New Jersey ಯ  ಇನ್ನೊಂದು   ಹೆಸರು Garden State. ಖುಷಿ ಎನಿಸಿತು. ಎಲ್ಲೆ ಲ್ಲೂ ಹಚ್ಚಹಸಿರಿನ ಗಿಡಮರಗಳೇ.ಗಿಡಗಳು ಅಲ್ಲೇ ಹುಟ್ಟುತ್ತದೆ;ಅಲ್ಲೇ ವಯಸ್ಸಾದೊಡನೆ ಎಲೆಗಳುದುರಿ ಸಾಯುತ್ತವೆ. ಆದರೆ ನೆಲಕ್ಕು ರುಳಿದ   ಯಾವುದೇ    ಗಿಡಮರಗಳನ್ನು ಯಾರೂ ಮುಟ್ಟುವಂತಿಲ್ಲ.  ಅವು  ಅಲ್ಲೇ ಕೊಳೆತು  ಗೊಬ್ಬರವಾಗಿ  ಜಾಗೆಯನ್ನು ಫಲ ವತ್ತಗೊಳಿಸುವದು.ಇದರಿಂದಾಗಿಎಲ್ಲೆಲ್ಲೋ  ಹಚ್ಚ ಹಸಿರು. ಇನ್ನೊಂದು ವಿಶೇಷವೆಂದರೆ   ನ್ಯೂಜೆರ್ಸಿಯ ಎಲ್ಲಾ ವಾಹನಗಳ  ಹಿಂಬದಿ ಯ ನಂಬರ್ ಪ್ಲೇಟಿನೊಳಗೆ ಕೆಳಗಡೆಯಲ್ಲಿ Garden State ಎಂದೇ ಬರೆದಿರುವರು.

ಅಮೇರಿಕಾದಲ್ಲಿದಾಗ   ಒಂದು   ಸಂಜೆ ನ್ಯೂಜೆರ್ಸಿಯ   Orchid  Range ನ  ಸಾವಿರಾರು ಎಕರೆ   ಪ್ರದೇಶದ   “Duke Farms” ನ್ನು  ಕಂಡು   ನಿಜವಾಗಿಯೂ ಬೆರಗಾದೆವು.ಶ್ರೀಮಂತ ತಂಬಾಕು ಬೆಳೆಗಾರ ನಾದ   “Duke”   ಎಂಬ  ಹೃದಯವಂತ ತನ್ನೆಲ್ಲಾ  ಲಾಭಾಂಶಗಳನ್ನು  ಇಲ್ಲಿ ಸುರುವಿ ದ್ದನ್ನು   ಕಂಡರೆ   ಅವನ  ಪ್ರಕೃತಿ  ಪ್ರೀತಿಗೆ ನಿಜವಾಗಿಯೂ ನಾವು ತಲೆಬಾಗಲೇಬೇಕು.

                        🔆🔆🔆
✍️ಪ್ರಕಾಶ ಕಡಮೆ,ನಾಗಸುಧೆ
ಹುಬ್ಬಳ್ಳಿ