ಗೊತ್ತು,ಗುರಿಯಿಲ್ಲದೇತಿರುಗುವ
ಸುಂದರ,ಸರಿಯಿಲ್ಲದ ಗಡಿಯಾರ.
ಎರಡು ಒಂದಾಗಿ,ಒಮ್ಮೊಮ್ಮೆ    
ನಾಲ್ಕು ಎಂಟಾಗಿ,            
ಲೆಕ್ಕ-ತಪ್ಪಿದಾಗ ಬದುಕು ದುರ್ಭರ.

ಮನಸ್ಸು ಚಂಚಲ,ಕನಸು
ಚಿಗುರಿ,ಹೂವಾಗುವದಿಲ್ಲ,
ಕಾಯಾಗಿ,ಹಣ್ಣಾಗುವದಿಲ್ಲ,
ನಳ,ನಳಿಸುವದಿಲ್ಲ ನನಸಲ್ಲಿ.

ಲಗಾಮು ಇಲ್ಲದ ಕುದುರೆ
ದಿಕ್ಕಾಪಾಲು ನೆಗೆದಂತೆ
ಅಸ್ತವ್ಯಸ್ತ,ಜೀವನದಾಟ.

ಸರಿಯಿಲ್ಲದ ಗಡಿಯಾರ ಶಕ್ತಿಯಿಲ್ಲದೆ,ನಿಶ್ಚಲವಾಗುವ
ಮೊದಲು, ಸರಿಯಾಗಿಸಬೇಕು,
ಮನಸಿನ ತುಂಬ
ಸುಂದರ ಕನಸ,ಚಿಗುರಿಸಬೇಕು,
ಮೊಗ್ಗು ಹೂವಾಗಿಸಬೇಕು, ಕಾಯಿ,ಹಣ್ಣಾಗಿಸಬೇಕು,
ನನಸಲ್ಲಿ ಬದುಕು ಕಣ್ಮನ ಸೆಳೆವ…. ನಂದನವಾಗಿಸಬೇಕು…..!

                     🔆🔆🔆

   ✍️ಅಬ್ಳಿ ಹೆಗಡೆ.ಹೊನ್ನಾವರ