ಬದುಕಲು ತಿನ್ನಬೇಕು,ತಿನ್ನುವುದಕ್ಕಾಗಿ ಬದುಕಬಾರದು ಎಂದು ಹೇಳುತ್ತಾರೆ ಆದರೆ ಮಳೆಗಾಲ ಬಂತೆಂದರೆ ಈ ಮಾತು ಮರೆಯ ಬೇಕಾಗುತ್ತದೆ.ಮಳೆಯನ್ನುನೋಡಿ ಆನಂದಿ ಸುವುದರ ಜೊತೆಗೆ ಬಾಯಲ್ಲಿ ಬಿಸಿ ಬಿಸಿ ಯಾದ, ರುಚಿಯಾದ ತಿಂಡಿ ಇದ್ದರೆ, ಆಹಾ!.ಮೆಣಸಿನಕಾಯಿ,ಬಾಳೆಕಾಯಿ,ಹೀರೇಕಾಯಿಗಳ ಬಜ್ಜಿ, ಈರುಳ್ಳಿ ಪಕೊಡ, ಆಲೂಗಡ್ಡೆ ಬೋಂಡ ಇದೆಲ್ಲವು ಮಳೆಗೆ ಬೆಸ್ಟ್. ಯಾವು ದು ಇಲ್ಲವಂದರೂ ಬಿಸಿ ಫ಼ಿಲ್ಟರ್ ಕಾಫಿ,ಟೀ ಇದ್ದರೆ ಸಾಕು. ನಮ್ಮ ಬೆಂಗಳೂರಿನಲ್ಲಿ ಇತ್ತೀಚಿಗೆ ಎಲ್ಲಾ ತರಕಾರಿಗಳನ್ನು ಬಳಸಿ, ಬೋಂಡ, ಬಜ್ಜಿ ಮಾಡುವ ಹವ್ಯಾಸ ಹೆಚ್ಚಾಗಿದೆ.ಮೊದಲು ಕೆಲವೇ ತರಕಾರಿಗಳಿಗೆ ಸೀಮಿತವಾಗಿದ್ದ  ಈ  ತಿನಿಸುಗಳು   ಈಗ ಹಣ್ಣುಗಳನ್ನು ಸಹ ತಮ್ಮೊಡನೆ ಸೇರಿಸಿಕೊಂ ಡಿವೆ.  ದಪ್ಪಮೆಣಸಿನಕಾಯಿ,   ಕ್ಯಾರೆಟ್, ಹಾಗಲಕಾಯಿಯಲ್ಲದೆ ಅನಾನಸ್, ಸೇಬು, ಮಾವಿನ ಹಣ್ಣಿನ ಬಜ್ಜಿ, ಬೋಂಡಗಳಿಗೂ ಬೇಡಿಕೆಯಿದೆ. ಕಾದ ಎಣ್ಣೆಯಲ್ಲಿ ಗರಿಗರಿ ಯಾಗಿ ಕರೆದ ಬಜ್ಜಿಯ ಮೇಲೆ ಸಣ್ಣಗೆ ತುರಿದ  ಕ್ಯಾರೆಟ್,  ಈರುಳ್ಳಿ   ಉದುರಿಸಿ, ಮೇಲಿಷ್ಟು ಉಪ್ಪು ಖಾರ, ನಿಂಬೆ ರಸ ಹಾಕಿ ತಿನ್ನಲು ಶುರುಮಾಡಿದರೆ ಭೂಮಿಯೇ ಸ್ವರ್ಗ!


ಇನ್ನು ಕೆಲವೆಡೆ, ಉಪಿಟ್ಟು,ಅವಲಕ್ಕಿ,ಚೂಡ, ಮಂಡಕ್ಕಿ ಮಾಡಿದರೆ, ಮೈಸೂರು ಬಜ್ಜಿ, ಮಂಗಳೂರ್ ಬನ್ ಗೆ ಕೂಡ ಅಭಿಮಾನಿಗ ಳಿದ್ದಾರೆ. ಈ ಎಣ್ಣೆಯಲ್ಲಿ  ಕರೆದ ಸಾಂಪ್ರದಾ ಯಿಕವಾದ  ಚಕ್ಕುಲಿ, ಕೋಡ್ಬಳೆ, ನಿಪ್ಪಟ್ಟುಗ ಳನ್ನು ಹೊರತುಪಡಿಸಿ ಬಿಸಿ ಮಸಾಲಪುರಿ, ಮಂಚೂರಿಗಳನ್ನು ಆಸ್ವಾದಿಸುವರ ಸಂಖ್ಯೆ ಕಡಿಮೆ ಏನಿಲ್ಲ.ಆದರೆ ಬೇಸಿಗೆ ಕಾಲದಲ್ಲಿ ಈ ತಿನಿಸುಗಳನ್ನು ತಿಂದಾಗ ಸಿಗದಿರುವ  ರುಚಿ, ಖುಷಿ ಮಳೆಗಾ ಲದಲ್ಲಿಯೇ ಏಕೆ? ಎಂದು ನೋಡುತ್ತಾ ಹೊದರೆ, ಕಾಲ ಬದಲಾದಂತೆ, ನಮ್ಮ ದೇಹ ದಲ್ಲಿಯೂ ಬದಲಾವಣೆ ಸಹಜ. ಮಳೆಗಾಲ ದಲ್ಲಿ ನಮ್ಮ ಶರೀರ ಉಷ್ಣತೆಯನ್ನು ಕಾಪಾ ಡಿಕೊಳ್ಳಲು ಕೆಲವು ನಿರ್ದಿಷ್ಟ ಆಹಾರವನ್ನು ಬಯಸುವಂತೆ ಹಾರ್ಮೊನುಗಳನ್ನು ಉತ್ಪಾ ದಿಸುತ್ತದೆ. ಈ ಕಾರಣದಿಂದಲೇ ನಮಗೆ ಮಳೆ ಮತ್ತು ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರಗಳು ಹಿತವೆನಿಸುತ್ತವೆ.ಇಗಾಗಲೇ  ಮಳೆಗಾಲ  ಶುರುವಾಗಿದೆ, ಮಳೆ ಬಂದಾಗ  ಈ ತಿಂಡಿಗಳನ್ನು  ಮಾಡಿ,  ಮನೆಯವರೊಂದಿಗೆ  ಕೂತು  ಮಳೆಯನ್ನು  ನೋಡುತ್ತಾ,  ಕಾಫಿಯೊಂದಿಗೆ  ಸವಿಯುವು ದನ್ನು ಮರೆಯದಿರಿ.

✍️ಶ್ರೀರಕ್ಷಾ ಶಂಕರ್,
ಎಸ್.ಡಿ.ಎಂ.ಕಾಲೇಜು,ಉಜಿರೆ.