ಪ್ಯಾರಿಸ್ ಪಜೀತಿಗಳ ಬಗೆಗೆ ಹಿಂದಿನ ಸಲ ಬರೆದಿದ್ದೆ. ಈ ಸಲ ಅದೇ ಐಫೆಲ್ ಟವರ್, ಅದೇ ಲೂವ್ರ  ಮ್ಯೂಸಿಯಂ  ಕುರಿತು   ಬರೆ ಯುವ   ಮುನ್ನ   ನನ್ನದೇ   ಆದ   ಕೆಲವು  ವಿಶಿಷ್ಟ   ಅನುಭವಗಳನ್ನು   ಹಂಚಿಕೊಳ್ಳಬ ಯಸುತ್ತೇನೆ.

ಸಾಮಾನ್ಯವಾಗಿ ಎಲ್ಲೇ ಹೋದರೂ ನಾನು ಅಲ್ಲಿನ   ಸೂರ್ಯೋದಯ-ಸೂರ್ಯಾಸ್ತ ತಪ್ಪದೇ ನೋಡುತ್ತೇನೆ. ಈ ದಿನದ ಹುಟ್ಟು ಸಾವುಗಳು  ನನ್ನನ್ನು  ಎಲ್ಲಿಲ್ಲದಂತೆ  ಕಾಡು ತ್ತದೆ. ನಮ್ಮಲ್ಲಿ ನಾನೊಬ್ಬಳೇ ಬೆಳಗಿನ ಜಾವದ ವ್ಯಕ್ತಿ (early morning person).

So, ಎಲ್ಲೇ ಹೋದರೂ ನಾನೊಬ್ಬಳೇ ಸೂರ್ಯೋದಯ ವೀಕ್ಷಣೆಗೆ ಹೊರಡುತ್ತೇನೆ. ಈ ಸೋಲೊ (solo- ಒಬ್ಬರೇ) ತಿರುಗಾಟ ದಲ್ಲಿ  ಸೋಲೋ  ಮಾತೇ  ಇಲ್ಲ,  ಗೆಲುವೇ ಎಲ್ಲ. ನನ್ನ ಕೇಳುವದಾದರೆ ಪ್ರವಾಸ ಎನ್ನುವದು ಅತಿಯಾದ ಗಡಿಬಿಡಿಯಲ್ಲಿ, ದುಬಾರಿ  ಬೆಲೆಯಲ್ಲಿ,  ಕಡಿಮೆ   ಸಮಯ ದಲ್ಲಿ, ಹೆಚ್ಚೆಚ್ಚು ಸ್ಥಳಗಳನ್ನು ‘ಕವರ್’ ಮಾಡುವದಲ್ಲ. ಪ್ರವಾಸದ ನಿಜವಾದ ಮಜಾ ವಿದೇಶದಲ್ಲಿ ಮಾತ್ರವೇ ಅಲ್ಲವೂ ಅಲ್ಲ…ಯಾವ ಜಾಗವಾದರೂ ಸರಿ. ಎಲ್ಲ ಕ್ಕಿಂತ ಮುಖ್ಯವಾಗಿ it’s all about experiences.. . ಜೀವನದಲ್ಲಿ ಒಬ್ಬನೇ/ಳೇ  ಹೋಗುವ  ಪ್ರವಾಸ ಯಾವ  ಧ್ಯಾನ ಕ್ಕಿಂತ, ತಪಸ್ಸಿಗಿಂತ ಕಡಿಮೆಯಲ್ಲ. ನಮ್ಮನ್ನು ನಾವು ಕಂಡುಕೊಳ್ಳುವ ಅತಿ ಸುಂದರ, ಸರಳ ವಿಧಾನ. ನನ್ನ ಸೋಲೋ ಪ್ರಯಾಣ ಗಳ ಬಗ್ಗೆ ಮುಂದೆ ಬರೆಯುತ್ತೇನೆ.

ಜಗತ್ತಿನ ಅದ್ಭುತ ಸೂರ್ಯೋದಯಗಳಾದ ಇಂಗ್ಲೆಂಡಿನ ಸ್ಟೋನ್ ಹೆಂಜ್, ಕಾಂಬೋಡಿ ಯಾದ ಅಂಕೋರ್ವಾಟ್ ಮತ್ತು ನಮ್ಮದೇ ಅಂಡಮಾನ್ ಗಳ ಅದ್ಭುತ ಅರುಣೋದ ಯದ ದೃಶ್ಯವನ್ನು ಎಂದಿಗೂ ಮರೆಯಲಾರೆ. ಆದರೆ ಪ್ಯಾರಿಸ್ ನ ಮೂಡಣದಲ್ಲಿ ಬರುವ ರವಿಯ ಖದರೇ ಬೇರೆ.

‘ಬಗೆಟ್’  (baguette)  ಎನ್ನುವ   ಗಟ್ಟಿ ಮೇಲ್ಪದರದ,ಉದ್ದನೆಯ,ಪರಮ ರುಚಿಯ ಬ್ರೆಡ್ಡು ಮತ್ತು ‘ಕ್ವಾಸೊಂಗ್’ (croissant) ಎನ್ನುವ ಸಿಹಿಯಾದ ನಾಜೂಕಿನ ಪೇಸ್ಟ್ರಿಯ ಚಿಕ್ಕ ಬಾಸ್ಕೆಟ್ ತೆಗೆದುಕೊಂಡು ಸೀಯೆನ್ ನದಿಯ ದಡದಲ್ಲಿ ಪಾಂಟ್ ಅಲೆಕ್ಸಾಂಡ್ರ iii ಎನ್ನುವ ಸೇತುವೆಯಪಕ್ಕ ಧ್ಯಾನಸ್ಥಳಾದಂತೆ ಕೂತಾಗ ಇನ್ನೂ ಚುಮುಚುಮು ಕತ್ತಲೆ.

ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲಿ ವ್ಯಕ್ತಿಸ್ವಾತಂತ್ರ್ಯಕ್ಕೆ ಗರಿಷ್ಠ ಆದ್ಯತೆಯನ್ನು ಕಾಣುತ್ತೇವೆ.ನಿಮ್ಮ ಪಕ್ಕದಲ್ಲೇ ಕೂತರೂ ಅವರದೇ ಒಂದು ಬೇರೆ ಜಗತ್ತು ನಿರ್ಮಿಸಿ ಕೊಂಡಿರುತ್ತಾರೆ.ನಿಮಗೂ ಅಷ್ಟೇ ಸ್ವಾತಂತ್ರ್ಯ ದಯಪಾಲಿಸುತ್ತಾರೆ.ಬೇರೆಯವರ ವಿಷಯ ದಲ್ಲಿ ಮೂಗು ತೂರಿಸುವ ಪ್ರಶ್ನೆಯೇ ಇಲ್ಲ.

‘ಯಾಕೆ.. ಒಬ್ರೇ  ಬಂದಿದೀರಾ..   ಏನ್ ಮಾಡ್ಕೊಂಡಿದೀರಾ..ಮನೆಯವರೆಲ್ಲಿ?.. ಮಕ್ಕಳು..? ಯಾವುದೇ    ಪ್ರಶ್ನೆಗಳಿಲ್ಲದೇ, ಚೂಪು, ವಾರೆ ಮತ್ತು ಪ್ರಶ್ನಾರ್ಥಕ ನೋಟ ಗಳಿಲ್ಲದೇ ನಮ್ಮದೇ ಜಗತ್ತಿನಲ್ಲಿ ನಿರಾಳ ವಾಗಿ ಒಬ್ಬಳೇ ಹೆಣ್ಣು ಕೂರಬಹುದಾದ ಒಂದು ಜಾಗವಿರಬಹುದು ಎನ್ನುವ ಕಲ್ಪನೆ ಯೂ ಇರದ ನನಗೆ ಅದು ಅಕ್ಷರಶಃ ಗೋಲ್ಡನ್ ಅವರ್ ಆಗಿ ಪರಿಣಮಿಸಿತ್ತು. ಅಂದ ಹಾಗೆ ಈ golden hour ಅನ್ನು ವದು ಸೂರ್ಯೋದಯದ ನಂತರದ ಮತ್ತು ಸೂರ್ಯಾಸ್ತದ ಮೊದಲಿನ ಒಂದು ಗಂಟೆ ಯ ಸಮಯ. ಛಾಯಾಚಿತ್ರ ತೆಗೆಯುವವರ ಮೆಚ್ಚಿನ ಕ್ಷಣ.

‘An evening in Paris’ ಬಿಟ್ಟು ಯಾಕೆ A morning in Paris ನನಗೆ ಹೆಚ್ಚು ಇಷ್ಟವಾಗುತ್ತದೆ ಎಂದರೆ ಇಲ್ಲಿ ಸದಾ ಪ್ರವಾ ಸಿಗರ ಸಂತೆಯೇ ನೆರೆದಿರುತ್ತದೆ. ಹಗಲು- ರಾತ್ರಿಯ ಗಿಜಿಗುಟ್ಟುವ ಪ್ರವಾಸಿಗಳ ಹಿಂಡಿ ನಲ್ಲಿ, ನೋಡುವದಕ್ಕಿಂತ ಹೆಚ್ಚಾಗಿ ಗುಂಪಿ ನಲ್ಲಿ ಗೋವಿಂದವಾಗಿ ನಮ್ಮ ವಸ್ತುಗಳನ್ನು ಕಾಪಾಡಿಕೊಳ್ಳುವ ತುರ್ತಿನಲ್ಲಿ ಪ್ರವಾಸದ ಮಜವೇ ಕಾಣೆಯಾಗಿರುತ್ತದೆ.

ಬೆಳಗಿನ ಪ್ಯಾರಿಸ್ ಹಾಗಲ್ಲ. ನಿಧಾನವಾಗಿ ಒಬ್ಬಂಟಿಯಾಗಿ ಬಂಗಾರದ ಬೆಳಕಲ್ಲಿ ಮೀಯುತ್ತದೆ. ತನ್ನ ಸೌಂದರ್ಯ ಮತ್ತು ನಿಗೂಢ ಮಾಂತ್ರಿಕತೆಯನ್ನು ಹದವಾಗಿ ಕಲಸಿ ಕೈತುತ್ತು ಮಾಡಿ, ಒಂದೊಂದಾಗಿ ನಮ್ಮ ತೆರೆದ ಕಣ್ಣಿನ ಬಾಯಿಗಿಡುತ್ತದೆ.

ನಾನು ಕುಳಿತ ಅಲೆಕ್ಸಾಂಡರ್ ಪಾಂಟ iii ಸೇತುವೆ ಪ್ಯಾರಿಸ್ ನ ಅತಿ ಸುಂದರ ಸೇತುವೆಗಳಲ್ಲೊಂದು. ಐಫೆಲ್ ಟವರ್ ಕೂಡಾ ಇಲ್ಲಿಂದ ಸುಂದರವಾಗಿ ಕಾಣುತ್ತದೆ. ನಿಧಾನಕ್ಕೆ ರವಿಯ ಹೊನ್ನ ಕಿರಣಗಳು ಸೀಯೆನ್ ನದಿಯಲ್ಲಿ ಚಿನ್ನಾಟವಾಡುತ್ತ ಸ್ವಲ್ಪ ಸ್ವಲ್ಪವೇ ಪ್ಯಾರಿಸ್ ಅನ್ನು ಅನಾವರ ಣಗೊಳಿಸುತ್ತವೆ. ಸೇತುವೆಯ ಆಕರ್ಷಕ ದೀಪಸ್ತಂಭಗಳು ಚೆಲುವನ್ನು ದ್ವಿಗುಣಗೊ ಳಿಸುತ್ತವೆ.

ಪ್ಯಾರಿಸ್ ನ ಐದಾರು ಜನಪ್ರಿಯ ಸನ್ ರೈಸ್ ಜಾಗಗಳಲ್ಲಿ ಇದೇ ಕೊನೆಯದು. ಹಾಗಾಗಿ ಜನಜಂಗುಳಿಯಿಂದ ನನ್ನ ಸಮಾಧಿ ಸ್ಥಿತಿಗೆ ಯಾವ ಭಂಗವೂ ಆಗದೇ ಪ್ಯಾರಿಸ್ ಪ್ರವಾಸದ ಅತಿ ಸುಂದರ ಕ್ಷಣ ಗಳನ್ನು ಮನಸಾರೆ ಅನುಭವಿಸಿದೆ. ಜೊತೆಗೆ ಬಗೆಟ್ ನ ರಸ್ಟಿಕ್ ಸ್ವಾದ ಮತ್ತು ಕ್ವಾಸೊಂಗ್ ನ ನಾಜೂಕು ರುಚಿಯ ಹದವಾದ ಹಿಮ್ಮೇಳ.

ಸೂರ್ಯನ ಬಾಲಲೀಲೆಗಳಲ್ಲ ಮುಗಿದ ಮೇಲೆ ನಮ್ಮವರು ಪ್ರಕಟವಾಗಿ, ಪ್ಯಾರಿಸ್ ನ ಪ್ರಸಿದ್ಧ ಕೆಫೆಯೊಂದರಲ್ಲಿ ಫ್ರೆಂಚ್ ಕಾಫಿ ಕುಡಿಯುವ ಕಾರ್ಯಕ್ರಮಕ್ಕೆಮುಂದಾದೆವು. ಪ್ಯಾರಿಸ್ ನ ಕೆಫೆಕಲ್ಚರ್ ತುಂಬಾಜನಪ್ರಿಯ. ಅಲ್ಲಿ ಎಲ್ಲವೂ ಸ್ಲೊ ಮೋಶನ್ ಅಲ್ಲಿ ನಡೆ ಯುತ್ತದೆ.ಕಾಫಿಯ ಒಂದೊಂದು ಗುಟುಕೂ, ತಿಂಡಿಯ ಒಂದೊಂದು ತುಣುಕೂ ಆಸ್ವಾ ದಿಸಿ ಸವಿಯಬೇಕು. ಮತ್ತೆ ಮಧ್ಯೆ ಮಧ್ಯೆ ಮಾತು, ನಗು.

ಹೆಚ್ಚಾಗಿ ಸ್ಥಳೀಯರ ಜೀವನ ಗಡಿಬಿಡಿಯಿ ಲ್ಲದ, ಧಾವಂತವಿಲ್ಲದ relaxed ಶೈಲಿ. ಮೊದ ಮೊದಲು ಈ ಫ್ರೆಂಚ್ ರೆಲ್ಲ ಕೆಲ್ಸ ಬೊಗ್ಸೆ ಏನೂ ಇಲ್ಲದೇ ಬರೀ enjoy ಮಾಡ್ತಾರಲ್ಲಪ್ಪಾ.. ಹಣ ಹೇಗೆ ಹೊಂದಸ್ಕೋತಾರೆ ಅನಿಸುತಿತ್ತು. ಆಮೇಲಾಮೇಲೆ ಅವರ ಅದ್ಭುತ ಅನ್ನಿಸುವ ಅಭ್ಯಾಸಗಳ ಬಗ್ಗೆ ಹೆಚ್ಚೆಚ್ಚು ಗೊತ್ತಾಗುತ್ತಿ ದ್ದಂತೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು. ಅದರ ಬಗ್ಗೆ ಹೇಳುತ್ತ ಹೋದರೆ ಅದೇ ಒಂದು ಎಪಿಸೋಡ್ ಆಗುತ್ತದೆ.

ಆಲ್ ರೈಟ್..coming back to the coffee..ನಾ ಕುಳಿತ ಸೇತುವೆಯಿಂದ ಕೆಲವೇ ಮೀಟರ್ ದೂರದಲ್ಲಿರುವ‘ಲೆ ಮಿನಿ ಪಲೈಸ್’ ಎನ್ನುವ ಕೆಫೆಗೆ ಬಂದು ಕುಳಿತಾಗ ಫ್ರೆಂಚ್ ಬೆಡಗಿಯೊಬ್ಬಳು ನಗುತ್ತಾ ‘ಬೊನ್ಜೂರ್’ (good morning) ಎಂದು ಮೆನ್ಯೂ ವನ್ನು ಕೊಟ್ಟಳು. ಎಲ್ಲಾ ಫ್ರೆಂಚ್ ಮಯ. (ಕೇಳಿದ್ರೆ ಇಂಗ್ಲಿಷ್ ಮೆನ್ಯೂ ಕೊಡುತ್ತಿದ್ದರು ಎನ್ನುವದು ಆಮೇಲೆ ಗೊತ್ತಾಯಿತು.) ನೂರಾರು ಬಗೆಯ ಕಾಫಿಗಳು! ಏನೂ ಅರ್ಥವಾಗದೇ ನಾವು ದೇವರನ್ನು ನೆನೆದು ಯಾವುದೋ ಒಂದು ಕಾಫಿ ಹೇಳಿದೆವು. ಮನಸಿನಲ್ಲಿ ಇದ್ದ ಕಾಫಿ ಪಕ್ಕದ ಟೇಬಲ್ಲಿನ ಜೋಡಿ ಕುಡಿಯುತ್ತಿದ್ದ ಹಬೆಯಾಡುತ್ತಿದ್ದ ನೊರೆ ಕಾಫಿ ಮತ್ತು ಅದರ ಮೇಲಿನ ಕೆನೆಯ ಹೃದಯ. ಟೇಬಲ್ ಮೇಲೆ ಬಂದಿದ್ದು ನಾಲ್ಕೇ ಗುಟುಕಿನಷ್ಟು ಕಾರ್ಕೋಟಕ ವಿಷದಷ್ಟೇ ಕಹಿಯಾದ ಕಾಫಿಯ ಡಿಕಾಕ್ಷನ್ನು! ಎರಡು ಕಾಫಿಗೆ ಸುಮಾರು ಆರುನೂರು ರೂಪಾಯಿ ತೆತ್ತು ಕಷ್ಟಪಟ್ಟು ಎರೆಡೆರಡು ಗುಟುಕುಗಳಷ್ಟು ಕುಡಿದು ಮೇಲೇಳುವಾಗ ಪಕ್ಕದ ಜೋಡಿಯ ಕಾಫಿಯ ಕೆನೆಯ ಹೃದಯ ಕೆನೆಕೆನೆದು ನಮ್ಮನ್ನು ಅಣಕಿಸುತ್ತಿತ್ತು. ಎಸ್ ಪ್ರೆಸ್ಸೊ  ಎನ್ನುವ  ಕಾಫಿಯನ್ನು  ಜನುಮದ ಲ್ಲೇ ಕುಡಿಯಬಾರದು ಎನ್ನುವ ಪ್ರತಿಜ್ಞೆ ಯೊಂದಿಗೆ ಮತ್ತು ನಮ್ಮ ಫಿಲ್ಟರ್ ಕಾಫಿಗೆ ಸರಿಸಾಟಿ ಯಾವುದೂ ಇಲ್ಲ ಎನ್ನುವ ಜ್ಞಾನೋದಯದೊಂದಿಗೆ ಮರಳಿದೆವು. ಆದರೆ ಈಗ ವಯಸ್ಸಾಗುತ್ತಿದ್ದಂತೆ ಕೆನೆ, ಸಕ್ಕರೆ, ಕ್ಯಾಲೊರಿ ಭರಿತ ಕಾಫಿಗಿಂತ ಎಸ್ ಪ್ರೆಸ್ಸೊ ಒಂಥರಾ ಚೆನ್ನಾಗಿದೆ ಅನ್ನಿಸತೊಡ ಗಿದೆ.

ಒಮ್ಮೆ ಬೆಳಗಾಗಿಬಿಟ್ಟರೆ ಸಾಕು, ಈ ಪ್ರವಾಸಿ ಸ್ಥಳಗಳು 100% ಕಮರ್ಶಿಯಲ್ ಆಗಿ ಬದಲಾಗಿಬಿಡುತ್ತವೆ. ಎಲ್ಲಕಡೆ ಸರತಿಯ ಸಾಲುಗಳು ಶುರು. ಈ ಕ್ಯೂ ಎನ್ನುವದು ಎಲ್ಲಾ ಪ್ರವಾಸಿ ತಾಣಗಳಲ್ಲಿ ಕಡ್ಡಾಯವಾಗಿ ಅನುಭವಿಸಲೇಬೇಕಾದ ಶಿಕ್ಷೆ. ಅದರಲ್ಲೂ ಪ್ಯಾರಿಸ್ ನ ಐಫೆಲ್ ಟವರ್, ಲೂವ್ರಗಳ ಕ್ಯೂ ಗಳಂತೂ ಕುಖ್ಯಾತ. ಈಗೀಗ ಎಲ್ಲಾ online booking ಎಂದರೂ ಈ ಕ್ಯೂನ ಗೋಳಂತೂ ತಪ್ಪಿಲ್ಲ.

            An evening in Paris

‘ಆನ್ ಇವನಿಂಗ್ ಇನ್ ಪ್ಯಾರಿಸ್’ ಹೆಸರಿನ ಶಮ್ಮಿಕಪೂರನ ಸಿನೆಮಾ ನೆನಪಿಗೆ ಬಂತಲ್ಲವೇ? ಆದರೆ ಅಸಲು ಅದು ಚಿತ್ರೀಕರಣವಾದದ್ದು ಪ್ಯಾರಿಸ್ ನಲ್ಲಲ್ಲವೇ ಅಲ್ಲ..ಅದು ಲೆಬನಾನ್ ನಲ್ಲಿ.. ಚಲನಚಿತ್ರ ಜಗತ್ತಿನ ಅದ್ಭುತ ಕಣ್ಕಟ್ಟನ್ನು ಮುಂಬೈ ಚಿತ್ರನಗರಿಯಲ್ಲಿ ನೋಡಿ ದಂಗಾಗಿದ್ದೇನೆ. ಹೋಗಲಿ ಬಿಡಿ.

ನಿಜ ಹೇಳಬೇಕೆಂದರೆ,ಪ್ಯಾರಿಸ್ ಪ್ರಸಿದ್ಧವಾ ಗಿರುವದೇ city of lights ಎಂದು. ಪ್ಯಾರಿಸ್ ನ ರಾತ್ರಿಯ ಸೊಬಗಿಗೆ ಸರಿಸಾಟಿ ಯೆಂದರೆ ಅದು ಇಟಲಿಯ ವೆನಿಸ್ ಮಾತ್ರ. ಇಲ್ಲಿ ಕನಸಿನ ಲೋಕವೊಂದು ನಿಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಒಪೆರಾಗಳು, ಹಳೆಯ ವಾಸ್ತುಶಿಲ್ಪದ ಭವ್ಯ ಕಟ್ಟಡಗಳು ಮತ್ತು ಸೀಯೆನ್ ನದಿಯ ಒಂದಕ್ಕಿಂತ ಒಂದು ಸುಂದರ ದೀಪಾಲಂಕೃತ ಸೇತುವೆಗಳು ಮಧ್ಯಕಾಲೀನ ಯುಗದಲ್ಲಿರುವ ಅನುಭವ ಉಂಟುಮಾಡುತ್ತದೆ. ಸಾಮಾನ್ಯವಾಗಿ ಯುರೋಪಿನ ಎಲ್ಲಾ ನಗರಗಳ ಮಧ್ಯೆ ನದಿಯೊಂದು ಹರಿಯುತ್ತದೆ. ಹಾಗಾಗಿ ಈ ಐಶಾರಾಮಿ ದೋಣಿ ವಿಹಾರಗಳ ವಿವಿಧ ಪ್ಯಾಕೇಜುಗಳು ಎಲ್ಲಡೆ ಜನಪ್ರಿಯ. ಇವು ಗಳು ಹಗಲಲ್ಲಿ ಪ್ರೇಕ್ಷಣೀಯ ಸ್ಥಳ ವೀಕ್ಷಣೆ ಮಾಡಿಸಿದರೆ, ರಾತ್ರಿಯಲ್ಲಿ ಡಿನ್ನರ್, ಡ್ರಿಂಕ್ಸ್, ಸಂಗೀತ-ನೃತ್ಯಗಳಿಂದ ಕೂಡಿ ಒಂದು ಸ್ಮರಣೀಯ ಅನುಭವ ನೀಡುತ್ತವೆ.

ಪ್ಯಾರಿಸ್ ನ ಮಧ್ಯದಲ್ಲೂ ಸೀಯೆನ್ ನದಿ ಹರಿಯುತ್ತದೆ. ರಾತ್ರಿಯ ದೋಣಿ ವಿಹಾರ ಐಫೆಲ್ ಟವರಿನ ಹತ್ತಿರ ಶುರುವಾಗಿ, ಜಗಮಗಿಸುವ ಬೆಳಕಲ್ಲಿ ನದಿಯ ಇಕ್ಕೆಲಗಳ ಲ್ಲೂ ಇರುವ ಚೆಂದದ ವಾಸ್ತುಶಿಲ್ಪ, ಮನಸೆ ಳೆಯುವ ಬೀದಿಗಳು, ನದಿಯ ಅಡ್ಡಲಾಗಿ ಕಟ್ಟಿದ ಹಳೆಯ ಸೇತುವೆಗಳು ಎಲ್ಲವನ್ನೂ ವೀಕ್ಷಿಸುತ್ತ ಕೊನೆಯಲ್ಲಿ ಅದೇ ಐಫೆಲ್ ಟವರಿನ ಅದ್ಭುತ ದೀಪಾಲಂಕಾರದೊಂದಿಗೆ
ಮುಕ್ತಾಯಗೊಳ್ಳುತ್ತದೆ. ಐಫೆಲ್ ಟವರಿನ ದೀಪಗಳು ಹೊತ್ತಿಕೊಳ್ಳುವ ಆ ಸುಂದರ ಗಳಿಗೆಯಲ್ಲಿ  ನಮ್ಮದೇ ಮೈಸೂರು ಅರಮ ನೆಯ ಬೆಳಕು ಝಗ್ ಎಂದು ಹೊತ್ತಿಕೊ ಳ್ಳುವ ದೃಶ್ಯ ನೆನಪಾಗುತ್ತದೆ.ನಮ್ಮಅರಮನೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ.

ಆದರೆ ನಮ್ಮ ಸಮಸ್ಯೆ ಎಂದರೆ ಲೋಕ ಸುತ್ತಿದ ಮೇಲಷ್ಟೇ ನಮಗೆ ನಾವೂ ಯಾರಿ ಗೇನು ಕಡಿಮೆಯಿಲ್ಲ ಎನ್ನುವಜ್ಞಾನೋದಯ ಆಗುವುದು. ಪರದೇಶ ಸೇರಿದ ಮೇಲೇ ನಮ್ಮ ದೇಶಪ್ರೇಮ ಮತ್ತು ಸಾಂಸ್ಕೃತಿಕ ಪ್ರಜ್ಞೆ ಜಾಗೃತವಾಗುವದು. ಎಲ್ಲಕ್ಕಿಂತ ಮಿಗಿ ಲಾಗಿ ನಾವು ಮಾಡಬೇಕಾದ್ದುನಮ್ಮಲ್ಲಿರುವ ಅಮೂಲ್ಯ ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಪ್ರಾಚ್ಯ ವಸ್ತುಗಳನ್ನು ಇನ್ನಾದರೂ ಯಾವು ದೇ ಹಾನಿಯಾಗದಂತೆ ಸಂರಕ್ಷಿಸುವದು.
ಮುಂದಿನ ಸಲ ಮತ್ತೆ ಪ್ಯಾರಿಸ್ ನಲ್ಲೇ ಸಿಗೋಣ..ಅಲ್ಲಿಯವರೆಗೆ ಅಬ್ಯೊಂತೊ   (a bientot)-ಸೀ ಯೂ.

                        🔆🔆🔆
✍️ಸುಚಿತ್ರಾ ಹೆಗಡೆ,ಮೈಸೂರು