ಕಥೆ ಕೇಳುವುದು ಅಂದ ಕೂಡಲೇ ನನಗೆ ಬಾಲ್ಯದಲ್ಲಿ ನನ್ನ ಅಜ್ಜಿ,ಶಿಕ್ಷಕರು ಹೇಳುತ್ತಿದ್ದ ಕಥೆಗಳು ನೆನಪಾಗುವುದು ಸಹಜ.ಅವರ ಕಥೆ ಕೇಳುತ್ತ ನಾವು ಮೈ ಮರೆಯುತ್ತಿದ್ದೆವು. ಹೇಗೆ ಬೇಸಿಗೆಯಲ್ಲಿ ನಾನು ಅಜ್ಜನ ಮನೆಗೆ ತೆರಳಿದಾಗ ಕಥೆ ಹೇಳಲು ಪೀಡಿಸಿದೆ.ಆಗ ಕಥೆ ಹೇಳಲು ಪ್ರಾರಂಭಿಸಿದರು.
ಒಂದು ದಿನ ಅಳಿಯನನ್ನು ಮಾವನ ಮನೆಗೆ ಊಟಕ್ಕೆ ಕರೆಯುತ್ತಾರೆ,ಅಲ್ಲಿ ಅಳಿಯನಿಗೆ ಪ್ರಿಯವಾದಂತಹ ಹೋಳಿಗೆ, ಪಾಯಸ,ಹಪ್ಪಳವನ್ನೆಲ್ಲ ಮಾಡಿರುತ್ತಾರೆ, ಅಳಿಯನಿಗೆ ಎಲ್ಲ ರೀತೀಯ ತಿಂಡಿ ತಿನಿಸು ಗಳನ್ನು ಬಡಿಸಿದರು. ಆದರೆ ಅಳಿಯನಿಗೆ ಇಷ್ಟವಾದಂತಹ ಹೋಳಿಗೆಯನ್ನೇ    ಬಡಿಸ ಲಿಲ್ಲ  ಅಳಿಯನಿಗೆ  ನೇರವಾಗಿ   ಹೋಳಿಗೆ ಬಡಿಸಿಲ್ಲ ಎನ್ನಲು ಮುಜುಗರ. ಆಗ ಒಂದು ಅಳಿಯ ಉಪಾಯ ಮಾಡಿದ.“ಮಾವ   ನಾನು   ಬರುವಾಗ   ಏನಾಯ್ತು ಗೊತ್ತಾ?  ಮಟ  ಮಟ    ಬಿಸಿಲಲ್ಲಿ  ನಡೆದು ಕೊಂಡು  ಬರ್ತಿದ್ನ, ಅಲ್ಲಿ  ನದಿ  ಹತ್ತಿರ  ಬರ ಬೇಕಾದ್ರೆ ನನ್ನೆದುರು ಒಂದು ದೊಡ್ಡ ಹುಲಿ ಎಷ್ಟು ಹತ್ತಿರದಲ್ಲಿ ಇತ್ತು ಅಂದ್ರೇ ನಾನು ಕೂತಿದ್ದೀನಲ್ಲ ಅಲ್ಲಿಂದ ಅಕೋ ಅಲ್ಲಿ ಹೋಳಿಗೆಯ ಪಾತ್ರೆ ಇಟ್ಟಿದ್ದಿರಲ್ಲ ಅಷ್ಟು ದೂರದಲ್ಲಿ ಇತ್ತು” ಅಂದ ಕೂಡಲೇ ಮಾವ “ಅಯ್ಯೋ ಅಳಿಯಂದ್ರಿಗೆ ಹೋಳಿಗೆಯೇ ಬಡಿಸಿಲ್ಲವಲ್ಲ”ಬಡಿಸಿ ಬಡಿಸಿ ಎಂದು ಬಡಿಸಿ ದರು.ಆಮೇಲೆ ಏನಾಯ್ತು ಅಳಿಯಂದ್ರೆ?” ಎಂದು ಮಾವ ಕೇಳಿದರು. “ಏನಿಲ್ಲ ಅದರ ಪಾಡಿಗೆ ಅದು ಹೋಯ್ತು ನನ್ನ ಪಾಡಿಗೆ ನಾ ಬಂದೆ,ಬಿಸಿಲು ಅಲ್ವಾ ಹುಲಿ ನೀರುಕುಡಿಲಿಕ್ಕೆ ಬಂದಿತ್ತು   ಅನ್ಸುತ್ತೆ ಪಾಪ’ ಎಂದು   ತನ್ನ ಉಪಾಯ ಫಲಿಸಿತು ಎಂದು ಮುಗುಳ್ನಗುತ್ತ ಹೋಳಿಗೆ ತಿಂದನು.’ನಾವೆಲ್ಲ ಕುತೂಹಲದಿಂದ ‘ಹುಲಿ ಏನು ಮಾಡಿತು’?ಎಂದು ಕಣ್ಣು ಬಾಯಿ ಬಿಟ್ಟು ಈ ಕಥೆಯನ್ನ ಕೇಳಿ ಕೊನೆಗೆ ನನಗೂ ಹೋಳಿಗೆ ತಿನ್ನಬೇಕು ಎಂದು ಎನಿಸಿ ಪೀಡಿಸಿ ,ಮಾಡಿ ತಿಂದೇ ಬಿಟ್ಟೆ ನೋಡಿ…

                    🔆🔆🔆
✍️ಹರ್ಷಿತ ಹೆಬ್ಬಾರ್.
ಎಸ್.ಡಿ.ಎಂ.ಕಾಲೇಜು.ಉಜಿರೆ