ಕೋವಿಡ್-19 ರ ಎರಡನೆಯ ಅಲೆಯು ಗಂಭೀರವಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಲ್ಲಿಸೋಂಕುತಡೆಗಟ್ಟುವ ಸಲುವಾಗಿ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ವತಿಯಿಂದ ಸಲಹೆಗಳನ್ನು ನೀಡಲಾಗಿದೆ. ಮೇಲ್ನೋಟಕ್ಕೆ ಕಾಣುತ್ತಿರು ವಂತೆ ಎರಡನೆಯ ಅಲೆಯಲ್ಲಿ ಸೋಂಕಿನ ಪ್ರಮಾಣ ಹಿಂದಿಗಿಂತಲೂ ಹೆಚ್ಚಿರುವದ ರಿಂದ ಮಕ್ಕಳೂ ಸಹಾಸೋಂಕಿಗೊಳಗಾಗು ವುದು ಹೆಚ್ಚಿದೆ.ಸಾಮಾನ್ಯವಾಗಿ ಮಕ್ಕಳು ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವ ವಿಷಯದಲ್ಲಿ ಅಜಾಗ ರೂಕರಾಗಿರುವದರಿಂದ ಸೋಂಕು ಸುಲಭ ವಾಗಿ ಹರಡುವ ಸಾಧ್ಯತೆ ಇದೆ.ಕೋವಿಡ್19 ತಡೆಗಟ್ಟಲು ಈಗ ಲಸಿಕೆಗಳು ಲಭ್ಯವಿದೆ ಯಾದರೂ ಮಕ್ಕಳಿಗೆ ನೀಡುವಂತಹುದಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದೊಂದೇ ಮಕ್ಕಳಲ್ಲಿ ಸೋಂಕು ತಡೆಗಟ್ಟಲು ಇರುವ ಮಾರ್ಗವಾ ಗಿದೆ.ಪಾಲಕರು ಈ ಕುರಿತು ಕಾಳಜಿವಹಿಸ ಬೇಕು.
‘ಮಗುವಿಗೆ ಮೈ ಬಿಸಿ ಆದ ಹಾಗಿದೆ.. ಕೋವಿಡ್ ಇರಬಹುದೇ?’ಎಂದು ಕಂಗಾ ಲಾಗಿ ಪಾಲಕರು ಬರುವುಂಟು. ತಪಾಸಣೆ ನಡೆಸದೇ ನೇರವಾಗಿಹೇಳುವುದು ಸಾಮಾ ನ್ಯವಾಗಿ ಸಾಧ್ಯವಾಗದು.ಕುಟುಂಬ ದ ಬೇರೆ ಸದಸ್ಯರು ಸದ್ಯದಲ್ಲಿ ಕೋವಿಡ್ ಸೋಂಕಿತ ರಾಗಿದ್ದರೆ ಈ ಸಾಧ್ಯತೆ ಹೆಚ್ಚು. ನೆಗಡಿ, ಜ್ವರ, ಕೆಮ್ಮು,ಮೈ ಕೈ ನೋವು, ವಾಸನೆ ಮತ್ತು ರುಚಿ ತಿಳಿಯದಿರುವುದುಈ ಲಕ್ಷಣಗಳಲ್ಲದೆ ಭೇದಿ, ಹೊಟ್ಟೆನೋವು, ವಾಂತಿ, ಕಣ್ಣು ಕೆಂಪಾಗುವುದು,ಉರಿಮೂತ್ರ ಈ ಮುಂತಾ ದ ಲಕ್ಷಣಗಳೂ ಎರಡನೆಯ ಅಲೆಯಲ್ಲಿ ಕಾಣಿಸಿಕೊಳ್ಳುತ್ತಿವೆ.ಹಾಗಾದರೆ ಮಕ್ಕಳಿಗೆ ಕೋವಿಡ್ ಪರೀಕ್ಷೆ ಯಾವಾಗ ಮಾಡಿಸಬೇಕು?
- ಕುಟುಂಬದ ಸದಸ್ಯರು ಕೋವಿಡ್ ಸೋಂಕಿಗೊಳಗಾದಲ್ಲಿ
- ಮಗುವಿನಲ್ಲಿ ರೋಗಲಕ್ಷಣಗಳು ಕಂಡು ಬಂದಲ್ಲಿ.
- ಮೂರು ದಿನಕ್ಕೂ ಮೀರಿ ಜ್ವರ ಬರುತ್ತಿದ್ದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ 2 ವರ್ಷದ ಮೇಲ್ಪಟ್ಟು ಎಲ್ಲಾ ಮಕ್ಕಳು ಮಾಸ್ಕ್ ಧರಿಸಬೇಕು. ಈಗಿರುವ ಅಧ್ಯಯನಗಳ ಪ್ರಕಾರ 60- 70% ಸೋಂಕಿತ ಮಕ್ಕಳು ಹೆಚ್ಚಾಗಿ ಲಕ್ಷಣ ಗಳನ್ನು ಹೊಂದಿರುವುದಿಲ್ಲ. 1-2% ಮಕ್ಕಳುಮಾತ್ರವೇ ತೀವ್ರನಿಗಾಘಟಕಕ್ಕೆ ದಾಖಲಾಗುತ್ತಾರೆ. ಹೀಗಾಗಿ ಮಕ್ಕಳಲ್ಲಿ ರೋಗ ಉಲ್ಬಣವಾಗುವ ಸಾಧ್ಯತೆ ಕಡಿಮೆ,ಹೀಗಾಗಿ ಆತಂಕ ಬೇಡ. ಆದರೆ ಮೊದಲೆಲ್ಲ ವಯಸ್ಸಾದವರಲ್ಲಿ ತೀವ್ರ ಲಕ್ಷಣಗಳು ಕಂಡುಬರುತ್ತಿದ್ದು ಈ ಅಲೆಯಲ್ಲಿ ಯುವಕರಲ್ಲಿಯೂ ಗಂಭೀರ ಸ್ವರೂಪವನ್ನು ತಲುಪುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ವೈರಾಣುವಿನ ರೂಪ ಬದಲಾ ದಂತೆ ಮಕ್ಕಳಲ್ಲಿ ರೋಗ ಲಕ್ಷಣಗಳು ಗಂಭೀರವಾಗಿ ಪರಿಣಮಿಸ ಬಹುದೆಂದು ತಜ್ಞರು ಅಭಿಪ್ರಾಯಪಡು ತ್ತಿರುವದರಿಂದ ಹೆಚ್ಚಿನ ಕಾಳಜಿ ಹಾಗೂ ಎಚ್ಚರ ಅಪೇಕ್ಷಣೀಯ.ಹುಟ್ಟಿನಿಂದಲೇ ಹೃದಯ, ಮೂತ್ರಪಿಂಡ, ಯಕೃತ್ತು ಮುಂತಾದ ಅಂಗಾಂಗಗಳ ತೊಂದರೆ ಇರುವ ಮಕ್ಕಳಲ್ಲಿ,ಕ್ಯಾನ್ಸರ್ ಪೀಡಿತರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಇರುವವ ರಲ್ಲಿ, ಬೊಜ್ಜು ಇರುವ ಮಕ್ಕಳಲ್ಲಿ ಸೋಂಕು ಉಲ್ಬಣವಾಗುವ ಸಾಧ್ಯತೆ ಅಧಿಕ.
- ತಾಯಿ ಹಾಗೂ ಮಗು ಇಬ್ಬರೂ ಕೊರೋನಾ ಪಾಸಿಟಿವ್ ಆದಲ್ಲಿ ಮಗುವನ್ನು ತಾಯಿಯೊಡನೆ ಚಿಕಿತ್ಸೆ ಮಾಡಬಹುದು (ತಾಯಿಯ ಸ್ಥಿತಿ ತುಂಬಾ ಗಂಭೀರವಾಗಿ ತೀವ್ರ ನಿಗಾ ಘಟಕದಲ್ಲಿ ಇರುವುದನ್ನು ಹೊರತು ಪಡಿಸಿ). ಎದೆಹಾಲು ಕುಡಿಸುತ್ತಿದ್ದಲ್ಲಿ ಮುಂದುವರೆಸಬಹುದು.ಒಂದು ವೇಳೆ ತಾಯಿ ಪಾಸಿಟಿವ್ ಇದ್ದು ಮಗು ನೆಗೆಟಿವ್ ಇದ್ದರೆ ಬೇರೆ ಯಾರೂ ಮಗುವಿನ ಕಾಳಜಿ ಮಾಡುವವರಿಲ್ಲ ವಾದಲ್ಲಿ ತಾಯಿ ಸೂಕ್ತ. ಮುಖಗವಸು ಧರಿಸಿ ಹಾಗೂ ಕೈಗಳ ನೈರ್ಮಲ್ಯ ಕಾಪಾಡಿಕೊಂಡು ಮಗುವನ್ನು ನೋಡಿ ಕೊಳ್ಳಬಹುದು. ಮಗು ಪಾಸಿಟಿವ್ ಇದ್ದು ಹೆತ್ತವರು ನೆಗೆಟಿವ್ ಇದ್ದಾಗ ಆಸ್ಪತ್ರೆ ಅಥವಾ ಮನೆಯಲ್ಲಿ (ಮಗುವಿನ ಲಕ್ಷಣಗಳನ್ನು ಆಧರಿಸಿ) ಮಗುವನ್ನು ಹೆತ್ತವರು ದೇಖರೈಖೆ ಮಾಡಬಹುದು.ಆದರೆ ಮುಖಗವಸು, ನೈರ್ಮಲ್ಯ ಕಾಪಾಡುವದು ಹಾಗೂ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವದು ಕಡ್ಡಾಯ.
- ಕೋವಿಡ್ ಶಂಕಿತ ಮಕ್ಕಳನ್ನು ಅಜ್ಜ- ಅಜ್ಜಿಯೊಂದಿಗೆ ಉಳಿಸುವುದುಸರ್ವಥಾ ಸಲ್ಲದು. ವಯಸ್ಸಾದವರಲ್ಲಿ ತೀವ್ರ ರೋಗ ಉಂಟಾಗುವ ಸಾಧ್ಯತೆ ಇರುತ್ತದೆ.ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ನೀಡುವುದರ ಜೊತೆಗೆ ಸಾಧ್ಯ ವಾದಲ್ಲಿ ಮನೆಯಲ್ಲಿ ಈ ಮುನ್ನೆಚ್ಚರಿಕೆ ಗಳನ್ನು ವಹಿಸಬೇಕು.
- ದೇಹದ ಉಷ್ಣತೆ ಮತ್ತು ರಕ್ತದಲ್ಲಿ ಆಮ್ಲಜನಕ ಪ್ರಮಾಣವನ್ನು ದಾಖಲಿಸುವುದು.
- ದ್ರವಾಹಾರವನ್ನು ಸಾಕಷ್ಟುನೀಡುವುದು.
- ನೈರ್ಮಲ್ಯ ಕಾಪಾಡುವದು.
- ಮಗುವಿಗೆ ಯಾವುದಾದರೂ ಔಷಧಗಳನ್ನು ನಿಯಮಿತವಾಗಿ ನೀಡುತ್ತಿದ್ದಲ್ಲಿ ಅವುಗಳನ್ನು .
- ಸ್ವಯಂ ವೈದ್ಯ ಮಾಡದೇ ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಡೆದು ಕೊಳ್ಳಬೇಕು.ಕೋವಿಡ್ ಪಾಸಿಟಿವ್ ಆದ ಮಗುವಿನ ಲಸಿಕಾಕರಣವಿದ್ದಲ್ಲಿ ಲಕ್ಷಣಗಳು ಕಡಿಮೆ ಆದ ಎರಡು ವಾರಗಳ ಬಳಿಕ ಹಾಕಿಸಬಹುದಾಗಿದೆ. ಒಂದುವೇಳೆ ತೀವ್ರ ಸ್ವರೂಪಕ್ಕೆ ತಿರುಗಿ ಸ್ಟೀರಾಯ್ಡ್ ಮೊದಲಾದ ಔಷಧ ಗಳು ಬೇಕಾಗಿದ್ದಲ್ಲಿ ಮೂರು ತಿಂಗಳ ಬಳಿಕ ಸಾರ್ವತ್ರಿಕ ಲಸಿಕೆಗಳನ್ನು ಹಾಕಬಹುದು. ರಕ್ತದಲ್ಲಿ ಆಮ್ಲಜನಕದ ಪ್ರಮಾಣ 95% ಕ್ಕಿಂತ ಕಡಿಮೆಯಾದಲ್ಲಿ, ಐದುದಿನವಾ ದರೂ ಜ್ವರ ತೀವ್ರವಾಗಿದ್ದಲ್ಲಿ,ಮಗುವಿಗೆ ದ್ರವಾಹಾರ ಸೇವನೆಯೂ ಕಷ್ಟವೆನಿಸು ತ್ತಿದ್ದರೆ, ತುಂಬಾ ಸುಸ್ತಾದಂತೆ ಇದ್ದರೆ, ಉಸಿರಾಟದ ವೇಗ ಹೆಚ್ಚಿದಲ್ಲಿ ಗಂಭೀರ ವಾಗಿ ಪರಿಗಣಿಸಬೇಕಾಗುತ್ತದೆ.ಮುಖ ಗವಸು,ಕೈಗಳ ನೈರ್ಮಲ್ಯ ಹಾಗೂ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವ ಮೂಲಕ ಕೋವಿಡ್ ತಡೆಗಟ್ಟಲು ಪ್ರಯತ್ನಿಸೋಣ. ವೈಜ್ಞಾನಿಕ ಮಾಹಿತಿ ಗಳನ್ನು ತಿಳಿಯುವ ಮೂಲಕ ಆತಂಕ ದೂರ ಮಾಡೋಣ..

ತಜ್ಞ ವೈದ್ಯರು,ತಾಲೂಕುಆಸ್ಪತ್ರೆ,
ಯಲ್ಲಾಪುರ.ಜಿ:ಉತ್ತರ ಕನ್ನಡ.
ಕೊರೋನಾ ಜಾಗೃತಿ ಬಹುಮುಖ್ಯ… ತುಂಬ ಸುಂದರವಾದ ಲೇಖನ ಈಗ ಪ್ರಸ್ತುತ ಅವಶ್ಯ.ನೈಸ್ ಗೆಳತಿ
LikeLiked by 1 person