ಕನ್ನಡ ಸಾಹಿತ್ಯದಲ್ಲಿ ಯಾವುದೇ ಕಾಲಘಟ್ಟ ದ  ಸಾಹಿತ್ಯ ಕೃತಿಗಳನ್ನು  ಗಮನಿಸಿದರೇ, ಮುಖ್ಯವಾಗಿ ಆ ಕಾಲದ ಸಾಮಾಜಿಕ, ಸಾಂಸ್ಕೃತಿಕ ಅಂಶಗಳನ್ನು ಮತ್ತು ಆ ಸಂದರ್ಭದಲ್ಲಿದ್ದ ಮೌಲ್ಯಗಳನ್ನು ತುಂಬಿ ಕೊಂಡು ಕೃತಿಗಳು ರಚನೆಯಾಗುತ್ತಿರು ವುದು ಕಂಡು ಬರುತ್ತದೆ. ಪ್ರಾಚೀನ ಕವಿಗಳು ಸೃಜನಶೀಲರು ಮತ್ತು ಸಾಹಿತ್ಯ ಆರಾಧಕರಾಗಿದ್ದವರು. ಅವರು ಜೀವನ ಮೌಲ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡು ತ್ತಿದ್ದು, ಅವು ಬದುಕನ್ನು ಉತ್ತಮ ದಾರಿ ಯಲ್ಲಿ ನಿರ್ಮಿಸುತ್ತಿದ್ದವು ಎಂಬ ಬಲವಾದ ನಂಬಿಕೆ ಅವರಲ್ಲಿತ್ತು. ಹಾಗಾಗಿ ಪ್ರಾಚೀನ ಕಾಲದ ಕವಿಗಳು ಕತೆಗಳನ್ನಾಧರಿಸಿ ಕೃತಿಗಳನ್ನು ರಚಿಸಿದ್ದು ವಿಶೇಷ. ಏಕೆಂದರೆ, ತಾವು ಹೇಳ ಬಯಸುವ ವಿಷಯವನ್ನು ಕ್ರಮಬದ್ದವಾಗಿ ಕತೆಯ ರೂಪದಲ್ಲಿ ಚಿತ್ರಿಸುತ್ತಿದ್ದರು. ಕತೆಗಳು ‘ಜೀವನದರೀತಿ’ ಯನ್ನು ತಿಳಿಸುತ್ತವೆನ್ನುವ ಮಾತನ್ನು ಕವಿಗಳು ಮರೆತಿರಲಿಲ್ಲ. ಪಂಪನ ‘ಪಂಪ ಭಾರತ’ವಾಗಲಿ, ನಾಗಚಂದ್ರನ ‘ರಾಮ ಚಂದ್ರಚರಿತವಾಗಲಿ, ಹಾಗೇ ನಾಗವರ್ಮನ ಕರ್ನಾಟಕ ಕಾದಂಬರಿಯಾಗಲಿ,. ಹೀಗೆ ಮೊದಲಾದ ಕೃತಿಗಳಲ್ಲಿ ಕತೆಯನ್ನೇ ಮೂಲ ವಸ್ತುವನ್ನಾಗಿಸಿರುವುದನ್ನು ಕಾಣುತ್ತೇವೆ. ಆ ಕತೆಯಲ್ಲಿರುವ ಮುಖ್ಯ ಆಶಯಗ ಳೆಂದರೆ ‘ಸ್ನೇಹ, ಪ್ರೇಮ, ಪ್ರಣಯ/ಕಾಮ/ ದಾಂಪತ್ಯ ಹಾಗೂ ಆಧ್ಯಾತ್ಮ’ ಇವುಗಳನ್ನೇ ಪ್ರಧಾನವಾಗಿ ಬಿಂಬಿಸುತ್ತಿ ದ್ದವು.ಇವುಗಳೆಲ್ಲಾ ‘ಸಖ್ಯದ’ ಬಹುಮುಖಿ ನೆಲೆಗಳಾಗಿವೆ.

ಸೃಷ್ಠಿಯ ಅನ್ವೇಷಣೆಯೇ ಬದುಕಿನ ಗುರಿ ಯೆಂಬ ವೈಚಾರಿಕ ವೈಜ್ಞಾನಿಕ ದೃಷ್ಟಿಯು ಮಾನವ ಪ್ರಪಂಚದ ಉತ್ಪತ್ತಿಗೆ ಕಾರಣ ವಾಯಿತು. ಇವುಗಳೆಲ್ಲದರ ಹಿಂದೆ ಕಾಣದ ಅದ್ಬುತ ಶಕ್ತಿಯೊಂದು ಇದೆ. ಅದೇ ಅಂದಿ ನಿಂದ ಇಂದಿನವರೆಗೂ ಕಾಪಾಡಿಕೊಂಡು ಉಳಿಸಿಕೊಂಡು ಹಾಗೂ ರೂಢಿಸಿಕೊಂಡು ಬರುತ್ತಿರುವುದು ಅದಕ್ಕೆ ಮುಖ್ಯ ಕಾರಣ ಅದು ನಮ್ಮಲ್ಲಿರುವ ಪರಸ್ಪರ ‘ಪ್ರೀತಿ ವಿಶ್ವಾಸ, ನಂಬಿಕೆ’ಗಳೇ ಆಗಿವೆ.ಇವುಗಳೆಲ್ಲಾ ದೊರೆಯುವುದು ಸಖ್ಯದ ಸಾಂಗತ್ಯದಲ್ಲಿ ಮಾತ್ರ ಎಂಬ ವಿಚಾರವನ್ನು ಕಾವ್ಯಗಳಲ್ಲಿ ಸುದೀರ್ಘವಾಗಿ ಬಿಂಬಿಸಿದ್ದಾರೆ.

ಸಖ್ಯ ಮನಸ್ಸಿನ ಭಾವನೆಗಳನ್ನುಇನ್ನೊಂದು ಮನಸ್ಸಿಗೆ ತಲುಪಿಸುವ ಜೀವವಾಹಿನಿ ಯಂತೆ ಸದಾ ಸ್ಪಂದಿಸುತ್ತದೆ. ಸಾಮಾನ್ಯ ವಾಗಿ ಎಲ್ಲರಲ್ಲಿಯೂ ಸಖ್ಯದ ಭಾವ ಅಡಗಿ ರುತ್ತದೆ.ಅದು ಕೆಲವೊಮ್ಮೆ ಮೌನವಾಗಿಯೆ ಮುಂದುವರೆದಿರುತ್ತದೆ. ತದನಂತರ ಅದು ಚಿಗುರುವುದು, ಮೊಗ್ಗಾಗುವುದು, ಅರಳು ವುದು ಕೊನೆಗೆ  ಪ್ರೇಮದಲ್ಲಿ ಮುಕ್ತಾಯ ವಾಗುವುದು. ಇದೊಂದು ಸಾರ್ಥಕ ಬದುಕ ನ್ನು ಕಟ್ಟಿಕೊಡುವುದಾಗಿದೆ. ಹೀಗಾಗಿ ಸಖ್ಯವನ್ನು ಮುಖ್ಯವಾಗಿ ಸ್ನೇಹ ಮತ್ತು ಪ್ರೇಮ ಎಂಬ ಎರಡು ನೆಲೆಯಲ್ಲಿ ಗುರುತಿ ಸುತ್ತೇವೆ. ಅವುಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಜೀವನದುದ್ದಕ್ಕೂ ಸಾಗಿ ಬರುತ್ತವೆ.

ಸಖ್ಯವೆಂದರೇ; ಸ್ನೇಹ ಎಂದರ್ಥ. ಆದರೆ, ಅದಕ್ಕೂ ಮಿಗಿಲಾಗಿದ್ದು ದಾಂಪತ್ಯದಲ್ಲಿ ಗಂಡು-ಹೆಣ್ಣುಗಳಿಬ್ಬರಲ್ಲಿ ಗೆಳೆತನದ ರೂಪ ವನ್ನು ಪಡೆದು, ಮುಂದೆ ಅದು ಪ್ರಣಯದ ಮೂಲವನ್ನು,ಸಂಭೋಗವನ್ನು ಪಡೆದುದ್ದ ನ್ನೆಲ್ಲ ಸಖ್ಯವೆಂದು ಕರೆಯುತ್ತವೆ. ಅದರ ನೆಲೆಗಳು ಮಾತ್ರ ವಿಭಿನ್ನವಾಗಿವೆ. ಅದು ಸಖಿ ಇಲ್ಲವೆ ಸಖನಲ್ಲಿ ಸ್ನೇಹ ತಾಳಿ ಮುಂದೆ ಅದು ಪ್ರೇಮದ ರೂಪವಾಗಿರುವಂತಹದ್ದು, ಪ್ರಕೃತಿಯ ಜೊತೆಗೆ ಮನುಷ್ಯನುಬೆರೆತಿರುವ ಸಿಂಚನದ ಹಾಗೆ. ದಾಂಪತ್ಯದ ಸ್ವರೂಪ ದೊಂದಿಗೆ ವಾತ್ಸಲ್ಯಮಯದ ಸಾಕಾರವಿದೆ. ಕೊನೆಗೆ ಆಧ್ಯಾತ್ಮವೆಂಬ ಮುಕ್ತಿಯಲ್ಲಿ ಶರೀರ ಲೀನಗೊಳ್ಳುವುದು ಇದೆ. ಹೀಗೆ ಮೊದಲಾದವುಗಳಲ್ಲಿ ಸಖ್ಯವು ತನ್ನ ನೆಲೆಗಳನ್ನು ಬಿಚ್ಚಿಕೊಳ್ಳುತ್ತದೆ.  ಉದಾ:- ಕರ್ಣ ಮತ್ತು ದುರ್ಯೋಧನ,ಕೃಷ್ಣ ಮತ್ತು ಅರ್ಜುನ, ಮಹಾಶ್ವೇತೆ ಮತ್ತು ಕಾದಂಬರಿ ಮೊದಲಾದವರಲ್ಲಿ ಸ್ನೇಹದ ಮೂಲ ರೂಪ, ಮಹಾಶ್ವೇತೆ – ಪುಂಡಲಿಕ ಹಾಗೂ ಚಂದ್ರಾಪೀಡ – ಕಾದಂಬರಿಯ ಇವರುಗಳ ಜೊತೆಗೆ ಜರಗುವ ಪ್ರೀತಿಯ ಸಖ್ಯ. ಹಾಗೇ ಪ್ರೀತಿ ನಂತರ ಬಯಕೆಯನ್ನು (ಕಾಮ) ಪಡೆಯುವುದು ಸಹಜ.ಆದರೆ ಈ ಕಾಮ / ಪ್ರಣಯವನ್ನು ಅನೈತಿಕವೆಂದು ಭಾವಿಸು ವಂತಿಲ್ಲ. ಈ ವಿಚಾರಕ್ಕಾಗಿ ಸಾಕಷ್ಟು ಉಲ್ಲೇಖಗಳಿವೆ. ಉದಾಹರಣೆಗೆ, ಅಮೃತ ಮತಿ ಮತ್ತು ಅಷ್ಟಾವಂಕನ ನಡುವೆ ಇರುವ ಪ್ರೀತಿ ಅಗಾಧವಾದುದು, ಅದೊಂದು ಪ್ರೀತಿಯ ತುತ್ತ ತುದಿಯಾಗಿ ಆರಾಧನೆ ಮಾಡಲ್ಪಟ್ಟಿದೆ ಎಂದರೆ  ತಪ್ಪಲ್ಲ. ಅದು ಪ್ರೀತಿಯ ಬಹುರೂಪ (ಸಿಟ್ಟು, ಆಲಿಂಗನ..) ಅಷ್ಟೇ. ಹೀಗಾಗಿ ಪ್ರಾಚೀನ ಕನ್ನಡ ಕವಿಗಳು ತಮ್ಮ ಕೃತಿಗಳಲ್ಲಿ ಲೌಕಿಕ ಮತ್ತು ಅಧ್ಯಾತ್ಮಿಕ ಸಖ್ಯವನ್ನು ಕುರಿತು ಸಾಕಷ್ಟು ಚಿತ್ರಿಸಿದ್ದಾರೆ. ಅವುಗಳೆಲ್ಲದರ ಬಿಡಿ ಬಿಡಿ ಅಧ್ಯಯನ‌ಗ‌ಳೇ ಸ್ನೇಹ, ಪ್ರೀತಿ-ಪ್ರೇಮ, ಪ್ರಣಯ, ಶೃಂಗಾರ ಈ ಹಿನ್ನಲೆಯಲ್ಲಿ ನಡೆದಿವೆ ಮತ್ತು ನಡೆಯುತ್ತಿವೆ.

ಮನುಷ್ಯನು ತನ್ನ  ಜೀವನವನ್ನು ಪ್ರಕೃತಿ ಜೀವನ, ಪೌರುಷೇಯ ಜೀವನ ಮತ್ತು ಸಿದ್ದದೈವಿ ಜೀವನ ಎಂದು ಬದುಕು ಕಟ್ಟಿಕೊಂಡು ಬದುಕತ್ತಾ ಬಂದಿದ್ದಾನೆ. ಹೀಗೆ ಬದುಕು ತನ್ನ ವಿವಿಧ ಕೊಂಡಿಗಳನ್ನು ರೂಪಿಸಿಕೊಂಡಿರುತ್ತದೆ. ಆಯಾ ಹಂತದ ಕಾಲಘಟ್ಟದಲ್ಲಿ ಜೀವನವು ಪ್ರೀತಿಯಿಂದ ಹಾಗೂ ಪೂರ್ಣ ದಾಂಪತ್ಯದಿಂದ ಕೂಡಿರು ತ್ತಿತ್ತು. ಹೀಗಾಗಿ ಆ ಕಾಲದಲ್ಲಿ (ಸರ್ವಕಾಲ ದಲ್ಲೂ) ಇದ್ದ ಬದುಕಿನ ರೂಪ ರೇಷವನ್ನೇ ಕವಿಗಳು ಅನ್ವಯಿಸಿಕೊಂಡು ಕಾವ್ಯ ಕೃತಿ ಗಳನ್ನು ರಚಿಸುತ್ತಿದ್ದರು. ಅವುಗಳಲ್ಲಿ ಮುಖ್ಯವಾಗಿ   ಗದ್ಯ    ಕೃತಿಯಾದ ವಡ್ಡಾರಾಧನೆಯಲ್ಲಿ      ಬಹುಪಾಲು ಧಾರ್ಮಿಕತೆಯ ಒಳಸೆಳೆತವನ್ನು ಹಾಗೂ ನೀತಿ ನಿಯಮಗಳನ್ನು, ಕಠಿಣ ದಂಡ(ಶಿಕ್ಷೆ) ಸ್ವರೂಪವನ್ನು, ಆದಿಪುರಾಣದಲ್ಲಿ ಲಲಿತಾಂಗ ಮತ್ತು ಸ್ವಯಂಪ್ರಭೆಯರ ಬದುಕು, ವಜ್ರಜಂಘ ಮತ್ತು ಶ್ರೀಮತಿಯರ ಸಹಮರಣ, ಪಂಪ ಭಾರತದಲ್ಲಿ ಮತ್ಸ್ಯ ಗಂಧಿಯ ಜೀವನದ ವೃತ್ತಾಂತ, ಕುಂತಿ- ಮಾದ್ರಿ-ಪಾಂಡುವಿನ ನಡುವಿನದಾಂಪತ್ಯದ ಸುತ್ತ, ಪಾಂಡವರು ಮತ್ತು ದ್ರೌಪದಿಯರ ಮಧ್ಯದ ಪ್ರೇಮ ಸ್ವರೂಪ, ಅರ್ಜುನ ಸುಭದ್ರೆಯ ವಿರಹದ ಸಲ್ಲಾಪ,ಗದಾಯುದ್ಧ ದಲ್ಲಿ ದುರ್ಯೋಧನ ಮತ್ತು ಕರ್ಣನ ನಡುವಿನ ಅಗಾಧವಾದ ಸ್ನೇಹ,ಕರ್ನಾಟಕ ಕಾದಂಬರಿಯಲ್ಲಿ ಸ್ನೇಹ,ಪ್ರೀತಿ,ಕಾಮಗಳು ಮೇಳೈಸುವಿಕೆಯ ಸ್ವರೂಪ,ಚಂದ್ರಾಪೀಡನ ಚೈತ್ರಯಾತ್ರೆ, ಪ್ರಾಣವಿಯೋಗ, ಪ್ರಕೃತಿ ಮನುಷ್ಯನ ನಡುವಿನ ಅನನ್ಯತೆ. ಜನ್ನನ ಯಶೋಧರ ಚರಿತೆಯಲ್ಲಿ :

“ಮಧುರಾಂಕಾರರ ಬಂದ ಕುಮಾರರ ರೂಪಿಂಗೆ ಠಕ್ಕಗೊಂಡಂತಿರ್ದಂ”

ಎಂಬ ಮಾತು.   ಅಮೃತಮತಿ    ಮತ್ತು ಅಷ್ಟಾವಂಕನ ನಡುವಿನ ಮೋಹವು ಯಾವ ಹಂತದ್ದು,  ರಾಮ  ಮತ್ತು    ಸೀತೆಯರ ನಡುವಿನ ಸಖೀಗೀತ ಅದೇ ರೀತಿಯಾಗಿ ಸೀತೆಯ  ಸಖ್ಯ  ಯಾವ    ಬಗೆಯದು, ಇವುಗಳೆಲ್ಲದರ   ನಂತರದ    ಜೀವನ ಯಾವುದು? ಎನ್ನವ ಹಾದಿಯೇ ಮುಕ್ತಿ. ಆವರಗಿನ  ಎಲ್ಲ  ಬಗೆಯ   ಪ್ರೀತಿಯ ಹಂತವೇ ಆಧ್ಯಾತ್ಮ ಸಖ್ಯ. ಹೀಗೆ         ಇಡೀ ಜೀವನವೇ ಸಖ್ಯದಲ್ಲಿ ಲೀನ ಗೊಂಡಿದೆ ಎನ್ನುವುದುನ್ನು ವಿವರಿಸಿ, ವಿಮರ್ಶಿಸುವ ಉದ್ದೇಶವನ್ನು ಹಳೆಗನ್ನಡ ಕಾವ್ಯಗಳು ಹೊಂದಿದ್ದವು. ಹೀಗಾಗಿ ಹಳಗನ್ನಡ ಕಾವ್ಯ ಗಳಲ್ಲಿ  ಸಖ್ಯದ  ವಿವಿಧ  ಮಜಲುಗಳನ್ನು ಕಾವ್ಯಗಳ ಮೂಲಕ ತಿಳಿಸುವ ಮತ್ತುಅಂದು ಅಳವಡಿಕೆಯಾದ ಸಂಗತಿಗಳು ಇಂದು  ಯಾವ ನೆಲೆಯಲ್ಲಿ ಅನ್ವಯಗಳಾಗುತ್ತವೆ ಹಾಗೂ ಹೇಗೆ ಮುಂದುವರೆದಿವೆ ಎಂದು ತಿಳಿಸುವ ಪ್ರಯತ್ನ.

ಸಾಮಾಜಿಕವಾಗಿ ಮತ್ತು ಸಾಂಸ್ಕಂತಿಕವಾಗಿ ಅವಲೋಕಿಸಿದರೆ ಪ್ರಾಚೀನ ಕಾವ್ಯಗಳ ಸಂದರ್ಭದಲ್ಲಿಧಾರ್ಮಿಕತೆ,ವರ್ಗಸಂಘರ್ಷ ರೀತಿ-ನೀತಿ, ರೂಢಿ ಪದ್ದತಿಗಳು, ಆಚಾರ- ವಿಚಾರ, ಸಂಪ್ರದಾಯಗಳು, ಪ್ರಕೃತಿ ಮತ್ತು ಭಾಷೆ, ಪ್ರೇಮದ ತುಡಿತ, ವೈರಾಗ್ಯ, ಮೋಕ್ಷದ ಸಾಧನೆ,…,…ಹೀಗೆ ಮೊದಲಾದ ವುಗಳು ಸಖ್ಯದ ಸಹಪಾಠಿಗಳಂತಿವೆ. ಅವು ತಮ್ಮ ಪವಿತ್ರ ಸ್ಥಾನದಲ್ಲಿ ಇದ್ದುಕೊಂಡು ಯಾರ ವ್ಯಕ್ತಿತ್ವಕ್ಕೂಚ್ಯುತಿ ಬಾರದಂತೆಮತ್ತು ಸಮಾಜದ ಸ್ವಾಸ್ಥ್ಯಕೆಡದಂತೆ ಅಂದೇರೂಪ ಗೊಂಡಿದ್ದವು. ಕಾಲಾಂತರದಲ್ಲಿ ಅವು ಮೂಲ ಆರ್ಥಗಳನ್ನು ಕಳೆದುಕೊಂಡು ಪರಿವರ್ತನೆಯಾಗಿ ತಮ್ಮದೆ ಆದ ವಿಭಿನ್ನ ರೀತಿಯಲ್ಲಿ ಬದುಕುತ್ತಿರುವುದರಿಂದ ಸಖ್ಯದ ಕೊಂಡಿ   ಕಳಚಿತು  ಮತ್ತು    ಕಳಚುತ್ತಾ ಹೋಗುತ್ತಿದೆ.ಹೀಗಾಗಿ ಸಾಹಾಯ,ಸಹಕಾರ ಪರೋಪಕಾರ ಮನೋಧರ್ಮಗಳು ಇಲ್ಲ ವಾಗಿ ಒಬ್ಬರು ಮತ್ತೊಬ್ಬರನ್ನು ದ್ವೇಷಿಸುವ, ಶೋಷಿಸುವ ನಿಟ್ಟಿನಲ್ಲಿ ಆಧುನಿಕ ಜಗತ್ತು ಸಾಗಿದೆ.  ಅದ್ದರಿಂದ  ಸಖ್ಯದ   ಪವಿತ್ರ ಸ್ವಾಸ್ಥ್ಯವನ್ನು ಪುನರ್ ನಿರ್ಮಿಸುವ ಮತ್ತು ಸಮಾಜದ ಕೊಂಡಿಯನ್ನು ಪುನಃ ಕಟ್ಟುವ ಕೆಲಸವನ್ನು ಇಂದು ನಾವೆಲ್ಲರೂ ಮಾಡುವ ಪ್ರಸಂಗ ಒದಗಿ ಬಂದಿದೆ. ಈ ಅಂಕಣದಲ್ಲಿ ಹಳಗನ್ನಡದ ಒಂದೊಂದು ಕಾವ್ಯಕೃತಿಗಳಲ್ಲಿ ಮೂಡಿ  ಬಂದಿರುವ   ಸಖ್ಯದ   ವಿವಿಧ ಮಜಲುಗಳನ್ನು ಅನಾವರಣ ಮಾಡುವ ಮೂಲಕ ಇವತ್ತು ಹೇಗೆ ನಮಗೆ ಅನ್ವಯ ವಾಗುತ್ತವೆ ಎಂದು ಚರ್ಚಿಸಿದ್ದೇನೆ.

ಶಿವಕೋಟ್ಯಾಚಾರ್ಯ ವಿರಚಿತ ವಡ್ಡಾರಾಧ ನೆ ಕೃತಿಯು ಧರ್ಮದ ಪುನರುಜ್ಜೀವನಕ್ಕಾಗಿ ಜನ್ಮ ಪಡೆದುಕೊಂಡಿದ್ದಾದರೂ ಸಹ ಅದು ಮನುಷ್ಯನ ತವಕ ತಲ್ಲಣಗಳಿಗೆ ಅಷ್ಟೇ ಸಂಕೀರ್ಣತೆಯನ್ನು ಕಂಡುಕೊಂಡಿತ್ತು.

“ಸಂಮಯ, ಕ್ಷಮೆ ಮೈ ತಳೆದ ಜಿನಮುನಿಗಳ ತಪೋನಂದನ. ಇಲ್ಲಿ ವ್ಯಕ್ತಿಗೆ ಪ್ರಾಮುಖ್ಯವಿಲ್ಲ ಆತ್ಮವೇ ಪ್ರಮುಖ. ‘ಸರ್ವಂ ಪರವಶಂ ದುಃಖ, ಸರ್ವಂ ಆತ್ಮವಶಂ ಸುಖಂ’ ಇದಕ್ಕೆ ನಡವಳಿಕೆಯೇ ಆಧಾರ. ಆತ್ಮದ ಏಳು ಬೀಳಿನ ಉದ್ಧಾರ, ವಿಕಾಸದ ನಡಿಗೆ ಇಲ್ಲಿ ಎದ್ದು ಕಾಣುತ್ತದೆ.” ಎಂದು ಅನೇಕ ಚಿಂತಕರು ವಿವರಿಸಿದ್ದಾರೆ. ವಡ್ಡಾರಾಧನೆಕಾರನು ಬಹು ಜಾಣ್ಮೆಯಿಂದ ಮನುಷ್ಯನ ಗುಣ ಸ್ವಭಾವವನ್ನು ಸೂಕ್ಷ್ಮ ವಾಗಿ ತನ್ನ ಕೃತಿಯಲ್ಲಿ ಹೆಣೆದಿದ್ದಾನೆ. ಕೆಲ ಸಖ್ಯದ ಘಟನೆಗಳನ್ನು ತನ್ಮಯತೆಯಿಂದ ಲೂ   ಹಾಗೂ    ಜೀವಂತಿಕೆಯಿಂದಲೂ ಇರುವಂತೆ ಅಲ್ಲಿಲ್ಲಿ ರಸದ ಹಂದರವನ್ನು ನಿದರ್ಶನಗೊಳಸಿದ್ದಾನೆ.   ಏಕೆಂದರೆ ಮನುಷ್ಯನು ಕುಟುಂಬವನ್ನು ಬಿಟ್ಟುಬದುಕ ಲಾರ. ಹಾಗೂ ಅಲ್ಲಿಯೇ ತನ್ನ ಜೀವನದ ಎಲ್ಲ ಸುಖ ದುಃಖಗಳನ್ನು ಪಡೆದುಕೊಂಡು ಅಂತಿಮವಾಗಿ ತನ್ನ ಬದುಕನ್ನುಮುಕ್ತಿಯತ್ತ ಕೊಂಡಯ್ಯಬೇಕೆಂಬ ಮಹದಾಸೆಯನ್ನು ಸಹ ಹೊಂದಿದ್ದರು.

ವಡ್ಡಾರಾಧನೆಯ ಕೃತಿಯಲ್ಲಿ ಅಂದಿನ ಬದುಕು ಕೇವಲ ಬದುಕಾಗಿರದೆ, ಅದು ಪ್ರೀತಿ ಪ್ರೇಮದಿಂದ ನಿತ್ಯವೂಚಿಗುರೊಡೆದು ಸಮೃದ್ಧಿಯ ಪಥದತ್ತ ಸಾಗುವಂತಹದಾ ಗಿತ್ತು. ಅಲ್ಲದೆ ಕುಟುಂಬಗಳೊಂದಿಗೆ ಮಮಕಾರ ಮತ್ತು ಪ್ರೀತಿ ಬೇಸೆದುಕೊಂಡು ಒಂದಾಗಿದ್ದವು.

ಅದು ಬದುಕಿನ ಒಂದು ಭಾಗವಿದ್ದಂತೆ, ಆಗು ಹೋಗುವ ಸ್ಥಿತಿಯಂತೆ, ಶೃಂಗಾರದ ಸ್ಥಾಯಿಯಂತೆ ಹಾಗೂ ಜೀವನದ ಆಖ್ಯಾನ ದಂತೆ   ಸತ್ವಯುತವಾಗಿ    ನೆಲೆಯೂರಿ ನಿಂತಿತ್ತು. ವಡ್ಡಾರಾಧನೆಯಲ್ಲಿ ಹಿಂಸಾತ್ಮಕ ಕೃತ್ಯಗಳ ಮೂಲಕ ಕುಟುಂಬಗಳು ಬೇರು ಬಿಟ್ಟಿದ್ದರೂ ಸಹ ಬದುಕನ್ನು ಕಟ್ಟಿಕೊಂಡಿ ದ್ದರು  ಹಾಗೂ ಪ್ರೇಮ ಕಾಮಗಳು ತನ್ನ ಗಡಿಯನ್ನು ದಾಟಿದ್ದವು ಎಂಬುದಕ್ಕೆ ಸಾಕ್ಷಿ ಈ ಕೃತಿಯಲ್ಲಿ ಅಲ್ಲಲ್ಲಿ ದೊರಕುತ್ತವೆ.

ಸುಕೌಶಲ ಸ್ವಾಮಿಯ ಕಥೆಯಲ್ಲಿ ಬರುವಂತಹ ಗಂಧಬಾಜನೆಂಬ ರಾಜನ ಪಾತ್ರದ ಸುತ್ತ ಇರುವ ಆಸೆ ಆಕಾಂಕ್ಷೆಗಳು ಬೇಗನೆ ಮನವನ್ನು ಸೆಳೆಯುತ್ತದೆ. ಒಂದು ದಿನ ರಾಜನಾದ ಗಂಧಬಾಜನು  ಸಹಸ್ರ ಚೈತ್ಯಾಲಯಕ್ಕೆ ಬಂದಿರುತ್ತಾನೆ.

ಸುಕೇಶಿನಿ ಎಂಬವಳು(ಈಕೆ ನಾಗದತ್ತ ಮತ್ತು ಸುಭದ್ರೆ ಯರ ಮಗಳು)ಸಹ ಆ ಸಹಸ್ರ ಚೈತ್ಯಾಲ ಯಕ್ಕೆ ಬಂದಿರುತ್ತಾಳೆ.ಆ ರಾಜನು ಬಂದಿರು ವುದಾಗಿ ತಿಳಿದ ನಂತರ ಆಕೆಯಲ್ಲಿ ಸಹಜ ವಾದ ನಾಚಿಕೆ ಆಕೆಯಲ್ಲಿ ಹುಟ್ಟುತ್ತದೆ. ಆಕೆಯಲ್ಲಿ ಹುಟ್ಟಿದ ಆ ನಾಚಿಕೆಯೂ ಪ್ರೀತಿ ಯ ರೂಪ ಪಡೆಯುತ್ತದೆ. ಹಾಗೇ ಆ ಪ್ರೀತಿ ಮನ್ಮಥನ ರೂಪದಂತೆಯೇ ಆಕೆಯಲ್ಲಿ ಸುತ್ತುತ್ತದೆ.

“ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವಭಾವ ವಿಲಾಸ ವಿಭ್ರಮಂಗಳನೊಡೆಯಳ್ ಶುಭಲಕ್ಷಣಗಳಿಂದಂ ಕೂಡಿದ ಮೆಯ್ಯೆನೊಡೆಯಳ್—–ದೇವರಸಚಿನಿಸಲೆಂದು ಸಹಸ್ರಕೂಟ ಚೈತ್ಯಾಲಯಕ್ಕರ್ಚನೆಯಂ ಕೊಂಡು ಪೋದಳನ್ನೆಗಮರಸನುಮಾಗಳೆ. ದೇವರಂ ಒಂದಿಸಲಂಬಂದೊಡರಸಂಗೆ ನಾಣ್ಚಿ ಬಸದಿಯೊಳಗಣ ಕಂಬದಮಯೊಳ್‍ಕೇರಂಸಾರ್ದು    ಪೊನ್ನ ಬೆಳಗುವಗಳಂತಿಗೆಯನಾದ—-ಕನ್ನೆಯಿರ್ದೊಳೆಂದು ಪೇಳ್ ದೂಡಾರ ಮಗಳೆಂದು ಬೆಸಗೊಂಡೊಡೀ ಪೂಲ್ಗೆಪ್ರಧಾನಂ—”

ಈ  ರೀತಿಯಾಗಿ  ಸುಕೇಶಿಯ   ಮನದಲ್ಲಿ  ಸಹಜವಾಗಿ ಎಲ್ಲ ಹೆಣ್ಮಕ್ಕಳಂತೆ  ಆಕೆಗೂ    ಆ ಯುವಕನನ್ನು ಕಂಡಾಗ ನಾಚಿಕೆ ಬಯಕೆ ಹೀಗೆ   ಮೊದಲಾದ    ಸ್ವಭಾವಗಳನ್ನು ತೋರ್ಪಡಿಸಿದಳು.ಜೊತೆಗೆ ಈಕೆಯ  ಮನಸ್ಸಿನಲ್ಲಿ   ಉಂಟಾಗುವ ಭಾವನೆಗಳು, ಗಂಧಬಾಜನಲ್ಲಿ  ಅರಳಿದ   ಅನುರಾಗದ ಅಲೆಗಳು  ಮೂಡುತ್ತವೆ. ಹೀಗೆ  ಇಬ್ಬರಲ್ಲಿ ಯೂ ಒಮ್ಮತವಾಗಿ ಮೂಡಿರುವುದು ನಿಜಕ್ಕೂ ಪ್ರೀತಿಯ ಅನುಬಂಧ. ಅವರು ಗಳಲ್ಲಿ ಅರಳಿದ ಆ ಮಧುರ ಕ್ಷಣಗಳನ್ನು ಇಲ್ಲಿ   ವಡ್ಡಾರಾಧನೆ ಕಾರ   ಸೂಕ್ಷ್ಮವಾಗಿ ಚಿತ್ರಿಸಿದ್ದಾನೆ.  ಕೊನೆಗೆ   ಇಬ್ಬರಲ್ಲಿಯ ಪ್ರೀತಿಯು ದಾಂಪತ್ಯಕ್ಕೆ ಹೆಜ್ಜೆ ಹಾಕುತ್ತದೆ. ಹೀಗೆ ಕಾಮಸುಖಗಳನ್ನು ಹಲವು ಕಾಲದ ವರೆಗೆ ಅನುಭವಿಸುತ್ತಾರೆ.

ದಾಂಪತ್ಯ ಮತ್ತು ಪ್ರೇಮದ ತುದಿಯನ್ನು ಆವರಿಸಿಕೊಂಡಿದ್ದರು. ಆದರೆ ವಿಧಿಯ ಬರಹವೇ ವಿಭಿನ್ನವಾಗಿತ್ತು. ಒಂದು ದಿನ ಮದ್ದಾನೆಯನ್ನು ಪಳಗುಸುತ್ತಿರುವ ಅರಸ ನನ್ನು ಕಂಡು ಸುಕೇಶಿಯು ಮೊದಲಿಗೆ ಮೂರ್ಛೆಗೊಳ್ಳುವಳು. ನಂತರ ಈ ಕ್ಷುಲ್ಲಕ ಆನೆಯನ್ನು ಸವಾರಿ ಮಾಡುವುದರಲ್ಲಿ ಯಾವ ಅರ್ಥವಿಲ್ಲ, ‘ಚಂದನಮಲಯವೆಂಬ ಪರ್ವತದಲ್ಲಿ ಇಂದ್ರನೀಲಮಾಣಿಕ್ಯದ ಬಣ್ಣವಿರುವ ಮಲಯಸುಂದರ’ ನೆಂಬ ಆನೆಯನ್ನು ಸವಾರಿ ಮಾಡಿ ತಂದರೆ ಆಗ ನಾನು ನಿಮ್ಮನ್ನು ಗಂಡುಗಲಿ ಎಂದು ಒಪ್ಪುತ್ತೇನೆ ಎಂದು ಸವಾಲು ಹಾಕುತ್ತಾಳೆ.

ಇದು ಕೇವಲ ಸವಾಲಾಗದೇ ಪ್ರೀತಿಯನ್ನು    ಒರೆಗೆ ಹಚ್ಚಿದಂತೆ ಎಂಬ ನಿಲುವನ್ನು ಗಂಧಬಾಜನು ಭಾವಿಸಿಕೊಂಡು ಸವಾರಿ ಮಾಡಲೇಬೇಕು ಎಂದು  ಆಕೆಯ ಮಾತನ್ನು ಸ್ವೀಕರಿಸುವನು ಪ್ರೀತಿಯೂ ಮನುಷ್ಯನನ್ನು  ಒಬ್ಬ   ವೀರ ನನ್ನಾಗಿ ಪರಿವರ್ತಿಸುವ ರೀತಿ ಇದು. ಆದರೆ ಮುಂದೆ ಏನಾಗುತ್ತೆ ಎಂಬ ಸೂಕ್ಷ್ಮ  ವಿಚಾರವನ್ನು ಅರಿಯದೇ ಗಂಧ  ಬಾಜನನ್ನು ಹುರು ದುಂಬಿಸಿದಳು. ಹುಡುಕಿಕೊಂಡು ಹೋದ ಗಂಧಬಾಜನು ಆ ಆನೆಯನ್ನು ಸಂಪೂರ್ಣ ವಾಗಿ ಸವಾರಿ ಮಾಡಲು ಅಸಾಧ್ಯವಾದಾಗ ಆ ಮಲಯಸುಂದರನನ್ನು ಕೊಂದು ‘ದಾಡೆ ಮತ್ತು ಮುತ್ತ’ ಗಳನ್ನು ತರುತ್ತಾನೆ.      ನಿನ್ನ ಪ್ರೀತಿಯ ಮಲಯಸುಂದರನ ದಾಡೆಗಳನ್ನೂ ಮತ್ತು ಮುತ್ತುಗಳನ್ನೂ ಇದೋ ತೆಗೆದುಕೋ
ಎಂದು ಸುಕೇಶಿಯ ಎದುರಿಗೆ ಗಂಧಬಾಜ ರಾಜನು ಇಡುವನು. ಆಗ ರಾಣಿ : ಹಾ ಮಲಯಸುಂದರಾ ಹಾ ಎನ್ನ ನಲ್ಲನೆ ಹಾ ಎನ್ನ ಮಲಯಸುಂದರನಪ್ಪ ಸ್ವಾಮಿಯೆಂದು ಪ್ರಳಾಪಂಗೆಯ್ದು ಎರಡು ಕೊಂಬುಗಳುಮಂತರ್ ಕೈಸಿಯಾದಮಾನಂ ಬಿಗಿದಪ್ಪಿಕೊಂಡು ಸತ್ತಳ್.ಹೀಗೆ  ಸುಕೇಶಿಯು   ಪೂರ್ವ   ಜನ್ಮದ ತನ್ನರಸನ ನೆನೆದು ಸಾವಪ್ಪುತ್ತಾಳೆ. ಪ್ರೀತಿ ಯೆನ್ನುವುದು ಜನ್ಮ ಜನ್ಮದ ಅನುಬಂಧ ವೆಂಬುವುದಕ್ಕೆ ಸುಕೇಶಿಯು ಉದಾಹರಣೆ ಯಾಗುತ್ತಾಳೆ. ಪೂರ್ವಜನ್ಮದ ಇನಿಯನ ಸಲುವಾಗಿ ಈ ಜನ್ಮದ ಗಂಧಬಾಜನೆಂಬ ಗಂಡನನ್ನು ಮರೆತು ಪ್ರಾಣ ಕಳೆದುಕೊಳ್ಳು ವುದು ಯಾವ ನ್ಯಾಯ?ಎಂದು ಪ್ರಶ್ನೆಯ ನ್ನು ಮುಂದಿಟ್ಟರೆ,  ಪರಿಣಾಮ   ಮಾತ್ರ ಅಂತಿಮದಲ್ಲಿ ನಿರಾಸೆಯನ್ನು ತಂದೊಡು ತ್ತದೆ. ಗಂಧಬಾಜನನ್ನು ಕಂಡಾಗ ಅರಳಿದ ಪ್ರೀತಿಯು ಹಾಗೂ ಸವಾರಿಯ ನೆಪದಲ್ಲಿ ಹಿಂದಿನ ಜನ್ಮದ ಮಲಯಸುಂದರನೆಂಬ ಗಂಡನ     ಪ್ರೀತಿ    ಇವರಿಬ್ಬರಲ್ಲಿಯೂ ಸುಕೇಶಿಯು ಯಾರ ಪ್ರೀತಿಯನ್ನು ಪವಿತ್ರ ಪ್ರೀತಿ ಎಂದು ಭಾವಿಸಿಕೊಂಡಿದ್ದಳು? ಹಾಗಾದರೇ ಗಂಧಬಾಜ ಪ್ರೇಮ ಸುಕೇಶಿಯ ಮನದಲ್ಲಿ   ಅಡಗಿರಲಿಲ್ಲವಾ?    ಎಂಬ  ವಿಚಾರ ಕಾಡುತ್ತದೆ.   ಈ   ವಿಚಾರವನ್ನು   ಇಂದು   ಆಧುನಿಕದಲ್ಲಿ  ನಾವುಗಳು  ಕಟ್ಟಿ ಕೊಂಡಿರುವ ಪ್ರೀತಿಯಾದರು ಯಾವುದು? ಎಂಬ ನಿಲುವಿ ಗೆ   ತಾಳೆ ಹಾಕಬೇಕಿದೆ.  ಏನೇ   ಇದ್ದರೂ    ಸಖ್ಯದ ಒಳಾಂತರದ ಮಿಡಿತ ಮಾತ್ರ ಪ್ರೀತಿಯೇ ಆಗಿದೆ.                  🔆🔆🔆
   ✍️ಡಾ.ರೇಣುಕಾ ಕಠಾರಿ   
        ಬೆಳಗಾವಿ