“ಅಮ್ಮ”  ಈ ಪದ ಕಿವಿಗೆ  ಬಿದ್ದರೆ  ಸಾಕು ರೋಮಾಂಚನ. ಕಣ್ಣಂಚಿನಲ್ಲಿ ನೀರ ಪಸೆ. ಕಳೆದ ಸವಿ ಕ್ಷಣಗಳ ಮೆಲುಕು.ನಿಮ್ಮೊಂದಿಗಿ ರದಿದ್ದರೆ ಅವಳಗಲಿಕೆಯ ಜೀವನದುದ್ದಕ್ಕೂ ಕಾಡುವ   ಅಳುಕು.   ಸಂಬಂಧಗಳಲ್ಲೆಲ್ಲಾ ಅತ್ಯಂತ ಆಪ್ತ ಮಧುರ  ಹಾಗೂ  ಆಳದ ನಂಟೆಂದರೆ ಅಮ್ಮ ಮಗುವಿನದು.ಬೇರೆಲ್ಲಾ ಸಂಬಂಧಗಳು  ಭೂಮಿಗೆ  ಬಂದು  ಕಣ್ಣು ಬಿಟ್ಟ  ಮೇಲೆ  ಸಿಕ್ಕಿದ್ದರೆ   ಈ   ನಂಟಿನ     ಗಂಟು ನವಮಾಸಗಳ  ಮೊದಲೇ ಒಡಲಲ್ಲಿ ದ್ದಾಗಲೇ ಆರಂಭ ಕರುಳುಬಳ್ಳಿಯ ಬೆಸುಗೆ ಯೇ ಅಂತಹುದು.


“ಮಾತೃ ದೇವೋಭವ” ಎಂದಿದೆ ಮನು ಸಂಹಿತೆ.ಹೌದು!ತಾಯಿಗಿಂತ ಬೇರೆ ದೇವರು ಉಂಟೆ? ಜನನಕ್ಕೆ ಕಾರಣವಾಗಿ ವಿಕಸನಕ್ಕೆ ನೆರವಾಗಿ,  ನಮ್ಮ  ಉನ್ನತಿಯಲ್ಲಿ  ತನ್ನ ಸಾರ್ಥಕ್ಯ  ಕಾಣೋ  ಆ ಮಾತೃ ದೇವತೆಗೆ ಸಲ್ಲಲೇಬೇಕಾದ   ಗೌರವ ಅದು.ಮುಂದೆ    “ನ ಮಾತುಃ ಪರದೈವತಾಂ”  ಅಂದರೆ ತಾಯಿಗಿಂತ  ಬೇರೆ ದೇವತೆ ಇಲ್ಲ.  ಪೂಜೆ ಜಪ ತಪ  ಉಪಾಸನೆಗಳು  ಯಾವುದೇ ಮಾಡಿದರೂ  ತಾಯಿಯ ಕೃಪೆಯೇ ಎಲ್ಲ ಕ್ಕಿಂತ ಮುಖ್ಯ, ಶ್ರೇಷ್ಠ ಎನ್ನುತ್ತದೆ.


ಅಸಹಾಯಕವಾದ ಎಳೆ ಬೊಮ್ಮಟೆಯನ್ನು ಜಗಕ್ಕೆ ತಂದು ಬೆಳೆಸಿ ದೊಡ್ಡವನಾಗುವ ಮಹತ್ಕಾರ್ಯ  ಮಾಡುವ   ಅಮ್ಮನೇ ಪ್ರತಿಯೊಬ್ಬರಿಗೂ ಎಲ್ಲ, ಅಮ್ಮನಿಂದಲೇ ಎಲ್ಲಾ.

ಹೆಣ್ಣು  ಮಗುವಿಗೆ   ತಾಯ್ತನದ   ಭಾವ ಅಂತರ್ಗತವಾಗಿದ್ದು ಮನೆಯಲ್ಲಿನ ಇತರ ಚಿಕ್ಕ ತಮ್ಮ ತಂಗಿಯರಿಗೆ ಅವಳೇ ಅಮ್ಮ. ಗೊಂಬೆಯೊಂದನ್ನು ಹಿಡಿದು ಅದಕ್ಕೆ ಸ್ನಾನ ಮಾಡಿಸುವ, ಊಟ ಮಾಡಿಸುವ, ಲಾಲಿ ಹಾಡಿ ಮಲಗಿಸುವ ಆಟವಾಡದ ಬಾಲಕಿ ಇಲ್ಲವೇ ಇಲ್ಲ. ಅಲ್ಲಿಂದಲೇ ಅವಳ ಮಾತೃ ಮಮತೆಯ ಸಹಜ ಗುಣ ಕುಡಿಯೊಡೆದಿರು ತ್ತದೆ.ಮುಂದೆ ಮದುವೆಯಾಗಿ ತನ್ನೊಡಲಲ್ಲಿ ಹೊಸ ಕುಡಿ ಮೂಡುತ್ತಿದೆ ಎಂದು ತಿಳಿದ ಕ್ಷಣದಿಂದ ಅವಳಿಗೆ ತನ್ನ ಮಗುವಿನೊಡನೆ ವಿಶೇಷ ಭಾವನಾತ್ಮಕ ಸಂಬಂಧ ಮೂಡಿರು ತ್ತದೆ.ಹೆರಿಗೆ ಮುಗಿದು ತನ್ನ ಕಂದನ ಮುಖ ನೋಡಿದಾಗ ಪಟ್ಟಕಷ್ಟಗಳೆಲ್ಲವೂ ಕ್ಷಣದಲ್ಲೇ ಮಾಯ.ಸಾರ್ಥಕ್ಯದ ಸಂತೃಪ್ತಿ ತರುವಗಳಿಗೆ ಯದು.ಮುಂದೆ ಮಗುವಿಗೆ ಸ್ನಾನ ಮಾಡಿಸಿ ಹಾಲೂಡಿಸಿ   ಅವನ   ಆಟಪಾಠಗಳನ್ನು ನೋಡಿ ಹರ್ಷಿಸುತ್ತಾಳೆ.  ಕಟುವಾಗಿ  ತನ್ನ ಒಡಲ ಕುಡಿಗಾಗಿ  ಮನುಷ್ಯರೇನು ಪ್ರಾಣಿ  ಸಂಕುಲದಲ್ಲಿಯೂ   ಜತನಗೊಳಿಸುವ, ತಂಟೆಗೆ ಬಂದರೆ ರೋಷ ತೋರಿಸುವ ಗುಣ ಕಾಣಬಹುದು. ಆದರೆ ಅಲ್ಲಿ ರೆಟ್ಟೆ ಬಲಿತು ಗಟ್ಟಿಯಾಗುವ ತನಕ ಮಾತ್ರ  ಈ  ಜತನ. ಆಮೇಲೆ   ಆ ಮರಿಗಳನ್ನು ಸ್ವತಂತ್ರವಾಗಿ  ಬಿಟ್ಟು ಬಿಡುತ್ತದೆ.ಆದರೆ ತಾನು ಬದುಕಿರು ವವರೆಗೂ  ತನ್ನ  ಕಂದನನ್ನು ಕಾಪಿಡುವ ಏಕೈಕ  ವ್ಯಕ್ತಿಯೆಂದರೆ  ಅಮ್ಮ. ಅವಳಿಗೆ ಸದಾ  ತಾನು ‌ಹೆತ್ತ ಹೆಗ್ಗಣವೇ   ಮುದ್ದು. ಬಹಳ  ಸನ್ನಿವೇಶಗಳಲ್ಲಿ  ಅದು  ಕುರುಡು ಮೋಹವಾಗಿದ್ದರೂ ಅಮ್ಮನ ಮಮತೆಯ ವೈಶಿಷ್ಟ್ಯವೇ ಅದು .


ಶ್ರೀ ಅಬ್ದುಲ್ ಕಲಾಂ ರವರು     ಅಮ್ಮನ ಮೇಲಿಟ್ಟಿದ್ದ ಪ್ರೀತಿ ಗೌರವಗಳು ವ್ಯಕ್ತವಾಗು ವುದು ಹೀಗೆ:

ಇಡೀ ದೇಶದ ಖುಷಿ ತಾಯಿ ಮೇಲೆ ನಿಂತಿದೆ.–ಅಬ್ದುಲ್ ಕಲಾಂ

ಇಂತಹ ಅತ್ಯದ್ಭುತ ದೈವೀಕ ಪ್ರೀತಿಯನ್ನು ಹೊಗಳುತ್ತೇವೆ, ಕೊಂಡಾಡುತ್ತೇವೆ ಮೇಲೆತ್ತಿ ಕೂರಿಸುತ್ತೇವೆ ಆದರೆ ಅಮ್ಮನಿಗೆ ಸಿಗಬೇಕಾ ದ  ಸ್ಥಾನಮಾನ  ಗೌರವ  ಸಿಗುತ್ತಿದೆಯೇ ಎಂದರೆ  ಉತ್ತರ  ನಕಾರಾತ್ಮಕವೇ. ಅತೀ ಸಲುಗೆಯಲ್ಲಿ  Take it for granted ಆಗಿರುವ   ಸಂಬಂಧವೆಂದರೆ ಇದೇ. ಬೆಲೆ ಕಟ್ಟಲಾಗದ ಪ್ರೀತಿ ಎಂದು ಬೆಲೆ ಕೊಡುವು ದನ್ನೇ ಬಿಟ್ಟು ಬಿಡುತ್ತೇವೆ.  ಅದಕ್ಕೇ ಗಾದೆ ಮಾಡಿರುವುದು “ಕರುಳಬಳ್ಳಿಗೆ ನಾಚಿಕೆ ಯಿಲ್ಲ ಅಂಗಾಲಿಗೆ ಹೇಸಿಗೆ ಇಲ್ಲ“ಎಂದು.


ಏನು ಮಾಡಿದರೂ ಮರೆತು ಕ್ಷಮಿಸಿ ಶುಭ್ರ ಬಿಳಿ ಹಾಳೆಯಾಗುವವಳು ಅಮ್ಮಾಎಂದೇ? ಜಗತ್ತಿನಲ್ಲಿ ಹಣವಿದ್ದರೆ ಏನು ಬೇಕಾದರೂ ಕೊಳ್ಳಬಹುದು ತಾಯಿಯ ಹೊರತು.ಆದರೆ ವಿರೋಧಾಭಾಸವೆಂದರೆ ತುಂಬಾ ಸಂದರ್ಭ ಗಳಲ್ಲಿ   ಅಮ್ಮ  ಇರುವವರೆಗೂ   ಅವಳ ಇರುವಿಕೆಗೆ ಅಸ್ತಿತ್ವಕ್ಕೆ ಗಮನವಿರುವುದಿಲ್ಲ, ಕಳೆದುಕೊಂಡ ಮೇಲೆಯೇ ಅವಳ ಮೌಲ್ಯ ಅರಿವಾಗುವುದು. ನಾಗರಿಕತೆಯ ಭರದಲ್ಲಿ ದೈನಂದಿನ  ಜಂಜಾಟದಲ್ಲಿ  ಅತೀ  ಉದಾ ಸೀನಕ್ಕೊಳಗಾಗುವ ವ್ಯಕ್ತಿಯೆಂದರೆ ಅಮ್ಮ. ಅವಳಿಂದಲೇ   ನಾವು   ಎಂದರಿತಿದ್ದರೂ ಅವಳ ಹಿರಿಮೆ-ಗರಿಮೆಯನ್ನರಿಯದ ದಿವ್ಯ ನಿರ್ಲಕ್ಷ್ಯ   ಧೋರಣೆಯ   ಮನೋಭಾವ ಮಕ್ಕಳದು. ಅವರವರ  ಲೋಕದಲ್ಲಿ ವ್ಯಸ್ತ ರಾಗಿ ಬಿಡುವಿರದ ವಿಷವರ್ತುಲದಲ್ಲಿ ಸುತ್ತು ವಾಗ  ತಮಗಾಗಿ  ಜೀವ ತೇದ  ಅಮ್ಮನಿಗೆ ಅವರ ಪ್ರಪಂಚದಲ್ಲಿ ಸ್ಥಾನವಿಲ್ಲ.ಆ ಮಹಾ ತಾಯಿ ಅದನ್ನೆಲ್ಲಾ ಉದಾರವಾಗಿ ಕ್ಷಮಿಸಿ ಬಿಡುವಳಲ್ಲ ಅದಕ್ಕೆ. ಪರಿಸ್ಥಿತಿಗೆ ಶರಣಾಗಿ ತಾಯಿ   ತಂದೆಯರನ್ನು   ವೃದ್ಧಾಶ್ರಮಕ್ಕೆ     ಕಳಿಸುವವರೇ   ಹೆಚ್ಚಿನ  ಜನ ಈಗ. ಇನ್ನು ಕೆಲವರು ಕೈಗೊಂದಿಷ್ಟು ಹಣ ಇಟ್ಟು ತಮ್ಮ ಕರ್ತವ್ಯ  ತೀರಿತು   ಎಂದುಕೊಳ್ಳುತ್ತಾರೆ. ತಮಗಿತ್ತ ಪ್ರೀತಿ ವಾತ್ಸಲ್ಯಗಳ ನಂಟು ಕಡಿದೇ ಹೋಗಿರುವುದೇ  ಇಂತಹ   ವ್ಯವಹಾರಸ್ಥ ಜನರಿಗೆ? ಸತ್ತ ಮೇಲೆ  ವೈಭವವಾಗಿ ತಿಥಿ ವೈಕುಂಠಸಮಾರಾಧನೆ  ದಾನದತ್ತಿ ಮಾಡು ವ ಬದಲು ಇರುವಾಗ ನಿಮ್ಮ ಪ್ರೀತಿ ವಿಶ್ವಾಸ ತೋರಿಸಿ ನಿಮ್ಮ ಸಮಯ ಕೊಟ್ಟರೆ ಸಾಕು ಆ  ಜೀವ  ಸಂತೃಪ್ತ.  ಅಷ್ಟನ್ನು   ಮಾಡದ ಕಟುಕರು  ನಾವಾಗಿದ್ದೇವೆ  ಅಂದರೆ  ಈ ಸಮಾಜ ಎತ್ತ ಸಾಗಿದೆ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಲೇಬೇಕಾದ ಪ್ರಶ್ನೆ.


ಒಬ್ಬ ತಾಯಿ ಹತ್ತುಮಕ್ಕಳನ್ನು ಸಾಕಿ ಸಲ ಹುತ್ತಾಳೆ ಆದರೆ ಆ ಹತ್ತು ಮಕ್ಕಳಿಗೆ ಒಬ್ಬ ತಾಯಿಯ ಪೋಷಣೆ  ಮಾಡಲು  ಆಗದು. ನುಣುಚಿಕೊಳ್ಳಲು ಯತ್ನಿಸುತ್ತಾರೆ.ಮುಂದು ವರಿದ  ಸಮಾಜದ  ಅತಿ  ದೊಡ್ಡ  ಘೋರ ದುರಂತ ಇದು. ಇನ್ನಾದರೂ ಆ ಮಮತಾ ಮಯಿ  ಮಾತೃದೇವತೆಗೆ   ಸಲ್ಲ  ಬೇಕಾದ   ಪ್ರೀತಿ    ಗೌರವವನ್ನು  ಕೊಟ್ಟು   ನಾವು ಆದರ್ಶ ಮಕ್ಕಳಾಗೋಣವೇ?


                     🔆🔆🔆
✍️ಸುಜಾತಾ ರವೀಶ್, ಮೈಸೂರು.