಿ.ಎಂ.ಕಾಲೇಜು,ಉಜಿರೆ