ಮೋದಾಳಿ ಎಂಬವಳು ಸೂರದತ್ತ ಮತ್ತು ವಸುದತ್ತೆ ಎಂಬವರ ಮಗಳು. ಮೋದಾಳಿ ಯು ತಾಯಿಯ ಗರ್ಭದಲ್ಲಿ ಇದ್ದಾಗಲೇ ತಾಯಿಯು ನನಗೆ ಹೆಣ್ಣು ಮಗು ಜನನವಾ ದರೆ ಅಣ್ಣ ನಿನ್ನ(ಮಾವನ ಮಗ) ಮಗನಾದ ನಂದನಿಗೆ ಮದುವೆ ಮಾಡಿಕೊಡಲು ಸಿದ್ದಳಿ ರುತ್ತೇನೆ ಎಂದು ಇಬ್ಬರು ಪರಸ್ಪರ ನಿರ್ಧಾರ ಮಾಡಿಕೊಳ್ಳುತ್ತಾರೆ. ಆಗ ಜನ್ಮ ಪಡೆದ ಮೋದಾಳಿಗೆ ನಂದನೊಂದಿಗೆ ಮದುವೆ ಮಾಡುವುದು ಖಚಿತವಾಯಿತು. ಕಾಲಾಂತ ರದಲ್ಲಿ ನಂದನು “ಕುಡುವಮೆಂದು ನುಡಿದರಿಂತು ಕಾಲಂ ಸಲೆ ನಂದನೊಂದು ದಿವಸಂ ದ್ರವ್ಯೆಂಬಡೆವುದು ಕಾರಣಮಾಗಿ ಸುವರ್ಣ ದ್ವೀಪಕ್ಕೆ ವೋಗುತ್ತಂ ಮಾಮಂಗೆದಂ ಪನ್ನೆರಡು ವರುಷಕ್ಕಾಂ ಬಾರದಾಗಳ್ ಎಮ್ಮ ಕಿರಿಯ ತಮ್ಮಂ ಬೋದಂಗೆ ಕೂಸಂ ಕುಡಿಮೆಂದು ಪೇಳ್ದು ಪೋದಂ ಬಂದನಿಲ್ಲೆಂದು ಕೂಸಂ ಬೋದಂಗೆ ಕೈನೀರೆರೆದು ಕುಡುವ ಪ್ರಸ್ತಾವಕ್ಕಾಗಳ್ ನಂದಂ ಬಂದೊಡ…,..” ಈ ರೀತಿಯಾಗಿ ದೇಶಾಂತರಕ್ಕೆ ಹೋದ ನಂದನು ಸಕಾಲಕ್ಕೆ ಬಾರದಿರಲು ಬೋದನಿ ಗೆ ಮದುವೆಯ ಸಿದ್ಧತೆಗಳು ನಡೆದವು. ಮದುವೆಯ ದಿನವೇ ನಂದನು ಹಿಂದುರಿಗಿ ದನು. ತಮ್ಮನೇ ಮದುವೆಯಾಗಲಿ ಎಂದು ನಂದ ಹೇಳುತ್ತಾನೆ. ಅಣ್ಣನೇ ಮದುವೆಯಾ ಗುವುದು ಯೋಗ್ಯವೆಂದು ಬೋದ ಹೇಳು ತ್ತಾನೆ. ಇವರಿಬ್ಬರ ಮಾತುಗಳ ಮಧ್ಯದಲ್ಲಿ ಒಂದು ಹೆಣ್ಣಿನ ಭವಿಷ್ಯವಿದೆಂದು ತಿಳಿಯ ಲಿಲ್ಲ. ಮೋದಾಳಿಯ ಸ್ಥಿತಿ ಹೇಗಾಗಿರಬೇಕು.
ಕೊನೆಗೆ ಇವರಿಬ್ಬರು ಆಕೆಯನ್ನು ಮದುವೆ ಯಾಗುವುದಿಲ್ಲ. ಇಬ್ಬರು ಮದುವೆಯಾಗದೆ ಇದ್ದಾಗ ಮೋದಾಳಿಯು ತಾಯಿಯ ಮನೆ ಯಲ್ಲಿ ಇದ್ದಳು.ಆ ಪಟ್ಟಣದ ವರ್ತಕನ ಮಗನಾದ ನಾಗಸೂರ ಅವನಿಗೆ ಈಗಾಗಲೇ ಎಂಟು ಜನ ಹೆಂಡತಿಯರು ಇದ್ದರು ಕೂಡ ಮೋದಾಳಿಯ ಮೇಲೆ ಮನಸ್ಸಾಗಿ ಆಕೆ ಯೊಂದಿಗೆ ಸೇರುತ್ತಾನೆ.
ಊರ ಜನರಿಗೆ ತಿಳಿದ ನಂತರ ಅರಸನು ಅವರಿಬ್ಬರಿಗೆ ಕಾದ ಕಬ್ಬಿಣದ ಪ್ರತಿಮೆಗಳಿಗೆ ಅಪ್ಪುವಂತೆ ಆಜ್ಞೆ ಮಾಡುತ್ತಾನೆ.ಯಾವುದೇ ತಪ್ಪು ಮಾಡದ ಮೋದಾಳಿಗೆ ಎಂತಹ ಶಿಕ್ಷೆ? ನಂದ ಮತ್ತು ಬೋದ (ಅಣ್ಣ ಮತ್ತು ತಮ್ಮ) ಇಬ್ಬರು ಮದುವೆಯಾಗದೇ ಇದ್ದಾಗ ಹಸೆ ಮಣಿಯಿಂದ ಕೆಳಗಿಳಿದ ಮೋದಾಳಿ ದಾಂಪ ತ್ಯದ (ಪ್ರೀತಿ) ಸುಖವನ್ನು ಕಾಣದೇ, ನಾಗ ಸೂರನ ಕಾಮಕ್ಕೆ ಬಲಿಯಾದ ಆಕೆಗೆ ದೊರಕಿದ್ದು ಸಾವು. ಸೋದರ ಮಾವನ ಮಗನ ಮೇಲೆ ಇಟ್ಟ ಪ್ರೀತಿಗೆ ಸಿಕ್ಕ ಪ್ರತಿಫಲ ವಾಗಿದೆ.ಕುಟುಂ ಬಗಳಲ್ಲಿ ಹೆಣ್ಣನ್ನು ಒಂದು ಗಾಳದ ರೂಪದಲ್ಲಿ ಬಳಸಿಕೊಂಡಿದ್ದೆ ಹೆಚ್ಚು.
ಕಾರ್ತಿಕ ಋಷಿಯಕಥೆಯಲ್ಲಿ ಸಖ್ಯವು ಅದು ದೈವದತ್ತದಂತೆ ಎಂದು ಭಾವಿಸಿಕೊ ಳ್ಳುವುದು ಕಷ್ಟದ ಸಂಗತಿ. ಸಂಬಂಧಗಳು ಕೇವಲ ನಮ್ಮ ವಿವೇಕಕ್ಕೆ ಮಾತ್ರ ಸಂಬಂಧಿ ಸಿದ್ದು ಎಂದು ಭಾವಿಸುವ ಅಗ್ನಿರಾಜನ ಕುರುಡು ಪ್ರೀತಿ, ಮೋಹ ಮತ್ತು ಕಾಮ ಯಾವ ಬಗೆಯದ್ದು ಎಂದು ಪರಿಗಣಿಸಿಕೊ ಳ್ಳುವುದು ಮತ್ತೊಂದು ಸಂಗತಿ.ಒಡೆಯನಾದ ಮಾತ್ರಕ್ಕೆ ಈಡೀ ರಾಜ್ಯದ ಎಲ್ಲಚರಾಚರ ವಸ್ತು ಪ್ರಾಣಿಗಳೆಲ್ಲ ನನಗೆ ಸಂಬಂಧಿಸಿದ್ದೆಂದು ತಿಳಿದು ದರ್ಪ ಮೂರ್ಖ ನಾದ ಅರಸ. ಅರಿವೇ ಇಲ್ಲವೆನ್ನುವಂತೆ ತನ್ನ ರೇತಸ್ಸಿನಿಂದ ಜನಸಿದ ಮಗಳನ್ನೇ ಮೋಹಿ ಸುವುದೇಂದರೆ? ಮದುವೆಯಾಗುವುದೆಂದ ರೆ? ಜೊತೆಗೆ ಮಕ್ಕಳನ್ನು ಪಡೆಯುವುದೆಂದ ರೇ?ಈ ರೀತಿಯ ಸಂಬಂಧಗಳು ಕುಟುಂಬ ವನ್ನು ನಾಶ ಮಾಡಿದ್ದುಂಟು. ನಮ್ಮ ಭಾರತೀಯ ಪರಂಪರೆಯಲ್ಲಯೇ ಬಹು ಅಮಾನವೀಯ ಪ್ರಶ್ನೆ ಹುಟ್ಟುಹಾಕಿದೆ. ಅಗ್ನಿ ರಾಜನಾದರೂ ಅಗ್ನಿಯಂತೆ ಸರ್ವಭಕ್ಷಕ, ತೀರದ ದಾಹ, ಹಿಂಗದ ಹಸಿವು, ಆತನು ಮಹಾಕಾಮಿ ಎಂದು ವಡ್ಡಾರಾಧನೆ ಕಾರ ಕಥೆಯಲ್ಲಿ ಬಿಂಬಿಸುವ ವೈದೃಶ್ಯಗಳು, ಪರಿಣಾಮವನ್ನು ಉಂಟುಮಾಡುತ್ತವೆ. ಆ ಕಾಲಕ್ಕೆ ಇಂತಹ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿ ಕುಟುಂಬದಲ್ಲಿ ಇದ್ದನು ಎಂದರೆ ನಂಬಲು ಕಷ್ಟಕರವಾಗುತ್ತದೆ. ಭಾರತದೇಶ ದಲ್ಲಿ ಇಂತಹ ಮನೋಕಲ್ಪನೆಗಳು ಬೇರು ಬಿಟ್ಟಿದ್ದವು ಎನ್ನುವುದಕ್ಕೆ ವಡ್ಡಾರಾಧನೆ ಕೃತಿ ಸಾಕ್ಷಿಯಾದಂತಾಗಿದೆ.
“ಬೆಸಗೊಂಡೊಡರ್ವರ್ಗ್ಗಳೆಲ್ಲ ಮಿಂತೆದರೊಳ್ಳಿತಪ್ಪಾನೆಯುಂ ಕುದುರೆಯುಂ ಮುತ್ತುಂ ಮಾಣಿಕಮುಂ ಸ್ತ್ರೀರತ್ನಮುಂ ಮೊದಲಾಗೊಳ್ಳಿತಪ್ಪಗ್ಗಳ ವಸ್ತವೆಲ್ಲಂ ಪೃಥ್ವಿಯನಾಳ್ವೊಂಗಕ್ಕೊಯ್”
ಎಂದು ಹೇಳುವ ಆಸ್ತಾನದ ಮಾಂಡಳಿಕರು ಮತ್ತು ಸಾಮಂತರ ಆ ಅರಸನ ಅಂತರಂಗ ವನ್ನು ಅರಿಯುವುದಿಲ್ಲ. ಆದರೇ ಋಷಿಗಳು ಮಾತ್ರ ನೀವು ಯಾವ ಬಗೆಯಲ್ಲಿ ಈ ರೀತಿಯ ಪ್ರಶ್ನೆ ಕೇಳುತ್ತೀರು ವಿರೆಂದು ತಿಳಿಸಿದರೆ ನಾವು ಯೋಗ್ಯವಾದ ಉತ್ತರವನ್ನು ವಿವರಿಸುವೆವು ಎಂದಾಗ, ಮತಿಹೀನನಾದ ರಾಜ ಆ ಮುನಿಗಳನ್ನು ಆ ರಾಜ್ಯದಿಂದ ಹೊರಹಾಕುತ್ತಾನೆ.ಸಾರ್ವಜ ನಿಕ ಒಪ್ಪಿಗೆ ಸಿಕ್ಕ ಮೇಲೆ ರಾಣಿಯಾದ ವೀರಮತಿಯೂ (ಅಗ್ನಿರಾಜನ ಮಡದಿ) ಕೂಡ ಒಪ್ಪಲೇಬೇಕಾಯಿತು.ರಾಣಿಯಾದ ವೀರಮತಿಗೆ ಒಂದು ಕಡೆಗೆ ಮಗಳು; ಮತ್ತೊಂದು ಕಡಗೆ ಪತಿ ಇವರಿಬ್ಬನ್ನು ಹೇಗೆ ಎದುರಿಸಿರಬೇಕು?ರಾಜ ಮನೆತನಗಳಲ್ಲಿ ಬಹುಪತ್ನಿತ್ವ ಸಾಮಾನ್ಯವಾಗಿತ್ತು ನಿಜ.
ಆದರೆ, ತನ್ನ ಮಗಳನ್ನೇ ಮದುವೆಯಾಗು ವಂತಹ ಗತಿಯಾದರೂ ಯಾವುದು? ಅಸ ಹಾಯಕಳಾದ ವೀರಮತಿಯು ದಿಕ್ಕರಿಸು ವಂತಹ ಎದುರಿಸುವಂತಹ ಯಾವ ಅವಕಾ ಶಗಳು ಸಿಗಲಿಲ್ಲ. ಕೊನೆಗೆ ವಿಧಿಯಿಲ್ಲದೆ ಕೃತ್ತಿಕೆ ಅಸಾಹಾಯಕಳಂತೆ ತನ್ನನ್ನು ಎತ್ತಿ ಆಡಿಸಿದ ಆ ಕೈಗಳಿಂದಲೆ ಅಪ್ಪ ಕಟ್ಟುವ ಮಾಂಗಲ್ಯಕ್ಕೆ ಕುತ್ತಿಗೆ ನೀಡುತ್ತಾಳೆ.ಕೃತ್ತಿಕೆಯ ಮನದಲ್ಲಿ ತಂದೆಯ ಮದಮೀರಿದ ದಾಹ ವನ್ನು ಪ್ರಶ್ನೆ ಮಾಡಬೇಕೋ? ತಂದೆಯನ್ನೇ ಗಂಡನೆಂದು ಸ್ವೀಕರಿಸಿ ಪ್ರೇಮಾನುರಾಗದಲ್ಲಿ ತೆಲಬೇಕೋ? ನಿದ್ದೆ ಬಾರದಿದ್ದಾಗ ತಂದೆಯ ಎದೆಗವಚಿ ನಿದ್ರಿಸುವ ಆ ಎದೆಗೂಡು ಈಗ ಪ್ರೇಮ ಭೋಗದ ತಾಣ. ತಂದೆಯೊಂದಿಗೆ ಆಕೆ ಸೇರಿ ಮಗುವನ್ನು ಹೆರಬೇಕೋ?ಎಂಬ ವಿಚಾರಗಳು ಆಕೆಯಲ್ಲಿ ಹಾಗೆಯೇ ಉಳಿ ಯುತ್ತವೆ. ಒಂದು ಕಡೆಗೆ ವಡ್ಡಾರಾಧನೆಕಾ ರನು ಹೆಣ್ಣಿನ ಅಂತರಂಗದಲ್ಲಾಗುವ ದುಗುಡ ದುಮ್ಮಾನಗಳಿಗೆ,ಆಸೆ ಆಕಾಂಶೆಗ ಳಿಗೆ ಯಾವ ರೀತಿಯಲ್ಲೂ ಮಹತ್ವಕೊಡದೆ, ಅಬಲೆಯರಾದ ಮತ್ತು ಅಸಹಾಯಕರಾದ ವರನ್ನು ಪುರುಷನ ಮಿತಿಮೀರಿದದಾಹಕ್ಕೆ ಆಕೆ ಬಲಿಪಶು ಆಗುವುದನ್ನು ಎಲ್ಲಿಯೂ ತಡೆಯುವುದಿಲ್ಲ. ಹಾಗಾದರೆ ಒಂಬತ್ತನೇ ಶತಮಾನದಲ್ಲಿ ಹೆಣ್ಣಿನಲ್ಲಿ ಇರುವ ಸಹಜ ವಾದ ಪ್ರೇಮವನ್ನು ಕಾಣದೇ, ಪುರುಷ ದರ್ಪದ ಮೂಲಕ ಆಕೆಯನ್ನು ದೈಹಿಕ ರೂಪವನ್ನು ಮಾತ್ರಪಡೆಯುತ್ತಿದ್ದರು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಕುಟುಂಬ ದಲ್ಲಿ ಇಷ್ಟು ಮಾತ್ರ ಇದ್ದರೆ ಸಾಲದು. ಅದು ಸುಖ ದುಃಖದ ಜೊತೆಗೆ ಎಲ್ಲವನ್ನು ಒಳಗೊ ಳ್ಳುತ್ತದೆ. ಮುಖ್ಯವಾಗಿ ಸಂಬಂಧಗಳನ್ನು ಗುರುತಿಸುವುದು ಹಾಗೂ ಕೂಡಿಸುವುದನ್ನು ಅರಿಯಬೇಕು. ಲೌಕಿಕ ಪ್ರಜ್ಞೆಯಲ್ಲಿ ಇದ್ದ ಎಷ್ಟೋಸಂಸಾರಗಳು ತುಂಬು ಜೀವನವನ್ನ ಸಾಗಿಸುತ್ತಿದ್ದವು,ಈ ಬಗ್ಗೆ ಸಾಕಷ್ಟು ಉದಾ ಹರಣೆಗಳು ನಮ್ಮುಂದೆ ಇವೆ. ನೈತಿಕತೆಯ ಪ್ರಶ್ನೆ ಒಡ್ಡಿದ ಮಾತ್ರಕ್ಕೆ ಅಗ್ನಿ ರಾಜನು ಮಗಳನ್ನು ಮದುವೆಯಾಗಿದ್ದು ಅನೈತಿಕ ವೆಂದು ಹೇಳುವಂತಿಲ್ಲ.ಏಕೆಂದರೆ, ವೀರಮ ತಿಯನ್ನು ಹೇಗೆ ಪ್ರೀತಿ ಪ್ರೇಮದಿಂದ ಸಲುಹಿ ದನೋ ಹಾಗೇ ಮಗಳಾದ ಕೃತಿಕೆಯನ್ನು ಮೋಹಿಸಿ ಮದುವೆಯಾದನು. ಅಲ್ಲಿಯೂ ಕೌಟುಂಬಿಕ ಚೌಕಟ್ಟು ಇತ್ತು.ಮಗಳ ಮಧ್ಯ ದಲ್ಲೂ ಕೂಡ ದಾಂಪತ್ಯದ ಮಿತಿ ಇತ್ತು. ಸಖ್ಯದಲ್ಲಿ ಪ್ರೀತಿಗೆ ಯಾವುದೇ ಗಡಿರೇಖೆಗ ಳಿಲ್ಲ, ಅದು ಸ್ವತಂತ್ರದ್ದು. ಆದರೆ ಇಲ್ಲಿ ‘ಅಗ್ನಿರಾಜನ ವಿವೇಕ ಮಾತ್ರ. ಕೊಂಚ ವಿಭಿನ್ನ. ಅಂದರೆ ದರ್ಪ, ದೌರ್ಜನ್ಯ, ಹಣ, ಅಧಿಕಾರಗಳೆವೂ ಆತನ ಅಡಿಯಲ್ಲಿ ಇದ್ದು ದ್ದರಿಂದ ವ್ಯಕ್ತಿಗಳನ್ನೆಲ್ಲ ವಸ್ತುಗಳನ್ನಾಗಿಸಿ ನೋಡುವ ಪರಿ ಮಾತ್ರ ಸಖ್ಯದೊಳಗೆ ಬರಲು ಆಸ್ಪದವೇ ಇಲ್ಲ’. ಆದರಿಂದ ಕುಟುಂಬವು ಸುಖೋಪದಲ್ಲಿ ಇರಬೇಕು. ಅಹಿಂಸೆಯನ್ನು ಪಾಲನೆ ಮಾಡುವುದರ ಮೂಲಕ ಜೀವನದ ಆತ್ಮೋದ್ದಾರದ ಮಹತ್ವವನ್ನು ಕೂಡ ಸಖ್ಯ ಪಡೆದಿತ್ತು.
(ಮುಂದುವರೆಯುವುದು…)
🔆🔆🔆
✍️ಡಾ.ರೇಣುಕಾ ಕಠಾರಿ, ಬೆಳಗಾವಿ
ವಡ್ಡರಾಧನೆಯಲ್ಲಿ ಮೊದಾಳಿ ಮತ್ತು ಕೃತ್ತಿಕೆಯರ ಸಂದಿಗ್ಧ ಪರಿಸ್ಥಿತಿಯು ಊಹಿಸಲು ಕಷ್ಟ ಸಾಧ್ಯ…. ಅತ್ಯುತ್ತಮ ಕಥೆಯ ನಿರೂಪಣೆ ಮಾಡುತ್ತಿದ್ದಾರೆ ಡಾ ರೇಣುಕಾ ಕಠಾರಿ ಅವರು. 👌🌹
LikeLike