ಕೆಲವರಲ್ಲಿ ದೇಹ ಹತೋಟಿಯಿಲ್ಲ ಇರದೆ, ದೇಹದ ಹಲವು ಅಂಗಾಂಗಗಳು ಸದಾ ಚಡಪಡಿಕೆಯಲ್ಲಿ ತೊಡಗಬಹುದು. ಅವರಲ್ಲಿ ಕೈಕಾಲುಗಳು ಸದಾ ಚಲನೆಗಾಗಿ ಹಾತೊರೆಯಬಹುದು.
ಈ ರೀತಿಯ ಚಡಪಡಿಕೆಗಳ ಆಳದಲ್ಲಿ ಹಲವು ರೀತಿಯ ಮಾನಸಿಕ ಖಾಯಿಲೆಗಳು, ಅತಿಯಾದ ಆತಂಕ ಮನೆ ಮಾಡಿರಬಹುದು ಈ ಲಕ್ಷಣಗಳು ಸಾಮಾನ್ಯರಲ್ಲಿ ಯಾವಾಗ ಲಾದರೂ ಆಗೊಮ್ಮೆ ಈಗೊಮ್ಮೆ ಕಂಡು ಬರಬಹುದಾದರೂ ಕೆಲವರಲ್ಲಿ ಈ ಲಕ್ಷಣ ಗಳು ಅಸಾಧಾರಣ ಮಟ್ಟದಲ್ಲಿದ್ದು ಇವರು ಇತರರಂತೆ ಬದುಕು ನಡೆಸಲು ಅಸಮರ್ಥ ರಾಗುತ್ತಾರೆ. ತಮಗೆ ತಾವು ಸ್ವಂತ ಹಾನಿಮಾ ಡಿಕೊಳ್ಳುವ ಇರಾದೆಯನ್ನು ಇಂತವರು ಬೆಳೆಸಿಕೊಳ್ಳಬಹುದು. ಇವರಲ್ಲಿ ಕೂಡ ಕಡಿಮೆ ಲಕ್ಷಣಗಳನ್ನು ತೋರಿಸುವವರು, ಅತಿಜಾಸ್ತಿ ಲಕ್ಷಣಗಳನ್ನು ತೋರಿಸಿ ಹಾನಿ ಮಾಡಿಕೊಳ್ಳುವವರು ಇರುತ್ತಾರೆ. ಇವರಲ್ಲಿ ಈ ಚಡಪಡಿಕೆಗಳು ಒಂದು ಅಭ್ಯಾಸದ ಮಟ್ಟದಲ್ಲಿರದೆ ನಿಯಂತ್ರಣ ಮೀರಿ ನಡೆಯುವ ಕ್ರಿಯೆಗಳಾಗಿರುತ್ತವೆ.
ಇನ್ನು ಕೆಲವು ಖಾಯಿಲೆಗಳಿಗೆ ಮಾನಸಿಕ ಚಿಕಿತ್ಸೆಯನ್ನು ನೀಡುತ್ತ, ಭೌತಿಕ ಆಟಿಕೆಗ ಳಿಂದ ಅವರ ನರಗಳ ಚಡಪಡಿಕೆಯ ಚೈತನ್ಯವನ್ನು ದಮನಿಸಿ ಅವರ ಮನಸ್ಸಿನ ಶಾಂತಿಯನ್ನು ಪುನಃ ಸ್ಥಾಪಿಸಲು ಪ್ರಯತ್ನಿ ಸಲಾಗಿದೆ. ಮಾರುಕಟ್ಟೆಯಲ್ಲಿ ಇಂತಹ ಹಲವು ಆಟಿಕೆಗಳು ಇವತ್ತು ಲಭ್ಯವಿವೆ. ಇಂಗ್ಲಿಷಿನಲ್ಲಿ ಫಿಡ್ಜೆಟ್ ಅಂದರೆ ಚಡಪಡಿಕೆ. ಹಾಗಾಗಿ ಚಡಪಡಿಕೆಯ ದಮನಕ್ಕೆ ಉತ್ತಮ ದಾರಿಯಾಗುವ,ಹಾನಿಕಾರಕವಲ್ಲದ ಫಿಡ್ಜೆಟ್ ಆಟಿಕೆಗಳನ್ನು ಮಾರುಕಟ್ಟೆಗೆ ಪರಿಚಯಿಸ ಲಾಗಿದೆ.ಫಿಡ್ಜೆಟ್ ಬಾರ್,ಫಿಡ್ಜೆಟ್ ಸ್ಪಿನ್ನರ್ ಫಿಡ್ಜೆಟ್ ಕ್ಯೂಬ್, ಸ್ಟ್ವಿಗ್ಸ್, ಟ್ಯಾಂಗಲ್ ಥೆರಪಿ, ಥಂಬ್ ಚಕ್ಸ್, ಸ್ಲಿನ್ಕಿ, ಮ್ಯಾಡ್ ಬಾಲ್ಸ್, … ಹೀಗೆ ಇವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ 2017ನೇ ಇಸ್ವಿ, ಏಪ್ರಿಲ್ ತಿಂಗಳಿನಿಂದ ಫಿಡ್ಜೆಟ್ ಸ್ಪಿನ್ನರ್ ಎನ್ನುವ ಆಟಿಕೆ ಮಾರು ಕಟ್ಟೆಯ ಸರದಾರನಾಗಿದೆ. ಚಡಪಡಿಕೆಯ ಖಾಯಿಲೆಯವರಿರಲಿ ಇತರರು ಕೂಡ ಈ ಆಟಿಕೆ ಬೇಕೆಂದು ಚಡಪಡಿಸುವಂತೆ ಮಾಡಿದೆ!! ಫಿಡ್ಜೆಟ್ ಸ್ಪಿನ್ನರ್ ಭಾರತದಲ್ಲಿ ಸಿಗಲು ಶುರುವಾದಾಗ ಅದರ ಬೆಲೆಯು ಸಾವಿರಾರು ರೂಪಾಯಿಯಾಗಿತ್ತು. ಆದರೆ ಈಗ ನೂರು ರೂಪಾಯಿಗೂ ಲಭ್ಯವಾಗು ತ್ತಿದೆ.
ಇದೇನು ಹೊಸ ಆವಿಷ್ಕಾರವೇ?
ಅಮೆರಿಕಾದ ವಾಸಿಯಾದ ಕ್ಯಾಥೆರಿನ್ ಹೆಟ್ಜಿಂಕರ್ ಎಂಬ ಮಹಿಳೆ ಇಪ್ಪತ್ತುವರ್ಷದ ಹಿಂದೆ ತನ್ನ ಸಹೋದರಿಯನ್ನು ನೋಡಲು ಇಸ್ರೇಲಿಗೆ ಬಂದಿದ್ದಳು. ಇಲ್ಲಿ ಆಕಸ್ಮಿಕವಾಗಿ ಅವಳು ಪೋಕರಿ ಹುಡುಗರು ಪೋಲಿಸರತ್ತ ಕಲ್ಲು ಹೊಡೆದು ಓಡಿಹೋದದ್ದನ್ನು ನೋಡಿದಳು. ಆಟಿಕೆಗಳ ಆವಿಷ್ಕಾರದಲ್ಲಿ ಅಪರಿಮಿತ ಪ್ರತಿಭೆ ಹೊಂದಿದ್ದ ಈ ಮಹಿಳೆ ಯಲ್ಲಿ ತತ್ ಕ್ಷಣ ಮೆತ್ತನೆಯ ಕಲ್ಲಿನ ಆಟಿಕೆ ಯನ್ನು ಮಾಡುವ ಹೊಳಹಾಯಿತು. ಆದರೆ ಫ್ಲೋರಿಡಾಗೆ ಮರಳಿಬಂದ ನಂತರ ಮಧ್ಯ ದಲ್ಲಿ ಬಾಲ್ ಬೇರಿಂಗ್ ಇರುವ ಸ್ಪಿನ್ನರನ್ನು ಇವಳು ರೂಪಿಸಿದಳು. ತುಂಟಹುಡುಗರನ್ನು ತೊಡಗಿಸಿಕೊಳ್ಳಲು ಈ ಆಟಿಕೆ ಉಪಯುಕ್ತ ಎಂದು ಅದನ್ನು ಮಾರುಕಟ್ಟೆಗೆ ತಂದಳು. ಆದರೆ ಈ ಆಟಿಕೆ ಜನಪ್ರಿಯವಾಗಲಿಲ್ಲ. ಈ ಆವಿಷ್ಕಾರಕ್ಕೆ ಅವಳು ಹೊಂದಿದ್ದ ಪೇಟೆಂಟ್ 2005ರಲ್ಲಿ ಮುಗಿಯಿತು.ನಂತರ ಯಾರು ಬೇಕಾದರೂ ಇದಕ್ಕೆ ತಮ್ಮ ಛಾಪು ಒತ್ತಿ, ರೂಪವನ್ನು ಬದಲಾಯಿಸಿ ಹೊಸ ರೂಪ ಕೊಡಲು ಸಾಧ್ಯವಾಯ್ತು. ಈಗಿದು ಮನೆ ಮನೆಯಲ್ಲಿ ಕಾಣಸಿಗುವ ಆಟಿಕೆಯಾಗಿದೆ. ಅಮೆರಿಕಾದ ಕ್ಯಾಥರಿನ್ ಗೆ ಈಗ 60 ವರ್ಷ. ಅವಳಿಗೆ ಈ ಆಟಿಕೆಯಿಂದ ದುಡ್ಡುಸಿಗದಿ ದ್ದರೂ ಸಂತೋಷ ಸಿಕ್ಕಿದೆಯಂತೆ. ಈ ಆಟಿಕೆಯ ಮಾರಾಟದ ಯಶಸ್ಸಿಗೆ ಕಾರಣ ಚಡಪಡಿಕೆಯಿರುವ ಮಕ್ಕಳು, ವಯಸ್ಕರು ಮಾತ್ರ ಇವುಗಳನ್ನು ಕೊಳ್ಳದೆ ಎಲ್ಲರೂ ಕೊಳ್ಳತೊಡಗಿದ್ದು!! ಇದರಿಂದ ಚಡಪಡಿಕೆ ಯಿರುವವರು ಮಾತ್ರಇಂತಹ ಆಟಿಕೆಗಳನ್ನು ಉಪಯೋಗಿಸುತ್ತಾರೆ ಅನ್ನುವ ಅಲಿಖಿತ ನಿಯಮಕ್ಕೆ ನೇಣುಬಿತ್ತು. ಇದರಿಂದ ಖಾಯಿ ಲೆಯಿರುವವರ ಗುರುತು ಸಿಗದಂತಾಗಿರುವ ದು ಕೂಡ ಸಾಧ್ಯವಾಯ್ತು. ಸಾಮಾಜಿಕ ತಾರತಮ್ಯವೂ ಈ ವಿಚಾರದಲ್ಲಿ ಕಡಿಮೆ ಯಾಯ್ತು. ಫಿಡ್ಜೆಟ್ ಸ್ಪಿನ್ನರ್ ಮಾರುಕಟ್ಟೆಗೆ ಬರುವ ಮುನ್ನವೇ ಫಿಡ್ಜೆಟ್ ಸಾಧನಗಳು ಲಭ್ಯವಿದ್ದವು. ಇತರೆ ಹಲವು ಭಿನ್ನ ಆಟಿಕೆ ಗಳೂ ಇವೆ. ಸ್ಪಿನ್ನರುಗಳಲ್ಲಿ ಮದ್ಯದಲ್ಲಿ ಬಾಲ್ ಬೇರಿಂಗ್ ಗಳಿರುವ ಸಣ್ಣ ವೃತ್ತವಿದೆ. ತನ್ನ ಚಿತ್ರಗಳಲ್ಲಿ ಲಿಯೋ ನಾರ್ಡೊ ಡ ವಿಂಚಿ ಇಂತಹ ಮೊದಲ ಯಂತ್ರದ ರೂಪ ವನ್ನು ತನ್ನ ಹೆಲಿಕ್ಯಾಪ್ಟರಿನಂತಹ ಸಾಧನಕ್ಕೆ ಬರೆದಿದ್ದನಂತೆ! ಹಾಗಾಗಿ ಇದು ಹೊಸ ಸಂಶೋಧನೆಯೇನಲ್ಲ.
ಫಿಡ್ಜೆಟ್ ಆಟಿಕೆಗಳು ಕೆಲಸ ಮಾಡುವುದು ಹೇಗೆ?ಚಡಪಡಿಕೆಯ ಖಾಯಿಲೆ ಇರುವವರಲ್ಲಿ ಸಂವೇದನೆಗಳನ್ನು ಪರಿಷ್ಕರಿಸುವ ಶಕ್ತಿ ಕಡಿಮೆಯಿರುತ್ತದೆ, ಇದನ್ನು sensory processing deficit ಎನ್ನುತ್ತಾರೆ. ಇಂತಹ ಮಕ್ಕಳಿಗೆ ವಾತಾವರಣದಿಂದ ಅಗತ್ಯವಿರುವಷ್ಟು ಸಂವೇದನೆ ಮತ್ತು ಪ್ರಚೋದನೆಗಳು ಸಿಗದಿದ್ದಲ್ಲಿ ಅದನ್ನು ಅವರು ಈ ಸಾಧನಗಳಿಂದ ಪಡೆಯುತ್ತಾರೆ. ಎಲ್ಲ ಬಗೆಯ ಫಿಡ್ಜೆಟ್ ಆಟಿಕೆಗಳೂ ಇದೇ ಅಂಶದ ಸುತ್ತ ರೂಪುಗೊಂಡಿವೆ. ಮಕ್ಕಳ ನರಗಳ ತುಡಿತವನ್ನು ಇದುನಿಯಂತ್ರಿಸುತ್ತದೆ ಕೆಲವರಿಗೆ ದಂತವೈದ್ಯರ ಬಳಿ ಹೋಗಲು ತುಂಬಾ ಆತಂಕವಿದೆಯೆನ್ನಿ, ಇಂತವರ ಕೈಯಲ್ಲಿ ಒಂದು ಫಿಡ್ಜೆಟ್ ಆಟಿಕೆಯಿದ್ದಲ್ಲಿ ಅದರಿಂದ ಅವರ ಮನಸ್ಸು ಶಾಂತವಾಗಿ ರಲು ಸಹಾಯವಾಗುತ್ತದಂತೆ.
ಪಾಶ್ಚಾತ್ಯ ದೇಶಗಳಲ್ಲಿ ಆಟಿಸಂ, ಆಸ್ಪರ್ಜಸ್ ಇತ್ಯಾದಿ ಖಾಯಿಲೆ ಇದೆಯೆಂದು ನೇರವಾಗಿ ಹೇಳಿಕೊಂಡು ಸಮಾಜದಲ್ಲಿ ಒಂದಾಗಲು ಕರೆಯಿದೆ. ಮೇಧಾವಿಗಳಾದ ಐನಸ್ಟೀನ್, ನ್ಯೂಟನ್ ನಂತವರಲ್ಲಿ ಕೂಡ ಈ ಚಡಪಡಿ ಕೆಯ ಖಾಯಿಲೆಯಿತ್ತೆಂದು ಈಗ ಎಲ್ಲರಿಗೂ ಗೊತ್ತು. ಆತಂಕ ಮತ್ತು ಖಿನ್ನತೆಗಳ ಖಾಯಿ ಲೆಯಿರುವವರು ಕೂಡ ತಮ್ಮ ಖಾಯಿಲೆಯ ನ್ನು ಸಾಧಾರಣ ಎನ್ನುವ ಮಟ್ಟಿಗೆ ಹೇಳಿ ಕೊಂಡು ತಿರುಗುತ್ತಾರೆ. ಇದರಿಂದ ಶಾಲೆಗಳ ಲ್ಲಿ, ಕೆಲಸದ ಜಾಗದಲ್ಲಿ ಅವನ್ಯಾಕೆ ಹೀಗೆ? ಎನ್ನುವ ಪ್ರಶ್ನೆ ಕಳೆದು ಅವರು ಇನ್ನೊಂದು ಬಗೆಯ ವ್ಯಕ್ತಿತ್ವದವರು ಎನ್ನುವಅಂಗೀಕಾರ ಬರುತ್ತಿದೆ.
ಫಿಡ್ಜೆಟ್ಆಟಿಕೆಗಳುನಿಜಕ್ಕೂಉಪಯುಕ್ತವೇ?ಇತ್ತೀಚೆಗೆ ಈ ಚಡಪಡಿಕೆಯ ಆಟಿಕೆಗಳ ಜನಪ್ರಿಯತೆ ಹೆಚ್ಚಾಗುತ್ತಿರುವಂತೆ ಈ ಆಟಿಕೆ ಗಳು ನಿಜಕ್ಕೂ ಉಪಯುಕ್ತವೇ ಎನ್ನುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.ಹೆಸರೆ ಹೇಳುವಂತೆ ಈ ಆಟಿಕೆಗಳು ಚಡಪಡಿಕೆ ಯನ್ನು ಶಮನಗೊಳಿಸಲು ಇರುವ ಸಾಧನ ಗಳು.ಹಾಗಾಗಿ ಈ ಆಟಿಕೆಗಳ ಬಳಕೆಯಿಂದ ಖಾಯಿಲೆಗಳಿಗೆ ಚಿಕಿತ್ಸೆ ದೊರೆಯುತ್ತದೆಂದು ತಿಳಿಯದಿರಿ. ಖಾಯಿಲೆಯ ಲಕ್ಷಣಗಳು ಕಡಿಮೆಯಾಗುತ್ತವೆ ಎಂದು ಕೂಡ ಈ ಆಟಿಕೆಗಳು ಹೇಳುವುದಿಲ್ಲ. ಆದರೆ ಚಡಪಡಿ ಕೆಯಿರುವವರ ಚಟುವಟಿಕೆಗಳಿಗೆ ಇವು ನೇರ ಬಲಿಯಾಗಿ ಅವರ ಮಾನಸಿಕ ಸ್ಥಿತಿಗೆ ನೆರವು ನೀಡಬಲ್ಲವು ಎಂದಷ್ಟೇ ತಯಾರ ಕರು ಹೇಳಿಕೊಳ್ಳುವುದು. ಕೆಲವರು ಈ ಆಟಿಕೆಗಳಿಂದ ಏನೂ ಪ್ರಯೋಜನವಿಲ್ಲ ಎನ್ನುವ ಸಣ್ಣ ಪ್ರಮಾಣದ ಸಂಶೋಧನೆ ಗಳನ್ನು ಮಂಡಿಸಿದರೆ ಇತರರು ಈ ಆಟಿಕೆ ಗಳನ್ನು ಸಮರ್ಥಿಸಿಕೊಳ್ಳಲು ಇನ್ನೂಧೀರ್ಘ ಕಾಲದ ಅಧ್ಯಯನಗಳು ಬೇಕುಎಂದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಮಾತ್ರ ಖಾಯಿಲೆ ಯಿರುವವರು ಅವರ ಪೋಷಕರು ಇಂತಹ ಆಟಿಕೆಗಳನ್ನು ಮುಕ್ತವಾಗಿ ಪ್ರಶಂಸಿಸಿತಮಗೆ ಈ ಆಟಿಕೆಗಳಿಂದ ಬಹಳ ಉಪಯೋಗ ವಾಗಿದೆ ಎನ್ನುತ್ತಾರೆ. ಎಲ್ಲ ಮಕ್ಕಳಿಗೂ ತಗು ಲಿದ ಫಿಡ್ಜೆಟ್ ಸ್ಪಿನ್ನರ್ ಗಳ ಗೀಳಿಂದ ಭಯ ಬಿದ್ದ ಜಗತ್ತಿನಾದ್ಯಂತ ನೂರಾರು ಶಾಲೆಗಳು ಈ ಆಟಿಕೆಗಳನ್ನು ಶಾಲೆಗೆ ತರುವಂತಿಲ್ಲ ಎಂದು ತಾಕೀತು ಮಾಡಿವೆ. ಇನ್ನಿತರ ಶಾಲೆಗ ಳಲ್ಲಿ ಆ ರೀತಿಯ ನಿರ್ಭಂಧಗಳೇನೂ ಇಲ್ಲ. ಶಾಲೆಯಲ್ಲಿ ಕುಳಿತು ಗಮನ ಕೇಂದ್ರೀಕರಿಸ ಲು ಸಾಧ್ಯವಾಗುವುದಾದರೆ ಅಗತ್ಯವಿರುವ ಮಕ್ಕಳು ಈ ಆಟಿಕೆಗಳನ್ನು ಶಾಲೆಗೆ ತರಬ ಹುದು ಎನ್ನುತ್ತಾರೆ. ಯಾವ ರೀತಿಯ ಶಬ್ದವನ್ನೂ ಮಾಡದ ಆಟಿಕೆಗಳೂ ಈಗ ಮಾರುಕಟ್ಟೆಯಲ್ಲಿವೆ.
ಧೀರ್ಘಕಾಲದ ಅಧ್ಯಯನಗಳು ಹೊರ ಬೀಳುವವರೆಗೆ ಈ ಆಟಿಕೆಗಳ ಪೂರ್ಣ ಪ್ರಯೋಜನಗಳು ವೈಜ್ಞಾನಿಕವಾಗಿ ನಿರೂಪ ಣೆಯಾಗಲು ಸಾದ್ಯವಿಲ್ಲ. ಆದರೆ ಇನ್ಯಾವ ತೊಂದರೆಗಳಿಲ್ಲದಿದ್ದಲ್ಲಿ ಇವು ಜನಪ್ರಿಯ ಆಟಿಕೆಗಳಾಗಿ ಮಕ್ಕಳಲ್ಲಿ,ಬೆಳೆದವರಲ್ಲಿ ಇವು ತಮ್ಮಮೋಡಿಯನ್ನು ಮುಂದುವರೆಸುವುದ ರಲ್ಲಿ ಯಾವ ಸಂಶಯಗಳೂ ಇಲ್ಲ. ಚಡಪಡಿಸುವ ಬೆರಳುಗಳಿಗೆ ಇವು ಸದ್ದಿಲ್ಲದೆ ಕೆಲಸ ಒದಗಿಸಿ ಇಂತವರ ಚಡಪಡಿಕೆಯು ಸ್ವತಃ ಅವರಿಗೆ ಮತ್ತು ಅವರ ಪರಿಸರಕ್ಕೆ ಹಾನಿ ತರದಂತೆ ತಡೆಯುವಲ್ಲಿ ಸಹಕಾರಿಗ ಳಾಗಿವೆ ಎಂದು ಮಾತ್ರ ಬಹುತೇಕರು ಒಪ್ಪಿದ್ದಾರೆ.
🔆🔆🔆
✍️ಡಾ,ಪ್ರೇಮಲತ ಬಿ. ದಂತವೈದ್ಯರು, ಲಂಡನ್,ಇಂಗ್ಲೆಂಡ್.
ಚಡಪಡಿಕೆ ಮನುಷ್ಯರನ್ನು ಒಂದು ಕ್ಷಣ ಸುಮ್ಮನಿರಲು ಬಿಡುವುದಿಲ್ಲ. ಹಾಗಾಗಿ ಅಗತ್ಯಕ್ಕೆ ತಕ್ಕುದಾದ ಹಾನಿಕಾರಕವಲ್ಲದ ಆಟಿಕೆಗಳನ್ನು ಬಳಸಬಹುದು. ಉತ್ತಮ ಲೇಖನ 👌
LikeLiked by 1 person