ಕರೋನಾ ಹೆಮ್ಮಾರಿ ಮೊದಲ ಸಾರಿ ಅಪ್ಪಳಿಸಿದಾಗ ಜನಜೀವನ ಅಸ್ಥವ್ಯಸ್ಥವಾಗಿ ಭೀತಿಗೆ ಒಳಗಾಗಿದ್ದು ನಿಜ.ಆದರೆ ಎರಡನೇ ಅಲೆಯ ಕುರಿತಾದ ಮಾಹಿತಿಯನ್ನು ನಮಗಾಗಲೇ ವಿದ್ವಾಂಸರು ಹೇಳಿದ್ದರು. ಆದರೂ ಮೊದಲನೇ ಅಲೆಗಿಂತ ಹೆಚ್ಚು ಜನರು ಎರಡನೆ ಅಲೆಗೆ ಬಲಿಯಾದರು. ಒಂದುವೇಳೆ ಮೂರನೇ ಅಲೆ ಅಪ್ಪಳಿಸಿದರೆ ಏನಾಗಬಹುದು ಎನ್ನುವುದನ್ನು ವಿದ್ವಾಂಸ ರು ಹೇಳುತ್ತಿದ್ದಾರೆ.ಆದರೆ ಸರಕಾರ ಅದ ಕ್ಕಾಗಿ ಮುಂಜಾಗ್ರತಾ ಕ್ರಮವಾಗಿಯಾವುದೇ ಸಿದ್ಧತೆಯನ್ನು ಮಾಡಿಕೊಳ್ಳದೇ ಇರುವುದು ವಿಷಾದದ ಸಂಗತಿ.



ತಮ್ಮ ಪ್ರಾಣಕ್ಕೂ ನಾಳೆ ಕುತ್ತು ಬರಬಹುದು ಎನ್ನುವ ಚಿಕ್ಕ ಪರಿಜ್ಞಾನವಾದರು ಇವರಿಗೆ ಇರಬೇಕಾಗಿತ್ತು.ಈಗಾಗಲೆ ತಜ್ಞರ ಪ್ರಕಾರ ಕರೋನಾದ ಮೂರನೆ ಅಲೆ ಇನ್ನು ನಾಲ್ಕು ತಿಂಗಳಲ್ಲೆ ತನ್ನ ಅಟ್ಟಹಾಸ ಮೆರೆಯಲಿದೆ ಯಂತೆ.ಇಷ್ಟೆಲ್ಲಾ ಪೂರ್ವ ಮಾಹಿತಿ ನಮಗಿ ದ್ದಾಗ್ಯೂ ನಾವು ಯಾಕೆ ಉದ್ದಟತನದಿಂದ ವರ್ತಿಸುತ್ತೇವೆ? ಹೌದು ಸರಕಾರ, ಸಂಘ, ಸಂಸ್ಥೆಗಳು,ಸಂಬಂಧ ಪಟ್ಟ ಅಧಿಕಾರಿಗಳು ಎಲ್ಲರೂ ಕರೋನಾದ ಮೂರನೆ ಅಲೆಯ ಭೀಕರತೆಯನ್ನು ಅರಿತು ಪೂರ್ವ ಸಿದ್ದತೆ ಮಾಡಿಕೊಳ್ಳಬೇಕಿದೆ. ಎರಡನೆ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮರಣವನ್ನಪ್ಪಿದ ಹಾಗೆ ಆಗ ಸಾವಾಗುವುದು ಬೇಡ ತಜ್ಞರ ಸಲಹೆಯಂತೆ ನಾವೆಲ್ಲ ನಡೆದುಕೊಳ್ಳೋಣ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳೋಣ.


ಕರೋನಾದ ಮೂರನೇ ಅಲೆ ಅದೆಷ್ಟೇ ಭಯಂಕರವಾಗಿರಲಿ ನಾವು ಕಿಂಚಿತ್ ಅಲುಗದೆ ಸದೃಢವಾಗಿ ನಿಲ್ಲುವ ಕಲ್ಲುಬಂಡೆ ಗಳಾಗೋಣ.ಹೌದು ಮೊಟ್ಟ ಮೊದಲನೆ ಯದಾಗಿ ನಾವಿಲ್ಲಿ ಮಾಡಬೇಕಾದ ಕೆಲಸ ವೆಂದರೆ ಕರೋನಾ ಕುರಿತ ಭೀತಿಯನ್ನು ಮೊದಲು ತೊಲಗಿಸುವುದು.ಭಯ ಖಾಯಿ ಲೆಯ ಚಿಹ್ನೆಗಳನ್ನು ಹೆಚ್ಚಿಸುತ್ತದೆ. ಕಾರಣ ನಾವು ನೀವು,ಸರಕಾರ,ಸಂಘ ಸಂಸ್ಥೆಗಳು ಎಲ್ಲರೂ ಒಗ್ಗಟ್ಟಾಗಿ ಕರೋನಾದ ಕುರಿತು ಜನರ ಮನಸ್ಸಿನಲ್ಲಿರು ಭಯವನ್ನು ಮೊದಲು ಹೋಗಲಾಡಿಸೋಣ.ನಂತರ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಇವೆಲ್ಲಾ ಕಟ್ಟುನಿಟ್ಟಾಗಿ ಪಾಲಿಸೋಣ.


ಸಧೃಡವಾದ ಆರೋಗ್ಯವನ್ನು ಪಡೆಯಲು ಯೋಗ,ಧ್ಯಾನ,ಪ್ರಾಣಾಯಾಮಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊ- ಳ್ಳೋಣ.ಉತ್ತಮವಾದ ಆಹಾರದ ಹವ್ಯಾಸ ಬೆಳೆಸಿಕೊಂಡು ರೋಗನೀರೋಧಕವನ್ನು ಹೆಚ್ಚಿಸಲು ಸಹಾಯಕವಾದ ಹಣ್ಣು,ತರಕಾರಿ ಸಾತ್ವಿಕ ವಾದಂತಹ ಆಹಾರ ಪದ್ದತಿಯನ್ನು   ಬೆಳೆಸಿಕೊಳ್ಳೋಣ.


ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಪರಿಸರಕ್ಕೆ ಹಾನಿ ಮಾಡುವ ವಸ್ಥುಗಳ ಬಳಕೆ ಸ್ಥಗಿತಗೊಳಿ ಸೋಣ,ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳಸುವ ಮೂಲಕ ನಮ್ಮಮಕ್ಕಳ ಆರೋಗ್ಯವಂತ ಭವಿಷ್ಯಕ್ಕೆ ಅಡಿಪಾಯ ಹಾಕಲು ಸ್ವಯಂ ಪ್ರಜ್ಞಾವಂತರಾಗಿ ವರ್ತಿಸ ಬೇಕಾದ ಅನಿವಾರ್ಯತೆ ಖಂಡಿತಾ ಇದೆ.

ನಮ್ಮ ಸಮಸ್ಯೆಗಳಿಗೆ ಇತರರನ್ನು ತೆಗಳುತ್ತಾ ಕೂಡುವುದು ದುರ್ಬಲ ಮನಸ್ಥಿತಿಗೆ ಹಿಡಿದ ಕನ್ನಡಿ.ನಮ್ಮ ತಪ್ಪುಗಳ ಪ್ರತಿಫಲವನ್ನೇ ನಾವು ಅನುಭವಿಸುತ್ತಿರುತ್ತೇವೆ.ಆದ ಕಾರಣ ನಾವು ಕೂಡ ಸಮಾಜಿಕ ಅಂತರ ಕಾಯ್ದು ಕೊಳ್ಳುವಲ್ಲಿ, ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವಲ್ಲಿ ಹಿಂದೇಟು ಹಾಕುವುದು ಬೇಡವೆ ಬೇಡ. ಕಾರೋನಾ ಎನ್ನುವ ಮಾಹಾಮಾರಿಗೆ ಸ್ವಯಂ ಅಸ್ತ್ರವಾಗೋಣ.



ಸರಕಾರವೂ ಕೂಡ ಮೂರನೆ ಅಲೆ ಜನರನ್ನು ದಿಗ್ಮೂಢರನ್ನಾಗಿ ಮಾಡುವ ಮೊದಲು ಪ್ರತಿಯೊಬ್ಬರಿಗೂ ಲಸಿಕೆ ಹಾಕಲಿ. ಭೀತಿ ತೊಲಗಿ ಸುರಕ್ಷತಾ ಕ್ರಮ ಕೈಗೊಳ್ಳುವ ಎಚ್ಚರಿಕಾ ಕ್ರಮಗಳ ಅರಿವು ಮೂಡಿಸಲಿ ಮತ್ತು ತಜ್ಞರು ಹೇಳಿದ ಹಾಗೆ ಮೂರನೇ ಅಲೆ ಸೃಷ್ಟಿಸುವ ಅವಾಂತರದ ಕುರಿತು ಮುಂಜಾಗ್ರತೆಯಾಗಿ ಹೋರಾಡಲು ಮತ್ತು ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಅಗತ್ಯವಾದ ಸುರಕ್ಷಾ ಕ್ರಮ ಕೈಗೊಳ್ಳಲಿ.


ಕರೋನಾ ಮೊದಲ ಸಾರಿ ಬಂದಾಗ ಮಾಧ್ಯಮಗಳಲ್ಲಿ ಸಾವಾಗುವುದನ್ನು ಕೇಳು ತ್ತಿದ್ದೆವು ಆದರೆ ಎರಡನೇ ಅಲೆಯಲ್ಲಿ ಹಾಗಾಗದೆ ನಮ್ಮ ಸಂಬಂಧಿಕರು, ನಮ್ಮ ಸ್ನೇಹಿತರು,ನಮ್ಮ ಸಿಬ್ಬಂದಿ ವರ್ಗದವರ ಸಾವು ಕೇಳುವ ಪರಿಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ನಾವು ಅಲಕ್ಷ ತೋರಿದ್ದೇ ಆದರೆ ಖಂಡಿತಾ ಕರೋನಾದ ಮೂರನೆ ಅಲೆ ನಮ್ಮ ಮನೆಗಳಿಗೆ ಅಪ್ಪಳಿಸಿ ತನ್ನ ರೌದ್ರತೆ ಮೆರೆಯಲಿದೆ.ಹಾಗಾಗಲು ನಾವು ಬಿಡದೆ ಈ ಕಠಿಣ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಬೇಕಾದ ಪೂರ್ವ ತಯಾರಿಯಲ್ಲಿ ಮಗ್ನರಾಗೋಣ.

                 🔆🔆🔆

         ಶ್ರೀಮತಿ.ಗಿರಿಜಾ ಮಾಲಿಪಾಟೀಲ
             ವಿಜಯಪೂರ