Walter Whitman ಅಮೇರಿಕಾದ  ಪ್ರಸಿದ್ಧ ಕವಿ, ಪ್ರಬಂಧಕಾರ,  ಹಾಗೂ  ಪತ್ರಕರ್ತ. ಅವನ Animal. ಎಂಬ  ವಿಶಿಷ್ಟ ಕವನದ ಭಾವಾನುವಾದ.

Born: 31 May 1819, United States

Died: 26 March 1892, United States

Poems: Leaves of Grass, Song of Myself,O Captain! My Captain!,  I Sing the Body Electric, ಇತ್ಯಾದಿ.

  ಮೃಗಗಳು

ನಾ ಮೃಗವಾಗಿ ಇರಬಲ್ಲೆ ಅವುಗಳೊಡನೆ, ಎನಿತು ಶಾಂತ ಮತ್ತು ಸಂತೃಪ್ತ ಅವು ಎನಿಸಿ ನಿಂತು ನಿರಂತರವಾಗಿ ದಿಟ್ಟಿಸುವೆ ಅವುಗಳನೆ.

ಅವುಗಳೆಂದೂ ತಮ್ಮ  ಸ್ಥಿತಿಯ ಬಗ್ಗೆ ದೂರುವುದಿಲ್ಲ,
ಇರುಳಿನಲೆದ್ದು ತಮ್ಮ ಪಾಪಕರ್ಮಗಳಿಗಾಗಿ ಅಳುವುದಿಲ್ಲ,
ದೈವ ಸೇವೆಯ ಬಗ್ಗೆ ಚರ್ಚಿಸಿ ನನ್ನ ಸತಾಯಿಸುವುದಿಲ್ಲ.

ಒಂದು  ಮೃಗವೂ  ಅತೃಪ್ತವಾಗಿಲ್ಲ,
ಒಂದಕ್ಕೂ ವಸ್ತುಗಳ ಹೊಂದುವ ಹುಚ್ಚಿಲ್ಲ ಒಂದು ಇನ್ನೊಂದಕ್ಕೆ ಅಥವಾ ಸಾವಿರಾರು ವರ್ಷಗಳ ಹಿಂದಿದ್ದ ತನ್ನಂತ ಜೀವಿಗೆ ಮಂಡಿಯೂರುವುದಿಲ್ಲ.
ಒಂದೂ ಈ ಭೂಲೋಕದಲಿ ಗೌರವ  ಬಯಸುವುದಿಲ್ಲ,
ಅಥವಾ ಅಸಂತುಷ್ಟವೂ ಅಲ್ಲ.


ಹಾಗಾಗಿ ಅವು ನನ್ನೊಂದಿಗಿನ ಬಾಂಧವ್ಯವ. ತೋರಿಸಿಕೊಟ್ಟಾಗ ನಾನದ ಒಪ್ಪುವೆ,
ತಾವು  ನಾನಾಗಿರುವ ಕುರುಹ  ಅವು  ಕಾಣಿಸುವವು,
ಆ  ಕುರುಹುಗಳು   ತಮ್ಮಲ್ಲಿರುವುದ    ಎತ್ತಿ ತೋರುವವು
ಸೋಜಿಗವೆಂದರೆ ಆ ಕುರುಹುಗಳ ಎಲ್ಲಿಂದ ತರುವವೋ?

ಆ ದಾರಿಯ ನಾ ಬಹು ಹಿಂದೆಯೇ ಹಾದು ಬಂದಿರುವೆನೆ,
ಅಥವಾ ನನ್ನ ಅಲಕ್ಷ್ಯದಿಂದಾಗಿ ಬಿಟ್ಟು ಬಿಟ್ಟಿ ರುವೆನೆ?

           

Animal

                   🔆🔆🔆

✍️ಆಂಗ್ಲ:ವಾಲ್ಟ್ ವಿಟ್ ಮ್ಯಾನ್ ಕನ್ನಡಕ್ಕೆ:ಕವಿತಾಹೆಗಡೆಅಭಯಂ,   ಹುಬ್ಬಳ್ಳಿ