ನಾಡಿನಲ್ಲಿ ಹಲವು ಅರಸರು ದೇವಾಲಯ ಗಳ ನಿರ್ಮಾಣವನ್ನು ಮಾಡಿದ್ದಾರೆ. ಇನ್ನು ಕೆಲವು ಊರಿನಲ್ಲಿ ದೇವಾಲಯಗಳ ಸಂಕೀ ರ್ಣವನ್ನೇ ನಿರ್ಮಿಸಿದ್ದಾರೆ.  ಆದರೆ ಒಂದೇ ಊರಿನಲ್ಲಿ ಹಲವು ಅರಸರು ದೇವಾಲಯ ಗಳ ಸಂಕೀರ್ಣಕ್ಕೆ ಕೊಡುಗೆ ನೀಡಿದ ನಿದರ್ಶ ನವೂ ಇದೆ. ಅಂತಹ ಅಪೂರ್ವ ಕಲಾಸಿರಿ ಯನ್ನು   ಹೊಂದಿರುವ     ಗ್ರಾಮವೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಸಿದ್ದ ನಂದಿ ಬೆಟ್ಟದ  ಕೆಳಗೆ   ಇರುವ  ನಂದಿಯಲ್ಲಿನ ದೇವಾಲಯಗಳು.

ಇಲ್ಲಿನ ದೇವಾಲಯಗಳು ಬಾಣ, ನೊಳಂಬ -ಚೋಳ – ಹೊಯ್ಸಳ    ಹಾಗೂ   ವಿಜಯ ನಗರ  ಅರಸರ  ಕಾಲದಲ್ಲಿ ನಿರ್ಮಾಣಗೊಂ ಡು,   ವಿಸ್ತಾರಗೊಂಡಿದ್ದು   ಅತೀ   ದೊಡ್ಡ ವಿಸ್ತಾರವಾದ ದೇವಾಲಯ ಸಂಕೀರ್ಣವನ್ನ ಹೊಂದಿದೆ.  ಇಲ್ಲಿನ  ಗ್ರಾಮವನ್ನು  ಅವತಿ ಪ್ರಭುಗಳಿಂದ ಸ್ಥಾಪಿಸಲಾಯಿತು ಎನ್ನಲಾದ ರೂ  ಆ ವೇಳೆಗೆ ಇಲ್ಲಿ  ವಿಶಾಲವಾದ ದೇವಾ ಲಯವನ್ನು ಹೊಂದಿತ್ತು.

ಸಂಪೂರ್ಣ  ದೇವಾಲಯ  ಮೂರು  ಸಮಾ ನಾಂತರ ಗರ್ಭಗುಡಿ (ವಿವಿಧ ಕಾಲದ),ಸುಖ ನಾಸಿ,  ನವರಂಗ   ಹಾಗೂ   ವಿಸ್ತಾರವಾದ ಮುಖಮಂಟಪ, ಕಲ್ಯಾಣ ಮಂಟಪ, ಕಲ್ಯಾ ಣಿ  ಹಾಗೂ  ವಿಶಾಲವಾದ   ಪ್ರಾಕಾರವನ್ನು ಹೊಂದಿದೆ. ಸುಮಾರು  370 ಅಡಿ   ಉದ್ದ ಹಾಗೂ 250 ಆಡಿ ಅಗಲದ ವಿಸ್ತೀರ್ಣವನ್ನ ಈ ದೇವಾಲಯ ಹೊಂದಿದೆ.

ಭೋಗ ನಂದೀಶ್ವರ ದೇವಾಲಯ

ಸುಮಾರು 9 ನೇ ಶತಮಾನದಲ್ಲಿ(806ರಲ್ಲಿ) ಬಾಣರಸ  ವಿದ್ಯಾಧರನ  ಪತ್ನಿ  ರತ್ನಾವಳಿ ಇಲ್ಲಿನ   ಭೋಗನಂದೀಶ್ವರ   ದೇವಾಲಯ ವನ್ನು ನಿರ್ಮಿಸುತ್ತಾಳೆ. ಈ ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ನವರಂಗ ಹೊಂದಿದ್ದು,  ಪುರಾತನ   ಗರ್ಭಗುಡಿಯಲ್ಲಿ ಭೋಗನಂದೀಶ್ವರ  ಎಂದು ಕರೆಯಲ್ಪಡುವ ಬಾಣ ಲಿಂಗವು ಎತ್ತರವಾದ ಪಾಣಿಪೀಠದ ಮೇಲೆ ಇದೆ. ಇನ್ನು ಗರ್ಭಗುಡಿಯ ಬಾಗಿಲು ವಾಡ  ತ್ರಿಶಾಖ  ಮಾದರಿಯಲ್ಲಿದ್ದು,  ಸರಳ ವಾಗಿದೆ.

ಇನ್ನು ಅಂತರಾಳದಲ್ಲಿನ ನಂದಿಯ ವಿಶಿಷ್ಟ ಶಿಲ್ಪ ಗಮನ ಸೆಳೆಯುತ್ತದೆ. ನವರಂಗದಲ್ಲಿ ನಾಲ್ಕು ಕಂಭಗಳಿದ್ದು ಹಲವು ಕೆತ್ತೆನೆಗಳನ್ನ ಹೊಂದಿದೆ.  ಇನ್ನು   ಇಲ್ಲಿನ   ವಿತಾನದಲ್ಲಿ ಹೆಚ್ಚಿನ ನೊಳಂಬ ದೇವಾಲಯಗಳಲ್ಲಿ ಕಾಣ ಬರುವಂತೆ ಅಷ್ಟ ದಿಕ್ಪಾಲಕರ ಕೆತ್ತೆನೆ ನೋಡ ಬಹುದು. ಮಧ್ಯದಲ್ಲಿ ಉಮಾಮಹೇಶ್ವರ ಶಿಲ್ಪ  ನೋಡಬಹುದು. ಇನ್ನು   ಬಾಗಿಲುವಾ ಡದ ಲಲಾಟದಲ್ಲಿ  ಗಜಲಕ್ಷ್ಮಿ  ಕೆತ್ತೆನೆ  ಇದೆ.
ದೇವಾಲಯದ      ಹೊರಭಿತ್ತಿಯಲ್ಲಿರುವ ಸುಂದರ  ಜಾಲಂದ್ರಗಳು  ಗಮನ  ಸೆಳೆಯು ತ್ತವೆ. ದೇವಾಲಯಕ್ಕೆ ಸುಂದರವಾದ  ಶಿಖರ ವಿದೆ.

ಅರುಣಾಚಲೇಶ್ವರ ದೇವಾಲಯ

 ಇನ್ನು ಅರುಣಾಚಲೇಶ್ವರ   ದೇವಾಲಯಕ್ಕೆ ಸುಮಾರು 880ರಲ್ಲಿ ನೊಳಂಬರ ಕಾಲದಲ್ಲಿ ಐನುರಾಚಾರಿಯ ಮಗ ಪುಲಿಯಣ್ಣ ನಂದಿ ಮಂಟಪ   ಹಾಗೂ  ಶಿಖರ   ನಿರ್ಮಿಸಿದ ಉಲ್ಲೇಖವಿರುವ  ಕಾರಣ  ಈ ದೇವಾಲಯ ವೂ  ಹೆಚ್ಚು ಕಡಿಮೆ  ಅದೇ   ವೇಳೆಯಲ್ಲಿ ನಿರ್ಮಾಣವಾಗಿದೆ. ಇಲ್ಲಿನ ತಾಂಡವೇಶ್ವರನ ಪಾದದಲ್ಲಿ ನೊಳಂಬರ ಶಾಸನವಿದೆ.

ಆದರೆ  ನಂತರ   ದೇವಾಲಯ   ಚೋಳರ ಕಾಲದಲ್ಲಿ   ಇದರ   ಸೌಂದರ್ಯಕ್ಕೆ    ಮನ ಸೋತು  ಇಲ್ಲಿನ  ಹಲವು     ಭಾಗಗಳನ್ನು  ಬೇರೆಕಡೆ ಬಳಸಿ,ನಂತರದ  ಕಾಲಘಟ್ಟದಲ್ಲಿ ಜೀರ್ಣೋದ್ಧಾರಗೊಂಡಿದೆ  ಎಂಬ ಅಭಿಪ್ರಾ ಯವಿದೆ.  ದೇವಾಲಯ  ಗರ್ಭಗುಡಿ,  ಅಂತ ರಾಳ  ಹಾಗೂ  ನವರಂಗ  ಹೊಂದಿದೆ. ಗರ್ಭಗುಡಿಯಲ್ಲಿ   ಅರುಣಾಚಲೇಶ್ವರ   ಎಂದು ಕರೆಯುವ ಶಿವಲಿಂಗವಿದೆ.

ಇನ್ನು  ಅಂತರಾಳದಲ್ಲಿ  ಸರಳವಾದ ಕಂಬಗ ಳಿದ್ದು ತ್ರಿಶಾಖ ಮಾದರಿಯ ಬಾಗುಲುವಾಡ ಹೊಂದಿದೆ. ಇನ್ನು  ನವರಂಗದಲ್ಲಿ   ವಿಜಯ ನಗರ  ಕಾಲದ  ನಾಲ್ಕು  ಕಂಭಗಳಿದ್ದು ಬಹು ತೇಕ ಜೀರ್ಣೋದ್ದಾರ ಸಮಯದಲ್ಲಿ ಸೇರ್ಪ ಡೆಗೊಂಡಿದೆ. ಇನ್ನು  ಇಲ್ಲಿನ  ಹೊರಭಿತ್ತಿಯ ಲ್ಲೂ  ಸುಂದರ  ಜಾಲಂದ್ರಗಳಿದ್ದು  ಇಲ್ಲಿನ ನಟರಾಜ ಗಮನ ಸೆಳೆಯುತ್ತದೆ.ಈ ದೇವಾ ಲಯಕ್ಕೆ  ಗಾರೆಯ  ಶಿಖರವಿದೆ. ನೊಳಂಬರ ಸುಂದರವಾದ  ದೇವಾಲಯ  ನಂತರ ಕಾಲ ದಲ್ಲಿ ಹಲವು ಬದಲಾವಣೆ ಕಂಡಿದ್ದರೂ ಅಲ್ಲಲ್ಲಿ ನೊಳಂಬರ ಕುರುಹು ಉಳಿಸಿದೆ.


ಉಮಾ ಮಹೇಶ್ವರ ದೇವಾಲಯ

ಇನ್ನು ಈ ಎರಡು ದೇವಾಲಯಗಳ ನಡುವೆ ನಂತರ ಕಾಲದ ಸೇರ್ಪಡೆಯಾದ ಚಿಕ್ಕ ಗುಡಿ ಇದ್ದು ಇಲ್ಲಿ ಉಮಾ ಮಹೇಶ್ವರನ ಶಿಲ್ಪವಿದೆ.

ಈ  ದೇವಾಲಯದ  ಸುತ್ತಲೂ   ಪಾರ್ವತಿ ಕಲ್ಯಾಣದ ಸುಂದರ ಕೆತ್ತೆನೆ ಇದ್ದು ಈ ದೇವಾ ಲಯದ ಮುಂಭಾಗದಲ್ಲಿ ಸುಂದರ ಕಲ್ಯಾಣ ಮಂಟಪವಿದೆ.  ಇಲ್ಲಿನ  ನಾಲ್ಕು  ಕಂಭಗಳ ಸೂಕ್ಷ್ಮ ಕೆತ್ತೆನೆಗಳಿಂದ ಕೂಡಿದ್ದು,ಹೊಯ್ಸಳ ರನ್ನು    ನೆನಪಿಸುತ್ತದೆ.  ಇನ್ನು    ಇದನ್ನು ಮೂರನೇ  ವೀರಬಲ್ಲಾಳನ.  ಕಾಲದಲ್ಲಿ ಇಳವಂಜಿ  ವಾಸುದೇವರಾಯನು ನಿರ್ಮಿಸಿರಬೇಕು ಎಂಬ ಅಭಿಪ್ರಾಯವಿದೆ.

ಇನ್ನು  ಚೋಳ ಹಾಗೂ ವಿಜಯನಗರ ಕಾಲ ದಲ್ಲಿ ವಿಸ್ತಾರಗೊಂಡಿದ್ದು ಮೂರು ದೇವಾಲ ಯಕ್ಕೆ ಸೇರಿದಂತೆ ಸುಮಾರು 12 ಕಂಭಗಳಿ ರುವ ಸುಂದರ ಮುಖಮಂಟಪವಿದೆ.  ಇನ್ನು ಇಲ್ಲಿ ಸುಮಾರು ಐದು ಅಡಿ ಎತ್ತರದ ಕಲ್ಲಿನ ಛತ್ರಿ ಇದ್ದು ಇದೇ ಮಾದರಿಯ ಛತ್ರಿಯನ್ನು ಬೆಂಗಳೂರಿನ ಗವಿ ಗಂಗಾಧರೇಶ್ವರ ಪಕ್ಕದ ಹರಿಹರ  ಗುಡ್ಡದಲ್ಲೂ   ನೋಡಬಹುದು. ಇನ್ನು  ದೇವಾಲಯದ    ಹೊರಭಿತ್ತಿಯಲ್ಲಿ ಸುಂದರ  ಕೆತ್ತೆನೆಗಳಿದ್ದು  ಇಲ್ಲಿನ  ಜಾಲಂದ್ರ ಗಳು ಗಮನ ಸೆಳೆಯುತ್ತದೆ. ಇಲ್ಲಿನ ಶಿಲ್ಪದ ಕೆತ್ತೆನೆಯಲ್ಲಿಯೇ  ಜಾಲಂದ್ರಗಳನ್ನು ಕೆತ್ತಿರು ವುದು ಕಲಾ ಕುಸುರಿಗೆ ಸಾಕ್ಷಿ.

ಇನ್ನು ದೇವಾಲಯದ ಆವರಣದಲ್ಲಿ ಭೋಗ ನಂದೀಶ್ವರನ ಪತ್ನಿ ಪ್ರಸನ್ನ ಪಾರ್ವತಿ ಹಾಗು ಅರುಣಾಚಲೇಶ್ವರನ  ಪತ್ನಿಯಾದ    ಅಪಿತ ಕುಚಾಂಬಾದೇವಿಯ ದೇವಾಲಯಗಳೂ ಇದೆ.ಈದೇವಾಲಯಗಳು ಆಕಾಲದಲ್ಲಿಯೇ ನಿರ್ಮಾಣವಾಗಿರಬಹುದು  ಎಂದು ಕೆಲವು ವಿದ್ವಾಂಸರು   ಅಭಿಪ್ರಾಯ    ಪಡುತ್ತಾರೆ, ನಿರ್ಮಾಣದ ಬಗ್ಗೆ ಖಚಿತ ಮಾಹಿತಿ ಇಲ್ಲದಿ ದ್ದರೂ ಸುಂದರ ಕೆತ್ತೆನೆಗಳನ್ನು ಹೊಂದಿದೆ.

ಇನ್ನು ದೇವಾಲಯದ ಪ್ರಾಕಾರದ ಪಕ್ಕದಲ್ಲಿ ವಿಶಾಲವಾದ  ಮತ್ತೊಂದು  ಪ್ರಾಕಾರವಿದ್ದು ಇಲ್ಲಿ ವಿಜಯನಗರ ಕಾಲದ ವಸಂತ ಮಂಟ ಪ   ಹಾಗೂ   ತುಲಾಭಾರ   ಮಂಟಪವನ್ನು ನೋಡಬಹುದು.ಇದರ ಪಕ್ಕದಲ್ಲಿಯೇವಿಶಾ ಲವಾದ ಶೃಂಗತೀರ್ಥವೆಂಬ ಕಲ್ಯಾಣಿ ಇದೆ.

ಸ್ಥಳೀಯವಾಗಿ  ನಂದಿ   ತನ್ನ    ಶೃಂಗದಿಂದ  ನೆಲದಿಂದ  ನೀರನ್ನು  ಚಿಮ್ಮಿದ  ಜಾಗವಾದ ಕಾರಣ ಶೃಂಗತೀರ್ಥ ಎಂಬ ಹೆಸರು ಬಂದಿದೆ ಎನ್ನುತ್ತಾರೆ, ಕಲ್ಯಾಣಿ   ಮನಮೋಹಕವಾಗಿ ದ್ದು ವಿಶಾಲವಾದ ಮೆಟ್ಟಿಲುಗಳು ಸುತ್ತಲೂ ಇರುವ  ಕಂಭಗಳಿಂದ  ಕೂಡಿದ   ಮಂಟಪ ಹಾಗೂ   ಮೇಲಿನ  ಗಾರೆ   ಗೋಪುರಗಳು ಸುಂದರವಾಗಿದೆ.ಇನ್ನು ದೇವಾಲಯಕ್ಕೆವಿಶಾ ಲವಾದ  ರಾಜಗೋಪುರವಿದ್ದು  ಸುಮಾರು 16 ಆಡಿ ಎತ್ತರವಿದೆ.

ತಲುಪವ ಬಗ್ಗೆ : ನಂದಿ ಗ್ರಾಮ ಚಿಕ್ಕಾಬಳ್ಳಾಪುರದಿಂದ ಸುಮಾರು 8 ಕಿ ಮೀ ದೂರದಲ್ಲಿ ಚಿಕ್ಕಬಳಾಪುರ – ದೊಡ್ಡಬಳ್ಳಾ ಪುರ ರಸ್ತೆಯಲ್ಲಿದೆ. ಇನ್ನು ಬೆಂಗಳೂರಿನಿಂದ ಕೇವಲ 55 ಕಿ ಮೀ ದೂರದಲ್ಲಿದ್ದು ನಂದಿ ಬೆಟ್ಟಕ್ಕೆ ಹೋಗುವವರು ನೋಡಲೇಬೇಕಾದ ದೇವಾಲಯ.

                      🔆🔆🔆
✍️ಶ್ರೀನಿವಾಸಮೂರ್ತಿ.ಎನ್.ಎಸ್.     ಬೆಂಗಳೂರು