ಪ್ರೊ. ಎಸ್.ಎನ್.ಶ್ರೀಧರ ಕಡಲಾಚೆಯ ನೆಲ ದಲ್ಲಿ ಕನ್ನಡದ ಚಿಗುರಿಗೆ ನೀರು ಗೊಬ್ಬರ ವಿಟ್ಟು ಬೆಳೆಸುವ ತಾಯಿಹೃದಯದ ಕನ್ನಡದ ಸೇನಾನಿ.

ನ್ಯೂಯಾರ್ಕಿನ  ಸ್ಟೋನಿಬ್ರೂಕ್  ವಿಶ್ವ ವಿದ್ಯಾಲಯದ ಭಾರತೀಯ ಅಧ್ಯಯನ ಕೇಂದ್ರ ದಲ್ಲಿ ಕನ್ನಡ ಭಾಷೆ,ಸಾಹಿತ್ಯ ಕುರಿತು “ಕನ್ನಡದ ಭಾಷಾ ವೈಜ್ಞಾನಿಕ ಅಧ್ಯಯ ನ” ಕೇಂದ್ರವಿದೆ. ಇಲ್ಲಿ  ಆಧುನಿಕ  ಕನ್ನಡ ಸಮಗ್ರ  ವ್ಯಾಕರಣ,  ಪದರಚನೆ, ಇಂದಿನ ಕನ್ನಡ:ರಚನೆ,ಬಳಕೆ;ಕನ್ನಡದಲ್ಲಿ ಮಿಶ್ರಭಾಷೆ ಯ ಉಪಯೋಗಗಳು, ಕನ್ನಡ ಭಾಷೆಯ ಆಧುನೀಕರಣ,ಕನ್ನಡಿಗರ ಇಂಗ್ಲೀಷ್ ಬಳಕೆ, ಕನ್ನಡಿಗರ ಬಹುಭಾಷಿಕತೆ ಕುರಿತು ಶ್ರೀಧರ ಸರ್ ರ ಮುಂದಾಳತ್ವದಲ್ಲಿ ಈ ನೆಲದಲ್ಲಿ ಕನ್ನಡದ ಉಸಿರು ಹಸಿರಾಗಿರುವುದು ನಿಜ ವಾಗಿಯೂ ಶ್ಲಾಘನೀಯ.

ಕುಮಾರವ್ಯಾಸನ ಕರ್ಣಾಟ ಭಾರತಕಥಾ ಮಂಜರಿ ಶ್ರೀಧರರ ಪ್ರಧಾನ ಸಂಪಾದಕತ್ವ ದಲ್ಲಿ (ಸಿ.ಎನ್.ರಾಮಚಂದ್ರನ್,ಎಚ್.ಎಸ್. ರಾಘವೇಂದ್ರರಾವ್,ಎಚ್.ಎಸ್ ಶಿವಪ್ರಕಾಶ  ನಾರಾಯಣ ಹೆಗಡೆ ಇವರುಸಂಪಾದಕೀಯ ಮಂಡಳಿಯ ಸದಸ್ಯರು) ಹಾರ್ವರ್ಡ್ ವಿಶ್ವವಿದ್ಯಾಲಯದ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಮಾಲೆಯಲ್ಲಿ ಮೂರು ಸಂಪುಟ ಗಳಲ್ಲಿ ದ್ವಿಭಾಷಾ ಪಠ್ಯವಾಗಿ 2021 ರಲ್ಲಿ ಪ್ರಕಟವಾಗಲಿದ್ದು ಕೆಲಸಕಾರ್ಯಗಳು ಭರ ದಿಂದನಡೆಯುತ್ತಿದೆ.

ಮೊನ್ನೆ ಕಾರ್ಯಕ್ರಮಲಿ ಭೆಟ್ಟಿಯಾದೆ.ಅಷ್ಟು ದೊಡ್ಡ ಹುದ್ದೆಯಲಿದ್ದರೂ ಅವರಸರಳತನ, ಗಾಂಭೀರ್ಯದ  ನಗುಮೊಗಕ್ಕೆ  ತಲೆದೂಗು ವೆ; ತಲೆ ಬಾಗುವೆ.

ಶ್ರೀಧರ್ ಸರ್ ರವರ ಕನ್ನಡದ ಎಲ್ಲಾ ಕೆಲಸ ಕಾರ್ಯಗಳಿಗೆ “ನಾಗಸುಧೆ” ಯಿಂದಲೂ ಸಮಗ್ರ ಕನ್ನಡ ಮನಸುಗಳ ಪರವಾಗಿಯೂ ಅಭಿನಂದಿಸುವೆ.

                     🔆🔆🔆

✍️ಪ್ರಕಾಶ ಕಡಮೆ,ನಾಗಸುಧೆ
  ಹುಬ್ಬಳ್ಳಿ