ಬಾಳ ಪಯಣದಲಿ ನೆನಪಾಗಿ ಕಾಡದಿರು
ಭಾವ ಯಾನದಲಿ ತೊಡಕಾಗಿ ಕಾಡದಿರದು

ಎಲ್ಲಾ ಮರೆತಿರುವಾಗ ಕನಸಾಗಿ ಕಾಡದಿರು
ಮಳೆ ನಿಂತಿರುವಾಗ ಹಸಿಯಾಗಿ ಕಾಡದಿರು

ತಣಿಯದ ವಿರಹ ಜ್ವಾಲೆಯಾಗಿ ಕಾಡದಿರು
ಒಲವು ಮುಚ್ಚಿದ ಬೂದಿಯಾಗಿ ಕಾಡದಿರು

ನಡೆವ ಹಾದಿಯಲೆಲ್ಲಾ ನೆರಳಾಗಿ ಕಾಡದಿರು
ಬೆಳಗು ಮೂಡಿರುವಾಗ ಇರುಳಾಗಿ ಕಾಡದಿರು

‘ಆರಾಧ್ಯೆ’ ಯ ತಪಸ್ಸಿಗೆ ಭಂಗವಾಗಿ ಕಾಡದಿರದು
ಮೌನ ಧ್ಯಾನಕ್ಕೆ ಮಾಯೆಯಾಗಿ ಕಾಡದಿರು

✍️ಶ್ರೀಮತಿ.ಗಿರಿಜಾ ಮಾಲಿಪಾಟೀಲ್        ವಿಜಯಪೂರ