ಅಮ್ಮಾ ನಿನ್ನ ತುತ್ತು ಪ್ರೀತಿಗಾಗಿ ಹಂಬಲಿಸದ ದಿನವಿಲ್ಲ
ಅಮ್ಮಾ ನಿನ್ನ ಸ್ವಚ್ಛ ಮಡಿಲಿಗಾಗಿ ಕಣ್ಣೀರಾಕದ ದಿನವಿಲ್ಲ
ಅಮ್ಮಾ ನಿನ್ನ ನೆನೆಯುವ ದಿನಕದೆಂಥ ಹೆಸರು ನೀ ಹೇಳಮ್ಮಾ
ನಿತ್ಯ ಕಾಣುವ ದೈವ ನೀ ನಿನಗೆ ಕೈಮುಗಿಯದ ದಿನವಿಲ್ಲ
ನಿನಗೇನು ಕೊಟ್ಟು ನಿನ್ನ ಋಣ ತೀರಿಸಬಹುದು ಹೇಳಮ್ಮಾ
ನಿನ್ನ ಮಮತೆ ಸಾಗರದ್ಹೊಳೆಯಲಿ ಮುಳುಗದ ದಿನವಿಲ್ಲ
ಅಮ್ಮನಿಲ್ಲದ ಜಗದಲಿ ನೂರು ಭಾಷೆ ನೂರು ನಿಯಮ
ನೀನಿರೆ ತ್ಯಾಗವೊಂದೆ ಭಾಷೆ ನಿಯಮ ಸವಿಯದ ದಿನವಿಲ್ಲ
ಅದು ಯಾವ ನಾದ ಲಯಕಿಲ್ಲ ನಿನ್ನ ಜೋಗುಳದ ಹನಿಬನಿ
“ಜಾಲಿ” ಲೋಕಪಾಲಕ ಜಗದೀಶನೇ ತಲೆಗೂದ ದಿನವಿಲ್ಲ
🔆🔆🔆
✍️ವೇಣು ಜಾಲಿಬೆಂಚಿ,ರಾಯಚೂರು.