ಮಾದರಸ ಮಾದಲಾಂಬಿಕೆಯ ಮುದ್ದು ಕಂದ
ಬಸವೇಶ್ವರ ಎಲ್ಲರಿಗೂ ಪ್ರೀತಿಯ ಬಸವಣ್ಣ
ಕಲಚೂರಿ ಬಿಜ್ಜಳನ ರಾಜ್ಯದಲ್ಲಿ ಮಹಾಮಂತ್ರಿ
ಬಸವನ ಬಾಗೇವಾಡಿಯಲ್ಲಿ ಹುಟ್ಟಿದ ದಿವ್ಯಜ್ಯೋತಿ
ಆದರು ಶಿವ ಕೇಂದ್ರೀಕೃತ ಭಕ್ತಿ ಚಳವಳಿಯ ಹರಿಕಾರ
ವಿರೋಧಿಸಿ ಮೂಢನಂಬಿಕೆ ಸಾಮಾಜಿಕ ತಾರತಮ್ಯ ಕಂದಾಚಾರ
ಕ್ರಾಂತಿಯೋಗಿ ಜಗಜ್ಯೋತಿ ಎಂದೆಲ್ಲ ಹೆಸರುಗಳು
ಭಕ್ತಿ ಭಂಡಾರಿ ಮಹಾ ಮಾನವತಾವಾದಿ ಬಿರುದುಗಳು
ನಿರಾಕಾರ ದೇವನಿಗೆ ಇಷ್ಟ ಲಿಂಗವೆಂಬ ಪರಿಕಲ್ಪನೆ
ಜಾತಿ ಮತ ಭೇದ ಕಳೆದು ಸರ್ವರಿಗೂ ಶರಣ ಭಾವನೆ ಆಧ್ಯಾತ್ಮಿಕ ಅನುಭವ ಮಂಟಪವು ಶ್ರೇಷ್ಠ ಚಿಂತನೆಗಳ ಮನೆ
ಸತ್ಯಾನ್ವೇಷಕ, ಅನುಲೋಮ ವಿವಾಹಗಳು ನಿಮ್ಮದೇ ಯೋಜನೆ
ನಿಮ್ಮ ಯೋಚನೆಗಳ ಉಕ್ತಿಯು ವಚನ ರೂಪದಲ್ಲಿ
ಬಳಸಿಕೊಂಡಿರಿ ಭಾಷೆಯನ್ನು ಸಮರ್ಥ ರೀತಿಯಲ್ಲಿ
ನಿಮ್ಮಂತೆ ಅನೇಕ ಶರಣರ ವಚನಗಳು ಆಧ್ಯಾತ್ಮಿಕ ಶಕ್ತಿ
ವಚನ ವಾಙ್ಮಯನಿಧಿ ಕನ್ನಡ ಸಾಹಿತ್ಯದ ಆಸ್ತಿ
ಉಳ್ಳವರು ಶಿವಾಲಯವ ಮಾಡುವರು ಎಂದು ಹೇಳಿ ದಯವಿಲ್ಲದ ಧರ್ಮ ಯಾವುದಯ್ಯ ಪ್ರಶ್ನೆ ಕೇಳಿ ಇವನಾರವ ಇವನಾರವ ಇವನಾರವನೆಂದೆಣಿಸದಿರಯ್ಯಾ ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ ಎಂದರುಹಿ
ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ
ಛಲ ಬೇಕು ಶರಣಂಗೆ ಪರ ಧನವನ್ನು ಒಲ್ಲೆನೆಂಬ ಎಂದು
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದೆಂಬ ತತ್ವವನ್ನು ತಿಳಿಸಿದಿರಿ
ಕೆಲಸಕ್ಕೆ ಕಾಯಕವೆಂಬ ಪಾವನ ಮಹಾನತೆ
ದಾನಕ್ಕೆ ದಾಸೋಹವೆಂಬ ಮಿಗಿಲಾದ ಶ್ರೇಷ್ಠತೆ
ಪ್ರಪಂಚದಲ್ಲಿ ಎಲ್ಲಕ್ಕೂ ಮಿಗಿಲಾದ್ದು ಮಾನವತೆ
ಎಂದು ಸಾರಿ ನವ ದಿಗಂತಕ್ಕೆ ದಾರಿ ತೋರಿದ ಮಹಾ ಪ್ರವಾದಿ
✍️ಸುಜಾತಾ ರವೀಶ್, ಮೈಸೂರು
ಸಂಪಾದಕರಿಗೆ ಅಂಥ ಧನ್ಯವಾದಗಳು
ಸುಜಾತಾ ರವೀಶ್
LikeLiked by 1 person