ಜಗವೆಲ್ಲ ಸೂನ್ಯ ಬೆಳಕಿನಲಿ ದಿವ್ಯ ಬೆಳಕು ಕಂಡ ಬುದ್ಧದೇವ
ಮಡದಿ ಮಕ್ಕಳು ರಾಜ್ಯ ತೊರೆದು ಸುಖ ಕಂಡ ಬುದ್ಧದೇವ

ದೇಹವದು ರೋಗ ಹಿಡಿವುದು ಮುಪ್ಪಿಂದೊಪ್ಪುವದು ದಿಟ
ಬದುಕಿದು ಶಾಶ್ವತವಲ್ಲವೆಂಬ ಸತ್ಯವನ್ನು ಕಂಡ ಬುದ್ಧದೇವ

ಕಾಡು ಮೇಡುಗಳ ತಿರುಗಿ ಗುಡ್ಡ ಬೆಟ್ಟಗಳ ತಾನು ಏರಿಳಿದು
ಅರಿಷಡ್ವರ್ಗ ಅಳಿದು ಭಿಕ್ಷಾನ್ನದಿ ಅಮೃತ ಕಂಡ ಬುದ್ಧದೇವ

ಅರಳಿ ಮರದಡಿ ಧೀರ್ಘ ಧ್ಯಾನದಿ ಬುದ್ಧನಾದ ಸಿದ್ಧಾರ್ಥ್
ನಿರ್ವಾಣದ ನಿತ್ಯಾನಂದ ಜ್ಞಾನದ ಅರಿವು ಕಂಡ ಬುದ್ಧದೇವ

ಕಾಡ ತೊರೆದು ನಡೆದ ನಾಡ ಜನರ ಉದ್ಧರಿಸಲು ದಿವ್ಯತೇಜ
ತಪಕ್ಕಿಂತ ಜೀವಿಗಳ ಪ್ರೀತಿಯಲಿ ಮೋಕ್ಷ ಕಂಡ ಬುದ್ಧದೇವ

ವೈಭೋಗಕ್ಕಿಂತ ಸನ್ಯಾಸ ಶ್ರೇಷ್ಠ ಸುತನಿಗೆ ಧೀಕ್ಷೆ ಕೊಡಿಸಿದ
ಆಸೆಯೇ ದುಃಖಕ್ಕೆ ಮೂಲವೆಂದು ಸಾಧನೆ ಕಂಡ ಬುದ್ಧದೇವ

ಸರಳ ದಾರಿ ತೋರಿದ ನಿನಗಿದೋ ಗಿರಿಜಾಸುತನ ನಮನಗಳು
ಮುಕ್ತಿ ಮಾರ್ಗದಿಂ ಎಲ್ಲರಿಗೂ ದೇವನಾಗಿ ಕಂಡ ಬುದ್ಧದೇವ

               ‌‌‌‌‌‌        🔆🔆🔆

✍️ವಿ.ಎಚ್.ಹಿರೇಮಠ.ಗದಗ