“ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎಂಬ  ವಾಣಿಯಂತೆ,  ಎಲ್ಲಿಯವರೆಗೆ ನಮ್ಮೊಳಗಿನ  ‘ನಾನೆಂಬ ಅಹಂ’ನ  ತಡೆ ಗೋಡೆಗಳನ್ನು ಕೆಡವಿ ಹಾಕುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಪೀಳಿಗೆಗೆ ಉತ್ತಮ ಸಂಸ್ಕಾರಗಳು ವರ್ಗಾವಣೆಯಾಗುವುದಿಲ್ಲ. ಮಕ್ಕಳ ಬಾಲ್ಯ  ಅರಳುವುದು  ಅವರಿಗೆ ಬಾಲ್ಯ ಅನುಭವಿಸಲು ಬಿಟ್ಟಾಗ ಮಾತ್ರ. ಮಣ್ಣಿನ  ಮುದ್ದೆಯನ್ನು  ಹೇಗೆ  ಬೇಕೋ ಹಾಗೆ  ವಿವಿಧ ‌ ಆಕಾರಗಳಿಗೆ  ಪರಿವರ್ತಿಸ ಬಹುದು. ಸರ್ವಜ್ಞನ ಅನುಭವದ ಮೂಸೆ ಯಲ್ಲಿ

ಕಾದ ಕಬ್ಬುನವು ತಾ|
ಹೊಯ್ದ ಒಡನೆ ಕೂಡುವುದು|
ಹೋದಲ್ಲಿ ಮಾತುಮರೆದರಾಕಬ್ಬುನವು|
ಕಾದಾರಿದಂತೆ ಸರ್ವಜ್ಞ |

ಚೆನ್ನಾಗಿ ಕಾಯ್ದ ಕಬ್ಬಿಣದ ಎರಡು ತುಂಡು ಗಳನ್ನು ಒಂದರ ಮೇಲೊಂದನಿಟ್ಟು ಸುತ್ತಿಗೆ ಯಿಂದ ಬಡಿದರೆ ಆಗಲೇ ಚೆನ್ನಾಗಿ ಕೂಡಿ ಹೋಗುವಂತೆ ಮಾತಾಡುವ ಪ್ರತಿ ಮಾತು ಗಳು  ಪರಸ್ಪರ  ಹೊಂದಾಣಿಕೆಯಾದರೆ ಮಾತ್ರ ಒಳಿತು.ಇಲ್ಲವಾದರೆ ಎಣ್ಣೆ ನೀರು ಬೆರೆತಂತೆ. ಹಾಗೆಯೇ ಕಬ್ಬಿಣ ಕಾದಾಗಲೇ ಹದವರಿತು ಬಡಿಯಬೇಕು. ನಮಗೆ ಯಾವ ಆಕಾರಬೇಕೋ ಆರೂಪ ಪಡೆಯಬಹುದು. ಮಗುವಿನ  ಮಾನಸಿಕ ಸ್ಥಿತಿಯನ್ನು ಪ್ರತಿ- ಯೊಬ್ಬ ಪಾಲಕರು ಅರಿತಿರಬೇಕು.ಗ್ರಹಿಸುವ ಕಾಲದಲ್ಲಿ ಅವಶ್ಯಕ ಜ್ಞಾನವನ್ನು ಯಥೇಚ್ಛ ವಾಗಿ ನೀಡಬೇಕು.ಸೋಮಾರಿತನದ ಭಾವ ಗಳು,  ಮಾಡಿದರಾಯಿತು,  ಮಾಡೋಣ, ಇನ್ನೂ ಸಮಯವಿದೆ, ತುಂಬಾ ಚಿಕ್ಕ ಮಗು ಹೀಗೆ ನಾವೇ ಹತ್ತಾರು ಪ್ರಶ್ನೆ ಸೃಷ್ಟಿಸಿ,ನಿಖರ ಉತ್ತರ ಸಿಗ‌ದಂತೆ ಮಾಡಿದರೆ ಪರಿಹಾರ ವೆಲ್ಲಿ?

ಮಕ್ಕಳ ಮನಸ್ಸನ್ನು ನಮ್ಮಿಷ್ಟದಂತೆ ನೋಡ ದೇ,ಮಗುವಾಗಿ ಅನುಭವಿಸಿದರೆ ಒಳಿತು. ಯಾವ ಮಗುವಿಗೆ ಯಾವ ವಯಸ್ಸಿನಲ್ಲಿ ಯಾವ ತಿಳಿವಳಿಕೆ ನೀಡಬೇಕಿತ್ತೋ ಅದನ್ನು ನೀಡಲು  ವಿಫಲವಾದರೆ  ಕಾದ ಕಬ್ಬಿಣದ ಹದ  ಆರಿದಮೇಲೆ  ಎರಡುತುಂಡುಗಳಿಗೆ ಎಷ್ಟು ಬಡಿದರೂ ಅವು ಹೇಗೆ ಕೂಡುವುದಿ ಲ್ಲವೋ,  ಅದರಂತೆ  ಉಪಯುಕ್ತವಾದ ಅಮೂಲ್ಯ ಸಮಯ ಮೀಸಲಿಡದಿದ್ದರೆ ಎಲ್ಲವೂ ನಿರುಪಯುಕ್ತ.


ಒಂದು ಗೆದ್ದಲು ಹುಳು ತಾನು ವಾಸಿಸಲು ಗಟ್ಟಿಮುಟ್ಟಾದ  ಗೂಡನ್ನು  ಬಹುಜತನ- ದಿಂದ ಕಟ್ಟುತ್ತದೆ. ಆ ಗೂಡುಕಟ್ಟಲು ಅದರ ಬಹುಪಾಲು  ಸಮಯ   ವ್ಯಯಿಸುತ್ತದೆ. ಆದರೆ  ಅಲ್ಲಿ ವಾಸಮಾಡಲಾಗುವುದಿಲ್ಲ.  ಆ ಗೂಡು ಹಾವಿನ ಪಾಲಾಗುತ್ತದೆ. ಅದು ಹಾವಿನ ಹುತ್ತವಾಗಿ ಮಾರ್ಪಾಡಾಗುತ್ತದೆ. ಗೆದ್ದಲು ಹುಳು ಕೊಂಚ ಧೈರ್ಯ ಮಾಡಿ ಹಾವನ್ನು ಓಡಿಸಿದ್ದರೆ, ವಾಸಿಸಲು ಶಾಶ್ವತ ಗೂಡು ತನ್ನ ಪಾಲಿಗೆ ಉಳಿಸಿಕೊಳ್ಳಬಹು ದಿತ್ತು.  ಸಮಯಕ್ಕೆ  ತಕ್ಕಂತೆ  ಮಕ್ಕಳಲ್ಲಿ ಸಂವಹನ ಕೌಶಲ್ಯ  ಬೆಳೆಸುವುದು  ಅತೀ ಮುಖ್ಯವಾಗಿದೆ.  ಸ್ವಯಂ   ಆತ್ಮವಿಶ್ವಾಸ ಹೆಚ್ಚಿಸುವುದು ಪ್ರಕೃತಿ ನಮಗೆ ನೀಡಿರುವ ಉಚಿತ ಆಕ್ಸಿಜನ್ ನಂತೆ.

ಕಾಲವು  ಮೀರಿ ಹೋದ  ಬಳಿಕ   ಆಡಿದ  ಮಾತುಗಳಿಂದ ಏನೂ ಪ್ರಯೋಜನ ಆಗು ವುದಿಲ್ಲ. “ಮುತ್ತು ಒಡೆದರೆ ಹೋಯಿತು, ಮಾತು ಆಡಿದರೆ  ಹೋಯಿತು” ಅವನ್ನು ಪುನಃ ಪಡೆಯಲು ಸಾಧ್ಯವಿಲ್ಲ. ಮಾತನಾ – ಡುವ ಮುನ್ನ ಚೆನ್ನಾಗಿ ಅರಿತು ಮಾತನಾಡ ಬೇಕು, ಆಗ ನಮ್ಮ ಮಾತಿನತೂಕ ಹೆಚ್ಚಾಗು ತ್ತದೆ  ಎಂದು  ಈ ವಚನದ  ಅರ್ಥವಾಗಿದೆ.
ಪ್ರತಿಯೊಂದು ಹೆಜ್ಜೆಯಿಡುವಾಗಲೂ ಅದರ ಪೂರ್ವಾಪರ ಅರಿತು ಮಗುವಿಗೆಸೂಕ್ತವೋ ಇಲ್ಲವೋ ಎಂಬುದನ್ನು ಮನಗಾಣಬೇಕಾಗಿ ರುವುದು ಪ್ರತಿಪಾಲಕರ ಜವಾಬ್ದಾರಿ.

ಕೃಷ್ಣ ಗೋವರ್ಧನ ಗಿರಿಯನ್ನು ತನ್ನ ಕಿರು ಬೆರಳಲಿ  ಎತ್ತಿದನೆಂದು  ಓದಿದ್ದೆವೆ.  ಇಲ್ಲಿ ಎಲ್ಲವೂ  ನೆಪ ಮಾತ್ರ.  ಮುಗ್ದ ಮಕ್ಕಳ ಮನಸ್ಸನ್ನು ದೇವರಿಗೆ ಹೋಲಿಸಲಾಗಿದೆ. ಮನಸು‌ಗಳಿಗೆ ಧೈರ್ಯ,ಸ್ಥೈರ್ಯ ತುಂಬುತ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ನಮ್ಮದಾಗ ಬೇಕು. ಯಾವ ಮಗುವು  ದುರ್ಬಲವಲ್ಲ, ನಮ್ಮೊಳಗಿನ ಸಂಕುಚಿತ ಮನಸ್ಸನ್ನು ಹೊಡೆ ದೊಡಿಸಬೇಕಿದೆ.ದೇಶದ ಭವಿಷ್ಯವಾಗಿರುವ ಮಕ್ಕಳು ಕೊರೋನಾದಂತಹ ಮಹಾಮಾ ರಿಗೆ ಬಲಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಂರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯ.

 ✍️ಶ್ರೀಮತಿ.ಶಿವಲೀಲಾ ಹುಣಸಗಿ
    ಶಿಕ್ಷಕರು,ಯಲ್ಲಾಪೂರ