ವಿದ್ಯೆ ಸರ್ವಾದರಣೀಯವಾದ,  ಸರ್ವಸಂಶ ಯಗಳಿಗೆ ಪರಿಹಾರವನ್ನು ನೀಡಿ,ಸಕಲಗುಣ ಸಂಪನ್ನಾಗಿಸುವುದು.ವಿದ್ಯೆಯಿಂದಲೇಸರ್ವ ಕಾಮನೆಗಳು. ಸಿಧ್ಧಿ, ವಿದ್ಯೆ  ಇಲ್ಲದಿದ್ದರೆ ಅಂತಹವನಿಗೆ ಯಾವ ಸ್ಥಾನ, ಮಾನಗಳು ಇರುವುದಿಲ್ಲ.ವಿದ್ಯೆಯ ಪರಾಕಾಷ್ಟತೆಯನ್ನ ನಿರೂಪಿಸುತ್ತಾ ಸುಭಾಷಿತಕಾರರು ಹೇಳು ತ್ತಾರೆ “ವಿದ್ಯಾ ವಿಹಿನಃ ಪಶುಃ”, ವಿದ್ಯೆ ಇಲ್ಲದವನು ಪಶುವಿಗೆ ಸಮಾನ.ಸರ್ವಜ್ಞನು ಸಹಿತ ತನ್ನ ವಚನಗಳಲ್ಲಿ ಈ ವಿಷಯವನ್ನೇ ನಿರೂಪಿಸಿದ್ದಾನೆ.

“ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಕ್ಕು, ವಿದ್ಯೆ ಇಲ್ಲದವನ ಮುಖವು ಹದ್ದಿನಂತಕ್ಕು ಸರ್ವಜ್ಞ “

ಮೇಲಿನ ಎಲ್ಲವುಗಳು ವಿದ್ಯೆಯ ಪರಮ್ಯತೆ ಯನ್ನು ಸಾರಿದರೆ,ಕೇವಲ ವಿದ್ಯೆಯೊಂದಿದ್ದು ಅದರೊಂದಿಗೆ ಅಹಂಕಾರ ಸೇರಿದರೆ ಅದು ಸರ್ವಪತನಕ್ಕೆ ಕಾರಣವಾಗತ್ತೆ.ಅಂತಹವರು ಜಗತ್ತಿಗೆ ಮಾರಕರು ಕೂಡ. ಇತಿಹಾಸದ ಪುಟಗಳ ಅನೇಕ ಸಂಧರ್ಭದಲ್ಲಿ ಇಂತಹ ಉದಾಹರಣೆಗಳು ಬಹಳ.

ಎಲ್ಲಾ ರೀತಿಯ ವಿದ್ಯೆಯನ್ನುಹೊಂದಿದ್ದರು. ಕೇವಲ ದರ್ಪ, ದುರಹಂಕಾರಿ, ದುರ್ಗುಣಗ ಳಿಂದ ಪೂರಿತರಾಗಿ ಸಮಾಜಕಂಟಕರಾಗಿ ವರ್ತಿಸುತ್ತಾರೆ.ಅಂತಹ ವ್ಯಕ್ತಿಗಳು ಇತಿಹಾಸ ಪುರಾಣಗಳಲ್ಲಿ,  ದೇವ  ದಾನವರ  ಬಗ್ಗೆ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ. ದಾನವರ ಪತನಕ್ಕೆ ಅವರ ಅಹಂಕಾರ, ದುರ್ಗುಣ, ದುರ್ಬುದ್ದಿಗಳೇ ಕಾರಣ.

ವಿಚಾರ ಮಾಡಿದಾಗ “ವಿದ್ಯೆ ವಿನಯತೇ ಶೋಭಿತೆ” ವಿದ್ಯೆ ಶೋಭಿಸುವುದು ಆ ವ್ಯಕ್ತಿಯಲ್ಲಿ ವಿನಯವೆಂಬುದು ಬೆರೆತರೆ ಮಾತ್ರ ಅಂತಹವರು ಸಮಾಜಕ್ಕೆ  ಮುಕುಟ ಪ್ರಾಯರಾಗಿ ಅನೇಕ ವಿಧವಾದ  ಕೊಡುಗೆ ಗಳನ್ನು ಸಮಾಜಕ್ಕೆ, ಜಗತ್ತಿಗೆ ನೀಡಿದ್ದಾರೆ. ಒಂದು ಸಂಸ್ಕೃತ ಸುಭಾಷಿತ ಹೀಗಿದೆ:
“ವಿದ್ಯಾ ದಧಾತಿ ವಿನಯಂ, ವಿನಯಾ ದಧಾತಿ ಪಾತ್ರತಾಂ|ಪಾತ್ರತ್ವತ್ ಧನಾಪ್ನೋತಿ, ಧನತೋ ಧರ್ಮಃ ತತಃ ಸುಖಮ್”
ವಿದ್ಯೆ  ವಿನಯವನ್ನು ನೀಡುತ್ತದೆ. ವಿನಯ ದಿಂದ ಸರ್ವ ಮನ್ನಣೆ ದೊರೆಯುತ್ತದೆ. ಮನ್ನಣೆ ಗಳಿಸುವುದರಿಂದ ಹಣ ಸಂಪತ್ತು ಲಬ್ಯವಾಗತ್ತೆ. ಆ ಸಂಪತ್ತಿನಿಂದ ಧರ್ಮ ಕಾರ್ಯಗಳನ್ನು ನಡೆಸಿದರೆ ಸುಖವು ಪ್ರಾಪ್ತಿ ಯಾಗತ್ತೆ.

ಈ ಸುಪ್ರಭಾತವು ವಿನಯದ ಮಹತ್ವವನ್ನು ಮತ್ತು ಅದರಿಂದ ಹೊಂದುವ ಫಲಗಳನ್ನು ಅತ್ಯಂತ ರಮಣೀಯವಾಗಿ ಮನಸ್ಸಿಗೆ ಅತ್ಯಂತ ಸರಳ ನಾಟುವ ಹಾಗೆ ವಿವರಿಸಿ ದ್ದಾರೆ. ಅನೇಕ ಮಹಾನ್ ದಾರ್ಶನಿಕರು ಸಹಿತ ವಿನಯ ಇರಬೇಕೆಂದು ಪ್ರತಿಪಾದಿಸಿ ದ್ದಾರೆ.   ಅದ್ವೈತ  ವೇದಾಂತ  ಕೇಸರಿ ಆಚಾರ್ಯ ಶಂಕರಾಚಾರ್ಯರು ತಮ್ಮ ವಿಷ್ಣು ಸ್ತುತಿಯಲ್ಲಿ ಹೇಳ್ತಾರೆ: “ಭೋ ವಿಷ್ಣು ಅವಿನಯಮಪತಯ, ಸವಿನಯಂ ದೇಹಿ ಮೇ”
ಎಂದು ಆಚಾರ್ಯ ಶಂಕರರೇ “ತಮ್ಮಲ್ಲಿ ಇರುವ ಅಭಿನಯವನ್ನು ತೆಗೆದುಹಾಕು” ಎಂದು ಪರಮಾತ್ಮನಲ್ಲಿ ಪ್ರಾರ್ಥಿಸಿದ್ದಾರೆ.

ಕೇವಲ ಇಷ್ಟೇ ಏಕೆ? ನಮ್ಮವರೇ ಆದ ಮಹಾನ್ ವ್ಯಕ್ತಿಗಳು ತಮ್ಮ ವಿದ್ಯೆಯನ್ನ ವಿನಯದ ಮುಖಾಂತರ ಇನ್ನಷ್ಟು ಶೋಭೆ ಗೊಳಿಸಿದ್ದಾರೆ. ಅಂತಹವರಲ್ಲಿ ಮೊದಲಿಗ ರಾಗಿ ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದ “ಶ್ರೀಯುತ ಡಾ.ಅಬ್ದುಲ್‌ ಕಲಾಂ” ಅವರು ನೆನಪಿಗೆ ಬರ್ತ್ತಾರೆ. ದೇಶದ ಅತ್ಯುನ್ನತ ಹುದ್ದೆಯನ್ನಲಂಕರಿಸಿ,ವೈಮಾನಿಕ ವಿಭಾಗಕ್ಕೆ ತಮ್ಮದೇ ಆದ ಕೊಡಿಗೆಯನ್ನ ನೀಡಿ ಅದ್ವಿತೀಯರಾಗಿ ಕಂಗೊಳಿಸಿದ ಮಹಾನ್ ವ್ಯಕ್ತಿ ಆದರೆ ನಿರ್ಗಳಿತರಾಗಿ ಸಾಮಾನ್ಯ ಮಕ್ಕಳಲ್ಲಿ ಮಕ್ಕಳಾಗಿ ಮಕ್ಕಳೊಂದಿಗೆ ಬೆರೆತು ಸಂವಾಧಿಸಿ ಜೀವನದ ಅರಿವಿನ ಪಾಠವನ್ನ ಸರಳವಾಗಿ ಬೋಧಿಸಿ ಅಸಾಮಾ ನ್ಯರಾದ ವಿನಯವಂತರಿವರು.


ಇನ್ನೂ ಸ್ವಲ್ಪ ಹಿಂದೆ ನೋಡಿದಾಗ, ಮಹಾನ್ ಬೆಂಗಾಲಿ ಕವಿ,  ದಾರ್ಶನಿಕ ,   ತತ್ವಜ್ಞಾನಿ ಲೇಖಕ, ಸರ್ವ ಸಂಪನ್ನರಾದ ಮಹಾನ್ ಮಾನವತಾವಾದಿಯಾಗಿದ್ದ “ಶ್ರೀ ಈಶ್ವರ ಚಂದ್ರ ವಿದ್ಯಾಸಾಗರ.” ತಮ್ಮ ಅಪಾರ ಜ್ಞಾನದ ಮುಖಾಂತರ ಶ್ರೀಈಶ್ವರಚಂದ್ರರು, “ವಿದ್ಯಾಸಾಗರ” ಎಂಬ ಬಿರುದನ್ನು ಪಡೆದಿದ್ದರು,ಅವರ ವಿನಯತೆಯ ಬಗ್ಗೆ ಒಂದು ದಾರ್ಶನಿಕ ಕಥೆಯಿದೆ.

ಒಮ್ಮೆ ರೈಲಿನಲ್ಲಿ ಪಯಣಿಸುತಿದ್ದಾಗ, ಒಬ್ಬ ಸಿರಿವಂತ ಕೂಡ ಸಹ ಪ್ರಯಾಣಿಕನಾಗಿರು ತ್ತಾನೆ.ಶ್ರೀಈಶ್ವರ ಚಂದ್ರರು ಸಾಮಾನ್ಯರಲ್ಲಿ ಸಾಮಾನ್ಯವಾಗಿ ಸಾಮಾನ್ಯ ಸರಳವಾದ ಉಡುಗೆಯನ್ನ ಧರಿಸಿರ್ತ್ತಾರೆ. ಅವರು ಯಾವತ್ತೂ ಆಡಂಬರವನ್ನ ಇಷ್ಟಪಡುತ್ತಿರ ಲಿಲ್ಲ, ಸಾಮಾನ್ಯವಾಗಿ ಕಾಣ್ತಿರ್ತ್ತಾರೆ. ತಾವು ತಲುಪಬೇಕಿದ್ದ ನಿಲ್ದಾಣ ಬಂದಾಗ, ಶ್ರೀಈಶ್ವರಚಂದ್ರರ ಜೋಡಿ ಆ ಸಿರಿವಂತನು ನಿಲ್ದಾಣದಲ್ಲಿ ಇಳಿತಾರೆ.ಆಗ ಆಸಿರಿವಂತನು ತನ್ನ ಭಾರಿ ಸಾಮಾನುಗಳನ್ನು ಹೊರಲು ಕೂಲಿಯಂತಿದ್ದ ಶ್ರೀ ಈಶ್ವರ ಚಂದ್ರರನ್ನ ಕೇಳುತ್ತಾನೆ,ಅಸಾಮಾನ್ಯ ವಿದ್ವಾಂಸರಾಗಿದ್ದ ಶ್ರೀಈಶ್ವರಚಂದ್ರರು ಮರುಮಾತಾಡದೆ, ಆ ಸಿರಿವಂತನ ಸಾಮಾನುಗಳನ್ನು ತೆಗೆದು ಕೊಂಡು ಹೊರಡುತ್ತಾರೆ.ಕಾಕತಾಳೀಯವೆಂ ಬಂತೆ,ಶ್ರೀಈಶ್ವರಚಂದ್ರರು ಹಾಗೂ ಆ ಸಿರಿ ವಂತ ಕಾರ್ಯಕ್ರಮ  ನಡೆಯುವ ಒಂದೇ ಸ್ಥಳಕ್ಕೆ ಹೋಗಬೇಕಾಗಿತ್ತು. ಸಂಘಟಿತರು ಶ್ರೀಈಶ್ವರಚಂದ್ರರು ಸಾಮಾನುಗಳನ್ನು ಹೊತ್ತುಬರುವುದನ್ನು ನೋಡಿ ಅವರಲ್ಲಿ ಕ್ಷಮೆ ಕೋರಿ ಬರಮಾಡಿಕೊಳ್ಳುತ್ತಾರೆ. ಇದನ್ನೆಲ್ಲಾ  ನೋಡಿದ ಸಿರಿವಂತನಿಗೆ ತನ್ನಿಂದಾದ ಪ್ರಮಾದಕ್ಕೆ ನಾಚಿ ನೀರಾಗಿ ಶ್ರೀಈಶ್ವರಚಂದ್ರರಲ್ಲಿ  ಹೋಗಿ ಕ್ಷಮೆ ಕೇಳುತ್ತಾರೆ.ಇದಲ್ಲವೇ ವಿದ್ಯೆಗೆ ವಿನಯವೇ ಭೂಷಣಕ್ಕೊಂದು ನಿಜವಾದ ದಾರ್ಶನಿಕ ಕಥೆ ಗೆಳೆಯರೆ!.


ಆದ್ದರಿಂದಲೇ  ಪ್ರಶ್ನೋತ್ತರ ಮಾಲಿಕೆಯಲ್ಲಿ ಹೇಳಿದ್ದಾರೆ “ಕೋ ವರ್ಧತೇ? ವಿನೀತಃ”, ಯಾರು  ಸರ್ವಾಗೀಂಣ  ಪ್ರಗತಿಯನ್ನ ಹೊಂದುತ್ತಾರೆ? ಎಂದು ಕೇಳಿದಾಗ, ಅದಕ್ಕೆ ಉತ್ತರ ವಿನೀತಃ ವಿನಯವಂತನುಎಂದು.

ನಾನು ಸರ್ವವನ್ನು ಬಲ್ಲೆ ಎಂಬ ಅಹಂಕಾರ ವ್ಯಕ್ತಿಯಲ್ಲಿ ಸೇರಿತೋ, ಅದು ಅವನ ಅಧಃ ಪತನಕ್ಕೆ ಮುನ್ನುಡಿ.ಅಂತೆಲ್ಲಾ ವಿದ್ವಾಂಸರು ಕೂಡ ಇಷ್ಟಪಡುವುದು ವಿನಯರನ್ನೇ.              “ಕಃ ಪೊಜ್ಯೋ ವಿದ್ಯಾರ್ಥೀಃ?, ಸ್ವಭಾವತಃ,ಸರ್ವದಾ ವಿನೀತೋ ಯಃ”
ಅಂದರೆ ಸ್ವಭಾವತಃ ಯಾರು ವಿನೀತರಾಗಿ ರುವರೋ, ಅವರನ್ನೇ ವಿದ್ವಾಂಸರುಗಳು ಸಹಿತ ಸದಾ ಕಾಲ ಇಷ್ಟಪಡುತ್ತಾರೆ.

ನಾವು ತಿಳಿದಿರುವುದು ಅಲ್ಪವಾದರೂ, ಎಲ್ಲವನ್ನೂ  ತಿಳಿದ ಸರ್ವಜ್ಞನಂತೆ  ಕೆಲವರು ವರ್ತಿಸುತ್ತಾರೆ.ಎಲ್ಲವನ್ನೂ  ತಿಳಿದು, ವಿನೀತ ರಾಗಿ ಎನನ್ನು ಬಲ್ಲವರೇ ಅಲ್ಲ ಎನುವಂತೆ, ಹೊಸ ವಿಷಯಗಳ ಅರಿವಿಗೆ ಉತ್ಸುಕರಾಗಿ ರುತ್ತಾರೆ.ಅದ್ದರಿಂದಲೇ ಹೇಳುತ್ತಾರೆ, ಎಲ್ಲ ವನ್ನು ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ ಅಂತಹ ಬಲ್ಲವರು ಯಾವಾಗಲೂ ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಸದಾ ಕಾಲ ಶಾಂತವಾಗಿ ಶೋಭಿಸುತ್ತಾರೆ.

ಆದ್ದರಿಂದಲೇ  ಹೇಳುವುದು ವಿದ್ಯಾ ವಿನ ಯೇನ ಶೋಭಿತೆ ವಿದ್ಯೆಗೆ ವಿನಯವೇ ಭೂಷಣ.”

                     🔆🔆🔆
✍🏻ಶಾಲಿನಿ ರುದ್ರಮುನಿ,ಹುಬ್ಬಳ್ಳಿ