ಅವ್ವನ ಹೊಕ್ಕಳು ಬಳ್ಳಿಯು ಬಿಡಿಸಲಾರದ ನಂಟು
ಅವ್ವನ ಎದೆತುಂಬ ಕಕ್ಕುಲಾತಿ ತೆಲೆತುಂಬ ಜ್ಞಾನದ ಗಂಟು…

ಅವ್ವ ಲೋಕದ ಅದಮ್ಯ ಜೀವಶಕ್ತಿ
ಅವ್ವ ಜಗದ ಅಗಮ್ಯ ಪ್ರೇರಕ ಶಕ್ತಿ…

ಅವ್ವ ಮುಗಿಯದ ಅಧ್ಯಾಯ..ಹಾಡಲಾಗದ ಗೀತೆ
ಅವ್ವ ಮುನ್ನುಡಿ ಬರಹ….ಮುಗಿಸಲಾರದ ಕಥೆ..

ನನ್ನವ್ವ ಸ್ವಯಂ ಸಬಲೀಕರಣಗೊಂಡ ಗಟ್ಟಿಗಿತ್ತಿ
ನನ್ನೊಳಗೆ ಇರಿಸಿದ್ದಾಳೆ ಹಳಸದ ಜ್ಞಾನದ ರೊಟ್ಟಿಬುತ್ತಿ…

ನೂರು ಸುಖ ಸಾವಿರ ನೋವು ಉಂಡರು
ಅಳುವ ನುಂಗಿ ನಕ್ಕಾಕಿ….
ನನ್ನನ್ನೊಳಗೆ ಕಸುವುತುಂಬಿ ಬದುಕು ಕಲಿಸಿ ನಲಿದಾಕಿ….

ಬುದ್ದ ಬಸವ ಗಾಂಧಿ ಅಂಬೇಡ್ಕರ್ ತಾನೇ ಆಗಿ ಮಾನವ್ಯದ ಬೀಜ ಬಿತ್ತಿದಾಕಿ…
ಆಕಾಶದ ಎದೆಯಾಕಿ ಒಲವ ಸುರಿಸಿದಾಕಿ ಭೂತೂಕದಾಕಿ…

    ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
  ಸಹಾಯಕ ಪ್ರಾಧ್ಯಾಪಕರು
  ರಾಣಿಚೆನ್ನಮ್ಮವಿಶ್ವವಿದ್ಯಾಲಯ          ಬೆಳಗಾವಿ