“ಶ್ರಾವಣ”  ಪ್ರಿಯರಾದ  ಬೇಂದ್ರೆಯವರ ಜ್ಞಾನಪೀಠ ಪ್ರಶಸ್ತಿ ವಿಜೇತ  ನಾಕುತಂತಿ ಸಂಗ್ರಹದಲ್ಲಿ  ಮತ್ತ‌ ಶ್ರಾವಣ, ಮತ್ತೆ ಶ್ರಾವಣಾ ಬಂದಾ ಎಂಬ ಕವಿತೆಗಳಿವೆ. ಶ್ರಾವಣವನ್ನು ನೇರವಾಗಿ ಸಂಬೋಧಿಸುತ್ತಾ


‘ಮೈ ದಂಡಿಗೆ ಮಾಡಿ ಹಾಡಿದೆ          ಕವನ ಶ್ರಾವಣ’

ಎಂದಿದ್ದಾರೆ.ಶ್ರಾವಣದ ಬಗ್ಗೆ ಬೇಂದ್ರೆಯವರ ತನ್ಮಯತೆ   ಅವರ  ಇಳಿ  ವಯಸ್ಸಿನಲ್ಲಿ   ಕೂಡ ಕಡಿಮೆಯಾಗಲಿಲ್ಲ.ಮೊದಮೊದಲಿನ ಅವರ ಶ್ರಾವಣ ಗೀತೆಗಳಿಗೂ ಈ ಗೀತಕ್ಕೂ ಇರುವ ಅಂತರ ಅವರ ಕಾವ್ಯದಲ್ಲಿಆಂತರಿಕ ಬೆಳವಣಿಗೆಗೆ ಸ್ಪಷ್ಟವಾದ ಕುರುಹಾಗಿದೆ. ಅವರ ಪ್ರಾರಂಭದ ಶ್ರಾವಣದ ಕವಿತೆಗಳಲ್ಲಿ ನಿಸರ್ಗ ವೈಭವ ತನ್ನ ಸಮಗ್ರ ಸೌಂದರ್ಯ ದಿಂದ ಪಂಚೇಂದ್ರಿಯಗಳನ್ನು ಸೆರೆಹಿಡಿಯು ವಂತಾಗಿದ್ದು ಶ್ರಾವಣದ ವೈಭವ, ಶ್ರಾವಣದ ಹಗಲು, ಶ್ರಾವಣ ಪಾತರಗಿತ್ತಿ ಪಕ್ಕ,ಈಕವಿತೆ ಗಳ ಸೌಂದರ್ಯ ಕಾವ್ಯದ ಸೊಗಸನ್ನುಹೆಚ್ಚು ಮಾಡಿದೆ. ಬೇಂದ್ರೆಯವರದ್ದು  ‘ಶ್ರಾವಣ ಪ್ರತಿಭೆ. ‘   ಕಾಳಿದಾಸ,  ಪಂಪನಂತವರು ವಸಂತದ   ಕವಿಯಗಳಾಗಿದ್ದರೆ  ಬೇಂದ್ರೆ    ಶ್ರಾವಣದ ಕವಿ.ಶ್ರಾವಣದಲ್ಲಿ ಧಾರವಾಡದ ಸುತ್ತಮುತ್ತಲಿನ ಪರಿಸರ ಪಡೆಯುವನೂರು ಬಗೆಯ ಚೆಲುವನ್ನು ಅವರು ಅನೇಕ ಕವಿತೆ ಗಳಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ.


ಶ್ರಾವಣದ ಅಬ್ಬರ  ಮೈಮನಗಳಿಗೆ ಗುಂಗು ಹಿಡಿಸುವಂತಹುದ್ದು. ಜೇಷ್ಟ ಆಷಾಢ  ಜಡಿ ಮಳೆಯಿಂದಾಗಿ ಹಸಿರು ಮುರಿಯುವ ನೆಲ, ಮೋಡ ಕವಿದಆಕಾಶ,ಹುಚ್ಚುಹಿಡಿಸುವಂತೆ  ಅರಳಿದ  ಕಾಡು ಹೂಗಳು ಇವು  ಶ್ರಾವಣ ಕೊಡುವ ಪ್ರತಿಮೆಗಳಾಗಿವೆ. ಇಷ್ಟಾಗಿಯೂ ಶ್ರಾವಣದ ಭಾವಲಹರಿಗೆಕೊನೆಎಂಬುದಿಲ್ಲ  ಬೇಂದ್ರೆಯವರ  ಶ್ರಾವಣದ   ಕವಿತೆಗಳು ಒಂದರಿಂದೊಂದು ಭಿನ್ನವಾಗಿವೆ, ವೈವಿಧ್ಯ ಮಯವಾಗಿವೆ.


ಸಖಿಗೀತ ಕವನ ಸಂಕಲ ನದ ಶ್ರಾವಣದ ವೈಭವ ಬೇಂದ್ರೆಯವರ ತೀರಾ ಸರಳವಾದ ಕವಿತೆಗಳಲ್ಲಿಒಂದಾಗಿದ್ದು 3 ಮಾತ್ರೆಗಳ ಗಣಗಳುಳ್ಳ ತೀರಾ ಸಾಮಾನ್ಯ ವಾಗಿರುವ ಛಂದಸ್ಸು   ಕವಿತೆಗೆ       ಕಥನಕವನದ ಸ್ವರೂಪವನ್ನು  ತಂದುಕೊಟ್ಟಿದೆ. ಮೊದಲ ಭಾಗದಲ್ಲಿ ಶ್ರಾವಣದ ನೆಲ ಹಸಿರು ಹುಲ್ಲು ಮತ್ತು ಬಣ್ಣ ಬಣ್ಣದ ಹೂಗಳಿಂದ ಬರಡು ನೆಲದ ಈ ಸಿಂಗಾರ ಕವಿಗೆ ಬಸಿರಿ ನೆಲಕ್ಕೆ ಹೂಮುಡಿಸಲೆಂದು  ಬಂದ ಸಂಭ್ರಮದಂತೆ ಕಾಣುತ್ತದೆ. ಶ್ರಾವಣ ಬಂತು ಎಂಬ ಕವಿತೆಯಲ್ಲಿ:

ನೆಲಾ ಹೊಲಾ ಈಗ ಹ್ಯಾಂಗ     ಹಸಿರುಟ್ಟ ಬಸುರಿಯ ಹಾಂಗ

ಎಂಬ ಮಾತು ಬರುತ್ತದೆ. ಬೇಸಿಗೆಯ ಬರಡುತನವನೆಲ್ಲ ಕಳೆದುಕೊಂಡ ನೆಲದಲ್ಲಿ ಹುಲ್ಲುಹೂಗಳು ಮೈತುಂಬ ಹುಟ್ಟಿಕೊಂಡಾ ಗ ಸಹಜವಾಗಿ ಹೊಳೆಯುವ ಹೋಲಿಕೆ ಇದಾಗಿದೆ .


ಶ್ರಾವಣದ ಮಳೆ, ಹಸಿರು, ಹೂವು, ಚಿಟ್ಟೆ ಮೊದಲಾದವುಗಳಿಂದ ತುಂಬಿಕೊಂಡು ನಲಿಯುವ ಭೂಮಿ,

ಹೂವಹಡಲಿಗೆಯನು ಹೊತ್ತ        ಭೂಮಿತಾಯಿಯ ಜೋಗಿತಿ

ಎಂಬ    ಅತ್ಯಂತ  ಸಜೀವವಾದ  ಪ್ರತಿಮೆ ಯಾಗಿ ಕಾಣುತ್ತದೆ. ತಲೆಯ ಮೇಲೆ ಹೊತ್ತ ಹಡಲಿಗೆ ಯ ಪರಿವೆಯಿಲ್ಲದೆ ಕುಣಿಯುವ ಜೋಗತಿಯರ     ಉನ್ಮಾದದೊಂದಿಗೆ    ಶ್ರಾವಣದ ಉನ್ಮಾದವನ್ನು  ಹೋಲಿಸಿದ್ದು   ಬಹಳ ಉಚಿತವಾಗಿದೆ. ವಸಂತತತ್ವದ  ಸಾಕಾರ ಕವಿಯ  ಕಲ್ಪನೆಯಲ್ಲಿ ಭಾವನಾ ವಶತೆಯ ದೋಷದಿಂದ ಮುಕ್ತಗೊಂಡು ಪ್ರಕೃತಿಯಲ್ಲಿ ಸೃಜನಶೀಲತೆಗೂ ಮನುಷ್ಯನ ಭಗ್ನವಾದ   ಸೃಜನಶೀಲತೆಗೂ    ಇರುವ   ಅಂತರವನ್ನು   ಕಾವ್ಯ      ಹತ್ತಿರಗೊಳಿಸಿ    ಭಾವನಾವಶತೆಗೆ     ಕಾರಣವಾಗುವಂತೆ   ಬೇಂದ್ರೆಯವರು   ಶ್ರಾವಣವನ್ನು   ಕಟ್ಟಿ   ಕೊಡುತ್ತಾರೆ.


ಶ್ರಾವಣ ಮಾಸವು ಭಾರತೀಯ ಸಂಸ್ಕೃತಿ ದೃಷ್ಟಿಯಿಂದ  ಅತ್ಯಂತ  ಮಹತ್ವದ ಮಾಸ. ಬೇಂದ್ರೆಯವರು  ಹುಟ್ಟಿದ  ಚಂದ್ರ ನಕ್ಷತ್ರ ಮಾಘ ಮತ್ತು ಸೂರ್ಯ ನಕ್ಷತ್ರ  ಶ್ರವಣ ನಕ್ಷತ್ರ ಬೇಂದ್ರೆಯವರ  ಜೀವನದ ಸ್ಪರ್ಶ ಮಣಿ. ಆದುದರಿಂದ ಕವಿ ಬೇಂದ್ರೆಯವರ ಕೌಟುಂಬಿಕ    ಸಾಹಿತ್ಯಿಕ   ಸಾಂಸ್ಕೃತಿಕ ಜೀವನದಲ್ಲಿ  ಶ್ರಾವಣಮಾಸವು ಮಹತ್ವದ ಕಾರ್ಯಮಾಡುತ್ತವೆ ಎಂಬುದನ್ನು ಬೇಂದ್ರೆ ಯವರು ಅನುಭವ ಹಾಗೂ ಅನುಭಾವ ದಿಂದ ಖಚಿತಪಡಿಸಿಕೊಂಡಿದ್ದರು.’ಶ್ರಾವಣ ಬಂದ’  ಎಂಬ  ಸಾಲು  ಬೇಂದ್ರೆಯವರ ಶ್ರಾವಣ ಪ್ರತಿಭೆಯ  ಒಂದು  ರೀತಿಯೂ ಹೌದು .
                  🔆🔆🔆

✍️ ಶ್ರೀಪ್ರಕಾಶ.ಬಿ.ಉಪ್ಪಿನಹಳ್ಳಿ                   ಕನ್ನಡ‌‌ ಸಹಾಯಕ ಪ್ರಾಧ್ಯಾಪಕರು    ಸ.ಪ್ರ‌.ದ.ಕಾಲೇಜು,ಶಿರಸಿ