ಅಮ್ಮಾ..ಎನ್ ತಿಂಡಿ? ಎನ್ ಬೇಕಿತ್ತೋ.. ನಂಗೆ ಮ್ಯಾಗಿ ಬೇಕು. ಹೌದಾ..ಅದೇನಿದ್ರೂ ಟೈಂ ಪಾಸ್ ತಿಂಡಿ. ಬೆಳಿಗ್ಗೆ ಪೌಷ್ಟಿಕಾಂಶ ಭರಿತ ಇರಬೇಕು.ಹಾಗಿದ್ರೆ ಏನ್ಮಾಡಿತಿಯಾ? ಉಪ್ಪಿಟ್ಟು ಇಲ್ಲ‌ ಅವಲಕ್ಕಿ ಎರಡರಲ್ಲಿ ಒಂದು ಅಂದಿದ್ದೆ ತಡ‌ ಮಕ್ಕಳ ಮುಖ ಸಪ್ಪೆ ಯಾಗಿತ್ತು.ಅವರಿಗೆ ಹಲ್ಲಿಗೆ ಕಷ್ಟ ಕೊಡುವಂತಹ ಕೆಲಸ ಮಾತ್ರ ಬೇಡ. ನಾನು ಕೇಳಬೇಕಲ್ಲ, ನಾ ಎನ್ ಮಾಡತಿನೋ ಅದನ್ನೇ ತಿನ್ನಬೇಕು.ಎಲ್ಲ ತರಕಾರಿ ಹಾಕಿ ಸತ್ವಭರಿತ ಉಪ್ಪಿಟ್ಟನ್ನು ಮಕ್ಕಳಿಗೆ ಕೊಟ್ಟು ನೋಡುತ್ತಿದ್ದೆ. ಅವರ ಕಣ್ಣು ಮಾತ್ರ ಇದಾವುದರ ಅರಿವೆ ಯಿಲ್ಲದೆ ರವೆಯನ್ನು ಹೊರತುಪಡಿಸಿ ಉಳಿದೆಲ್ಲ ತರಕಾರಿ ಗಳನ್ನು ಎತ್ತಿಡುವ ಕೆಲಸದಲ್ಲಿ ಮಗ್ನ ರಾಗಿದ್ದರು.

ಪ್ರೀತಿಯೊಂದಿಗೆ ಆರೋಗ್ಯ ದೃಷ್ಟಿಯಿಂದ ಮಾಡಿದ್ದನ್ನು ವ್ಯರ್ಥ ಮಾಡುವುದನ್ನು ಕಂಡು ಕೋಪ ಮೂಗಿನ ಮೇಲೆ ಬಂದು ನಿಂತಿತ್ತು. ಏನದು? ಸೈಡ್ ತೆಗೆದಿದ್ದು? ಅಂದಾಗಲೇ ಮಕ್ಕಳು  ಹೌಹಾರಿದ್ದು! ಅಮ್ಮಾ  ಇದೆಲ್ಲ  ಯಾಕ ಹಾಕಿದಿ? ನಮಗೆ ಇಷ್ಟ ವಾಗೊಲ್ಲ… ಅದಕ್ಕೊಂದಿಷ್ಟು ವಾದವಿವಾದಗಳನ್ನು ಕೇಳಿ ಸಾಕಾ ಗಿತ್ತು.ಹಣ್ಣಿನ ಜ್ಯೂಸ್ ಗಿಂತ ಹಣ್ಣು ತಿನ್ನೆಂದರೂ ತ್ರಾಸ್.  ಒಟ್ಟಿನಲ್ಲಿ  ಕಷ್ಟ ಪಡಬಾರದು. ಇದು ಎಲ್ಲರ ಮನೆಯ ಕಥೆಯೇ ಅಥವಾ ನಮ್ಮ‌ ಮನೆಯದು ಮಾತ್ರವೋ ಕಾಣೆ.

ಎಲ್ಲ ಪೋಷಕಾಂಶಗಳು ನಿರ್ದಿಷ್ಟ ಪ್ರಮಾಣದಲ್ಲಿ ದೇಹಕ್ಕೆ ಸೇರಿದರೆ ಮಾತ್ರ ಮಕ್ಕಳಿಗೆ ಇಮ್ಯೂನಿಟಿ ಪವರ್ ಹೆಚ್ಚಾಗಲು ಸಾಧ್ಯ. ಮಕ್ಕಳಿಗೆ ತಿನ್ನಿಸುವ ಕಾರ್ಯದಲ್ಲಿ ಹರ ಸಾಹಸ ಪಡುವ ತಂದೆ ತಾಯಿಗಳ ನೆನೆದರೆ ಅಯ್ಯೋ ಅನಿಸುತ್ತದೆ. ವಿಚಿತ್ರ ನೋಡಿ ಡೋರೆಮ್ಯಾನ್ ಗಳಲ್ಲಿ ನೋಬಿತಾಗೆ ಸಿಗೋತರ ಗ್ಯಾಜೆಟ್ ಕೊಡೊರು ಒಬ್ಬರು ಮನೆಯಲ್ಲಿ ಇದ್ದರೆ ಎಷ್ಟ ಚಂದ. ಮಕ್ಕಳಿಗೆ ಬರಿ ಸಿಂಚಾನ್ ತರ ಆಗೋ ಆಸೆ. ಮನೆಯನ್ನು ಧಾರಾವಾಹಿಯ ನ್ನಾಗಿ ಮಾಡಿ ಯಾರಿಗೂ ಏನನ್ನೂ ನೋಡಲಾರದ ಹಾಗಾಗಿದೆ.

ಎಲ್ಲ ಪಾಲಕರ ಗೋಳು “ಶಾಲೆಯಾವಾಗ ಶುರುವಾಗುವುದೋ ಎಂಬ ಪ್ರಾರ್ಥನೆ”. ಅದೊಂದು ಥರಾ ಧರ್ಮಸಂ‌ಕಟ.ಮಕ್ಕಳು ಮನೆಯಲ್ಲಿದ್ದಷ್ಟು ಹೊತ್ತುಕಾಳಜಿ,ಗಮನದ ಜೊತೆಗೆ ಜ್ಞಾನವನ್ನು ನೀಡಬೇಕು, ಅದು ಅನಿವಾರ್ಯವು ಹೌದು.‌‌ಟಿ.ವಿ.ಬೋರಾಗಿದೆ ಮೊಬೈಲ್ ಸಾಕಾಗಿದೆ, ಊರು,ಕೇರಿಸುತ್ತೊ ಮನಸ್ಸಾಗಿದೆ. ಸೈಕಲ್ ಇಟ್ಟಲ್ಲೆ ಇಟ್ಟು ಜಂಗ್ ಹಿಡಿಯುವಂತಾಗಿದೆ.ಸ್ಕೂಲ್ ಬ್ಯಾಗ್ಓಪನ್‌‌ ಮಾಡಿ ಮತ್ತೆ ಮುಚ್ಚಾಗಿದೆ.ಎಷ್ಟೋ ದಿನಗಳಿಂದ ತಲೆಯೇ ಮಂಕಾ ಗಿದೆ. ಬರೆಯೋ ಹವ್ಯಾಸ ನಿಂತೆ ಹೋಗಿದೆ.ಒಂಥರಾ ಜಂಗಲಿ ಟಾರ್ಜನ್ ತರ ಸಿದ್ದವಾಗುತ್ತಿರುವ ಮಕ್ಕಳ ಮನೋಸ್ಥಿತಿ. ಮೂರು ವರ್ಷದ ಬುದ್ದಿ ನೂರು ವರ್ಷದ ತನಕ ಎಂಬ ಮಾತು ಮರೆಯುವಂತಿಲ್ಲ.

ಅಥೆನ್ಸ್ ನಲ್ಲಿ‌ ಆರಿಂದ ಎಂಟು ವರ್ಷದ ಬಾಲಕ ಒಂದು ಮನೆಯ ಮುಂದೆ ಸಾಲು ಸಾಲಾಗಿ ನಿಂತ ಜನರ ಕಂಡು ಆಶ್ಚರ್ಯದಿಂದ ಕೇಳಿದ, ನೀವೆಲ್ಲ ಹೀಗೇಕೆ ಸಾಲುಗಟ್ಟಿ ನಿಂತಿರುವಿರಿ? ಏನು‌ ನಡಿತಿದೆ ಒಳಗೆ? ಪುಟ್ಟ ಬಾಲಕನ ಪ್ರಶ್ನೆಗೆ ‌ಒಳಗೆ ಹಸ್ತಮುದ್ರಿಕೆ ನೋಡಿ ಭವಿಷ್ಯ ಹೇಳುತ್ತಿರುವ ಮಹಾನ್ ವ್ಯಕ್ತಿ ಇದ್ದಾರೆ, ಅವರ ಹತ್ತಿರ ಭವಿಷ್ಯ ಕೇಳಲು ಜನರು ನೆರೆದಿರುವರು ಎಂದಾಗ ಕುತೂಹಲ ದಿಂದ ಆ ಬಾಲಕ ತಾನು ಸರದಿ ಸಾಲಿನಲ್ಲಿ ನಿಂತುಕೊಂಡನು. ಹಸ್ತ ಮುದ್ರಿಕೆ ನೋಡುವವನ ಮುಂದೆ ಪುಟ್ಟಕೈ ಚಾಚಿದ್ದ ನ್ನು ಕಂಡು ಚಿಕ್ಕ ಮಕ್ಕಳಿಗೆಲ್ಲ ಭವಿಷ್ಯಹೇಳು ವುದಿಲ್ಲ ಎಂದರು.ಆ ಬಾಲಕ ದೊಡ್ಡವನಾಗಿ ಭವಿಷ್ಯ ಕೇಳೊದಕ್ಕಿಂತ ಈಗ ಹೇಳಿದರೆ ನಾನು ದೊಡ್ದವನಾದ ಮೇಲೆ ಏನಾಗುತ್ತೇನೆ ಎಂಬುದನ್ನು ತಿಳಿದುಕೊಳ್ಳ ಬಹುದು. ಪುಟ್ಟಕೈ ತೀಕ್ಷ್ಣವಾಗಿ ಗಮನಿಸಿ ಅಬ್ಬಾ…ಅಗಾಧ ಅಪ್ರತಿಮ ವೀರನಾಗುವ ಭವಿಷ್ಯ. ಆದರೆ ಇದೊಂದು ಗೆರೆ ಇದ್ದಿದ್ದರೆ ಚಕ್ರವ‌ರ್ತಿಯಾಗುತ್ತಿದ್ದೆ ಅಂದರಷ್ಟೇ.ಬಾಲಕ ತಕ್ಷಣ ಎದ್ದು ನಿಂತು ಚಿಕ್ಕ ಚಾಕುವಿನಿಂದ ಎಲ್ಲಿ ಗೆರೆ ಬೇಕಿತ್ತು ಅನ್ನುತ್ತ ಒಂದು ರೇಖೆ ಯನ್ನು‌ ಅಲ್ಲಿ ಎಳೆದೇ ಬಿಟ್ಟ. ಪುಟ್ಟ ಕೈ ತುಂಬ  ರಕ್ತ ಹರಿಯು ತ್ತಿದ್ದರೂ ಗಮನಿಸದೇ ಒಂದಿಷ್ಟೂ ಅಳುಕದೇಅಚಲವಾಗಿ ನಿಂತ ಹುಡುಗನನ್ನು ಭಲೇ ಬಾಲಕ ನಿನ್ನ ಛಲ ವಿಶ್ವಾಸ ದೃಢವಾಗಿದ್ದರೆ ನೀ ಖಂಡಿತವಾಗಿ ಚಕ್ರವರ್ತಿಯಾಗುತ್ತಿ‌ ಎಂದುಹಾರೈಸಿದರಂತೆ.

ಮಕ್ಕಳಿಗೆ ಹುಮ್ಮಸ್ಸು, ತಾನು ಏನಾಗಬೇ ಕೆಂಬ ಹಂಬಲ ಹಾಗೂ ತನ್ನ ಕನಸೇನು? ಎಂಬುದನ್ನು ಬಾಲ್ಯದಲ್ಲೆ ಅದು ಮೊಳಕೆಯೊ ಡೆಯ ಬೇಕು.ಹಿರಿಯರು”ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು” ಅಂತ ವ್ಯಾಖ್ಯಾನಿಸಿದ್ದಾರೆ.ಮಕ್ಕಳ ಭವಿಷ್ಯ ಅಡಗಿರುವುದು ಹಸ್ತ ರೇಖೆಯಲ್ಲಿ‌ ಅಲ್ಲ. ಅವರ ಆಚಲ ಆತ್ಮ ವಿಶ್ವಾಸ ತುಂಬಿದ ಮನದಲ್ಲಿ. ಮಗು ಹೆಣ್ಣಿ ರಲಿ,ಗಂಡಿರಲಿ ಪ್ರಶ್ನೆಯಲ್ಲ ಅದರ ಭವಿಷ್ಯ ಉಜ್ವಲವಾಗಿರಲೆಂಬ ಆಶಯ.

🔆🔆🔆

  ✍️ಶ್ರೀಮತಿ.ಶಿವಲೀಲಾ ಹುಣಸಗಿ       ಶಿಕ್ಷಕಿ, ಯಲ್ಲಾಪೂರ