ಬಾನಂಗಳದಿ ಒಡಮೂಡಿ ಬಂದ,
ಜೋಡಿ ನಕ್ಷತ್ರ
ನವ್ಯ-ನಮಿತ //

ಒಂದೇ ಬಳ್ಳಿಯಲಿ ಅರಳಿದ
ಹೂವುಗಳೆರಡು
ಅನನ್ಯ- ಅಮೂಲ್ಯ//

ಆಸೆಯೊಳು ತುಂಬಿಟ್ಟೆ!
ಧರೆಗಿಳಿಸಿದ ಮಾತೆಗೆ
ಪುಷ್ಪ ನಮನ//

ಬೆಳೆಯಲಿ, ಬೆಳಗಲಿ ಆದಿಯಂತೆ
ಹಬ್ಬಲಿ ಗರಿಕೆಯಂತೆ,
ಜೀವರಸವು, ಕಡಲಂತೆ//

ಬಾಳನೌಕೆಯ ಪಯಣದಲಿ
ಮೂಡಿ ಬರಲಿ, ಚೇತನ
ಕರುಣಿಸಿದ ತಾಯೇ, ನಿನಗೆ ಕೋಟಿನಮನ//

                        🔆🔆🔆
✍️ಡಾ.ನವೀನ್ ಕುಮಾರ್ ಎ.ಜಿ