ಅಮೇರಿಕಾದ John Berryman.    ಬರೆದ The Ball Poem ಎಂಬ
ಕವನದ ಭಾವಾನುವಾದ. ಇಪ್ಪತ್ತನೇ ಶತಮಾನದ ಉತ್ತರಾರ್ಧದ ಪ್ರಮುಖ ಕವಿ ಹಾಗೂ ವಿದ್ವಾಂಸನೆಂದು ಖ್ಯಾತ ಅವನು. Confessional” school of poetry ಯ ಪ್ರಮುಖ ಕವಿ ಎಂದೇ ಪ್ರಸಿದ್ಧ.

Born: 25 October 1914, USA
Died: 7 January 1972, USA
Awards: Bollingen Prize,
National Book Award for Poetry,
Pulitzer Prize for Poetry ಇತ್ಯಾದಿ

  ಚೆಂಡಿನ ಹಾಡು
ಏನು ಏನ ಮಾಡುವನೀಗ?
ನಾ ಕಂಡೆ ಅದು ಬೀದಿಯಲಿ
ಪುಟಿಯುತ್ತ ಮುದದಲ್ಲಿ,
ಅದೋ ಅಲ್ಲಿ
ಇಹುದಲ್ಲಿ ನೀರಲ್ಲಿ!
‘ಓ, ಮತ್ತೆ ಬೇರೆ ಚೆಂಡುಗಳಿಹವು’ ಎನ್ನುವದರಲ್ಲಿಲ್ಲ ಅರ್ಥವು.
ನಡುಗುತ್ತ ಅನೂಹ್ಯ ವಿಷಾದದಲಿ ಸ್ತಂಭೀಭೂತನಾಗಿಹನಲ್ಲಿ
ನತಮಸ್ತಕನಾಗಿ ನಿಂತಿಹನಲ್ಲಿ.
ಚೆಂಡ ಕಳಕೊಂಡ ಆ ಬಂದರಿನಲ್ಲಿ ಬಾಲ್ಯವನೆಲ್ಲ ಕಳೆಯುವನಲ್ಲಿ.
ನಾ ಹಸ್ತಕ್ಷೇಪ ಮಾಡುವುದಿಲ್ಲ;
ಮೂರು  ಕಾಸಿನ  ಬೇರೆ  ಚೆಂಡಿಗಿಲ್ಲಿ ಯಾವುದೇ ಬೆಲೆಯಿಲ್ಲ.
ಈಗವನು ತನ್ನ ಮೊದಲ
ಜವಾಬ್ದಾರಿಯ ಅರಿಯುವನು.
ಎಲ್ಲವೂ ತನ್ನದೇ  ಸೊತ್ತೆಂಬ ಈ ಜಗದಲ್ಲಿ ಜನಚೆಂಡುಗಳ ಖರೀದಿಸುವರು,
ಮತ್ತೆ ಸದಾ ಕಳಕೊಳ್ಳುವರು. ಹುಡುಗನೋ, ಚಿಕ್ಕವನು ಪಾಪ.
ಅದೇ ಚೆಂಡ ಮತ್ತೆ ಖರೀದಿಸಲಾಗದು, ಹಣವೇಹಾಗೆ ಬಲು ಬಾಹ್ಯ.
ನಿರಾಶೆ  ತುಂಬಿದ  ತನ್ನ  ಕಣ್ಣುಗಳ  ಹಿಂದೆ ಅವ-ಕಲಿಯುತ್ತಿದ್ದಾನೆ, ಕಳೆದುಕೊಳ್ಳುವದೆಂದರೇನೆಂಬ ಜ್ಞಾನವ, ಬಿದ್ದಾಗ ಮೇಲೇಳುವುದು ಹೇಗೆಂದು, ಪ್ರತಿಯೊಬ್ಬನೂ ಒಂದಿಲ್ಲೊಂದು ದಿನ
ಅರಿಯಲೇಬೇಕಾದುದ.
ಬಹಳ ಸಲ ಬಿದ್ದರೂ
ಎದ್ದು ನಿಲ್ಲಲೇಬೇಕಾಗುವುದ.

             The Ball Poem.

What is the boy now, who has lost his ball.

What, what is he to do? I saw it go

Merrily bouncing, down the street, and then

Merrily over—there it is in the water!

No use to say ‘O there are other balls’:

An ultimate shaking grief fixes the boy

As he stands rigid, trembling, staring down

All his young days into the harbour where

His ball went. I would not intrude on him,

A dime, another ball, is worthless. Now

He senses first responsibility

In a world of possessions. People will take balls,

Balls will be lost always, little boy,

And no one buys a ball back. Money is external.

He is learning, well behind his desperate eyes,

The epistemology of loss, how to stand up

Knowing what every man must one day knowAnd most know many days, how to stand up

                      🔆🔆🔆

✍️ಆಂಗ್ಲ:ಜಾನ್ ಬೆರಿಮ್ಯಾನ್ 
ಕನ್ನಡಕ್ಕೆ:ಕವಿತಾ ಹೆಗಡೆ ಅಭಯಂ.    ಹುಬ್ಬಳ್ಳಿ