ಬದುಕೇ ನೀನದೆಷ್ಟು ಸುಂದರ
ಕಂಗಳೇ ಕನಸಿನ ಮಹಾದ್ವಾರ
ಒಳಗಣ್ಣು ಒಲವಿನ ಚಮತ್ಕಾರ
ಒಂದಷ್ಟು ಬದುಕಬೇಕು ಹಗುರ
ದೇವಗೆ ಮಾಡುವೆ ನಮಸ್ಕಾರ
ಮತ್ತೇನಿದೆ ಇರಬೇಕು ಮಧುರ
ಕೋಗಿಲೆ ಕೂಗುವಾ ಮಾಮರ
ಸ್ಫೂರ್ತಿಯೇ ಚೆಲುವಿನ ಚಿಗುರ
ಅವನಿಟ್ಟಂತಿದ್ದರೆ ಚಂದಚಿತ್ತಾರ
ಬೇಡಿಕೆ ಕಿರಿದಾದರೆ ಮಜಕೂರ
ನಗುನಗುತ ನಡೆದ(ಧ)ರೆ ಸುಂದರ….

‌ ‌‌‌‌‌ 🔆🔆🔆

✍️ ಶಿವಾನಂದ ನಾಗೂರ, ಧಾರವಾಡ.