ಕಾಲಚಕ್ರ ತಿರುಗಿದಂತೆ ಪ್ರತಿಯೊಬ್ಬನ ಸ್ಥಾನ ಮಾನಗಳು ಬದಲಾಗಿಬಿಡುತ್ತವೆ.ಅವುಯಾ ವ ಹಂತದಲ್ಲೂ ಇರಬಹುದು.ನಾವುಗಳು ಈಗಿರುವ ನೈಜತೆಗೆ ಮಾರುಹೋಗಿ ಮುಂಬರುವ ಅಸಹಜತೆಗೆ ನಮ್ಮನ್ನು ತೆರೆದುಕೊಳ್ಳುತ್ತಿರುವುದು ತುಂಬ ವಿಷಾದ ನೀಯ ಸಂಗತಿ. ನಮ್ಮ ಬದುಕು ನಾವು ಅಂದುಕೊಂಡಷ್ಟು ಸರಳವಾಗಿದ್ದರೆ, ವಾಸ್ಕೋಡಿಗಾಮ ಹೊಸ ಅನ್ವೇಷಣೆಗೆ ತೊಡಗುತ್ತಿರಲಿಲ್ಲ. ಭೂಖಂಡಗಳನ್ನು ಗುರು ತಿಸುವಲ್ಲಿ ಅವನ ಮಹತ್ವಾಕಾಂಕ್ಷೆ ದ್ವಿಗುಣ ಗೊಳ್ಳುತ್ತಿರಲಿಲ್ಲ. ಅನ್ವೇಷಣೆ ಎಂಬುದು ಕ್ರಿಯಾಶೀಲತೆಗೆ ಕನ್ನಡಿ ಹಿಡಿದಂತೆ ಮಕ್ಕಳಿಗೆ ಹೊಸದನ್ನು ಸೃಷ್ಟಿಸುವ ಮನೋಭಿಲಾಷೆ ಯನ್ನು ಸೃಜಿಸುವುದರಿಂದ ಮಾನಸಿಕ, ದೈಹಿಕ, ಬೌದ್ಧಿಕ ಪ್ರಯೋಗಾತ್ಮಕ ಯಶೋಗಾಥೆಗಳು ಹುಟ್ಟಿಕೊಳ್ಳಲು ದಾರಿಯಾಗುತ್ತದೆ.
ಇಂದಿನ ಕಾಲಮಾನ ಬಹು ಸೂಕ್ಷ್ಮ. ಮಕ್ಕಳಿಗೆ ಆಸ್ತಿ ಮಾಡಿಡಬೇಡಿ, ಬದಲಾಗಿ ಅವರನ್ನೇ ಆಸ್ತಿಯನ್ನಾಗಿ ಪರಿವರ್ತಿಸಿ. ಎನ್ನುವ ಮಹಾನುಭಾವರ ನುಡಿಗಳು ಸತ್ಯ. ಆಚಾರ ವಿಚಾರಗಳತ್ತ ಗಮನ ಹರಿಸಿದಾಗ ಮಕ್ಕಳಿಗೆ ಸ್ವದೇಶಿಯ ಸಂಸ್ಕೃತಿಗಳ ರಾಯ ಭಾರಿಯಾಗುವ ಅವಕಾಶ ಕಲ್ಪಿಸುವ ಹೊಣೆ ನಮ್ಮದು.ಮಕ್ಕಳು ನೀರಿನಂತೆ ಅವುಯಾವ ಪಾತ್ರೆಯ ಆಕಾರವನ್ನುಸುಲಭದಲ್ಲಿ ಪಡೆದು ಬಿಡುತ್ತವೆ. ಅವಕ್ಕೆ ಪೂರ್ಣರೂಪದಲ್ಲಿ ಸಮ್ಮಿಳಿತಗೊಳ್ಳುವ ಮೃದುಮನಸ್ಸಿರುತ್ತದೆ. ಇಂದು ಮಕ್ಕಳಿಗೂ ಅಯೋಮಯ ಸ್ಥಿತಿ ನಿರ್ಮಾಣವಾಗಿರುವುದು, ಅವರ ಬಾಲ್ಯ ವನ್ನು ಕಸಿದುಕೊಂಡು ನೈಸರ್ಗಿಕವಾಗಿ ಬೆಳೆಯದಂತೆ ಮಾಡಿ, ಕೃತಕ ಗೊಬ್ಬರುಣಿಸಿ ನಿಗದಿತವಾದ ಅವಧಿಗಿಂತ ಮೊದಲೇ ಬೆಳೆಬರುವಂತೆ ಮಾಡುತ್ತಿರುವುದು ಕಾರ್ಯ ಯಾವುದರ ಸಂಕೇತವೆಂದು ನಾವೇ ನಿರ್ಧರಿಸಬೇಕಿದೆ.
ಜ್ಞಾನ-ವಿಜ್ಞಾನಗಳ ಮೂಲ ಬುನಾದಿಯನ್ನು ಮನನ ಮಾಡಿಕೊಳ್ಳದೇ, ಲಾಭಕ್ಕಾಗಿ, ದ್ವೇಷಕ್ಕಾಗಿ, ಅನಾಹುತ ಸೃಷ್ಟಿಗಾಗಿ ಬಳಕೆ ಯಾಗುತ್ತಿರುವುದು ನಮ್ಮ ದೌರ್ಭಾಗ್ಯವೇ ಸರಿ.ಅದರ ಪರಿಣಾಮ ಯಾರ ಮೇಲಾಗು ತ್ತಿದೆ? ಎಂಬ ಅರಿವು ನಿಯಂತ್ರಣ ಮೀರಿ ಇಂದು ಜಗತ್ತು ತತ್ತರಿಸಿ ಜೀವಸಂಕುಲವನ್ನು ಕಣ್ಣೇದುರೇ ಕಳೆದುಕೊಳ್ಳುತ್ತಿದೆ.ಅಂತಹುದ ರಲ್ಲಿ ಕೊರೋನಾ ಅಲೆ ಒಂದು,ಎರಡು ಅಲೆಗಳು ಕಡಲ ಅಲೆಗಳಂತೆ ಅಪ್ಪಳಿಸಿ ಮಕ್ಕಳಿಗೆ ತೀವ್ರ ಪರಿಣಾಮ ಬೀರುವ ಹಂತಕ್ಕೆ ಬರುತ್ತಿರುವ ಸುದ್ದಿಗಳು ಆಘಾತಕಾರಿ.
ಕೋವಿಡ್ ಮೊದಲ ಅಲೆಯಲ್ಲಿ ಮಕ್ಕಳಲ್ಲಿ ಸಾಮಾನ್ಯವಾ ಗಿ ಲಕ್ಷಣಗಳು ಕಂಡುಬರು ತ್ತಿರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಜ್ವರ, ಶೀತ, ಒಣ ಕೆಮ್ಮು, ವಾಂತಿ, ಭೇದಿ, ಅಸೌಖ್ಯ, ಮೈ-ಕೈ ನೋವು ಹೀಗೆ ಹಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತಿವೆ. ಕೆಲವರಲ್ಲಿ ಉಸಿರಾಟದ ಸಮಸ್ಯೆ ಹಾಗೂ ಚರ್ಮದ ಅಲರ್ಜಿ ಕೂಡಾ ಬರ್ತಿದೆ. ಮಕ್ಕಳು ಹೊರಗೆ ಆಟವಾಡುವುದರಿಂದ ಹಾಗೂ ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಕಾರಣ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ತಿದೆ. ಮತ್ತು ಮಕ್ಕಳಿಂದ ಸುಲಭವಾಗಿ ಹರಡುತ್ತಿರುವದು ವರದಿಯಾಗಿದೆ. ಹೀಗಾಗಿ, ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಪೋಷಕರು ಪರೀಕ್ಷೆ ಮಾಡಿಸಬೇಕಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಜೊತೆಗೆ ಪೋಷಕರೂ ಕ್ವಾರಂಟೈನ್ಗೆ ಒಳಪಡ ಬೇಕಿದೆ ಎನ್ನುವುದು ವೈದ್ಯರ ಸಲಹೆ ಹಾಗೂ ಸುರಕ್ಷತಾ ದೃಷ್ಟಿಯಿಂದ ಸೂಕ್ತವಾಗಿದೆ.
“11 ವರ್ಷದ ಬಾಲಕನೋರ್ವ ಮಧ್ಯಮ ಶ್ವಾಸಕೋಶದ ಸೋಂಕಿನಿಂದಾಗಿ ಆಸ್ಪತ್ರೆಗೆ ಬಂದಿದ್ದನು. ಅವನಿಗೆ ಕನಿಷ್ಠ ಆಮ್ಲಜನಕದ ನೆರವಿನ ಅಗತ್ಯವಿತ್ತು. ಚಿಕಿತ್ಸೆ ನೀಡಿದಾಗ ಮರುದಿನ ಚೇತರಿಸಿಕೊಂಡ. ನಮ್ಮ ಆಸ್ಪತ್ರೆ ಯಲ್ಲಿ ಕಿರಿಯ ರೋಗಿ ಅಂದರೆ ಅದು ಎರಡು ವರ್ಷದ ಮಗು. ಆಮಗುವಿಗೆ ಕೊಂಚ ಶ್ವಾಸಕೋಶದ ಸೋಂಕು ಕೂಡ ಇತ್ತು.ಆದರೆ ಆಮ್ಲಜನಕದ ಬೆಂಬಲ ಅಗತ್ಯ ವಿರಲಿಲ್ಲ.ಆಮ್ಲಜನಕದ ಅವಶ್ಯಕತೆ ಇರುವ ಇಬ್ಬರು ಮಕ್ಕಳನ್ನು ನಾವು ಇಲ್ಲಿಯವರೆಗೆ ನೋಡಿದ್ದೇವೆ.ಈ ಹಿಂದೆ ಆಸ್ಪತ್ರೆಗೆ ದಾಖಲಾ ಗುತ್ತಿದ್ದ ಮಕ್ಕಳಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರಲಿಲ್ಲ. ಆದರೆ ಇದೀಗ ದಾಖಲಾ ಗುವ ಬಹುತೇಕ ಮಕ್ಕಳಿಗೆ ಆಮ್ಲಜನಕದ ಅಗತ್ಯವಿರುತ್ತದೆ, ಇಂತಹ ಪರಿಸ್ಥಿತಿ ನಮಗೆ ಹೊಸದು”
– ಮಕ್ಕಳ ವೈದ್ಯರು, ಚೆನ್ನೈ ಸರ್ಕಾರಿ ಆಸ್ಪತ್ರೆ.
ಇಂದು ಜಗದ ಕಾಲ ಚಕ್ರಕ್ಕೆ ಹಿರಿಕಿರಿಯರೆ ನ್ನದೇ ಎಲ್ಲರಿಗೂ ಬಾಧಿಸುವ ಬೇಗೆಗೆ ಸೋತು ಸುಣ್ಣಾಗುವ ಬದಲು ಆರೋಗ್ಯಕರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವತ್ತ ನಮ್ಮನಿಲುವಿರಲಿ…ಮಾಹಾಮಾರಿ ಪ್ಲೇಗ, ಎಬೊಲಾ,ಪೋಲಿಯೋ,ಕ್ಯಾನ್ಸರ್,ಎಚ್1 ಎನ್1 ನಿಂದ ಪಾರಾದ ಹಿಂದೆ ಕಾಣಸಿಗ ದಷ್ಟು ಪ್ರಾಣಹಾನಿ ಆಗಿರುವುದನ್ನು ಇತಿಹಾಸದ ಪುಟಗಳು ಸಾರಿಸಾರಿ ಹೇಳು ತ್ತವೆ. ಯುದ್ದಗಳು ಹೇಗೆ ನಡೆಯುತ್ತವೆ ಎಂಬುದನ್ನು ಗ್ರಹಿಸಲು ಸಾಧ್ಯವಿಲ್ಲ… ವಿಶ್ವದ ಮೂರನೇ ಸಮರ ಕಾಡ್ಗಿಚ್ಚಿನಂತೆ ಎಲ್ಲ ರಾಷ್ಟ್ರಗಳಿಗೆ ಸಮನಾಗಿ ಹಂಚಿಕೆ ಯಾಗುತ್ತಿರುವುದು, ಪರಿಸರ ಮೂಲಮಂತ್ರ ಆಗದೇ ಇರುವುದು ಮಾಡಿದ್ದುಣೋ ಮಹಾರಾಯ ಎಂಬಂತೆ ನಾವೆಲ್ಲ ಅದಕ್ಕೆ ಸಾಕ್ಷಿಯಾಗುತ ಮಕ್ಕಳ ಭವಿಷ್ಯವನ್ನು ಅಂಧಕಾರಕಕ್ಕೆ ತಳ್ಳುತ್ತಿದ್ದೆವೆ. ನಿಯಂತ್ರಣ ನಮ್ಮ ನಮ್ಮ ಕೈಯಲ್ಲಿದೆ.
✍️ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿಸುವ ತೆರದಲ್ಲಿ ಪಾಲಕರು ಕರ್ತವ್ಯ ನಿರ್ವಹಿಸಬೇಕೆನ್ನುವ ಮಾತು ಪಾಲಕರ ಆದ್ಯ ಕರ್ತವ್ಯ ವನ್ನು ನೆನಪಿಸುವುದರೊಂದಿಗೆ ಕೊರೋನಾದ ಜಾಗೃತಿ ಕೂಡ ಚೆನ್ನಾಗಿ ಮೂಡಿ ಬಂದಿದೆ ಗೆಳತಿ ಅಭಿನಂದನೆಗಳು ಉತ್ತಮವಾದ ಲೇಖನಗಳ ಸವಿ ಬಡಿಸುತ್ತಿರುವ ಸಂಪಾದಕರಿಗೂ ಧನ್ಯವಾದಗಳು
LikeLiked by 1 person
Karobada jagrathi makkala surakshate ati aavashya chennagide..
LikeLiked by 1 person
Namagella upauktha sundar lekhana
LikeLike
ಆರೋಗ್ಯ ಅಂಕಣ ಬರಹ ತುಂಬಾ ಚೆನ್ನಾಗಿದೆ.
LikeLiked by 1 person