ಪರಿಸರ ಎಂದರೆ ನಾವು ಜೀವಿಸುವ ಈ ವಾತಾವರಣ. ಸ್ವಚ್ಚ ಸುಂದರ ಶುದ್ಧ ವಾತಾ ವರಣದಲ್ಲಿ ಮೈಮನಗಳಲ್ಲಿ ಧನಾತ್ಮಕ ಚಿಂತನೆಗಳು ತಾವಾಗಿ ವಿಜೃಂಭಿಸುತ್ತದೆ. ಆದರೆ ಅದು ಈಗ ಸಾಧ್ಯವಾಗುತ್ತಿದೆಯೇ? ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾ ನಗಳಲ್ಲಿನ ಕೈಗಾರಿಕಾ ಕ್ರಾಂತಿ ಮಾನವನ ಬದುಕಿನ  ಇತಿಹಾಸದಲ್ಲಿ   ಮಹತ್ವದ ಘಟನೆ.. ಯಂತ್ರಗಳ, ರಾಸಾಯನಿಕಗಳ ಆವಿಷ್ಕಾರ ನಗರೀಕರಣಗಳಂತಹ ಬದಲಾ ವಣೆಗಳು ಜಗತ್ತನ್ನು ಮುನ್ನಡೆಸಿದವೇನೋ ನಿಜ. ಆದರೆ ಅವುಗಳ ಪಾರ್ಶ್ವ ಪರಿಣಾಮ ನೇರ ಆದದ್ದು ಪರಿಸರದ ಮೇಲೆ. ಕಾರ್ಖಾ ನೆಗಳ  ತ್ಯಾಜ್ಯವೆಲ್ಲಾ  ನದಿ   ಸಮುದ್ರಗಳ ಪಾಲು.ಜಲಮಾಲಿನ್ಯಕ್ಕೆ ಇನ್ನೇನು ಉಳಿದಿದೆ?ಹೀಗೆ ಪ್ಲಾಸ್ಟಿಕ್ ಉಪಯೋಗವಂತೂ ಹೆಚ್ಚು ಹೆಚ್ಚಾಗಿ ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯಗಳ ಸಾಮ್ರಾಜ್ಯ.ಜಲ ವಾಯು ಹಾಗೂ ಶಬ್ಧ ಮಾಲಿನ್ಯಗಳ ಹೆಚ್ಚಳದಿಂದಾಗಿ ಪೃಥ್ವಿ ಇಂದು ಕಸದ ಗೂಡಾಗಿದ್ದಾಳೆ. ಸಾಗರಗಳು ಮಲಿನ ವಾಗಿವೆ.  ಭೂಮಿಯನ್ನು    ರಕ್ಷಿಸುತ್ತಿದ್ದ ಓಝೋನ್ ಪದರ ಹರಿದು ಛಿದ್ರವಾಗಿದೆ.“ಹಸಿರುಮನೆ ಪರಿಣಾಮ” ಗಳಿಗೆ ತುತ್ತಾಗಿ ದ್ದೇವೆ. ಮಿತಿಮೀರಿದ ದುರಾಸೆಯಲ್ಲಿ ಗಣಿ ಗಾರಿಕೆಗಳು ನಡೆದು ವಸುಂಧರೆಯ ಒಡಲು ಬರಿದು.ಭೂಸವೆತ, ಮಣ್ಣಿನ ಸವೆತ, ಕಾಡಿನ ನಾಶ  ಇವುಗಳಿಂದ  ಪ್ರವಾಹ, ಸುನಾಮಿ, ಬೆಟ್ಟ ಕುಸಿತ, ಭೂಕಂಪಗಳಂತಹ ಘೋರ ಪರಿಣಾಮಗಳನ್ನು ಎದುರಿಸಬೇಕಾಗಿದೆ.
ಈ ಎಲ್ಲ ಸ್ಥಿತಿಗಳಿಗೆ ಕಾರಣವನ್ನು ಅರಿತ ಚಿಂತಕರು ಈ ಬಗ್ಗೆ ಎಷ್ಟೇ ತಿಳಿಸಿಹೇಳಿದರೂ ಪ್ರಯೋಜನ ಮಾತ್ರ ಶೂನ್ಯ.

ಮನುಷ್ಯ  ಹೇಗೆ  ಸಮಾಜಜೀವಿಯೋ ಅಂತೆಯೇ ಪರಿಸರದ ಶಿಶುವೂ ಸಹ. ಈ ಅಗತ್ಯತೆಯನ್ನು  ನಮ್ಮ  ಹಿಂದಿನವರು ಅರಿತು ಅಳವಡಿಸಿಕೊಂಡಿದ್ದರಿಂದಲೇ ನಿಸರ್ಗದ ಒಡನಾಟದಲ್ಲಿ ಬೆಳೆದು ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತಿದ್ದರು. ಇದೀಗ ಹೆಚ್ಚುತ್ತಿರುವ ಅನಾರೋಗ್ಯ ದಿನ ಕ್ಕೊಂದರಂತೆ ಹುಟ್ಟಿಕೊಳ್ಳುತ್ತಿರುವ ನಾಯಿ ಕೊಡೆಯಂತೆ ಬೆಳೆಯುತ್ತಿರುವ ವೈರಸ್ ಸೋಂಕು ಆಧಾರಿತ ರೋಗಗಳ ಹಿನ್ನೆಲೆ ಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಮತ್ತಷ್ಟು ಹೆಚ್ಚಿವೆ.

ಈ ಸಂದರ್ಭದಲ್ಲಿ ಒಂದು ವಿಷಯ ನೆನಪಿಗೆ ಬರುತ್ತದೆ. ೨೫-೩೦ ವರ್ಷಗಳ ಹಿಂದೆ ಕೆರೆ, ತೊರೆ, ನದಿ, ನಲ್ಲಿ ಯಾವ ನೀರನ್ನಾದರೂ ಹಾಗೆಯೇ ಕುಡಿಯಲು ಉಪಯೋಗಿಸುತ್ತಿ ದ್ದೆವು. ನೀರನ್ನು ಒಯ್ಯುವ ಅಭ್ಯಾಸವೇ ಇರಲಿಲ್ಲ, ಆದರೆ ಈಗ ಹೇಗೆ ಬದಲಾಗಿದೆ ನೋಡಿ. ಮುಂದೆ ಆಮ್ಲಜನಕದ ಸಿಲಿಂಡರ್ ಅನ್ನು ಬೆನ್ನಿಗೆ ಕಟ್ಟಿಕೊಂಡು ಓಡಾಡುವ ದಿನವೂ ಬರಬಹುದು.ಈಗಲಾದರೂ ಎಚ್ಚೆ ತ್ತುಕೊಂಡು ಪರಿಸರದ ಬಗ್ಗೆ ನಾವು ಕಾಳಜಿ ವಹಿಸಲೇ ಬೇಕಾಗಿದೆ.ಪರಿಸರ ದಿನ ಎಂದು ಆಚರಿಸಬೇಕಾಗಿ ಬಂದ ದೌರ್ಭಾಗ್ಯವನ್ನು ನೆನೆಸಿಕೊಂಡರೆ ತುಂಬಾ ದುಃಖವಾಗುತ್ತದೆ. ನಾವೆಲ್ಲ  ಚಿಕ್ಕವರಿದ್ದಾಗ   ಸುತ್ತಮುತ್ತೆಲ್ಲ ಹಸಿರು.ಪ್ಲಾಸ್ಟಿಕ್ ಹೆಸರೇ ಇರಲಿಲ್ಲ.ಪರಿಸರ ಎಷ್ಟು ಚೆನ್ನಾಗಿತ್ತು.ಬರುಬರುತ್ತಾ ಸೌಲಭ್ಯ ಗಳು ಹೆಚ್ಚಿದಂತೆ ಎಲ್ಲ ರೀತಿಯ ಮಾಲಿನ್ಯ ಗಳು ಹೆಚ್ಚಾಗುತ್ತಿದೆ.

ಜೂನ್ ತಿಂಗಳು ವಿಶೇಷವಾಗಿ ಪರಿಸರ ಸಂರಕ್ಷಣೆಯ ಮಹತ್ವ ವಿಶ್ವಸಂಸ್ಥೆ 1972ನೇ ಇಸವಿಯಿಂದ ಈ ಜೂನ್ ತಿಂಗಳ 5ನೇಯ ತಾರೀಖನ್ನು ಪರಿಸರ ಸಂರಕ್ಷಣಾ ದಿನ ಎಂದು ಘೋಷಿಸಿದೆ. ಅರಣ್ಯಗಳ ಸಂರಕ್ಷಣೆ ವನಮಹೋತ್ಸವಗಳು ಬರಿ ಹೆಸರಿಗಷ್ಟೆ ಅಲ್ಲದೆ ಆಚರಣೆಯಲ್ಲೂ ನಡೆಯುವಂತಾಗ ಬೇಕು. ಸಂಘ ಸಂಸ್ಥೆ ಸಹ ಸರಕಾರಗಳು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿವೆ ವೈಯುಕ್ತಿಕ ನೆಲೆಯಲ್ಲಿ ನಾವು ಜವಾಬ್ದಾರಿಯುತ ನಾಗ ರಿಕರಾಗಿ ನಮ್ಮ ಕೈಲಾದಷ್ಟು  ನಮ್ಮ ದೇಣಿಗೆ ನೀಡೋಣ. ಮುಂದಿನ ಪೀಳಿಗೆಗೆ ಶುಭ್ರ ಸುಂದರ  ಸ್ವಚ್ಛ  ಪರಿಸರವನ್ನು   ಬೆಳೆಸಿ ಉಳಿಸಿ ಹೋಗೋಣ. ಏನಂತೀರಿ?

ಈ ನಿಟ್ಟಿನಲ್ಲಿ ನನ್ನ ಕೆಲ ಅಭ್ಯಾಸಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

1)ಮೊದಲಿಗೆ ಪ್ಲಾಸ್ಟಿಕ್ ಸಂಪೂರ್ಣನಿಷೇಧ. ಸದಾ   ಒಂದು   ಬಟ್ಟೆಯ ಚೀಲ   ಇಟ್ಟು ಕೊಂಡು ಅಂಗಡಿಯವರು ಕೊಡುವ ಪ್ಲಾಸ್ಟಿಕ್ ಚೀಲಗಳನ್ನು ನಿರಾಕರಿಸುತ್ತೇನೆ.

2)ಎರಡನೆಯದಾಗಿ  ವಾಹನಗಳ     ಉಪ ಯೋಗವನ್ನು ಆದಷ್ಟು ಕಡಿಮೆ ಮಾಡಿ ನಡೆಯುವ   ಅಭ್ಯಾಸ.  ಇದನ್ನು   ಬೆಳೆಸಿ ಕೊಂಡರೆ ವ್ಯಾಯಾಮಕ್ಕೂ ವ್ಯಾಯಾಮ ಮಾಲಿನ್ಯವೂ ಕಡಿಮೆ ಕಿಸೆಗೂ ಲೇಸು .😁😁😁

3)ನೀರಿನ ವಿವೇಕಯುತ ವಿವೇಚನಾಯುತ ಬಳಕೆ ಮತ್ತು ಪೋಲಾಗುವುದನ್ನು ಕಡಿಮೆ ಮಾಡುವುದು ಹಾಗೆ ಗಿಡಗಳಿಗೆ ಬೇಕಾದ ನೀರಿಗೆ ಬಟ್ಟೆ ಜಾಲಾಡಿಸಿದ ನೀರು ಅಕ್ಕಿ ತೊಳೆದ ನೀರು ತರಕಾರಿ ತೊಳೆದ ನೀರು ಇಂಥವುಗಳನ್ನು ಉಪಯೋಗಿಸುವುದು.


4)ಹುಳಿ ಮಜ್ಜಿಗೆ ಉಳಿದ ಸಾರು ಸಾಂಬಾರು ಇವುಗಳನ್ನು ಗಿಡದ ಗೊಬ್ಬರವಾಗಿ ಬಳಸು ವುದು ಮೂಲೆಯಲ್ಲೊಂದು ಗುಂಡಿ ಮಾಡಿ ತರಕಾರಿ ಸಿಪ್ಪೆ ನಿರ್ಮಾಲ್ಯದ ಹೂ ಹಾಗೂ ಇನ್ನಿತರ  ಜೈವಿಕ  ಕಸಗಳನ್ನು  ಗೊಬ್ಬರ ಮಾಡಿ ಗಿಡಗಳಿಗೆ ಉಪಯೋಗಿಸುವುದು.

5) ಇರುವಷ್ಟು   ಜಾಗದಲ್ಲಿಯೇ    ಮತ್ತು ಕುಂಡಗಳಲ್ಲಿಯೂ ಬೇಕಾದ ಹೂವು ತರ ಕಾರಿಯ ಗಿಡಗಳನ್ನು ಹಾಕಿಕೊಂಡರೆ ಕ್ರಿಮಿ ನಾಶಕಗಳಿಲ್ಲದ ತರಕಾರಿ ಸೊಪ್ಪು ನಮಗೆ ಬಳಕೆಗೆ ಸಿಗುತ್ತದೆ. ಅವುಗಳನ್ನು ಬಂಧು ಮಿತ್ರರಿಗೆ   ಹಂಚಿದಾಗ   ಸಂತೋಷವೂ ಇಮ್ಮಡಿ.

ಮನೆ ಗೆದ್ದು ಮಾರುಗೆಲ್ಲು ಎನ್ನುವಂತೆ ಮನೆಯಲ್ಲಿನ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಇಂತಹ ವಿಧಾನಗಳನ್ನು ಕಲಿಸಿ ದರೆ ಪರಿಸರ ಸಂರಕ್ಷಣೆಯ ಮೊದಲನೆಯ ಹೆಜ್ಜೆ ಇಟ್ಟಂತೆ ಅಲ್ಲವೇ? “ಧರ್ಮೋ ರಕ್ಷತಿ ರಕ್ಷಿತಃ” ಎನ್ನುವಂತೆ ಪ್ರಕೃತಿಯನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.ಬನ್ನಿ ಪ್ರಕೃತಿಯನ್ನು ಉಳಿಸೋಣ ನಾವೂ ಉಳಿ ಯೋಣ. ಇದೇ ನಾವು ನಮ್ಮ ಮುಂದಿನ ತಲೆಮಾರಿಗೆ ಉಳಿಸಿ ಹೋಗಬಹುದಾದ ಬಳುವಳಿ.

ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

                 🔆🔆🔆
✍️ಸುಜಾತಾ ರವೀಶ್,ಮೈಸೂರು