ನಿನ್ನ ಪ್ರೀತಿಯ ಸವಿಯುಂಡು
ಬಿಸಿಲಬದುಕಿಗೆ ಗರಿ ಮೂಡಿದೆ
ನನ್ನ ನೀಳ ಕೂದಲ ಸಿಕ್ಕು
ಬಿಡಿಸಿ ಬಾಚಿ
ಮಮತೆಯ ಮಲ್ಲಿಗೆ
ಮುಡಿಸಿದಾಗ
ಗುಳಿಕೆನ್ನೆಯಲಿ ಇಣುಕಿದೆ
ಲಜ್ಜೆಯ ಭಾಷೆ
ಅವ್ವಾ!
ನಿನಿತ್ತ ಬಾಳ ಬುತ್ತಿ
ನಾಳೆಗಾಗಿಯೂ ಕಾಯ್ದಿಟ್ಟಿರುವೆ
ಮಡಿಲತೊಟ್ಟಿಲಲ್ಲಿ
ಬೆರಳಿಂದ ತಲೆ ತಟ್ಟುತ್ತ
ಮೌನವಾಗಿ ಹಾಡಿದ
ಜೋಗುಳ ಎದೆಯಲ್ಲಿ ಬಚ್ಚಿಟ್ಟಿರುವೆ
ಅವ್ವಾ!
ನೀ ಅಂದರss
ಹತ್ತಿಯ ಹೂವಂಗs
ಇರು ನನ್ನ ನೆತ್ತಿಯ ಮ್ಯಾಗ
ಧವಳಶಿಖರ ಗಿರಿಯ್ಹಂಗs
ಅವ್ವಾ!ನೀ ನನ್ನ ಅವ್ವಾ…..

 ✍️ಡಾ.ಪುಪ್ಪಾವತಿ ಶಲವಡಿಮಠ     
ಹಾವೇರಿ