ಬಹುಶಃ 1984ನೇ  ವರ್ಷವಿರಬಹುದು. ಕನ್ನಡ‌&ಸಂಸ್ಕೃತಿ ಇಲಾಖೆ, ಬೆಂಗಳೂರು ಇವರು ರಾಜ್ಯಮಟ್ಟದ  ನಾಟಕ  ಸ್ಪರ್ಧೆ ಏರ್ಪಡಿಸಿದ್ದರು.ಅಂಕೋಲೆಯ ಕರ್ನಾಟಕ ಸಂಘದ ಸದಸ್ಯರು,‌ ಮೂರ್ತಿರಾಯರ “ಕಟ್ಟು” ನಾಟಕ ಸ್ಪರ್ಧೆಗೆ  ಭಾಗವಹಿಸಲಿ ದ್ದುದರಿಂದ ತಾಲೀಮಿನ ಸಂದರ್ಭದಲ್ಲಿ “ಫಣಿಯಮ್ಮದ ಪೂರ್ಣಿಮಾ”ರವರದು  ಕೂಡ ಒಂದು ಮಹತ್ವದ ಪಾತ್ರವೇ. ತಿಂಗಳು ಗಟ್ಟಲೆ ತಾಲೀಮಿನ ಸಂದರ್ಭದಲ್ಲಿ ಚಿತ್ರನಟಿ ಯನ್ನು  ನೋಡಲು  ಎಲ್ಲೆಲ್ಲಿಂದಲೋ ಜನ ಬರುತ್ತಲೇ ಇರುತ್ತಿದ್ದರು. ಆಗ ನಮಗೂ ಬಹುಹೆಮ್ಮೆ; ಫಣಿಯಮ್ಮದ ಪೂರ್ಣಿಮಾರ ನಾಟಕದಲ್ಲಿ ನಾವೂ  ಅಭಿನಯಿಸುತ್ತಿರು    ವುದಕ್ಕೆ.


ಕುಮಟಾ ತಾಲೂಕಿನ ಹಿರೇಗುತ್ತಿ ಮೂಲದ ವರಾದ ಪೂರ್ಣಿಮಾ ಗಾಂವಕಾರರ ತಂದೆ – ತಾಯಿ ಸರಕಾರಿ ನೌಕರಿ ಮಾಡುತಿದ್ದರಿಂದ ಅಂಕೋಲೆಗೆ ಬಂದು ನೆಲೆಸಿದರು.  ಕೃಷಿ ಇಲಾಖೆಯ   ನೌಕರರಾದ   ಪುರಸ್ತರ   ಗಾಂವಕರರು ಸಾಂಸ್ಕೃತಿಕ ನೆಲಗಟ್ಟಿನಿಂದ ಬಂದವರೇ; ಅಷ್ಟೇಅಲ್ಲ,ಅವರು ಆ ಕಾಲದ ಜನಪ್ರೀಯ  ವ್ಯಕ್ತಿಗಳೂ  ಕೂಡ  ಹೌದು.      ಸಾಯಿಬಾಬಾರ  ಭಕ್ತರಾದ್ದರಿಂದ  ಮನೆ   ಯಲ್ಲಿ ಭಜನೆ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಅವರ ಅಮ್ಮನೂ ಪ್ರಾಥಮಿಕ ಶಾಲಾ ಶಿಕ್ಷಕಿ. ಮನೆಯ ವಾತಾ ವರಣದಲ್ಲಿ  ಯಕ್ಷಗಾನದ  ಪ್ರಭಾವವೂ  ದಟ್ಟವಾಗಿ  ಇದ್ದುದರಿಂದ ಬಾಲಕಿಯಾದ ಪೂರ್ಣಿಮಾಳ ಮನದಂಗಳದಲ್ಲಿ ಚಿಕ್ಕಂದಿ ನಿಂದಲೂ  ಸಾಂಸ್ಕೃತಿಕ  ವಾತಾವರಣದ  ಪ್ರಭಾವ ಮನೆಮಾಡಿತ್ತು.


ಅಂಕೋಲೆಯ ಸಾಂಸ್ಕೃತಿಕ ರಾಯಭಾರಿ ಯಂತಿದ್ದ  ಪಿ.ಎಂ. ಹೈಸ್ಕೂಲಿನಲ್ಲಿ,   ಶಿಕ್ಷಕ ರೊಂದಿಗೆ ನಾಟಕದಲ್ಲಿ ಭಾಗವಹಿಸಿ ಆ ದಿನ ಗಳಲ್ಲಿಯೇ ನಾಟಕ, ಸಿನೇಮಾ, ಸಾಹಿತ್ಯದ ಗುಂಗುಮನದಲ್ಲಿ ನೆಲೆಯೂರಿ ಅಭಿನಯದ ತುಡಿತ – ಮಿಡಿತಗಳು ಉಸಿರಿನಲ್ಲಿ ಸರಾಗ ವಾಗಿ ಪೂರ್ಣಿಮಾ ಮೈಗೂಡಿಸಿಕೊಂಡು, ಅಂದು ನಾಟಕದಲ್ಲಿ ಪಾತ್ರಗಳಿಗೆ ಪ್ರೇಕ್ಷಕರ ಬಹುಮಾನಗಳ ಸುರಿಮಳೆ ಕಂಡು  ಅಭಿ ನಯದ ಹುಚ್ಚು ಹೆಚ್ಚಾಯಿತು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಆದರ್ಶ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ಅಭಿನಯ ಮತ್ತು ಫಿಲಂಟೆಕ್ನಲಾಜೆಯಲ್ಲಿ ತರಬೇತಿ ಪಡೆದ ಪೂರ್ಣಿಮಾಳಿಗೆ ಗಿರೀಶ್ ಕಾಸರವಳ್ಳಿ, ನಾಗಾಭರಣ,ಕಾರ್ನಾಡ್,ಬಿ.ಜಯಶ್ರೀಯವರ ಸಂಪರ್ಕಕ್ಕೆ ಬರುವಂತಾಗಿ, ಅಲ್ಲಿ ರ್ಯಾಂಕ್ ವಿದ್ಯಾರ್ಥಿಯಾಗಿ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಪಾತ್ರರಾದರು.ಮುಂದಿನ ದಿನಗಳಲ್ಲಿ ಪ್ರೇಮಾ ಕಾರಂತ ಹಾಗೂ ನಾಗಾಭರಣರ ಚಿತ್ರಗಳಲ್ಲಿ ಸಹನಟಿಯಾಗಿ ಭಾಗವಹಿಸಿ ಚಿತ್ರಜಗತ್ತಿನ ಕೆಲಸ ಮತ್ತು ಅಭಿನಯವನ್ನು ಮೈಗೂಡಿಸಿ ಕೊಂಡರು. ಆದರೇನುಮಾಡುವುದು? ತೀರಾ ಸಾಂಪ್ರದಾಯಿಕ ಮನೆತನವಾದ್ದರಿಂದ ಸಿನೇಮಾಜಗತ್ತಿನಲ್ಲಿ ನೆಲೆಯೂರಲು ಸಾಧ್ಯ ವಾಗದೇ ಮನೆಯವರ ಒತ್ತಾಯಕ್ಕೆ ಮಣಿದು ಕಾಲೇಜು ಅಭ್ಯಾಸ ಮುಂದುವರಿಸಿದರು. ಪಿಯೂಸಿ ಕ್ಲಾಸಿನಲ್ಲಿ ಕಲಿಯುತ್ತಿದ್ದಾಗ “ಗಂಧರ್ವಗಿರಿ” ಮತ್ತು “ಸುಳಿಗಾಳಿ” ಸಿನೇಮಾದಲ್ಲಿ ಅಭಿನಯಿಸಲು ಕರೆಬಂದಾಗ  ಹಣಕಾಸಿನ ತೊಂದರೆ ಮತ್ತು ಬೆಂಗಳೂರಿಗೆ ಕರೆದುಕೊಂಡು ಹೋಗಲು ಯಾರೊಬ್ಬರೂ  ಸಿದ್ಧರಾಗದೇ  ಇದ್ದುದರಿಂದ  ಬಂದಂತಹ ಅವಕಾಶವನ್ನೂ ಕಳೆದುಕೊಂಡರು. ತಮ್ಮ ಶಿಕ್ಷಣ ಮುಂದುವರಿಸಿ ಎಂ.ಎ,ಬಿ.ಎಡ್ ಪದವಿಗಳನ್ನು ಪಡೆದುಕೊಂಡು ಕುಮಟಾದ ಬಾಳಿಗಾ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಮಕ್ಕಳಿಗೆ ಪಾಠ ಮಾಡಿದರು. ಈ ನಡುವೆ  ಎಂ.ಕೆ.ಇಂದಿರಾ‌‌ ರವರ ಕಾದಂಬರಿಯಾಧಾರಿತ ಫಣಿಯಮ್ಮ ದಲ್ಲಿ ಚಿಕ್ಕಚೊಕ್ಕ ಪಾತ್ರ ಮತ್ತು  ಪ್ರಾಯ, ಪ್ರಾಯ, ಪ್ರಾಯದ ಸೂಕ್ಷ್ಮ ಅಭಿನಯದ ಮೂಲಕ ಚಿತ್ರರಂಗದೊಂದಿಗೆ ಇವರ ಹೆಸರು ಬೆಸೆದುಕೊಂಡಿತು.

ಅಂಕೋಲದ ಅಂಬಾರಕೋಡ್ಲದ ಗದ್ದುಗೆ ಯಲ್ಲಿ ವಿಷ್ಣುನಾಯ್ಕರು ಅಂದಿನ ದಿನದಲ್ಲಿ “ಆಡಿಸುವ” ನಾಟಕ ಸುತ್ತಮುತ್ತಲಿನ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧವಾಗಿತ್ತು.  ಈ ನಾಟಕದಲ್ಲಿ ಕೆಲವರ್ಷಗಳ ಕಾಲ ಪೂರ್ಣಿಮಾ ಅಭಿನಯಿಸಿದ್ದರಿಂದ ಅಭಿನಯ ಕಲೆಯಲ್ಲಿ ಇದೊಂದು ಪಾಠಶಾಲೆಯಾಗಿ ಇವರ ಕಲಾ ಜೀವನಕ್ಕೆ ಒಳ್ಳೆಯನೆಲಗಟ್ಟು ಸಿಕ್ಕಂತಾಯಿತು: ಮಾಡಿದ್ದುಣ್ಣೊ ಮಾರಯಾ ಈಸಂದರ್ಭದ  ಇವರ ಅತ್ಯಂತ ಜನಪ್ರೀಯ  ನಾಟಕವಾಗಿದೆ. ಅಂಕೋಲೆಯ ಮಂಗೇಶಶೆಟ್ಟಿ (ಸೈಕಲ್), ವಾಸುದೇವ ಶ್ಯಾನಭಾಗ, ಚೇತನ ನಾರ್ವೇಕರ ಇವರ ಗುಂಪಿನ, “ಫ್ರೆಂಡ್ಸ ರಿಕ್ರಿಯೇಷನ್  ಕ್ಲಬ್” ನಮೂಲಕ ಪೂರ್ಣಿಮಾ ಅನೇಕ ನಾಟಕಗಳಲ್ಲಿ ಭಾಗವಹಿಸಿ ಜನಮನ್ನಣೆ ಪಡೆದರು.

1990 ನೇ ವರ್ಷ,ಪೂರ್ಣಿಮಾರ ಬದುಕಿನ ಅತೀಮಹತ್ವದ ತಿರುವಿನ ಕಾಲವದು. ಗೋವೆ ಯಲ್ಲಿ ನೌಕರಿ ಮಾಡುವ ಹುಡುಗ ನೊಂದಿಗೆ ಮದುವೆ.ರಾಜ್ಯ,ಭಾಷೆ,ಸಂಸ್ಕೃತಿ,ಕಲೆ,ಸಾಹಿತ್ಯ ಎಲ್ಲವೂ ಬೇರೆಯೇ. ಕರ್ನಾಟಕದ ಪ್ರತಿಭೆ ಯೊಂದು ಮದುವೆ ಮತ್ತು ಉದ್ಯೋಗದ ನಿಮಿತ್ತ “ಪ್ರತಿಭಾ ಫಲಾಯನ”ಮಾಡಬೇಕಾಗಿ ಬಂದದ್ದು ಯಾರಿಗೂ ಏನೂ ಆಗದಿದ್ದರೂ ಕನ್ನಡ ನಾಡಿನ ಕಲಾ ಪ್ರತಿಭೆಯೊಂದು ಮತ್ತೊಂದು ರಾಜ್ಯದ ಪಾಲಾದದ್ದಂತೂ ಸತ್ಯವಾದ ಸಂಗತಿ! ಮದುವೆ ಎಂಬ ಬಂಧನ ದಿಂದ ಕನ್ನಡ ನಾಡಿನ ಕಾಲೇಜಿನ ಅಧ್ಯಾಪಕ ವೃತ್ತಿ, ಕನ್ನಡದ ಎಲ್ಲಾ ಜನಪರಕಾರ್ಯಗಳನ್ನು ಬಿಡುವದು ಅನಿವಾರ್ಯವೆ! ಮೊದಮೊದಲಿಗೆ ಬೇಸರವೆನಿಸಿದರೂ ತುಂಬು ಹೃದಯದಿಂದ ಪೂರ್ಣಿಮಾ ಕನ್ನಡನಾಡನ್ನು ಬಿಟ್ಟು ಗೋವಾದ   ನಿವಾಸಿಯಾಗಿ  ಅಲ್ಲಿಯ “ಸೇಂಟ್ ಫ್ರಾನ್ಸಿಸ್ ಝೇವಿಯರ್ ” ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನೇ ಮುಂದುವರೆಸಿ ಖುಷಿಯ ಸಂಸಾರದಲ್ಲಿ ಭಾಗಿಯಾದರು.

ಗೋವಾ ರಾಜ್ಯದಲ್ಲೂ ಮತ್ತೆ ಗರಿಗೆದರಿದ ಕನ್ನಡಪರ ಮನಸ್ಸಿನಿಂದ ಪೂರ್ಣಿಮಾ ಗೋವಾದ ಕನ್ನಡ ಸಂಘ ಸೇರಿ ಅಲ್ಲಿಯ ಮಕ್ಕಳಿಗೆ ಡಾನ್ಸ-ನಾಟಕದ ನಿರ್ದೇಶನಗಳ ಮುಖಾಂತರ ತಮ್ಮಹೃದಯದಲ್ಲಿ ಕನ್ನಡತನ ತುಂಬಿಕೊಂಡು ಅಲ್ಲಿಯೂ ಕನ್ನಡದ ಕಣ್ಮಣಿ ಯಾದರು. ಎಲ್ಲೇ ಇದ್ದರೂ ಪೂರ್ಣಿಮಾ ಪ್ರವೃತ್ತಿಯ ಹೆಸರಿನಲ್ಲಿ ವೃತ್ತಿ ಜೀವನಕೆಂದೂ ಕುಂದು ತರದೇ ಕಾಯಕವೇ ಕೈಲಾಸ ಎಂದು ನಂಬಿದವರು.

ಗೋವಾ ರಾಜ್ಯದ,  ಸೇಂಟ್ ಫ್ರಾನ್ಸಿಸ್ ಝೇವಿಯರ್ ಕಾಲೇಜಿನಲ್ಲಿ ಕಳೆದ ೩೦  ವರ್ಷಗಳಿಂದ  ಉಪನ್ಯಾಸಕಿಯಾಗಿ, ಶಿಕ್ಷಣ ದಲ್ಲಿ ಭಾರತೀಯ ವಿಚಾರಧಾರೆಯನ್ನು ಅಳವಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು, ದೇಶಪ್ರೇಮವನ್ನು ಬೆಳೆಸುವಲ್ಲಿ ಅವರು ತೋರಿದ ಆಸಕ್ತಿ ಹಾಗೂ ಅವರು ಅನೇಕ  ಸಂಘಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವದನ್ನುಪರಿಗಣಿಸಿ,ಬೆಂಗಳೂರಿನ  ಬಿಜಿಎಸ್   ನ್ಯಾಶನಲ್ ಪಬ್ಲಿಕ್ ಸ್ಕೂಲಿನಲ್ಲಿ ನಡೆದ  ಬೆಳ್ಳಿಹಬ್ಬದ  ಸಂಭ್ರಮದಲ್ಲಿ,    ಹೈದ್ರಾಬಾದಿನ ಅಫೋಲೋ ಆಸ್ಪತ್ರೆಯ  ಹಿರಿಯ ವೈದ್ಯರಾದ ಡಾ.ಟಿ. ಇಂದ್ರಾಣಿಯ ವರು “ವಿಶ್ವಧರ್ಮ ಮಂದಿರ – ಇಂಡಿಯಾ ಆನ್ ದ ಮೂವೀ” ಪ್ರಶಸ್ತಿ ನೀಡಿ ಪೂರ್ಣಿಮಾರನ್ನು ಗೌರವಿಸಿದೆ.

ತಮ್ಮ ಬದುಕಿನ ಈ ಎಲ್ಲಾ ಸಾಧನೆಗಳ ಹಿಂದೆ ಅವರ ಪತಿ ರಮೇಶ ನಾಯಕ ಮತ್ತು ಮಕ್ಕಳ ಪ್ರೋತ್ಸಾಹವನ್ನ ಪೂರ್ಣಿಮಾ ಸದಾ ನೆನೆಯು ವರು.

ಮುಂದಿನ ಕೆಲವೇ ತಿಂಗಳಲ್ಲಿ ನಿವೃತ್ತಿ ಹೊಂದಿ ಮತ್ತೆಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಲು, ಕರ್ನಾಟಕದಲ್ಲಿ ನೆಲೆಸಲು ಆಗಮಿಸುವ ಪೂರ್ಣಿಮಾ.ರಮೇಶ.ನಾಯಕ  (ಗಾಂವಕರ) ರನ್ನು  ಕನ್ನಡಪರ ಮನಸ್ಸಿನ ನಾವೆಲ್ಲರೂ ಸ್ವಾಗತಿಸೋಣ.

                      🔆🔆🔆

✍️ಪ್ರಕಾಶ ಕಡಮೆ.ನಾಗಸುಧೆ 
          ಹುಬ್ಬಳ್ಳಿ