ಬುದ್ದ ಮತ್ತು ನಾವು.

ಸರ್ವವನೂ ತ್ಯಜಿಸಿಯೂ
ಬುದ್ದ ನಗುತ್ತಲೇ ಇದ್ದಾನೆ
ಸಕಲವನೂ ಗಳಿಸಿಯೂ
ನಾವು ಅಳುತ್ತಲೇ ಇದ್ದೇವೆ

ತ್ಯಾಗ, ವಿರಾಗದ ಮಹತ್ವ
ಅರಿತ ಸಂತೃಪ್ತ ಅವನು.!
ಭೋಗ, ರಾಗದ ತತ್ವವಷ್ಟೇ
ತಿಳಿದ ತಪ್ತರು ನಾವು.!



ಅನೂಹ್ಯ

ಬುದ್ದನ ನಗುವನ್ನೇ
ಅರ್ಥ ಮಾಡಿಕೊಳ್ಳದ
ಮೂರ್ಖರು ನಾವು.!
ತಿಳಿದೀತೇ ನಮಗೆ
ಬೋಧಿವೃಕ್ಷ, ಬುದ್ದ
ಬೌದ್ದತ್ವದ ಠಾವು.?!



ಬೆಳಕು.!

ನಮ್ಮ ಮೊಗದ ನಿಷ್ಕಲ್ಮಶ ನಗೆ
ಬದ್ದನ ಮುಗುಳ್ನಗೆಯೊಂದಿಗೆ
ಸಮೀಕರಣಗೊಂಡ ಘಳಿಗೆ…..
ಜ್ಞಾನೋದಯವಾದೀತು ಬದುಕು
ಸಾಕಾರವಾದೀತು ಆ ಬೆಳಕು.!

                         🔆🔆🔆
✍️ಎ.ಎನ್.ರಮೇಶ್.ಗುಬ್ಬಿ.