ಆಸೆಯೇ ದುಖಃಕ್ಕೆ ಮೂಲ ಎನ್ನುವ ಬದು ಕಿನ ಮೂಲ ಮಂತ್ರ ಬೋಧಿಸಿದ ಜಗದ ಬೆಳಕು ಗೌತಮ ಬುದ್ಧನು ಬೌದ್ಧ ಧರ್ಮದ ಸ್ಥಾಪಕ. ಜನರಿಗೆ ದುಖಃವನ್ನು ನಿವಾರಿಸಿ ಕೊಳ್ಳಲು ರಾಜಮಾರ್ಗ ತೋರಿಸಿದ ಮಾಹಾನ್ ಜ್ಞಾನಿ. ಜನಪರತೆ ಮತ್ತು ಸಮಾ ನತೆಯ ಆದಾರದ ಮೇಲೆ ಧರ್ಮ ಬೋಧನೆ ಮಾಡಿದ ಬುದ್ಧ ಎಲ್ಲಾ ಪೀಳಿಗೆ ಯವರಿಗೂ ಮಹಾನುಭಾವ. ಆದ್ದರಿಂದಲೇ ಬುದ್ದನನ್ನು ‘ಏಷ್ಯಾದ ಬೆಳಕು” ಎಂದು ಕರೆಯುತ್ತಾರೆ. ಬರಿ ಏಷ್ಯಾದ ಬೆಳಕಲ್ಲ ಇಡೀ ಪ್ರಪಂಚದ ಜ್ಯೋತಿಯೇ ಬುದ್ದನಾಗಿದ್ದಾನೆ. ಸಿದ್ಧಾರ್ಥ ಎನ್ನುವುದು ಬುದ್ಧನ ಮೂಲ ಹೆಸರು. ಸಿದ್ಧಾರ್ಥನ ತಂದೆ ಕಪಿಲವಸ್ತವನ್ನು ಆಳು ತ್ತಿದ್ದ. ಶಾಕ್ಯವಂಶಕ್ಕೆ ಸೇರಿದ ಶುದ್ಧೋ ದನ ಮತ್ತು ತಾಯಿ ಮಾಯಾದೇವಿ. ದೈವೀಪು ರುಷ ಬುದ್ಧನಿಗೆ ಮಾಯಾದೇವಿಯು ತವರು ಮನೆಗೆ ಹೋಗುತ್ತಿದ್ದಾಗ ಮಾರ್ಗದ ನೇಪಾಳದ ಲುಂಬಿನಿವನದಲ್ಲಿ ವೈಶಾಕ ಶುದ್ಧ ಪೂರ್ಣಿಮೆಯಂದು ಜನ್ಮನೀಡಿದಳು. ಆದರೆ ಬುದ್ಧನ ಜನನದ 7ನೇ ದಿನ ಮಾಯಾದೇವಿ ತೀರಿಕೊಂಡಳು. ಆದ್ದರಿಂದ ಬುದ್ಧನು ಮಲತಾಯಿ ಪ್ರಜಾ ಪತಿಯ ಆರೈಕೆಯಲ್ಲಿ ಬೆಳೆದನು. ಗೌತಮ ಬುದ್ಧನು ಒಮ್ಮೆ ರಾಜಭಟರೊಂದಿಗೆ ರಾಜಬೀದಿಯ ಲ್ಲಿ ಸುತ್ತಾಡುತ್ತಿದ್ದಾಗ,ಒಬ್ಬ ರೋಗಿಯನ್ನು, ಒಬ್ಬ ವೃದ್ಧನನ್ನು, ಒಬ್ಬ ಸನ್ಯಾಸಿಯನ್ನೂ ಮತ್ತು ಒಂದು ಶವವನ್ನು ನೋಡಿದನು. ಈ ನಾಲ್ಕು ದೃಶ್ಯಗಳು ಅವನಿಗೆ ಬದುಕಿನ ಮೇಲೆ ವೈರಾಗ್ಯ ತಾಳುವಂತೆ ಮಾಡಿದವು. ಪ್ರಪಂಚವು ದುಖಃದಿಂದ ಕೂಡಿದೆ ಎಂದು ಅರಿತು ಅದಕ್ಕೆ ಪರಿಹಾರ ಹುಡುಕಲು ಅಣಿ ಯಾದನು ಹೌದು ನಮ್ಮ ಬಾಲ್ಯದಿಂದಲೂ ನಾವು ಬುದ್ದನನ್ನು ಕುರಿತು ಓದುತ್ತಾ ಬಂದಿ ರುವ ಸಂಗತಿಯಿದು.ಹೀಗೆ ಬುದ್ಧ ಹುಟ್ಟಿದಾ ಗಲೆ ‘ಅಶಿತ’ ಮಹರ್ಷಿಯು ಹೇಳಿದ್ದರು, “ಬುದ್ಧನು ಮಹಾನ್ ಚಕ್ರವರ್ತಿಯಾಗುತ್ತಾ ನೆ ಇಲ್ಲವೇ ಸಕಲರನ್ನುಉದ್ಧರಿಸುವ ಮಹಾ ಸನ್ಯಾಸಿಯಾಗುತ್ತಾನೆ”ಎಂದು.ಇದನ್ನು ಕೇಳಿ ಭಯಗೊಂಡ ಶುದ್ದೋದನ ಸಿದ್ಧಾರ್ಥನನ್ನು ಸಕಲ ರಾಜಭೋಗಗಳೊಂದಿಗೆ ಬೆಳೆಸಿದನು. ಅವನಿಗೆ ಮೂರು ಅರಮನೆಗಳನ್ನು ನಿರ್ಮಿ ಸಿದನು.ಅವನನ್ನು ಪ್ರಾಪಂಚಿಕ ಸುಖಭೋ ಗಕ್ಕೆ ಬಂಧಿಸಲೆಂದೇ ಹದಿನಾರನೇ ವಯಸ್ಸಿ ಗೇನೆ ಯಶೋಧರಾ ಎಂಬ ಕನ್ಯೆಯೊಡನೆ ವಿವಾಹ ಮಾಡಿದನು. ರಾಹುಲ ಎನ್ನುವ ಒಬ್ಬಮಗ ಹುಟ್ಟಿದನು.ಇಷ್ಟಾದರೂ ಬುದ್ಧನ ಮನಸ್ಸು ಪ್ರಪಂಚವನ್ನು ದುಖಃದಿಂದಪಾರು ಮಾಡುವ ಕಡೆಗೆ ಹರಿಯಿತು. ಪ್ರಪಂಚವನ್ನು ದುಖಃದಿಂದ ಪಾರುಮಾಡಲೆಂದು ಪಣತೊ ಟ್ಟು ಐಹಿಕ ಸುಖವನ್ನು ತ್ಯಜಿಸಿ ತನ್ನ 29ನೇ ವಯಸ್ಸಿಗೆ ತನ್ನ ತಾಯಿ,ಪತ್ನಿ,ಮಗ ರಾಹುಲ ನನ್ನು ಮತ್ತು ಕೋಶ, ರಾಜ್ಯಗಳೆಲ್ಲವನ್ನೂ ತ್ಯಜಿಸಿ ಸನ್ಯಾಸಿಯ ಹಾಗೆ ಕಾಡಿಗೆ ಹೊರಟ. ಇದನ್ನೆ “ಮಹಾಪರಿತ್ಯಾಗ” ಎಂದು ಕರೆ ಯುತ್ತಾರೆ.ಕಪಿಲವಸ್ಥುವಿನಿಂದಸಿದ್ಧಾರ್ಥನು ರಾಜಗೃಹ ವನ್ನು ತಲುಪಿದನು.ಅಲ್ಲಿ ಅನೇಕ ಪಂಡಿತರೊಂದಿಗೆ ತನ್ನ ಸತ್ಯಾನ್ವೇಷಣೆಯ ವಿಚಾರವನ್ನು ಚರ್ಚಿಸಿದನು.ಯಾರ ಉತ್ತರ ವೂ ಸಿದ್ದಾರ್ಥನಿಗೆ ತೃಪ್ತಿ ಕೊಡಲಿಲ್ಲ. ಅದ ಕ್ಕಾಗಿ ಸತ್ಯನ್ವೇಷಣೆಗಾಗಿ ದೇಹವನ್ನು ದಂಡಿ ಸಿದ. ಕಠಿಣ ತಪಸ್ಸನ್ನು ಆಚರಿಸಿ ಹಲವು ವರ್ಷಗಳ ಕಾಲ ಸತ್ಯ ಶೋಧನೆಗೆ ಅಲೆದಾ ಡಿದ. ಕೊನೆಗೆ ಗಯಾದ ಅರಳಿ ವೃಕ್ಷದ ಕೆಳಗೆ ಕುಳಿತು ಧ್ಯಾನಸ್ತನಾದ.
47 ದಿನಗಳ ನಂತರ ಪವಿತ್ರ ದಿನದಂದು ಅವನಿಗೆ ಜ್ಞಾನೋದಯವಾಯಿತು. ಅಂದಿ ನಿಂದ ಸಿದ್ಧರ್ಥಾನು ಬುದ್ಧನಾದನು. ಬುದ್ಧ ಎಂದರೆ ಜ್ಞಾನ ಪಡೆದವನು, ಪ್ರಾಪಂಚಿಕ ದುಖಃಭೋಗವನ್ನು ಗೆದ್ದವನು ಎಂದಾಗು ತ್ತದೆ. ಬುದ್ಧ ತಾನು ತಪಸ್ಸಿನಿಂದ ಪಡೆದ ಜ್ಞಾನವನ್ನು ಪ್ರಚಾರಮಾಡಲು ಕಾಶಿ, ಸಾರಾ ನಾಥ,ರಾಜ ಗೃಹ,ಕೌಶಾಂಬಿ,ಮಗಧ,ಕೋಸ ಲ, ಅಂಗ, ಮಿಥಿಲ, ಕಪಿಲವಸ್ತು ಸಂಚರಿಸಿ ಧರ್ಮ ಪ್ರಚಾರ ಮಾಡಿದನು.ಮೊದಲನೆಯ ತನ್ನ ಪ್ರವಚನವನ್ನು ಸಾರನಾಥದ ಜಿಂಕೆ ವನದಲ್ಲಿ ಆರಂಭಿಸಿದನು. ಇದನ್ನೆ ಧರ್ಮ ಚಕ್ರ ಪರಿವರ್ತನಾ ಎಂದು ಕರೆದಿರುವುದು.
ಅನೇಕ ಬೌದ್ದಸಂಘಗಳನ್ನು ಸ್ಥಾಪಿಸಿ ಅವು ಗಳಿಗೆಲ್ಲಾ ಬೌದ್ದ ಬಿಕ್ಷುಗಳನ್ನುನೇಮಿಸಿದನು. ಆನಂದ ಎನ್ನುವವರು ಬುದ್ಧ ನ ಮೊದಲ ಶಿಷ್ಯನಾಗಿದ್ದನು. ಬುದ್ದನ ಬೋಧನೆಗಳು ಅಹಿಂಸೆ,ಸತ್ಯನುಡಿಯುವಿಕೆ,ಕಳ್ಳತನ ಮಾಡ ದಿರುವುದು,ಪಾವಿತ್ರ್ಯತೆ ಇವು ಮೂಲ ತತ್ವ ಗಳಾಗಿದ್ದು ಇದರ ಜೊತೆ ನಾಲ್ಕು ಆರ್ಯ ಸತ್ಯಗಳನ್ನೂ ಬುದ್ದ ತಿಳಿಸಿದ್ದಾನೆ. ಪ್ರಪಂಚ ದುಖಃದಿಂದ ಕೂಡಿದೆ. ಆಸೆಯೇ ದುಖಃಕ್ಕೆ ಕಾರಣ. ಆಸೆಯನ್ನು ತೊರೆಯುವುದೇ ಶಾಂತಿಗೆ ಮಾರ್ಗ,ದುಖಃವನ್ನು ನಿವಾರಿಸಲು ಕೂಡ ಬುದ್ಧ ಅಷ್ಟಾಂಗ ಮಾರ್ಗಗಳನ್ನು ಬೋಧಿಸುತ್ತಾನೆ.ಒಳ್ಳೆಯ ನಂಬಿಕೆ, ಒಳ್ಳೆಯ ಆಲೋಚನೆ, ಒಳ್ಳೆಯ ನಡತೆ, ಒಳ್ಳೆಯ ಮಾತು,ಒಳ್ಳೆಯ ಪ್ರಯತ್ನ, ಒಳ್ಳೆಯ ಧ್ಯಾನ, ಒಳ್ಳೆಯ ವಿಚಾರ, ಮತ್ತು ಒಳ್ಳೆಯ ಜೀವ ನೋಪಾಯ.ಹೀಗೆ ಮಾಹಾನ್ ಜ್ಞಾನಿಯಾ ದ ಬುದ್ದ ದೇವರ ಅಸ್ಥಿತ್ವದ ಬಗ್ಗೆ ಮಾತನಾ ಡಲಿಲ್ಲವಾದರೂ ನೈತಿಕವಾದ ಪರಿಶುದ್ದ ವಾದ ಜೀವನ ನಡೆಸಲು ಎಲ್ಲರನ್ನೂ ಪ್ರೇರೇ ಪಿಸಿದ. ಪಾಲಿ ಭಾಷೆಯಲ್ಲಿ ಬರೆದಿರುವಂತ ಹ ತ್ರಿಪಿಟಿಕಗಳಲ್ಲಿ ಬುದ್ಧನ ಬೊಧನೆಗಳನ್ನು ಕಾಣಬಹುದು.ಇವು ಬೌದ್ಧಧರ್ಮದ ಪವಿತ್ರ ಗ್ರಂಥಗಳೂ ಹೌದು.ತ್ರಿಪಿಟಿಕಗಳನ್ನು ಮೂರು ವಿಭಾಗಗಳಿದ್ದು, ಅವು ವಿನಯ ಪಿಟಿಕ, ಸುತ್ತ ಪಿಟಿಕ ಮತ್ತು ಅಬಿದಮ್ಮ ಪಿಟಿಕ ಎಂದು. ಇವುಗಳನ್ನು ತ್ರಿರತ್ನಗಳೂ ಎಂದೂಕರೆಯುತ್ತಾರೆ.
ಇಡೀ ಮಾನವಬದುಕಿಗೆ ಬೇಕಾಗಿರುವಂತಹ ಅಮೂಲ್ಯ ತತ್ವಗನ್ನು ಬೋಧಿಸಿರುವ ಬುದ್ದ ಮಹಾನ್ ತಪಸ್ವಿಯಾಗಿ ನಿಲ್ಲುತ್ತಾನೆ, ಹಾಗೆಯೇ ಗೌತಮ ಬುದ್ಧನ ಬೋಧನೆಗಳು ತುಂಬಾ ವೈಜ್ಞಾ ನಿಕ ಹಾಗೂ ಸದಾಕಾಲಕ್ಕೂ ತುಂಬ ಪ್ರಸ್ತುತ ಎಂದರೂ ತಪ್ಪಾಗಲಾರದು.
🔆🔆🔆
✍️ಶ್ರೀಮತಿ.ಗಿರಿಜಾ.ಮಾಲಿಪಾಟೀಲ ವಿಜಯಪೂರ