ಬುದ್ಧನನ್ನು ನಾನು ನೋಡಲಿಲ್ಲ
ಆದರೆ…..!?
ಕೇಳುತಿರುವೆ ಈಗಲೂ…
ಬಹುಶಃ ಮುಂದೆಯೂ…..
ಆದರೆ….!?
ನಮ್ಮಲ್ಲಿ ಯಾವತ್ತೂ ಬುಧ್ಧ ಮೈದುಂಬಿ ಆಳಕಿಳಿಯಲಿಲ್ಲ….!
ನೆಲದಡಿ ಬೇರೂರಿ ಊರ್ಧ್ವಮುಖಿಯಾಗಿ
ಮರವನು ತಬ್ಬಿ ಹಬ್ಬಿದ ಬಳ್ಳಿಯಂತೆ….!
ಅವನ ನುಡಿಗಣ್ಣು ಚುಚ್ಚಲಿಲ್ಲ…..!
ಸರಳ ತತ್ವ ಪಾಲಿಸಲಿಲ್ಲ…..!

ಆದರೆ….ಏನು?
ಬುಧ್ಧನು ನಮಗೆ ಬೆನ್ನ ಹಿಂದಿನ ಕಾಯುವ ಬೆಳಕು
ಅದಕ್ಕೇ ಬುಧ್ಧ ನಮಗೆ ಬೇಕೇ ಬೇಕು….
ಬರೀ ನಮಗೆ ಮಾತ್ರವಲ್ಲ ಎಲ್ಲ ಪರಂಪರೆಯವರೆಗೂ ಬೇಕು….
ಅದಕ್ಕೇ…
ಬುಧ್ಧನೆಂದರೆ ಎಲ್ಲರಿಗೂ ದಕ್ಕದೆಯೇ ದಕ್ಕಿದ ಬೆಳಕಿನ ವರ….!
ಅರಮನೆಗೆ ಬಳಸಿದ ಮಣ್ಣು ನೆಲಕುರುಳದೆಯೇ ದಕ್ಕಿದ ಬೆಳಕಿನ ವರ…!

ಅಗೋ ಹೊರಟ….
ತಿರುಗಿ ಬರದೆ….
ಒಮ್ಮೆಯೂ ನೆನೆಯದೆ ತನ್ನ ಪೂರ್ವ ವೈಭವ…!
ಇದು ಯಾವತ್ತಿಗೂ ಖಾಲಿಯೆಂದು
ಶುಭ್ರ ಆಕಾಶ…..ಕೆ ತಲೆಕೊಟ್ಟ…..!
ತಾನದುವರೆಗೂ ನಡೆದು ಬಂದ ದಾರಿ…
ಹೆಮ್ಮೆಯ ದಾರಿಯೆಂದೇ ತಾಳ್ಮೆಗೆಡದ ಭೂತಾಯಿ…ಮೇಲೆ ಕಾಲಿಟ್ಟ ದಿಗಂಬರನಾಗಿ……!!!

ಗೊತ್ತಿತ್ತೊ ಏನೋ ಬುಧ್ಧನಿಗೆ….?
ಆಕಾಶದಷ್ಟು ಸ್ವಚ್ಛ….
ಭೂತಾಯಿಯಷ್ಟು ತಾಳ್ಮೆ…
ಈ ಶಿರ ಮತ್ತು ಪಾದ ಹೊತ್ತ ಮಲಿನ ಶರೀರಕಿಲ್ಲವೆಂದು….!

ಅದಕ್ಕೇ ನಿಶ್ಚಯಿಸಿದ…
ಜ್ಞಾನದ ತಪಗೈದ…
ಏಷ್ಯಾದ ಬೆಳಕಾದ…
ಸಿದ್ಧಾರ್ಥನಿದ್ದವನು ಗೌತಮ ಬುಧ್ಧನಾದ…!

✍️ವೇಣು ಜಾಲಿಬೆಂಚಿ
ರಾಯಚೂರು.