ನಿನ್ನ ಮೊಗವು ತೋರದೆ ಕವಿತೆ ಬರೆಯಲಿ ಹೇಗೆ
ನಿನ್ನ ನಗುವು ಮೂಡದೆ ಕವಿತೆ ಬರೆಯಲಿ ಹೇಗೆ

ನಿನ್ನ ಕಂಗಳಲಿ ಸಾವಿರಾರು ತಾರೆಗಳ ಹೊಳಪು
ನಿನ್ನ ಚೆಲುವು ಕಾಡದೆ ಕವಿತೆ ಬರೆಯಲಿ ಹೇಗೆ

ಇಲ್ಲಿ ಸುತ್ತೆಲ್ಲ ಕತ್ತಿ ಮಸೆಯುವ ದುಶ್ಮನರೇ ಹೆಚ್ಚು
ನಿನ್ನ ಮೌನವು ಮಾತಾಗದೆ ಕವಿತೆಬರೆಯಲಿ ಹೇಗೆ

ಕಾಲಗರ್ಭದಲಿ ಕಳೆದು ಹೋಗಿದೆ ಕಹಾನಿ ಒಂದು
ನಿನ್ನ ವಿಷಾದವು ತಾಗದೆ ಕವಿತೆ ಬರೆಯಲಿ ಹೇಗೆ

ಸುಂದರ ಸಂಜೆ ಮುಂಜಾವಿಗೂ ಕರೋನಾ ಕಾಟ
ನಿನ್ನ ಸುಳಿವು ತಾರದೆ ಕವಿತೆ ಬರೆಯಲಿಹೇಗೆ

ದ್ವೇಷ ತುಂಬಿದ ಜಗದಲಿ ಬದುಕಲೇಬೇಕು ಪೀರ
ನಿನ್ನ ಒಲುವು ಕಾಣದೆ ಕವಿತೆ ಬರೆಯಲಿ ಹೇಗೆ

                     🔆🔆🔆
✍️ಅಶ್ಫಾಕ್ ಪೀರಜಾದೆ.       ಧಾರವಾಡ