ಇಂದಿಗೂ ನಾವು ಜೀವಿಸುತ್ತಿರುವ ಸಮ ಕಾಲೀನ ಜಗತ್ತು ಅನೇಕ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಸುಪ್ತ ಜ್ವಾಲಾಮುಖಿ. ಧರ್ಮಾಂಧತೆ ಕೋಮುವಾದ ಭಯೋತ್ಪಾ ದನೆ ಜಾತೀಯತೆಗಳಂತಹ ಧರ್ಮಸಂಬಂಧಿ ಭುಗಿಲುಗಳು, ಅಸಮಾನತೆವರ್ಗಸಂಘರ್ಷ ಮೌಢ್ಯತೆ ಭ್ರಷ್ಟಾಚಾರ ಮೊದಲಾದ ಸಾಮಾಜಿಕ ತಲ್ಲಣಗಳು, ನಿರುದ್ಯೋಗ ಸಂಪತ್ತಿನ ಕ್ರೋಢೀಕರಣ ದಂತಹ ಆರ್ಥಿಕ ಸಮಸ್ಯೆಗಳು, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಈ ಎಲ್ಲ ಉರಿಗಳು ಸುತ್ತುವರಿದು ಸಮಾಜವನ್ನುದಹಿಸುತ್ತಿವೆ. ಮನುಕುಲ ಮುಂದುವರಿದಷ್ಟೂ ವಿದ್ಯಾ ಭ್ಯಾಸ ಹೆಚ್ಚಾದಷ್ಟೂ ಕಡಿಮೆ ಆಗಬೇಕಿದ್ದ ಈ ಎಲ್ಲವೂ ನಾಗರಿ ಕತೆಯ ನಾಗಾಲೋಟ ದಲ್ಲಿ ಬೇರೆ ರೀತಿಯ ಆಯಾಮವನ್ನು ಪಡೆ ದುಕೊಂಡು ಮತ್ತಷ್ಟು ವಿಜೃಂಭಿಸತೊಡಗಿವೆ. ಇವೆಲ್ಲವುಗಳು ಮಾನವನ ಸೃಷ್ಟಿಯ ಆದಿ ಯಿಂದಲೂ ಇದ್ದದ್ದೇ. ಕಾಲಯಾನದ ಪರಿ ಭ್ರಮಣದಲ್ಲಿ ಬೇರೆ ಬೇರೆ ರೂಪ ಆಕಾರ ತಳೆದಿವೆ ಅಷ್ಟೇ. ಶತಶತಮಾನಗಳಿಂದ ನಡೆ ಯುತ್ತಿರುವ ಹಲವು ದೌರ್ಜನ್ಯಗಳು ಮುಗಿಲು ಮುಟ್ಟಿ ಅಸಹನೀಯವಾದಾಗ ಲೆಲ್ಲ ಒಬ್ಬೊಬ್ಬರು ಅವತಾರ ಪುರುಷರ ಆಗಮನವಾಗಿ ಕ್ರಾಂತಿಯ ಕಹಳೆ ಮೊಳಗಿ ದುರ್ಭರ ಸಮಸ್ಯೆಗಳ ಪರಿಹಾರ ಸ್ವಲ್ಪ ಮಟ್ಟಿಗಾದರೂ ಆಗಿ ಬದುಕು ಸಹನೀಯ ವೆನಿಸಿದ ಪ್ರಸಂಗ ಗಳಿವೆ.  ಶಾಂತಿ ನೆಮ್ಮದಿ ಗಳ ತಂಗಾಳಿ ಸ್ವಲ್ಪ ಕಾಲವಾದರೂ ಬೀಸಿ ತಂಪೆರೆದಿದೆ. ಸಾಮಾಜಿಕ ಜಾಗೃತಿಯ ಮೊಳಕೆ ಬಿತ್ತಿ ವೈಚಾರಿಕತೆಯ ನೀರೆರೆದು ನವ ಸಮಾಜದ ನಿರ್ಮಾಣಕ್ಕೆ ನಾಂದಿಯಾ ಗುತ್ತಿದೆ. ಈ ನಿಟ್ಟಿನಲ್ಲಿ ನೆನೆಯಲೇ ಬೇಕಾದ ಚೇತನ ಗೌತಮ ಬುದ್ಧ.ದುಃಖದ ನಿವಾರ ಣೆಯ ದಾರಿ ತೋರಿದ ಬುದ್ಧ, ಸಮಾನತೆ ಹಾಗೂ ಮಾನವತೆಯ ಹರಿಕಾರನಾಗಿ ಬರೀ ವ್ಯಕ್ತಿಯಾಗದೆ ವ್ಯಕ್ತಿತ್ವವಾಗಿ ರೂಪುಗೊಂಡು ಸಮಾಜದ ಪರಿವರ್ತನೆಗೆ ಮಾರ್ಗ ಪ್ರವರ್ತ ಕರಾದದ್ದು ಶತಮಾನಗಳ ಇತಿಹಾಸ ನಿರ್ಮಿಸಿದ ಮಹಾ ಚರಿತ್ರೆ. ಇಂತಹವರ ಜೀವನವನ್ನು ಅರಿಯುವುದು ಸಾಧನೆಯ ಬಗ್ಗೆ ತಿಳಿಯುವುದು ಮತ್ತು ಅವರ ವಿಚಾರ ಗಳ ಬೆಳಕಿನಲ್ಲಿ ಮುಂದಡಿ ಇಡುವುದು ಇಂದಿನ ಈ ಪ್ರಕ್ಷುಬ್ಧತೆಯ ವಾತಾವರಣ ದಲ್ಲಿ ಹೆಚ್ಚು ಪ್ರಸ್ತುತ ಹಾಗೂ ಅನಿವಾರ್ಯ ತೆಯೂ ಹೌದು . ಈ ನಿಟ್ಟಿನಲ್ಲಿ ಬುದ್ದನ ಜೀವನ ಆದರ್ಶ ಮತ್ತು ತತ್ವಗಳ ಕಡೆ ಗಮನ ಹರಿಸೋಣವೇ? 

ಗೌತಮಬುದ್ದ

ಕ್ರಿಸ್ತಪೂರ್ವ ೫೫೭-೪೪೭ಬೌದ್ಧ ಧರ್ಮದ ಸ್ಥಾಪಕ  ಕಪಿಲವಸ್ತುವಿನಲ್ಲಿ  ರಾಜ ಶುದ್ದೋಧನ  ಹಾಗೂ   ಮಾಯಾದೇವಿ (ಸಾಕುತಾಯಿ ಪ್ರಜಾಪತಿದೇವಿ)ಗೆ ವೈಶಾಖ ಶುದ್ಧಪೂರ್ಣಿಮೆಯಂದು ಮಗನಾಗಿ ಜನಿಸಿ ದರು. ಜಾತಕದ ಪ್ರಕಾರ ಮಹಾ ಚಕ್ರವರ್ತಿ ಅಥವಾ ಮಹಾನ್ ಯೋಗಿ ಆಗಬಹುದು ಎಂದಿದ್ದರಿಂದ ಅವನಿಗೆ ಲೌಕಿಕ ಕಷ್ಟಗಳು ತಿಳಿಯದಂತೆ ಬೆಳೆಸಿದ್ದರು.ಒಮ್ಮೆ ಸಾಂಪ್ರ ದಾಯಿಕ ಸಮಾರಂಭದ ನೇಗಿಲ ಉತ್ತುವಿ ಕೆಯಲ್ಲಿ ಭೂಮಿಯಿಂದ ಹೊರಬಂದ ಕ್ರಿಮಿ ಗಳನ್ನು ಪಕ್ಷಿಗಳು ಕೊಕ್ಕಿನಲ್ಲಿ ಕುಕ್ಕಿತಿಂದದ್ದು, ಸೋದರ ಹೊಡೆದ ಹಂಸಪಕ್ಷಿಯನ್ನು ಕಂಡು ಶುಶ್ರೂಷೆ   ಮಾಡಿದ್ದು  ಅವನಲ್ಲಿದ್ದ   ಅಂತ ರ್ಗತ ಮಾನವೀಯತೆ ಗುಣಕ್ಕೆ ಕನ್ನಡಿ ಹಿಡಿ ಯುತ್ತದೆ.ಮುಂದೆ ಒಬ್ಬ ರೋಗಿ, ವಯಸ್ಕ ಸಾವು ಹಾಗೂ ಸನ್ಯಾಸಿ ಇವುಗಳ ದರ್ಶನ ದಿಂದ ವಿರಕ್ತಭಾವ ಮೂಡಿ ಅರಮನೆ ಮಡದಿ ಹಸುಗೂಸನ್ನು ತ್ಯಜಿಸಿ ಜ್ಞಾನ ಸಾಕ್ಷಾ ತ್ಕಾರಕ್ಕಾಗಿ ಹೊರಡುತ್ತಾನೆ. ಹಲವು ಜ್ಞಾನಿ ಸಾಧಕರ ಒಡನಾಟದಿಂದಲೂಜ್ಞಾನಮಾರ್ಗ ತಿಳಿಯ ದಿರಲು ಕಡೆಗೆ ಕಾಡಿಗೆತೆರಳಿ ಧ್ಯಾನಾ ಸಕ್ತನಾಗಿ ಜ್ಞಾನೋದಯವಾಗಿ ಬುದ್ಧನಾಗು ತ್ತಾನೆ, ನಂತರ ತನಗೆ ದೊರೆತ ಈ ಜ್ಞಾನ ಸಂಪತ್ತನ್ನು ಲೋಕಕ್ಕೆಲ್ಲ ವಿತರಿಸುತ್ತಾನೆ. ಆರಾತ್ರಿ ಅವನಿಗೆ ನಾಲ್ಕು  ಜಾವಗಳಲ್ಲಿ ನಾಲ್ಕು ವಿಧವಾದ ಅನುಭವಗಳಾದವಂತೆ. ಅವು:

೧.ಜನ್ಮಾಂತರದ ಅರಿಯುವಿಕೆ      ೨.ನಿತ್ಯಾ ನಿತ್ಯ ವಸ್ತುಗಳ ವಿವೇಕೋದಯ    ೩.ಜರಾ ಮರಣಗಳ ದುಃಖಕ್ಕೆ ಕ್ಷಣಿಕ ವಸ್ತುಗಳ ತೃಷೆ ಯೇ ಕಾರಣ ೪.ಆಧ್ಯಾತ್ಮದ ಸಾಕ್ಷಾತ್ಕಾರ.  

“ಆಸೆಯೇ ದುಃಖಕ್ಕೆ ಮೂಲ” ಎಂಬುದು ಬುದ್ಧನ ಮೂಲತತ್ವ. ಸಂಶೋಧನೆ, ತಿಳುವ ಳಿಕೆ ಅನುಭವಿಸುವಿಕೆ ಮತ್ತು ಅದನ್ನು  ಮನನ ಮಾಡಿಕೊಳ್ಳುವುದು ಇದೇ ಮುಕ್ತಿ ಮಾರ್ಗ.ಇದನ್ನು ಪಾಲಿ ಭಾಷೆಯಲ್ಲಿ ದಮ್ಮ ಎನ್ನುತ್ತಾರೆ.  ಯಾರು  ಬೇಕಾದರೂ  ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಮತ್ತು ತನ್ನಂತೆ ಎಚ್ಚರ ಸ್ಥಿತಿಯನ್ನು ಹೊಂದಬಹುದು ಹಾಗೂ ಈ ಸ್ಥಿತಿಯನ್ನು ಸಾಧಿಸಿದ ಯಾರು ಬೇಕಾದರೂ ಬುದ್ಧ ಆಗಬಹುದು ಎನ್ನುತ್ತಾನೆ. ಬುದ್ದ ಎಂದರೆ ನಿದ್ದೆಯಿಂದ ಎದ್ದವನು ಜಾಗೃತ ನಾದವನು ಜ್ಞಾನಿ ವಿಕಸಿತ ಎಂದು ಅರ್ಥ. ಬೌದ್ದ ಧರ್ಮದ ಮೂಲ ಸಂಕೇತಗಳು:

ಬುದ್ದಂ ಶರಣಂ ಗಚ್ಚಾಮಿ (ನಾನುಬುದ್ದನಿಗೆ ಶರಣಾಗುತ್ತೇನೆ) ದಮ್ಮಂ ಶರಣಂ ಗಚ್ಚಾಮಿ (ನಾನು ಧಮ್ಮಕ್ಕೆ ಶರಣಾಗುತ್ತೇನೆ) ಸಂಘಂ ಶರಣಂ ಗಚ್ಚಾಮಿ (ನಾನು ಸಂಘಕ್ಕೆ ಶರಣಾಗುತ್ತೇನೆ).

ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಟಕಗಳೆಂಬ ಮಾರ್ಗಸೂಚಿಗಳಿವೆ. ಅವುಗಳೆಂದರೆ:
೧.ವಿನಯ ಪಿಟಕ ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗೆ ಸಂಬಂಧಿಸಿದ ನಿಯಮಗಳ ಸಂಗ್ರಹ
೨.ಸುತ್ತ ಪಿಟಕ ನಾಲ್ಕು ಆರ್ಯ ಸತ್ವ ಗಳಿಗೆ ಸಂಬಂಧಿಸಿದ ಸಂಭಾಷಣೆಗಳು ಗೀತೆ ಕಥೆ ಉಪ ಕತೆಗಳ ಸಂಗ್ರಹ
೩.ಅಭಿದಮ್ಮ ಪಿಟಕ ಸುತ್ತ ಪಿಟಕದಲ್ಲಿನ ಬೋಧನೆ ಮೂಲತತ್ವಗಳ ವಿಶದೀಕರಿಸಿದ ರೂಪ.
ಹೀಗೆ ಬಿಕ್ಕು ಸಂಘಗಳು ಸ್ಥಾಪನೆಯಾಗಿ ಪ್ರಪಂಚದಾದ್ಯಂತ ಧಮ್ಮದ ಉನ್ನತಿ ಗಾಗಿ ಕಾರ್ಯನಿರತವಾಗಿವೆ.ಬುದ್ಧನು ದೇವರಲ್ಲ, ದೇವ ದೂತನೂ ಅಲ್ಲ ಮತ್ತು ದೈವಾಂಶ ಸಂಭೂತನೂ ಅಲ್ಲ. ಆದರೆ ತನ್ನ ಸ್ವಸಾಮ ರ್ಥ್ಯದಿಂದ  ಅತ್ಯುನ್ನತ  ಜ್ಞಾನಪಡೆದು  ಜಗ ತ್ತಿನ ಪರಮ ಸತ್ಯವನ್ನು ಬೋಧಿಸಿದ. ಸಮ ಕಾಲೀನ ಪ್ರಪಂಚದಲ್ಲಿ ಬುದ್ಧನ ಉಪದೇಶ ಗಳ ಸಮನ್ವಯತೆ ಕ್ಷಣಿಕ ಸುಖಕ್ಕಾಗಿ ಪಾಪ ಸಂಚಯಿಸುವ ಸಾಗರದಷ್ಟು ದುಃಖ   ಅನು ಭವಿಸುವ ಜನರೇ ಹೆಚ್ಚಿರುವ ಈ ಜಗತ್ತಿನಲ್ಲಿ ಬುದ್ಧನ ಉಪದೇಶಗಳನ್ನು ಒಮ್ಮೆ ಓದಿದರೆ ಸಾಕು ಬದುಕಿನ ನಿಜವಾದ ಅರ್ಥ ತಿಳಿಯು ತ್ತದೆ.ಬುದ್ಧನ ಅನೇಕ ಬೋಧನೆಗಳು ಪ್ರೀತಿ ಯ ಮಹತ್ವ ಹಾಗೂ ಜಾಗೃತ ಮನಸ್ಥಿತಿಯ ಬಗ್ಗೆ  ತಿಳಿವಳಿಕೆ  ಹೇಳುತ್ತದೆ. ಹೀಗೆ   ಪ್ರೀತಿ ಯಿಂದ ತುಂಬಿ ನಕಾರಾತ್ಮಕಭಾವನೆಗಳಿಂದ ದೂರಾದರೆ ಸಾಕು ಇಂದಿನ ಕಿತ್ತುತಿನ್ನುವ ಜ್ವಲಂತ ಸಮಸ್ಯೆಗಳು ಗಡೀಪಾರಾಗುತ್ತವೆ. ಭೂತ  ಹಾಗೂ  ಭವಿಷ್ಯ  ಕಾಲಗಳ  ಬಗ್ಗೆ ಹೆಚ್ಚಾಗಿ ಚಿಂತಿಸದೆ ವರ್ತಮಾನದಲ್ಲಿ ಜೀವಿ ಸುವ ವ್ಯಕ್ತಿ ತೃಪ್ತ ಎನ್ನುತ್ತಾನೆ ಬುದ್ಧ.ಇಂದಿನ ಈ ಕಾರ್ಪೋರೇಟ್ ಯುಗದಲ್ಲಿ ಈ ತತ್ವ ಅನುಸರಿಸಿದರೆ ಸಾಕು ಜೀವನವೇಸುಂದರ.

ಒಳಮನಸ್ಸನ್ನು  ಅವಲೋಕಿಸಿ:   ಲೌಕಿಕ ವಸ್ತುಗಳಿಂದ ಸುಖ ಮನಶಾಂತಿ ಸಿಗುವು ದಿಲ್ಲ, ಅದು ಮನಾಂತರ್ಗತ.  ಅಲ್ಲಿಯೇ ಕಂಡುಕೊಳ್ಳಬೇಕು. ಆಸೆಗಳನ್ನು ತೊರೆದರೆ ಮನಃಶಾಂತಿ, ಇದು ಎಲ್ಲರಿಗೂ ತಿಳಿದಿರುವ ಸತ್ಯವೇ.ಶಿಸ್ತಿನೆಡೆಗೆ ಕೊಂಡೊಯ್ಯಿರಿ. ನಮ್ಮ ಮನಸ್ಸು ನಮಗೆ ಗುಲಾಮರಾಗಬೇಕೇವಿನಃ ನಾವು ಅದರ ಗುಲಾಮರಾಗಬಾರದು. ಭೂಮಿಯ ಮೇಲಿನ  ಪ್ರತಿಯೊಬ್ಬ  ಜೀವಿ    ಯೂ ಸಹಜೀವನ ನಡೆಸಲು  ಯೋಗ್ಯ. ಹಾಗಾಗಿ ಪರಸ್ಪರ ಪ್ರೀತಿ ಸಹಾನುಭೂತಿ ಅವಶ್ಯ. ಇದೊಂದನ್ನು ಅರಿತರೆ ಸಾಕು, ಈಗಿನ  ಎಷ್ಟೋ  ಸಮಸ್ಯೆಗಳೇ ಉದ್ಭವವಾ ಗುತ್ತಿರಲಿಲ್ಲ.

                        🔆🔆🔆
  ✍️ಸುಜಾತಾ ರವೀಶ್,ಮೈಸೂರು