ತನ್ನ ತನವ ಮರೆತು
ತನ್ನವರ ಪೋಷಿಸುತ
ಜೀವನ ಸವೆಯುವಳು ಆ ಹೆಣ್ಣು

ಒಂದೊಮ್ಮೆ ಮಗಳಾಗಿ ಹುಟ್ಟಿ
ಮನೆಯಂಗಳ ತುಂಬಿದರೆ
ಹೆಣ್ಣಾಗಿ ತನ್ನವನ ಮನೆಯಂಗಳ
ಬೆಳಗುವಳು ಆ ಹೆಣ್ಣು

ವಧುವಾಗಿ ತನ್ನವರ ಬಿಟ್ಟು
ಮಡದಿಯಾಗಿ ತನ್ನವರ ಜೊತೆ
ಹೊಸ ಸಂಬಂಧ ನಿಭಾಯಿಸುವಳು ಆ ಹೆಣ್ಣು

ಒಂದೊಮ್ಮೆ ಕಷ್ಟದಿ
ಮಗದೊಮ್ಮೆ ಸುಖದಿ
ಸುಖ: ದುಖ:ಗಳನ್ನು
ಜೀವನ ಸಡೆಸುವಳು ಆ ಹೆಣ್ಣು

🔆🔆🔆

✍️ರೋಶನ್ ಜಮೀರ್.ನ. ಶಿರಗುಪ್ಪಿ ಹುಬ್ಭಳ್ಳಿ