ವಿಶ್ವ ಚಹಾ ದಿವಸದ ಶುಭಾಶಯಗಳೊಂದಿಗೆ…ನಿಮಗೆಲ್ಲ ಚಹಾ,😊🍵☕

ಚೆಂಬೆಳಗಿನ ಪೇಯ
ಚಹಾ ಚೆಂಬೆಳಗಿನ ಹಾಸ
ಚಹಾ ಜಾಗೃತಗೊಳಿಸುವ ರಸ
ಆರಂಭದ ಗುಟುಕಿಗೆ ಬೆಚ್ಚನೆಯ
ಭಾಸ್ಕರನೊಂದಿಗೆ ಬೇಕು ಪೇಯ

ತರಹೇವಾರಿ ಚಹ ಮನಸೆಳೆವುವು
ಬೆಳಕಗಿನ ಬೆಳಕನು ಮಿಂಚಿಸುವವು
ಹಸಿರು ಚಹ ದೇಹಕೆ ಉಸಿರಂತೆ
ಕಪ್ಪುಸುಂದರಿ ಚಹ ಅಚ್ಚುಮೆಚ್ಚಂತೆ

ಬಿಸಿ ಬಿಸಿ ಕಪ್ಪನ್ನು ಅಪ್ಪಿ ಹಿಡಿದ
ಬೆರಳುಗಳು ತವಕಿಸುವ ಅಧರದ
ಅಬ್ಬರಕೆ ಮೆಲ್ಲನೇ ಸೋಕಿಸುತ
ಜೋಗುಳ ಹಾಡಿದಂತೆ ಗುಟುಕಿಸುತ

ಸರ್ವಾಂಗಗಳು ಸಿದ್ಧ ಆಸ್ವಾಧಿಸಲು
ಅರೆತೆರೆದ ನಯನಗಳ ಅಮಲು
ಸುವಾಸನೆಗೆ ನಾಸಿಕದ ಹಂಬಲ
ಚಡಪಡಿಕೆಯಲಿ ನಾಲಿಗೆಯ ಚಪಲ

ಬೆಲ್ಲದಲಿ ಬೆಂದೆದ್ದ ಚಹಾ
ಕುಡಿಯಲು ಆನಂದ ಮಹಾ
ಚಹಾ ಕುಡಿಯಬೇಕು ಇತಿಮಿತಿಯಲಿ
ಆರೋಗ್ಯ ಭಾಗ್ಯ ಸಿಗುವದಲ್ಲಿ

✍️ರೇಮಾಸಂ (ಡಾ.ರೇಣುಕಾತಾಯಿ.ಎಂ.ಸಂತಬಾ) ಹುಬ್ಬಳ್ಳಿ