Percy Bysshe Shelley ಖ್ಯಾತ ಇಂಗ್ಲೀಷ್ ರೋಮ್ಯಾಂಟಿಕ್ ಕವಿ. ಅವನ ಅತಿ ಪ್ರಸಿದ್ಧ, ಬಹುಷಃ ನಾವೆಲ್ಲ ಕಲಿತ ಸಾನೆಟ್ (14 ಸಾಲುಗಳ ಕವನ ) Ozymandias ನ  ಭಾವಾನುವಾದಕ್ಕೆ ಯತ್ನಿಸಿದ್ದೇನೆ.

Born: 4 August 1792, Horsham, UK

Died: 8 July 1822, Lerici, Italy
Poems: Ozymandias, Ode to the West Wind,Adonais,To aSkylark, Mutability ಇತ್ಯಾದಿ.

ಒಝಿಮ್ಯಾಂಡಿಯಸ್

ಭೇಟಿಯಾದೆ ನಾ ಪ್ರಾಚೀನ ನಾಡಿನಿಂದ ಬಂದೊಬ್ಬ  ಪಯಣಿಗನ,

ಅಂದನವ: ಮುಂಡವಿರದ  ಶಿಲೆಯ ಎರಡು  ಬೃಹತ್ ಕಾಲುಗಳು
ನಿಂತಿವೆ  ಮರಳುಗಾ ಡಲ್ಲಿ. ಬದಿಯಲ್ಲಿ ಬಿದ್ದಿಹ ಒಂದು ವದನ
ಅರೆ ಮುಳುಗಿ ಭಗ್ನವಾಗಿದೆ, ಗಂಟಿಕ್ಕಿದ
ಆ ಹುಬ್ಬುಗಳು

ಕೋಪದಲಿ ವಕ್ರವಾಗಿಹ  ತುಟಿಗಳು,  ಅಧಿಕಾರದಿ ಮದಭರಿತ  ಆ ಆನನ;
ಕಡೆದ ಶಿಲ್ಪಿ ಚೆನ್ನಾಗಿ ಅವನ ಮನಸನರಿತಿದ್ದ  ಎಂದು ಸಾರಿ ಹೇಳುತಿವೆ,
ಆ ಭಾವನೆಗಳ ಹೊತ್ತವನ ಮನವ ಶಿಲ್ಪಿಯ ಕರಗಳು ಅಣಕಿಸಿದಂತೆ
ನಿರ್ಜೀವ ಶಿಲೆಯಲಿ ಈಗ  ನಿಚ್ಚಳವಾಗಿ ಉಳಿದುಕೊಂಡಿವೆ,
ಆ ಪಾದಪೀಠದ ಮೇಲೆ ಕಾಣುತಿವೆ ಈ ವಾಕ್ಯಗಳು ಮೂಡಿ:
“ನನ್ನ ಹೆಸರು ಒಝಿಮ್ಯಾಂಡಿಯಸ್, ರಾಜಾಧಿರಾಜನು;
ಎಲೆ ವೀರನೇ,ಹತಾಶನಾಗು ನನ್ನ ಸಾಧನೆ ಗಳ ನೋಡಿ!”
ಭಗ್ನಪ್ರತಿಮೆಯ ವಿನಃ  ಈಗ ಉಳಿದಿಲ್ಲ ಅಲ್ಲೇನೂ  ಸುತ್ತಮುತ್ತ
ಮಹಾ ಧ್ವಂಸಕೊಳಗಾಗಿ,  ಸೀಮೆಯಿಲ್ಲದ  ಬಂಜರಿನ
ಮರಳು ಮಾತ್ರವೆ  ಸಮವಾಗಿ ಹರಡಿಹುದು ಎತ್ತ ನೋಡಿದರತ್ತ.

           

Ozymandias  


                         🔆🔆🔆

✍️ ಆಂಗ್ಲದಲ್ಲಿ:ಪಿ.ಬಿ.ಶೆಲ್ಲಿ               ಕನ್ನಡಕ್ಕೆ:ಕವಿತಾ ಹೆಗಡೆ ಅಭಯಂ. ಹುಬ್ಬಳ್ಳಿ