ನಾಡಿನ ವಾಸ್ತುಲೋಕದ ವೈಭವದಲ್ಲಿ ಹಲವು ಭವ್ಯ ದೇವಾಲಯಗಳು ನಾಡಿನ ಉದ್ದಕ್ಕೂ ನೋಡಬಹುದು.ಕೆಲವು ಮುಖ್ಯ ದೇವಾಲಯ ಗಳನಷ್ಟೇ ಗಮನಿಸಿದ ಪ್ರವಾಸಿಗರು ಮಾಹಿತಿ ಯ ಕೊರತೆಯಿಂದ ಅನೇಕ ದೇಗುಲಗಳನ್ನು ನೋಡುವುದಿಲ್ಲ. ಅಂತಹ ದೇವಾಲಯಗಳ ಪರಿಚಯದ ಅಂಕಣದ ಮುಖಪುಟದಲ್ಲಿ ಹುದುಗಿದ ದೇವಾಲಯ ಪರಿಚಯದೊಂದಿಗೆ ಮುಂದೆ ಸಾಗೋಣ.

ದೇವಾಲಯಗಳ ಭವ್ಯತೆಗೆ ಹೊಸ ಸ್ವರೂಪ ವನ್ನು ನೀಡಿದವರು ಹೊಯ್ಸಳರು.  ಅವರ ನಿರ್ಮಾಣದ ಹಲವುದೇವಾಲಯಗಳು ತಮ್ಮ ಹೊರಭಿತ್ತಿಯಲ್ಲಿ ಹುದುಗಿದ ಕಲಾತ್ಮಕ ಕೆತ್ತೆನೆ ಗಳಿಂದಲೇ ಗಮನ ಸೆಳೆಯುತ್ತದೆ. ನಮ್ಮಲ್ಲಿ ಹಾಸುಹೊಕ್ಕಿದ ಹಲವು ಕಥಾನಕಗಳು, ಪುರಾಣದ ಕಥನಗಳು, ಅಪರೂಪದ ಶಿಲ್ಪ ಗಳನ್ನು ಪರಿಚಯಕ್ಕೆ ಹೊಯ್ಸಳರು ಹುಡುಕಿದ ಮಾರ್ಗವೇ ಹೊರಭಿತ್ತಿಯಲ್ಲಿನ ಅಲಂಕರಣ ಗಳು. ಅಂತಹುದೇ ವೈಭವದ ಕುರುಹಾದ ದೇವಾಲಯ, ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲ್ಲೂಕಿನ ಹೊಸಹೊಳಲಿನ ಶ್ರೀಲಕ್ಶ್ಮೀನಾರಾಯಯಣ ದೇವಾಲಯ.

ಇತಿಹಾಸ ಪುಟದಲ್ಲಿ ಪ್ರಮುಖ ಅಗ್ರಹಾರ ವಾಗಿ  ಈ ಗ್ರಾಮ ಗುರುತಿಸಿಕೊಂಡಿತ್ತು, ಸುಮಾರು 1118ರಲ್ಲಿ ರಾಜ ವಿಷ್ಣುವಧ೯ನ ಇಲ್ಲಿ ಜಿನಾಲಯನಿರ್ಮಿಸಿದ ಉಲ್ಲೇಖವಿದೆ. ಇನ್ನು 1309ರ ಶಾಸನದಲ್ಲಿ ಇಲ್ಲಿನ    ಸೋಮನಾಥ ದೇವಾಲಯದ ಉಲ್ಲೇಖವಿದೆ. ಉಳಿದಂತೆ ಇಲ್ಲಿ ಹೊಯ್ಸಳರ ಕಾಲದ ವೀರ ಗಲ್ಲುಗಳು ಇದೆ.  ಆದರೆ ಈ ದೇವಾಲಯದ ನಿರ್ಮಾಣದ ಬಗ್ಗೆ ಎಲೂ ಖಚಿತ ಮಾಹಿತಿ, ಉಲ್ಲೇಖ ಕಾಣಸಿಗದೇ ಇರುವುದು ವಿಶೇಷ.

ಆದರೆ ಇಲ್ಲಿನ ಶಿಲ್ಪಿಗಳ ಬಗ್ಗೆ ಮಾಹಿತಿಸಿಗು ವುದರಿಂದ(ಮಲ್ಲಿತಿಮ್ಮ) ಈ ದೇವಾಲಯ ಸುಮಾರು ೧೨೪೦ ರಿಂದ ೧೨೫೦ ರಲ್ಲಿ ನಿರ್ಮಾಣ ಆಗಿರಬಹುದು ಎಂಬ ಅಭಿಪ್ರಾ ಯವಿದೆ.ಸಂಪೂರ್ಣ ಹೊಯ್ಸಳ ದೇವಾಲ ಯಕ್ಕೆ ಮುಂದಿನ ಮಂಟಪ ಮಾತ್ರ ನೂತನ ಸೇರ್ಪಡೆ.

ಶ್ರೀ ಲಕ್ಶ್ಮೀನಾರಯಣ ದೇವಾಲಯ :

ಸುಮಾರು 13 ನೇಶತಮಾನದಲ್ಲಿ ನಿರ್ಮಾಣ ವಾಗಿರಬಹುದಾದ ಈದೇವಾಲಯ ಮೂಲತ: ತ್ರಿಕೂಟಾಚಲ ದೇವಾಲಯ. ಬಹುತೇಕ ಹೊಯ್ಸಳ ದೇವಾಲಯದಂತೆ ಈದೇವಾಲಯ ಸಹ ಸುಮಾರು ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ನಿರ್ಮಾಣವಾಗಿದೆ. ಈ ದೇವಾಲಯ ಮೂರು ಗರ್ಭಗುಡಿ, ಅಂತರಾಳ ಹಾಗೂ ಒಂದೇ ನವರಂಗ ಹಾಗು ನಂತರ ಕಾಲದ ಸೇರ್ಪಡೆಯಾದ ಮುಖಮಂಟಪ ವನ್ನು ಹೊಂದಿದೆ.

ದೇವಾಲಯದ ಪ್ರಧಾನ ಗರ್ಭಗುಡಿ ಉತ್ತರ ದಲ್ಲಿ ಸುಂದರ ಲಕ್ಶ್ಮೀನಾರಯಣ ಮೂರ್ತಿ ಇದ್ದರೆ, ದಕ್ಷಿಣದಲ್ಲಿ  ವೇಣುಗೋಪಾದ (ಬದಲಾದ ವಿಗ್ರಹ) ಹಾಗೂ ಮತ್ತೊಂದರಲ್ಲಿ ನರಸಿಂಹನ  ಸುಂದರ   ಮೂರ್ತಿಗಳಿವೆ. ಪ್ರಧಾನ ಗರ್ಭಗುಡಿಗೆ ಮಾತ್ರ ಅಂತರಾಳ ಇದ್ದು ಮೂರು ಗರ್ಭಗುಡಿ ಸೇರಿದಂತೆ ಒಂದೇ ನವರಂಗ ಇದೆ.

ಮೂರು ಗರ್ಭಗುಡಿಯ ಭಾಗಿಲುವಾಡಗಳು  ಸುಂದರವಾಗಿ ಅಲಂಕೃತಗೊಂಡಿದ್ದು ಲಲಾಟ ದಲ್ಲಿ ಸಾಮಾನ್ಯವಾಗಿ ಕಾಣುವ ಗಜಲಕ್ಷ್ಮೀ ಬದಲಾಗಿ ಮೂಲ ಮೂರ್ತಿಯ ರೂಪಗಳನ್ನೆ ಪ್ರತಿನಿಧಿಸಿರುವುದು ವಿಶೇಷ. ಇಲ್ಲಿನ ಉತ್ತರ ಮತ್ತು ದಕ್ಷಿಣ ಗರ್ಭಗುಡಿಗಳು ಚತ್ತುರಸ್ರ ಮಾದರಿಯಲ್ಲಿದರೆ ಪಶ್ಚಿಮದ ಗರ್ಭಗುಡಿ ನಕ್ಷತ್ರಾಕಾರವಾಗಿದೆ.  ಜಗತಿಗೆ ಆನೆಯ ಕೆತ್ತೆನೆ ಇದ್ದು ಈಗ ಕೆಲವು ಮಾತ್ರ ಉಳಿದಿದೆ. ಮುಖ್ಯ ಗರ್ಭಗುಡಿಯ ಮೇಲೆ ಶಿಖರವಿದೆ.

ನವರಂಗದಲ್ಲಿ ಹೊಯ್ಸಳ ದೇವಾಲಯಗಳಲ್ಲಿ ಕಾಣಬರುವಂತೆ ಸುಂದರ ಕಂಭಗಳಿದ್ದು ಇಲ್ಲಿ ಮದನಿಕೆಯರ ಶಿಲ್ಪ ಇದೆ. ಒಂಬತ್ತುಅಂಕಣದ ನವರಂಗವಿದ್ದು ವಿತಾನದಲ್ಲಿನ ಕಾಳಿಂಗ- ಮರ್ಧನ ಕೃಷ್ಣ ಗಮನ ಸೆಳೆಯುತ್ತದೆ.ಉಳಿದ ವಿತಾನದಲ್ಲಿ ಸುಂದರ ಕೆತ್ತೆನೆ ಇದ್ದು ಅಷ್ಟ – ದಿಕ್ಪಾಲಕರು, ಹಂಸ ಹಾಗೂ ಯಕ್ಷ ಕೆತ್ತೆನೆ ಗಮನ ಸೆಳೆಯುತ್ತದೆ. ಇಲ್ಲಿನ ದೇವ ಕೋಷ್ಟಕ ಗಳಲ್ಲಿ ಗಣೇಶ ಮತ್ತು ಮಹಿಷಮರ್ಧಿನಿ ಶಿಲ್ಪ ವಿದ್ದರೆ,ಕಂಭದಲ್ಲಿನ ಆಂಜನೇಯ ಎಳನೀರ ನ್ನು ಕುಡಿಯವ ಕೆತ್ತೆನೆ ಗಮನ ಸೆಳೆಯುತ್ತದೆ. ನವರಂಗದ ದ್ವಾರದಲ್ಲಿ ವಿಷ್ಣು,ಸಿಂಹ ಗಜ ಹಾಗೂ ತಾಂಡವ ಕೃಷ್ಣನ ಕೆತ್ತೆನೆ ಇದೆ.

ನಂತರದ ಸಾಲಿನಲ್ಲಿ ಪೌರಾಣಿಕ ಕೆತ್ತೆನೆ ಇದ್ದು,  ರಾಮಾಯಣ,  ಮಹಾಭಾರತ, ಭಾಗವತ ಮತ್ತು ದಶಾವಾತದರ ದೊಡ್ಡ ಸುಂದರ ಶಿಲ್ಪ ಗಳಿವೆ.ಈಕೆತ್ತೆನೆಗಳು ದೇವಾಲಯಕ್ಕೆಮುಕುಟ ಪ್ರಾಯ.ಇಲ್ಲಿ ಪ್ರಮುಖವಾಗಿ ಸಮುದ್ರಮಥನ ಹಿರಣ್ಯ ಕಶುಪವಿನ ಸಂಹಾರ, ಗಜಾಸುರನ ಸಂಹಾರ, ರಾಮಯಣದಲ್ಲಿ ಪುತ್ರಕಾಮೇಷ್ಟಿ ಯಾಗ, ಸೀತೆಯ ಜನನ, ಸೀತಾ ಕಲ್ಯಾಣ, ರಾಮನ ಅರಣ್ಯವಾಸಕ್ಕೆ ಹೋಗುವುದು, ಶೂರ್ಪನಖಿ ನಾಸಿಕ ಬೇದ, ಸೀತಾಪಾರಹಣ, ವಾಲಿ,ಇನ್ನುಮಹಾಭಾರತದಲ್ಲಿ ಪಗಡೆಯಾಟ ಅಜ್ಞಾತವಾಸ, ಕೀಚಕವಧೆ, ಯುದ್ದ ಸನ್ನಿವೇಷ ಗಳು, (ಚಕ್ರವ್ಯೂಹ, ಗಧಾಯುದ್ದ ಹಾಗೂ ಕರ್ಣಾರ್ಜುನ ಕಾಳಗ) ಪಟ್ಟಾಭಿಷೇಕ ನೋಡ ಬಹುದು. ಹಾಗೆಯೇ ಭಾಗವತದ ಸಂಪೂರ್ಣ ಕಥನ ನೋಡಬಹುದು.ಸುಗ್ರೀವ ಯುದ್ದ, ಹನುಮಂತನ ಲಂಕಾ ಭೇಟಿ, ರಾಮಸೇತು ನಿರ್ಮಾಣ,ಯುದ್ದ,ಪಟ್ಟಾಭಿಷೇಕ,ಅಗ್ನಿಪರೀಕ್ಷೆ ನೋಡಬಹುದು.

ಇನ್ನು ಮುಖ್ಯ ಶಿಲ್ಪಗಳಲ್ಲಿ ಪರವಾಸುದೇವ, ಲಕ್ಸ್ಮನಾರಾಯಣ, ಷಡ್ಬಜ ಪಾರ್ವತಿ, ಮದು ಸೂಧನ, ಗೋರ್ವಧನದಾರಿ, ಬಲಿ ವಾಮನ, ತ್ರಿವಿಕ್ರಮಪಾಂಡುರಂಗ, ಯೋಗ ನರಸಿಂಹ, ಕೋದಂಡರಾಮ, ಹೃಷಿಕೇಶ, ಪದ್ಮನಾಭ, ವೇಣುಗೋಪಾಲ,ನರ್ತನ ಸರಸ್ವತಿ, ಪಾರ್ವತಿ, ಭೈರವ, ವಾಸುದೇವ, ಪ್ರದ್ಯುಮ್ನ, ನಾಟ್ಯಲಕ್ಷ್ಮೀ ಅನಿರುದ್ದ,ಪುರುಶೋತ್ತಮ,ಮಹಿಷಮರ್ಧಿನಿ, ಯೋಗನಾರಾಯಣ, ಆದೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಕಾಳಿಂಗ ಮರ್ದನ, ದುರ್ಗಾ,ಉಪೇಂದ್ರ,ಲಕ್ಷ್ಮೀನರಸಿಂಹ ಇತ್ಯಾದಿ ಕೆತ್ತೆನೆಗಳು ಹೊಯ್ಸಳರ ಕಲಾ ಕುಸುರಿಗೆ ಸಾಕ್ಷಿಯಾಗಿವೆ.

ಪಾರ್ಶ್ವನಾಥ ಬಸದಿ

ಇನ್ನು ಈ ದೇವಾಲಯದ ಸನಿಹದಲ್ಲಿ ಪಾರ್ಶ್ವನಾಥ ಬಸದಿಯೂ ಇದೆ.ಇನ್ನು ಇಲ್ಲಿನ ಶಾಸನದಲ್ಲಿ ವಿಷ್ಣುವರ್ಧನನ ಕಾಲದಲ್ಲಿ ನೋಣಂಬಿ ಸೆಟ್ಟಿಯ ಪತ್ನಿ ದೇವಿಕಟ್ತೆ ಸೆಟ್ಟಿತಿ- ಯೂ ತ್ರಿಕುಟಾಚಲ ಜಿನಾಲಯ ನಿರ್ಮಿಸಿದ ಉಲ್ಲೇಖ ನೋಡಬಹುದು.ಇನ್ನು ಹಲವು ಶಾಸನಗಳು ಇಲ್ಲಿನ ಬಸದಿಗಳಿಗೆ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಇಲ್ಲಿನ ಪದ್ಮಾವ ತಿಯ ಶಿಲ್ಪವನ್ನು 13 ನೇಯ ಶತಮಾನದಲ್ಲಿ ಜಯಕೀರ್ತಿದೇವರ ಶಿಷ್ಯರು ಸ್ಥಾಪಿಸಿದ ಉಲ್ಲೇಖವಿದೆ.

ಸಾಕಷ್ಟು ನವೀಕರಣಗೊಂಡಿರುವಈ ಬಸದಿ ಗರ್ಭಗುಡಿ, ಅಂತರಾಳ ಹಾಗು ತೆರೆದ ಮುಖ ಮಂಟಪ ಹೊಂದಿದ್ದು ಗರ್ಭಗುಡಿಯಲ್ಲಿ ಪಾರ್ಶನಾಥ,ಅನಂತನಾಥ ಹಾಗೂ ಪದ್ಮಾವತಿ ಯರ ಶಿಲ್ಪ ನೋಡಬಹುದು. ದೇವಾಲಯದ ಆವರಣದಲ್ಲಿ ಭಗ್ನವಾದ ಬಾಹುಬಲಿಯ ಶಿಲ್ಪವಿದೆ.

ಈ ದೇವಾಲಯದ ಸೊಬಗನ್ನೇ ನೋಡಿ, ಬೇಲೂರುನ್ನ ಒಳಗಡೆ, ಹಳೇಬೀಡನ್ನ ಹೊರಗಡೆ ಹಾಗು ಹೊಸಹೊಳಲನ್ನ ಒಳಗಡೆ ಮತ್ತು ಹೊರಗೂ ನೋಡು  ಎಂಬ ನಾಣ್ಣುಡಿ ಬಂದಿದೆ.ಇಲ್ಲಿ ಹೊಯ್ಸಳರ ಕಾಲದ ಸುಂದರ ಪಾರ್ಶ್ವನಾಥ ಬಸದಿ ಇದೆ. ಇಲ್ಲಿ ಇದ್ದ ಹರಿಹರ ದೇವಾಲಯನಾಶವಾಗಿದೆ.

                     🔆🔆🔆

✍️ಶ್ರೀನಿವಾಸಮೂರ್ತಿ.ಎನ್.ಎಸ್ ಬೆಂಗಳೂರು