ಅವ್ವಳೇವಿಶ್ವ
ಬದುಕಲು ಉಸಿರು ಕೊಟ್ಟು
ಕರೆಯಲು ಹೆಸರು ಕೊಟ್ಟು
ಬದುಕಿನೊಳು ಹಸಿರು ಕೊಟ್ಟು
ತನ್ನೆಲ್ಲವ,ಒಲವಧಾರೆ ಕೊಟ್ಟು
ಅವ್ವಳ ಅದಮ್ಯ ವಾತ್ಸಲ್ಯ ಕೊಟ್ಟು
ನಿತ್ಯ ಎನ್ನೊಳು ಉತ್ಸಾಹ ಕೊಟ್ಟು
ಸಲಹುವಳು ತಾಯಿ ಜೀವ ಕೊಟ್ಟು
ವಾಸ,ಸ್ವಾಸ,ವಿಶ್ವಾಸ,ರಾಜಸ,ರಸ
ವಿಶ್ವಕ್ಕೆಲ್ಲ ಇಂದು ತಾಯಿಯ ದಿನ
ಎನಗೆ ಅನುದಿನವೂ ಅವ್ವಳೇ ವಿಶ್ವ.

ಶಿವಾನಂದ ನಾಗೂರ, ಧಾರವಾಡ.