ಓ ಆಪದ್ಬಾಂಧವನೆ ಎಲ್ಲಿರುವೆ ನೀನು
ರಕ್ಷಣೆಗೆ ಗೋಗರೆದು ನಿಂತಿರುವೆ ನಾನು
ಎಲ್ಲೆ ದಾಟಿವೆಯೆಲ್ಲ ಸುಮ್ಮನಿರುವೆ ನೀನು
ದಿಕ್ಕುತೋಚದೆ ಕಂಗಾಲಾಗಿರುವೆ ನಾನು
ತಾಯಿಯಿಂದ ದೂರಮಾಡಿರುವೆ ನೀನು
ತಂದೆಯನು ಅರಸಿ ಹೊರಟಿರುವೆ ನಾನು
ಭಕ್ತಿ ಭಾವದಲಿ ಕಣ್ಣು ಮುಚ್ಚಿರುವೆ ನೀನು
ನನ್ನಂತರಂಗದಲೆ ನಮಿಸುತಿರುವೆ ನಾನು
“ಜಾಲಿ” ಅದು ಹೇಗೆ ಆನಂದವಾಗಿರುವೆ ನೀನು
ಮೂರೊತ್ತೂ ಕಣ್ಣೀರು ಕುಡಿಯುತಿರುವೆ ನಾನು
🔆🔆🔆
✍️ ವೇಣು ಜಾಲಿಬೆಂಚಿ,ರಾಯಚೂರು.